ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ದೇಶಾದ್ಯಂತ ಆಟೋ ಉತ್ಪಾದನಾ ವಲಯದಲ್ಲಿ ಭಾರೀ ಕುಸಿತ ಸಂಭವಿಸಿ ನಷ್ಟದ ಹಾದಿ ಹಿಡಿದಿರುವುದಲ್ಲದೇ ಉದ್ಯೋಗ ಅಭದ್ರತೆ ಎದುರಾಗಿರುವ ಬೆನ್ನಲ್ಲೇ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಘವು ಅಚ್ಚರಿ ಹೇಳಿಕೆಯೊಂದನ್ನು ನೀಡಿದೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಹೌದು, ದೇಶಾದ್ಯಂತ ಆಟೋ ಉತ್ಪಾದನಾ ವಲಯವು ಮಂದಗತಿಯಲ್ಲಿ ಸಾಗಿದೆ ಎನ್ನುವ ಕುರಿತು ನೂರಾರು ವರದಿಗಳು ಪ್ರಕಟವಾಗಿರುವುದಲ್ಲೇ ವಾಹನ ಮಾರಾಟ ಕುಸಿತದಿಂದ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಇಂತಹ ಸಂಧಿಗ್ನ ಪರಿಸ್ಥಿತಿಯಲ್ಲಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಘವು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದು, ಆಟೋ ಉತ್ಪಾದನಾ ಸಂಸ್ಥೆಗಳು ಸರ್ಕಾರದಿಂದ ನೆರವು ಪಡೆದುಕೊಳ್ಳಲು ಇಂತಹ ಕಟ್ಟು ಕಥೆಗಳನ್ನು ಹೇಳುತ್ತಿರುವುದಾಗಿ ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಆಟೋ ಉದ್ಯಮದಲ್ಲಿ ಮಂದಗತಿ ಇರುವುದಾದರೇ ಹೊಸ ವಾಹನ ಮಾರಾಟದಲ್ಲಿ ನೀರಿಕ್ಷೆಗೂ ಮಿರಿ ಯಾಕೆ ಬೇಡಿಕೆ ಪಡೆದುಕೊಳ್ಳುತ್ತಿವೆ ಎನ್ನುವುದನ್ನು ಪ್ರಶ್ನಿಸಿರುವ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಘವು ಇದು ಕೇವಲ ತಾತ್ಕಾಲಿಕ ಕುಸಿತ ಹೊರತು ಮಂದಗತಿ ಅಲ್ಲ ಎಂಬುವುದಾಗಿ ಅಭಿಪ್ರಾಯಪಟ್ಟಿದೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಸರಕು ಉತ್ಪನ್ನ ಮಾರಾಟದಲ್ಲಿನ ಕುಸಿತ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಖಂಡೇಲ್ವಾಲ್ ಅವರು, ಸರ್ಕಾರದಿಂದ ಆರ್ಥಿಕ ನೆರವು ಮತ್ತು ವಿನಾಯ್ತಿ ಪಡೆದುಕೊಳ್ಳಲು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರವಿದು ಎಂದು ಹೇಳಿದ್ದಾರೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಆಟೋ ಉದ್ಯಮವು ಮಂದಗತಿಯಲ್ಲಿದ್ದರೆ ಹೊಸ ಕಾರುಗಳ ಬುಕ್ಕಿಂಗ್ ಮತ್ತು ವಿತರಣೆಯಲ್ಲಿ ಯಾಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುವುದು ಪ್ರಶ್ನಿಸಲಾಗಿದ್ದು, ಜಿಎಸ್‌ಟಿ ಹೆಚ್ಚಳದಿಂದಾಗಿ ತುಸು ಇಳಿಕೆಯಾಗಿದೆ ಹೊರತು ಮಂದಗತಿಯಲ್ಲಿ ಇದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಆಟೋ ಉತ್ಪಾದನಾ ವಲಯಲ್ಲಿ ಕುಸಿತವಾಗುವುದಕ್ಕೆ ಜಿಎಸ್‌ಟಿ ಜೊತೆಗೆ ಉದ್ಯೋಗಿಗಳ ಅನಿಶ್ಚಿತ ಸಂಬಳ, ಕಂಪನಿಗಳ ವಿತ್ತೀಯ ಕೊರತೆ ಮತ್ತು ಕೃಷಿ ವಲಯದಲ್ಲಿನ ಹಿನ್ನಡೆಯಿಂದಾಗಿ ವಾಹನ ಮಾರಾಟವು ಕುಸಿತವಾಗಿರುವ ಬಗ್ಗೆ ಪಟ್ಟಿ ಮಾಡಿದೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಹೀಗಾಗಿ ಆಟೋ ಉತ್ಪಾದನಾ ವಲಯದಲ್ಲಿನ ತಾತ್ಕಲಿಕ ಕುಸಿತವು ಮುಂಬರುವ ದಿನಗಳಲ್ಲಿ ಸರಿಹೊಗುವ ಭರವಸೆ ವ್ಯಕ್ತಪಡಿಸಿರುವ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಸಂಘವು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಜಾರಿವರೆಗೂ ವಾಹನ ಮಾರಾಟದಲ್ಲಿ ಏರಿಳಿತ ಸಹಜ ಎಂದಿದ್ದಾರೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಜೊತೆಗೆ ಗ್ರಾಹಕರ ಅಭಿರುಚಿ ತಕ್ಕಂತೆ ವಾಹನಗಳ ಆಯ್ಕೆ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿರುವ ಎಲ್ಲಾ ವಾಹನಗಳ ಮಾರಾಟವು ಏರಿಕೆಯಲ್ಲಿಯೇ ಇರಬೇಕೆಂಬುವುದು ಏನು ಇಲ್ಲ. ಇದಕ್ಕಾಗಿಯೇ ಗ್ರಾಹಕರು ತಮ್ಮ ಇಷ್ಟದ ವಾಹನಗಳಿಗೆ ಕಾಯುವಿಕೆಯ ಅವಧಿಯಲ್ಲಿ ಇಂತಹ ಏರುಪೇರಾಗಬಹುದು ಎಂದಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಭರ್ಜರಿ ಆಫರ್

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಭವಿಷ್ಯದಲ್ಲಿ ಇಂಧನ ಆಧರಿತ ವಾಹನಗಳಿಗೆ ಬೇಡಿಕೆಯಾಗುವ ಸಾಧ್ಯತೆಯಿರುವುದರಿಂದ ಗ್ರಾಹಕರು ಬಿಎಸ್-6 ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಇದೇ ಕಾರಣಕ್ಕೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ವಾಹನಗಳ ಮಾರಾಟದಲ್ಲಿ ಕುಸಿತವಾಗಿದೆ ಎನ್ನಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಇನ್ನು ಆಟೋ ಉದ್ಯಮದಲ್ಲಿ ಸತತ ಕುಸಿತ ಹಿನ್ನಲೆಯಲ್ಲಿ ಕಳೆದ ತಿಂಗಳ ಹಿಂದಷ್ಟೇ ಕೆಲವು ಮಹತ್ವದ ಕ್ರಮಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದುವರೆಗೂ ಜಿಎಸ್‌ಟಿ ಇಳಿಕೆ ಕುರಿತು ಯಾವುದೇ ಪ್ರಕ್ರಿಯೆ ನೀಡುತ್ತಿಲ್ಲ. ಇದರಿಂದ ಹೊಸ ವಾಹನ ಖರೀದಿಯ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ಇದು ನಿರಾಸೆ ಉಂಟು ಮಾಡಿದ್ದು, ಉದ್ಯಮದ ಸ್ಥಿತಿಗತಿಯ ಆಧಾರದ ಮೇಲೆ ಜಿಎಸ್‌ಟಿ ದರಗಳನ್ನು ಏರಿಳಿತ ಮಾಡಲು ಸಾಧ್ಯವಿಲ್ಲ ಎಂಬ ಸುಳಿವು ನೀಡಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಜಿಎಸ್‌ಟಿ ಇಳಿಕೆ ಕುರಿತಂತೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ತಾತ್ಕಾಲಿಕವಾಗಿ ಹಿನ್ನಡೆ ಅನುಭಸಿರುವ ಕಾರಣಕ್ಕೆ ಜಿಎಸ್‌ಟಿ ಇಳಿಕೆಯಂತಹ ಕ್ರಮಕೈಗೊಳ್ಳುವುದು ಆರ್ಥಿಕತೆ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು ಎನ್ನಲಾಗಿದೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಕೇವಲ ಜಿಎಸ್‌ಟಿ ಹೆಚ್ಚಳದಿಂದಾಗಿ ಆಟೋ ಉದ್ಯಮವು ಹಿನ್ನಡೆ ಅನುಭವಿಸುತ್ತಿದೆ ಎನ್ನುವ ಅಭಿಪ್ರಾಯವನ್ನು ತಳ್ಳಿಹಾಕಿರುವ ಜಿಎಸ್‌ಟಿ ಕೌನ್ಸಿಲ್, ವಾಹನ ಮಾರಾಟ ಇಳಿಕೆಗೆ ವಿವಿಧ ಕಾರಣಗಳನ್ನು ಪಟ್ಟಿ ಮಾಡಿದೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಹೀಗಾಗಿ ಇಂಧನ ಆಧರಿತ ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಹೊಸ ವಾಹನ ಖರೀದಿಗೆ ಸಾಲಸೌಲಭ್ಯ ಸಿಗದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ದೇಶಾದ್ಯಂತ ಶೇ.80 ರಷ್ಟು ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಅಲಂಭಿಸಿದ್ದು, ಇದೀಗ ಅವು ಸಂಕಷ್ಟದಲ್ಲಿರುವುದರಿಂದ ಆಟೋ ಉದ್ಯಮದ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಆಟೋ ಉದ್ಯಮದಲ್ಲಿ ಮಂದಗತಿ ಶುದ್ದ ಸುಳ್ಳು- ಇದು ಆಟೋ ಉತ್ಪಾದನಾ ಸಂಸ್ಥೆಗಳ ಒತ್ತಡ ತಂತ್ರ..!?

ಇದರಿಂದ ಜಿಎಸ್‌ಟಿ ಹೆಚ್ಚಳವೇ ವಾಹನ ಮಾರಾಟ ಕುಸಿತಕ್ಕೆ ಪ್ರಮುಖ ಕಾರಣ ಎನ್ನುವುದನ್ನು ತಳ್ಳಿಹಾಕುತ್ತಿರುವ ಜಿಎಸ್‌ಟಿ ಮಂಡಳಿಯು ಆಟೋ ಉದ್ಯಮವು ಈ ಹಿಂದೆಯೂ 2009 ಮತ್ತು 2014ರಲ್ಲೂ ಇಂತದ್ದೆ ಪರಿಸ್ಥಿತಿ ಎದುರಿಸಿತ್ತು, ಈ ಹಿನ್ನಲೆಯಲ್ಲಿ ಮುಂದಿನ ಕೇವಲ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.

Most Read Articles

Kannada
English summary
No Slowdown in Automobile Sector, Claims Traders Body CAIT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X