ಆಪರೇಷನ್ ಕ್ಲೀನ್ ಕಾರ್ಯಾಚರಣೆ ನಡೆಸಿದ ನೋಯ್ಡಾ ಪೊಲೀಸ್

ಉತ್ತರ ಪ್ರದೇಶದ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದಲ್ಲಿರುವ ಗೌತಮ್ ಬುದ್ದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದಾರೆ. ಈ ಕಾರ್ಯಾಚರಣೆಗೆ ಆಪರೇಷನ್ ಕ್ಲೀನ್ ಎಂಬ ಹೆಸರಿಡಲಾಗಿದ್ದು, ಇದು ಈ ಕಾರ್ಯಾಚರಣೆಯ ಎಂಟನೇ ಆವೃತ್ತಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಆಪರೇಷನ್ ಕ್ಲೀನ್ ಕಾರ್ಯಾಚರಣೆಯನ್ನು ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ನಗರದ ರಸ್ತೆಗಳ ದಟ್ಟಣೆಯನ್ನು ಸರಿಪಡಿಸುವ ಉದ್ದೇಶದಿಂದ ಶುರುಮಾಡಲಾಗಿದೆ.

ಆಪರೇಷನ್ ಕ್ಲೀನ್ ಕಾರ್ಯಾಚರಣೆ ನಡೆಸಿದ ನೋಯ್ಡಾ ಪೊಲೀಸ್

ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಬೆಳಿಗ್ಗೆ ಹಾಗೂ ಸಂಜೆ ಎರಡು ಅವಧಿಗಳಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಕಚೇರಿಗೆ ಹೋಗುವವರಿಗೆ ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿಸಲು, ಬೆಳಿಗ್ಗಿನ ಅವಧಿಯಲ್ಲಿ 10 ರಿಂದ ಮಧ್ಯಾಹ್ನ 12ರವರೆಗೆ ಕಾರ್ಯಾಚರಣೆಯನ್ನು ನಡೆಸಲಾಯಿತು. ಪೊಲೀಸ್ ವಕ್ತಾರರೊಬ್ಬರ ಪ್ರಕಾರ, ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಒಟ್ಟು 2,441 ವಾಹನಗಳಿಗೆ ದಂಡ ವಿಧಿಸಲಾಗಿದ್ದು, 1,470 ಎಲೆಕ್ಟ್ರಾನಿಕ್ ಚಲನ್‌ಗಳನ್ನು ನೀಡಲಾಗಿದೆ.

ಸರಿಯಾದ ದಾಖಲೆಗಳನ್ನು ಹೊಂದದೇ ಇದ್ದ ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಯೊಬ್ಬರ ಪ್ರಕಾರ, ಕಾರ್ಯಾಚರಣೆಯ ಸಮಯದಲ್ಲಿ 27 ನಾಲ್ಕು ಚಕ್ರ ಹಾಗೂ 85 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯ ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಒಟ್ಟು 4,750 ವಾಹನಗಳಿಗೆ ದಂಡ ವಿಧಿಸಲಾಗಿದೆ. ಸಾಯಂಕಾಲವು ಸಹ ಪೊಲೀಸರು ಎರಡು ಗಂಟೆಗಳ ಕಾಲ ಕಾರ್ಯಾಚರಣೆಯನ್ನುನಡೆಸಿದರು.

ಆಪರೇಷನ್ ಕ್ಲೀನ್ ಕಾರ್ಯಾಚರಣೆ ನಡೆಸಿದ ನೋಯ್ಡಾ ಪೊಲೀಸ್

ಸಂಜೆಯ ವೇಳೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯಾಚರಣೆಯನ್ನು ನಡೆಸಲಾಗಿದೆ. 1,014 ದ್ವಿಚಕ್ರ ವಾಹನಗಳಿಗೆ ಹಾಗೂ 345 ಕಾರುಗಳಿಗೆ ದಂಡ ವಿಧಿಸಲಾಯಿತು. 58 ವಾಹನಗಳನ್ನು ವಶಪಡಿಸಿಕೊಂಡು, ನಿಯಮ ಉಲ್ಲಂಘಿಸಿದವರಿಂದ ರೂ.1.2 ಲಕ್ಷಗಳ ದಂಡ ಸಂಗ್ರಹಿಸಲಾಗಿದೆ. ಇವುಗಳ ಜೊತೆಗೆ ದೋಷ ಪೂರಿತ ನಂಬರ್ ಪ್ಲೇಟ್‍‍ಗಳನ್ನು ಹೊಂದಿದ್ದ ಕಾರುಗಳ ವಿರುದ್ದವೂ ಸಹ ನೋಯ್ಡಾ ಪೊಲೀಸರು ಕಾರ್ಯಾಚರಣೆಯನ್ನು ಶುರು ಮಾಡಿದ್ದಾರೆ.

ಆಪರೇಷನ್ ಕ್ಲೀನ್ ಕಾರ್ಯಾಚರಣೆ ನಡೆಸಿದ ನೋಯ್ಡಾ ಪೊಲೀಸ್

ದೋಷಪೂರಿತ ಹಾಗೂ ಫ್ಯಾನ್ಸಿ ನಂಬರ್ ಪ್ಲೇಟ್‌ ಹೊಂದಿರುವ ಎಲ್ಲಾ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಇದರ ಜೊತೆಗೆ ಯಾವುದೇ ವಾಹನವು ಜಾತಿ, ಧರ್ಮ, ವೃತ್ತಿ, ಪಕ್ಷದ ಚಿಹ್ನೆಗಳು ಹಾಗೂ ಇತರ ವಿಷಯಗಳನ್ನು ಸೂಚಿಸುವ ಯಾವುದೇ ಬರಹವನ್ನು ಹೊಂದಿದ್ದರೆ, ಪೊಲೀಸರು ಭಾರಿ ಪ್ರಮಾಣದ ದಂಡವನ್ನು ವಿಧಿಸುತ್ತಿದ್ದಾರೆ. ಕಾರುಗಳ ಹಿಂದಿರುವ ಅಕ್ರಮ ಬರಹಗಳ ವಿರುದ್ಧದ ಕಾರ್ಯಾಚರಣೆಯನ್ನು ಭಾನುವಾರ ರಾತ್ರಿಯಿಂದ ಶುರುಮಾಡಲಾಗಿದೆ.

ಆಪರೇಷನ್ ಕ್ಲೀನ್ ಕಾರ್ಯಾಚರಣೆ ನಡೆಸಿದ ನೋಯ್ಡಾ ಪೊಲೀಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ವಾಹನಗಳಲ್ಲಿ ಅಕ್ರಮ ಬರಹ ಹೊಂದಿದ್ದ ಹಲವರಿಗೆ ದಂಡ ವಿಧಿಸಲಾಗಿದೆ. ಕುಡಿದು ವಾಹನ ಚಲಾಯಿಸುವವರಿಗೆ ದಂಡ ವಿಧಿಸಲು ಹಾಗೂ ಅವರನ್ನು ಬಂಧಿಸಲು ಆಲ್ಕೋಹಾಲ್ ಮೀಟರ್ ಬಳಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ಕಾರ್ಯಚರಣೆಯನ್ನು ಮುಂದುವರೆಸಲಾಗುವುದೇ ಇಲ್ಲವೇ ಎಂದು ತಿಳಿದು ಬಂದಿಲ್ಲ. ಇಂತಹ ಕಾರ್ಯಚರಣೆಗಳಿಂದ ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಗಳಿವೆ.

ಆಪರೇಷನ್ ಕ್ಲೀನ್ ಕಾರ್ಯಾಚರಣೆ ನಡೆಸಿದ ನೋಯ್ಡಾ ಪೊಲೀಸ್

ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುವುದು, ಬೈಕ್ ಸವಾರಿ ಮಾಡುವುದು ನೋಯ್ಡಾದಲ್ಲಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಬಗ್ಗೆ ಹಲವಾರು ಸಂಘಟನೆಗಳು ದೂರು ನೀಡಿದ್ದವು. ಈ ಮೊದಲು ರಾಂಗ್ ಸೈಡ್‍‍ನಲ್ಲಿ ವಾಹನ ಚಾಲನೆಯನ್ನು ತಪ್ಪಿಸಲು, ರಾಂಗ್ ಸೈಡ್‍‍ನಲ್ಲಿ ಬರುವ ವಾಹನಗಳ ಟಯರ್‍‍ಗಳನ್ನು ವಿರೂಪಗೊಳಿಸುವಂತಹ ಸ್ಪೈಕ್‌ಗಳನ್ನು ಅಳವಡಿಸಲಾಗಿತ್ತು.

ಆಪರೇಷನ್ ಕ್ಲೀನ್ ಕಾರ್ಯಾಚರಣೆ ನಡೆಸಿದ ನೋಯ್ಡಾ ಪೊಲೀಸ್

ಭದ್ರತಾ ಉದ್ದೇಶಗಳಿಗಾಗಿ ಭಾರತದಾದ್ಯಂತ ಬ್ಯಾನ್ ಮಾಡಲಾಗಿರುವ ಟಿಂಟೆಡ್ ಗ್ಲಾಸುಗಳನ್ನು ಹೊಂದಿದ್ದ ಕಾರುಗಳನ್ನು ತಡೆದು, ಟಿಂಟೆಡ್ ಗ್ಲಾಸುಗಳನ್ನು ತೆಗೆದು ಹಾಕುವುದರ ಜೊತೆಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ದೆಹಲಿ-ಎನ್‌ಸಿಆರ್‌ನ ಪ್ರಮುಖ ನಗರವಾದ ನೋಯ್ಡಾ ಈ ಭಾಗದ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿದೆ. ಇಂತಹ ವಿಶೇಷ ಕಾರ್ಯಾಚರಣೆಗಳಿಂದಾಗಿ ಮುಂದಿನ ದಿನಗಳಲ್ಲಿ ರಸ್ತೆಗಳಲ್ಲಿ ಸಂಚಾರ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Noida Police BUSTS 1,457 vehicles for faulty number plates, other offences - Read in kannada
Story first published: Tuesday, July 9, 2019, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X