ಬೆಂಗಳೂರಿಗೂ ಕಾಲಿಟ್ಟ ಬಜಾಜ್ ಕ್ಯೂಟ್- ಊಬರ್‌ನಲ್ಲಿ ಕ್ಯೂಟ್ ಸೇವೆಗೆ ಚಾಲನೆ

ಬಜಾಜ್ ಸಂಸ್ಥೆಯು ತಮ್ಮ ಹೊಸ ಕ್ಯೂಟ್ ಸಣ್ಣ ಗಾತ್ರದ ವಾಹನವನ್ನು ಈ ಹಿಂದೆಯೇ ಹಂತ ಹಂತವಾಗಿ ದೇಶದೆಲ್ಲೆಡೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಹಲವಾರು ದೇಶಗಳಲ್ಲಿ ಮಾರಾಟವಾಗುತ್ತಿರುವ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವು ಭಾರತದಲ್ಲಿ ಕೆಲ ಮೋಟಾರ್ ಕಾಯ್ದೆ ನಿಯಮಾವಳಿಗಳ ಕೊರತೆಯಿಂದಾಗಿ ನಮ್ಮ ದೇಶದಲ್ಲಿ ಬಿಡಗಡೆಗೊಳ್ಳಲು ತಡವಾಯಿತು.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಆದ್ರೆ ಇದೀಗ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಪೂರೈಸುವ ಹಾಗೆ ಹೊಸ ವಾಹನ ತಯಾರಾಗಿ ಮಾರುಕಟ್ಟೆಯಲ್ಲಿ ಕಾಲಿಟ್ಟಿದ್ದು, ಎಕ್ಸ್ ಶೋರುಂ ಪ್ರಕಾರ ರೂ.2.48 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈಗಾಗಲೇ ಮುಂಬೈ ರಸ್ತೆಯಲ್ಲಿ ಆಟೋ ರಿಕ್ಷಾಗಳಿಗೆ ಪೈಪೋಟಿ ನೀಡುತ್ತಿರುವ ಬಜಾಜ್ ಕ್ಯೂಟ್ ವಾಹನವು ನಮ್ಮ ಬೆಂಗಳೂರಿನಲ್ಲಿಯು ಇದೀಗ ಆಟೋ ರಿಕ್ಷಾ ಮಾರರಿಯಲ್ಲಿಯೇ ಸೇವೆ ಸಲ್ಲಿಸಲು ಸಿದ್ದಗೊಂಡಿದೆ.

Image Courtesy: Yourstoy

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಬಹು ವರ್ಷಗಳ ಹೋರಾಟದ ನಂತರ ಬಜಾಜ್ ಸಂಸ್ಥೆಯು ನಮ್ಮ ದೇಶದಲ್ಲಿ ತಮ್ಮ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ನಮ್ಮ ಬೆಂಗಳೂರಿನಲ್ಲಿಯು ಸಹ ಸಂಚರಿಸಲು ಲಭ್ಯವಾಗಿದ್ದು, ಬಜಾಜ್ ಸಂಸ್ಥೆಯು ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಊಬರ್‍ ಜೊತೆಗೆ ಕೈ ಜೋಡಿಸಿ ಇದನ್ನು ಪ್ರಯಾಣಿಕರು ಆಟೋ ಮಾದರಿಯಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಕಲ್ಪಿಸಿದೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಊಬರ್ ಆಪ್‍‍ನಲ್ಲಿ 'UBER XS' ಎಂಬ ವರ್ಗದಲ್ಲಿ ವಾಹನವನ್ನು ಪ್ರಯಾಣಿಕರು ರೈಡಿಂಗ್‍‍ಗಾಗಿ ಬುಕ್ಕಿಂಗ್ ಆನ್ನು ಮಾಡಿಕೊಳ್ಳಬಹುದಾಗಿದ್ದು, ಊಬರ್ ಆಪ್‍ನ ಈ ವರ್ಗದಲ್ಲಿ ನೀವು ಕೇವಲ ಬಜಾಜ್ ಕ್ಯೂಟ್ ವಾಹನವನ್ನು ಮಾತ್ರ ಕಾಣಬಹುದಾಗಿದೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಬಾಜಾಜ್ ಕ್ಯೂಟ್ ಬೆಂಗಳೂರಿನ ಉಬರ್ ಬಳಕೆದಾರರಿಗೆ ಸಮಯಕ್ಕೆ ಲಭ್ಯವಿರುತ್ತದೆ. ಇಂದಿರಾನಗರ, ಕೋರಮಂಗಲ, ಎಚ್ಎಸ್ಆರ್ ಲೇಔಟ್ ಮತ್ತು ನಗರದ ಹೊರಗಿನ ರಿಂಗ್ ರಸ್ತೆಯ ಭಾಗಗಳಲ್ಲಿ ಹೊಸ ವರ್ಗವು ಆರಂಭದಲ್ಲಿ ಲಭ್ಯವಿರುತ್ತದೆ ಮತ್ತು ನಂತರದ ಸಮಯದಲ್ಲಿ ನಗರದ ಇತರ ಭಾಗಗಳಿಗೆ ಈ ಸೇವೆಗಳು ವಿಸ್ತರಿಸುತ್ತವೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಸ್ವಂತ ಬಳಕೆಗೂ ಸೈ ಮತ್ತು ವಾಣಿಜ್ಯ ಬಳಕೆಗೂ ಸೈ

ಹೌದು, ಬಿಡುಗಡೆಗೊಂಡ ಬಜಾಜ್ ಕ್ಯೂಟ್ ವಾಹನವು ಸ್ವಂತ ಬಳಕೆಯ ಜೊತೆ ವ್ಯಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದು, ಆಟೋ ರಿಕ್ಷಾಗಳ ಬೆಲೆ ಬೆಲೆಯಲ್ಲಿ ಹೊಸ ಕ್ಯೂಟ್ ವಾಹನ ವಾಹನವು ಬಿಡುಗಡೆಯಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಕ್ಯೂಟ್ ವಾಹನವು 216-ಸಿಸಿ 4-ಸ್ಟ್ರೋಕ್ಸ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13-ಬಿಹೆಚ್‍‍ಪಿ ಮತ್ತು 20-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಇದರಲ್ಲಿ ಸಿಎನ್‍ಜಿ ಆಧಾರಿತ ಕ್ಯೂಟ್ ಮಾದರಿಯು 10.8-ಬಿಹೆಚ್‍ಪಿ ಮತ್ತು 16.1-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಸೀಕ್ವೆಂಟಲ್ ಗೇರ್‍‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಇನ್ನು ಬಜಾಜ್ ಸಂಸ್ಥೆಯು ಕ್ಯೂಟ್ ವಾಹನವನ್ನು ವಿವಿಧ ರಾಷ್ಟ್ರಗಳಿಗೆ ಪ್ರತಿ ತಿಂಗಳು 5 ಸಾವಿರ ಯೂನಿಟ್‌ಗಳನ್ನು ರಫ್ತು ಮಾಡುತ್ತಿದ್ದು, ನಾಲ್ಕು ಚಕ್ರಗಳನ್ನು ಪಡೆದುಕೊಂಡಿರುವ ಕ್ಯೂಟ್ ವಾಹನವು ಆಟೋ ರಿಕ್ಷಾಗಳಿಂತಲೂ ಹೆಚ್ಚು ಶಕ್ತಿಶಾಲಿಯಾಗಿವೆ.

MOST READ: ತನ್ನ ಸ್ವಂತ ಐಷಾರಾಮಿ ಕಾರನ್ನು ಕದ್ದು ಇದೀಗ ಪೊಲೀಸರ ಅತಿಥಿಯಾದ ವ್ಯಾಪಾರಿ..

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಹಾಗೆಯೇ ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರಿರುವ ಕ್ಯೂಟ್ ವಾಹನವು 452 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದ್ದು, ಇದರಲ್ಲಿ ಚಾಲಕ ಸೇರಿ ನಾಲ್ಕು ಮಂದಿ ಯಾವುದೇ ತೊಂದರೆಯಿಲ್ಲದೇ ಅರಾಮವಾಗಿ ಕೂರಬಹುದಾಗಿದಿದೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಕ್ಯೂಟ್ ಉದ್ದಳತೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ನ್ಯಾನೊ ಕಾರಿನಂತೆಯೇ ಇದರಲ್ಲಿಯು ಸಹ ಮುಂಭಾಗದಲ್ಲಿ ಬೂಟ್ ಸ್ಪೇಸ್ ಇರಿಸಲಾಗಿದ್ದು, ಹೆಚ್ಚುವರಿ ಸ್ಥಳವಕಾಶ ಬೇಕಿದ್ದಲ್ಲಿ ಹಿಂಬದಿಯ ಸೀಟ್‍‍ನ್ನು ಮಡಿಚಿಕೊಳ್ಳುವ ಮೂಲಕ ಮತ್ತಷ್ಟು ಲಗೇಜ್ ತುಂಬಿಕೊಳ್ಳಲು ಇದರಲ್ಲಿ ಅವಕಾಶವಿದೆ.

MOST READ: ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಬಜಾಜ್ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ ಕ್ಯೂಟ್ ವಾಹನವು 2,750-ಎಂಎಂ ಉದ್ದ, 1,312-ಎಂಎಂ ಅಗಲ ಮತ್ತು 1,652-ಎಂಎಂ ಎತ್ತರ ಹೊಂದಿದ್ದು, 12-ಇಂಚಿನ ಸ್ಟಿಲ್ ವೀಲ್ಹ್‌ನೊಂದಿಗೆ ಉತ್ತಮವಾದ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವುದು ಸ್ವಂತ ಬಳಕೆಗೂ ಆಕರ್ಷಕವಾಗಿದೆ.

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ತಾಂತ್ರಿಕ ವೈಶಿಷ್ಟ್ಯತೆಗಳು

ಕ್ಯೂಟ್ ವಾಹನದಲ್ಲಿ ಡ್ಯಾಶ್ ಬೋರ್ಡ್ ಮಧ್ಯಭಾಗದಲ್ಲಿ ಸ್ಪೀಡೋಮೀಟರ್ ಅನ್ನು ಕಾಣಬಹುದಾಗಿದ್ದು, ಇದು ಅನಾಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಇವುಗಳ ಜೊತೆಗೆ ಈ ವಾಹನದಲ್ಲಿ ಎಂಪಿ3 ಪ್ಲೇಯರ್, ಯುಎಸ್‍ಬಿ ಪೋರ್ಟ್ಸ್ ಹಾಗು ಆಕ್ಸ್ ಕೇಬಲ್‍‍ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದಾದ ಸೌಕರ್ಯ ಇದರಲ್ಲಿದೆ.

MOST READ: ಕೇವಲ 2 ಲಕ್ಷ ನೀಡಿ ಶೋರುಂನಿಂದ ರೂ.18 ಲಕ್ಷದ ಕಾರಿನೊಂದಿಗೆ ಪರಾರಿಯಾದ ಖತರ್ನಾಕ್ ಖದೀಮ

ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಮೈಲೇಜ್

ಬಜಾಜ್ ಕ್ಯೂಟ್ 8 ಲೀಟರ್‍ ಫ್ಯುಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 35 ಕಿಲೋಗ್ರಾಂ ಸಾಮರ್ಥ್ಯದ ಸಿಎನ್‍ಜಿ ಟ್ಯಾಂಕ್ ಅನ್ನು ಜೋಡಣೆ ಹೊಂದಿದೆ. ಈ ಮೂಲಕ ಪ್ರತಿ ಲೀಟರ್‍ ಪೆಟ್ರೋಲ್‌ಗೆ ಸುಮಾರು 35 ಕಿಮೀ ಮೈಲೇಜ್ ಹಿಂದಿರುಗಿಸುವ ಕ್ಯೂಟ್ ಮಾದರಿಯು ಸಿಎನ್‍ಜಿ ಆವೃತ್ತಿಯಲ್ಲಿ ಪ್ರತೀ ಕಿ.ಗ್ರಾಂ ಸಿಎನ್‌ಜಿಗೆ ಬರೋಬ್ಬರಿ 43 ಕಿ.ಮಿ ಮೈಲೇಜ್ ನೀಡಬಲ್ಲದು.

Most Read Articles

Kannada
English summary
Now You Can Book Your Bajaj Qute Ride Through Uber App In Bengaluru. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X