YouTube

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಕಳೆದ ತಿಂಗಳು ಜಾರಿಗೆ ಬಂದಿರುವ ಹೊಸ ಮೋಟಾರ್ ವೆಹಿಕಲ್ ಕಾಯ್ದೆದಿಂದಾಗಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆಯಾದರೂ ಇನ್ನು ಹಲವು ವಾಹನ ಮಾಲೀಕರು ಸರಿಯಾದ ವಾಹನಗಳ ದಾಖಲೆ ಹೊಂದಿಲ್ಲ. ಹೀಗಿರುವಾಗ ದುಬಾರಿ ದಂಡದ ಹೊರತಾಗಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ವಿಮಾ ಸಂಸ್ಥೆಗಳು ಭರ್ಜರಿ ಶಾಕ್ ನೀಡುತ್ತಿವೆ.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಹೌದು, ಪ್ರತಿಯೊಂದು ವಾಹನಕ್ಕೂ ಮೂರನೇ ವ್ಯಕ್ತಿಯ ವಿಮಾ ಪಾಲಿಸಿ(ಥರ್ಡ್ ಪಾರ್ಟಿ ಇನ್ಸುರೆನ್ಸ್) ಅನ್ನು ಕಡ್ಡಾಯವಾಗಿ ಹೊಂದಬೇಕಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಥರ್ಡ್ ಪಾರ್ಟಿ ಇನ್ಸುರೆನ್ಸ್ ಹೊಂದಿದ್ದರೂ ಕೂಡಾ ನೀವು ಕೆಲವೊಮ್ಮೆ ಅಪಘಾತದ ವಿಮಾ ಪರಿಹಾರ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಇದಕ್ಕೆ ಕಾರಣ ಕೇವಲ ಐದು ನಿಮಿಷಗಳಲ್ಲಿ ಆಟೋ ವಿಮೆ ನೀಡುವ ಇನ್ಸುರೆನ್ಸ್ ಸಂಸ್ಥೆಗಳು ಪರಿಹಾರ ನೀಡುವಾಗ ಅಪಘಾತಕ್ಕೊಳಗಾದ ವಾಹನ ಮಾಲೀಕರನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸುತ್ತವೆ ಎಂಬುವುದನ್ನು ನೀವು ತಿಳಿದುಕೊಳ್ಳಬೇಕು.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಪ್ರಕರಣವೊಂದರ ಅರ್ಜಿ ವಿಚಾರಣೆ ನಡೆಸಿದ ಗುಜರಾತ್ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವು, 2011ರಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರ ಪರಿಹಾರ ಕೋರಿ ಗ್ರಾಹಕರ ನ್ಯಾಯಾಲದ ಮೊರೆ ಹೊಗಿದ್ದ ಕಾರು ಮಾಲೀಕನಿಗೆ ಇನ್ಸುರೆನ್ಸ್ ಸಂಸ್ಥೆಯು ಯಾವುದೇ ಪರಿಹಾರ ನೀಡುವ ಅವಶ್ಯಕತೆ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಇದಕ್ಕೆ ಕಾರಣ, 2011ರಲ್ಲಿ ಕಚ್ ನಿವಾಸಿ ಟಕ್ಕರ್ ಎನ್ನುವವರು ಸ್ನೇಹಿತ ಹಕುಬ್ ಸೋಧಾ ಎನ್ನುವವರ ಕೈಗೆ ತಮ್ಮ ಎಸ್‌ಯುವಿ ಕಾರನ್ನು ಚಾಲನೆ ಮಾಡಲು ನೀಡಿದ್ದರು. ಆದರೆ ಚಾಲನೆ ಸಂದರ್ಭದಲ್ಲಿ ಸರಿಯಾದ ಚಾಲನಾ ಪರವಾನಿಗೆ ಹೊಂದಿರದ ಹಕುಬ್ ಸೋಧಾ ಅವರು ಭೀಕರ ಅಪಘಾತಕ್ಕೆ ಕಾರಣವಾಗಿದ್ದಲ್ಲದೇ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿತ್ತು.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಆದರೆ ಅಸಲಿ ಸತ್ಯವನ್ನು ಮರೆಮಾಚಿದ್ದ ಟಕ್ಕರ್ ಅವರು ಅಪಘಾತದ ನಂತರ ಕೆಲವೇ ದಿನಗಳಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಾಹನ ಚಾಲನೆ ಮಾಡುತ್ತಿದ್ದ ಹಕುಬ್ ಸೋಧಾ ಅವರ ವ್ಯಾಲಿಡ್ ಚಾಲನಾ ಪರವಾನಿಗೆ ಹಾಜರಿಪಡಿಸದ ಹೊರತು ಪರಿಹಾರ ನೀಡಲು ಇಫ್ಕೊ-ಟೋಕಿಯೊ ಇನ್ಸುರೆನ್ಸ್ ಸಂಸ್ಥೆಯು ನಿರಾಕರಿಸಿತು.

ಇದನ್ನು ಪ್ರಶ್ನಿಸಿ ಮತ್ತೆ ಕಚ್ ಗ್ರಾಹಕ ನ್ಯಾಯಾಲದ ಮೊರೆ ಹೋದ ಟಕ್ಕರ್ ಅವರು ಕಾನೂನು ಹೋರಾಟದ ಮೂಲಕ ರೂ.6.52 ಲಕ್ಷ ಪರಿಹಾರ ಗಿಟ್ಟಿಸಿಕೊಳ್ಳುವಲ್ಲಿ ಯಸ್ವಿಸಿಯಾಗಿದ್ದರು. ಆದರೆ ಇದಕ್ಕೆ ಒಪ್ಪದ ಇಫ್ಕೊ-ಟೋಕಿಯೊ ಇನ್ಸುರೆನ್ಸ್ ಸಂಸ್ಥೆಯು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದಲ್ಲಿ ಕಚ್ ಗ್ರಾಹಕ ನ್ಯಾಯಾಲದ ಆದೇಶ ಪ್ರಶ್ನಿಸಿ ಮೇಲ್ಮವಿ ಸಲ್ಲಿಸಿತ್ತು.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಕೊನೆಗೂ ತನಿಖಾ ವರದಿಯನ್ನು ಆಧರಿಸಿ 2011ರ ಅಪಘಾತ ಪ್ರಕರಣ ಸಂಬಂಧ ಇದೀಗ ಅಂತಿಮ ತೀರ್ಪು ಪ್ರಕಟಿಸಿರುವ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವು, ಕಾರು ಮಾಲೀಕರಿಗೆ ಇಫ್ಕೊ-ಟೋಕಿಯೊ ಸಂಸ್ಥೆಯು ಯಾವುದೇ ವಿಮೆಯನ್ನು ಪಾವತಿಸಬೇಕಾಗಿಲ್ಲ ಎಂದು ಆದೇಶ ನೀಡಿ 9 ವರ್ಷಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಮೋಟಾರ್ ವಾಹನ ಕಾಯ್ದೆಯ 3ನೇ ಮತ್ತು 5ನೇ ವಿಧಿಯಲ್ಲಿ ಯಾವುದೇ ವ್ಯಕ್ತಿಯು ಸೂಕ್ತವಾದ ಪರವಾನಿಗೆ ಇಲ್ಲದೆಯೇ ವಾಹನ ಚಲಾಯಿಸುವುದನ್ನು ನಿಷೇಧಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದ್ದು, ನಂಬಿಕೆಯ ಆಧಾರದ ಮೇಲೆ ಸ್ನೇಹಿತನ ಕೈಗೆ ಕಾರು ಕೊಟ್ಟಿದ್ದ ಟಕ್ಕರ್ ಅವರಿಗೆ ವಿಮಾ ಸಂಸ್ಥೆಯು ಶಾಕ್ ನೀಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನಲ್ಲೂ ಇಂತದ್ದೆ ಮತ್ತೊಂದು ಅಪಘಾತ ಪ್ರಕರಣವೊಂದರಲ್ಲಿ ವಾಹನ ಮಾಲೀಕನ ಮೂರನೇ ವ್ಯಕ್ತಿಯ ಕೈಗೆ ಹೊಸ ಬೈಕ್ ನೀಡಿದ್ದಲ್ಲದೇ ಪರಿಹಾರ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿ ವಿಮಾ ಕಂಪನಿಯಿಂದ ಭಾರೀ ಹಿನ್ನಡೆ ಅನುಭವಿಸಿದ್ದ.

MOST READ: ಇನ್ನಷ್ಟು ವಿಳಂಬವಾಗಲಿದೆ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಹೈಕೋರ್ಟ್ ತೀರ್ಪಿನ ಪ್ರಕಾರ, ಮೂಲ ಮಾಲೀಕರನ್ನು ಹೊರತುಪಡಿಸಿ ವಾಹನಗಳನ್ನು ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಯೋ ಹೊರಗೆ ತೆಗೆದುಕೊಂಡು ಹೋದ ವೇಳೆ ನಿರ್ಲಕ್ಷ್ಯದಿಂದಾಗುವ ದುರಂತಗಳಿಗೆ ವಿಮಾ ಸಂಸ್ಥೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಹೇಳಿತ್ತು.

MOST READ: ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿ ಹ್ಯುಂಡೈ ಎಂಪಿವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಜೊತೆಗೆ ಮೂರನೇ ವ್ಯಕ್ತಿಯು ನಿಮ್ಮ ವಾಹನಗಳನ್ನು ವಾಹನವನ್ನು ತೆಗೆದುಕೊಂಡು ಹೋಗಿದ್ದಾಗ ಮತ್ತೊಂದು ವಾಹನಕ್ಕೆ ತಗುಲಿ ಆಗುವ ದುರಂತಗಳಿಗೆ ಮಾತ್ರವೇ ವಿಮೆ ಸಂಸ್ಥೆಯು ನಷ್ಟ ಭರಿಸುವ ಅವಕಾಶವಿರುತ್ತೆ ಎಂದು ಸ್ಪಷ್ಟಪಡಿಸಿದ್ದ ಹೈಕೋರ್ಟ್, ಮೂರನೇ ವ್ಯಕ್ತಿಯಿಂದ ವಾಹನಗಳು ನಿಯಂತ್ರಣ ತಪ್ಪಿ ಬೀಳುವುದು, ಇಲ್ಲವೇ ಮರಗಳಿಗೆ ಡಿಕ್ಕಿ ಹೊಡೆವುದು ಇಲ್ಲವೇ ಸ್ಕೀಡ್ ಆಗಿ ಆದ ಅನಾಹುತಗಳಿಗೆ ಪರಿಹಾರ ಸಿಗುವುದಿಲ್ಲ ಎಂದಿತ್ತು.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಇದರಿಂದಾಗಿ ವಾಹನ ಮಾಲೀಕರು ಬೇರೆಯವರ ಕೈಗೆ ವಾಹನ ನೀಡುವುದಕ್ಕೂ ಮುನ್ನ ಈ ಬಗ್ಗೆ ಯೋಚನೆ ಮಾಡಿಬೇಕಾದ ಅವಶ್ಯಕತೆಯಿದ್ದು, ಒಂದು ವೇಳೆ ಬೇರೆಯವರ ಕೈಗೆ ವಾಹನ ನೀಡಿದರೂ ಅದರಿಂದಾಗುವ ನಷ್ಟಕ್ಕೆ ನೀವೇ ಹೊಣೆಯಾಗಬೇಕಾಗುತ್ತೆ.

ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಇನ್ನು ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಥರ್ಡ್ ಪಾರ್ಟಿ ಇನ್ಸುರೆನ್ಸ್‌ನ ಪ್ರಾಥಮಿಕ ಉದ್ದೇಶವಾಗಿದೆ. ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆ ಸಿಗಲಿದೆ.

Most Read Articles

Kannada
English summary
No insurance claim without valid driver's license. Read in Kannada.
Story first published: Monday, October 28, 2019, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X