ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಓಲಾ ಕಂಪನಿಯು ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸೇವೆಯನ್ನು ಆರಂಭಿಸಿದೆ. ಇದರಿಂದಾಗಿ ಸ್ವಯಂ ಉದ್ಯೋಗ ಮಾಡಬಯಸುವವರಿಗೆ ಅನುಕೂಲವಾಗಲಿದೆ. ಈ ಸೇವೆಯನ್ನು ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೈದರಾಬಾದ್, ಮುಂಬೈ ಹಾಗೂ ನವದೆಹಲಿ ನಗರಗಳಲ್ಲಿ ಪ್ರಾರಂಭಿಸಲಾಗುವುದು.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಈ ಯೋಜನೆಯ ಅಂಗವಾಗಿ ಓಲಾ ಕಂಪನಿಯು 2020ರ ವೇಳೆಗೆ 20,000 ಕಾರುಗಳನ್ನು ಹೊಂದಲು ಉದ್ದೇಶಿಸಿದೆ. ಈ ಸಂಖ್ಯೆಯು ಭಾರತದಲ್ಲಿರುವ ಕ್ಯಾಬ್ ಸಂಸ್ಥೆಗಳು ಹೊಂದಿರುವ ಒಟ್ಟು ಕಾರುಗಳ ಸಂಖ್ಯೆಗಿಂತ 50%ನಷ್ಟು ಹೆಚ್ಚಾಗಿದೆ. 2 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಓಲಾ ಡ್ರೈವ್, ಭಾರತದಲ್ಲಿ ಕಾರು ಹಂಚಿಕೆ ಸೇವೆಗಾಗಿ ಅತಿದೊಡ್ಡ ಬಳಕೆದಾರರನ್ನು ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ನೀವಿರುವ ಪ್ರದೇಶದಲ್ಲಿ ಈ ಸೇವೆ ಲಭ್ಯವಿದೆಯೇ ಎಂದು ಪರಿಶೀಲಿಸಲು, ಓಲಾ ಅಪ್ಲಿಕೇಶನ್‌ ಇನ್ಸ್ಟಾಲ್ ಮಾಡಿಕೊಂಡು, ಡ್ರೈವ್ ಎಂಬ ಟ್ಯಾಬ್‍‍‍ನಲ್ಲಿ ಪರಿಶೀಲಿಸಬಹುದು. ಓಲಾ ಡ್ರೈವ್ ಬಳಕೆದಾರರಿಗೆ ತನ್ನದೇ ಆದ ಪ್ಯಾಕೇಜ್ ವಿನ್ಯಾಸಗೊಳಿಸಲು ಅನುವು ಮಾಡಿಕೊಡುವುದರ ಜೊತೆಗೆ, ಕಿಲೋಮೀಟರ್ ಹಾಗೂ ಗಂಟೆಗಳವರೆಗೆ ಹಿಡಿದು ಇಂಧನ ಸೇರ್ಪಡೆವರೆಗೆ ಎಲ್ಲವನ್ನೂ ನಿಯಂತ್ರಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಈ ಸೆಗ್‍‍ಮೆಂಟಿನಲ್ಲಿರುವ ಎಲ್ಲಾ ಓಲಾ ಡ್ರೈವ್ ಕಾರುಗಳು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿವೈಸ್‍‍ನಲ್ಲಿ ಅಳವಡಿಸಲಾಗಿರುವ ಓಲಾ ಪ್ಲೇ ಆಪ್ ಹೊಂದಿವೆ. ಇದರಲ್ಲಿ ಜಿಪಿಎಸ್, ಮೀಡಿಯಾ ಪ್ಲೇಬ್ಯಾಕ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಗಳಿವೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಈ ಸೇವೆಯ ಜೊತೆಗೆ ಗ್ರಾಹಕರು, 24ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಹಾಯವಾಣಿ, ಎಮರ್ಜೆನ್ಸಿ ಬಟನ್ ಹಾಗೂ ರಿಯಲ್ ಟೈಮ್ ಟ್ರಾಕಿಂಗ್ ಹೊಂದಲಿದ್ದಾರೆ. ಈ ಸೇವೆಯಲ್ಲಿ ರೋಡ್ ಸೈಡ್ ಅಸಿಸ್ಟೆನ್ಸ್ ಸೇರಿರಲಿದೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಈ ಯೋಜನೆಯನ್ನು ಜಾರಿಗೊಳಿಸುವ ಮೊದಲ ಹಂತದಲ್ಲಿ, ಓಲಾ ಡ್ರೈವ್ ಅನ್ನು ಅಲ್ಪಾವಧಿಯ, ಸ್ವಯಂ-ಡ್ರೈವ್ ಕಾರು ಹಂಚಿಕೆ ಸೇವೆಯಾಗಿ ನೀಡಲಾಗುವುದು. ಇದರ ಜೊತೆಗೆ ಕಂಪನಿಯು ದೀರ್ಘಾವಧಿಯ ಚಂದಾದಾರಿಕೆ, ಕಾರ್ಪೊರೇಟ್ ಲೀಸಿಂಗ್ ಸೇರಿದಂತೆ ಹೆಚ್ಚಿನ ಆಯ್ಕೆಗಳನ್ನು ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ವಿವಿಧ ವಸತಿ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿರುವ ಪಿಕ್-ಅಪ್ ಕೇಂದ್ರಗಳ ಮೂಲಕ ಓಲಾ ಬೆಂಗಳೂರಿನಲ್ಲಿ ಬಳಕೆದಾರರಿಗೆ ಸೇವೆಯನ್ನು ನೀಡಲಿದೆ. ರೂ.2000 ಮೊತ್ತದ ಭದ್ರತಾ ಠೇವಣಿ ಪಾವತಿಸುವ ಮೂಲಕ ಬಳಕೆದಾರರು ತಮ್ಮ ಆಯ್ಕೆಯ ಕಾರನ್ನು ಎರಡು ಗಂಟೆಗಳವರೆಗೆ ಕಾಯ್ದಿರಿಸಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಕಂಪನಿಯು ತನ್ನ ಆದ್ಯತೆಯ ಬಗ್ಗೆ ತಿಳಿದು ಕೊಳ್ಳಲು ವಿಭಿನ್ನ ರೀತಿಯ ಚಾಲನಾ ಅನುಭವವನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಸಂಶೋಧನೆ ನಡೆಸಿತ್ತು. ಇದರಿಂದಾಗಿ ಗ್ರಾಹಕರ ಆದ್ಯತೆಯ ಕಾರಿನ ಬಗ್ಗೆ ತಿಳಿದುಕೊಳ್ಳಲು, ಗುಣಮಟ್ಟದ ರಿಪೇರಿ ಹಾಗೂ ಮೆಂಟೆನೆನ್ಸ್ ಬಗ್ಗೆ ತಿಳಿದುಕೊಳ್ಳಲು ಓಲಾ ಕಂಪನಿಗೆ ಅನುಕೂಲವಾಯಿತು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಈ ಸೇವೆಯನ್ನು 2 ಗಂಟೆಗಳಿಂದ 3 ತಿಂಗಳವರೆಗೆ ಪಡೆಯಬಹುದು. ಈ ಸೇವೆಯಲ್ಲಿ ಓಲಾದ ಕನೆಕ್ಟೆಡ್ ಕಾರ್ ಪ್ಲಾಟ್‍‍ಫಾರಂ ರೇಡಿಯೋ, ಸಂಗೀತ ಸೇರಿದಂತೆ ಹಲವಾರು ಮನರಂಜನಾ ಅಂಶಗಳಿವೆ. ಇವುಗಳನ್ನು 7 ಇಂಚಿನ ಟಚ್ ಸ್ಕ್ರೀನ್‍‍ನಲ್ಲಿ ಪಡೆಯಬಹುದು. ಇವುಗಳಲ್ಲಿ ಮೀಡಿಯಾ ಪ್ಲೇಬ್ಯಾಕ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಗಳೂ ಸೇರಿವೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಈ ಸೇವೆಯಲ್ಲಿ ಬಳಸಲಾಗುವ ಎಲ್ಲಾ ಕಾರುಗಳು ನ್ಯಾವಿಗೇಷನ್ ಟೂಲ್‍‍ಗಳನ್ನು ಹೊಂದಿರಲಿದ್ದು, ಬಳಕೆದಾರರಿಗೆ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಅನುಕೂಲಕರ ಚಾಲನಾ ಅನುಭವವನ್ನು ನೀಡಲಿವೆ. ಓಲಾ ಡ್ರೈವ್ ಸೇವೆಯಲ್ಲಿರುವ ಪ್ರತಿಯೊಂದು ಕಾರಿನ ಭಾಗಗಳು 104 ಪಾಯಿಂಟ್‍‍ಗಳನ್ನು ಹೊಂದಿವೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಓಲಾ ಸೆಲ್ಫ್ ಡ್ರೈವ್‍‍ನ ಪ್ರತಿ ಸೆಗ್‍‍ಮೆಂಟಿನಲ್ಲಿ ಜನಪ್ರಿಯ ಕಾರುಗಳಿರಲಿವೆ. ಇದರಿಂದಾಗಿ ವಿವಿಧ ರೀತಿಯ ಗ್ರಾಹಕರಿಗೆ ಅವರ ಅಗತ್ಯಗಳಿಗೆ ತಕ್ಕಂತೆ ವಿಶಿಷ್ಟ ಚಾಲನಾ ಅನುಭವ ದೊರೆಯಲಿದೆ. ಇದರಲ್ಲಿ ಎಕಾನಮಿ, ಪ್ರೀಮಿಯಂ ಹ್ಯಾಚ್‌ಬ್ಯಾಕ್, ಪ್ರೀಮಿಯಂ ಸೆಡಾನ್, ಕಾಂಪ್ಯಾಕ್ಟ್ ಹಾಗೂ ಪ್ರೀಮಿಯಂ ಎಸ್‍‍‍ಯುವಿ ಹಾಗೂ ಐಷಾರಾಮಿ ಕಾರುಗಳು ಸೇರಿರಲಿವೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಓಲಾ ಕಂಪನಿಯು, ಈ ಸೇವೆಯಲ್ಲಿರುವ ಕಾರುಗಳು ಪಂಕ್ಚರ್ ಆದರೆ ಅಥವಾ ಕೆಟ್ಟುನಿಂತರೆ ದಿನದ 24 ಗಂಟೆಗಳ ಕಾಲ ಸೇವೆಯನ್ನು ನೀಡುತ್ತದೆ. ಈ ಸೇವೆಯನ್ನು ಪಡೆಯಲು ಗ್ರಾಹಕರು ಬುಕಿಂಗ್‌ನಲ್ಲಿ ನೀಡಲಾಗಿರುವ 24X7 ಸಹಾಯವಾಣಿಗೆ ಕರೆ ಮಾಡಬೇಕಾಗುತ್ತದೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಅಪ್ಲಿಕೇಶನ್‌ನಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳಾದ ಎಮರ್ಜನ್ಸಿ ಬಟನ್ ಹಾಗೂ ಲೈವ್-ಟ್ರ್ಯಾಕಿಂಗ್‍‍ಗಳು ಓಲಾ ಬಳಕೆದಾರರಿಗೆ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಆರಾಮದಾಯಕ ಮೋಡ್ ಅನ್ನು ಒದಗಿಸುತ್ತವೆ.

ನಮ್ಮ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಸರ್ವಿಸ್ ಆರಂಭಿಸಿದ ಓಲಾ

ಓಲಾ ಪ್ಲೇ ಕನೆಕ್ಟಡ್ ಕಾರ್ ಪ್ಲಾಟ್‌ಫಾರಂ, ಡ್ರೈವಿಂಗ್ ಬಿಹೇವಿಯರ್, ಕಾರಿನ ಪರ್ಫಾಮೆನ್ಸ್, ಇಂಧನ ಬಳಕೆ ಹಾಗೂ ಉತ್ತಮವಾಗಿ ಚಾಲನೆ ಮಾಡಲು ಬೇಕಾಗುವಂತಹ ಸೌಲಭ್ಯಗಳನ್ನು ನೀಡುತ್ತದೆ. ಇದರಿಂದಾಗಿ ಕಾರುಗಳ ದಕ್ಷತೆಯು ಹೆಚ್ಚಲಿದೆ.

Most Read Articles

Kannada
English summary
Ola introduces self drive service in Bangalore - Read in Kannada
Story first published: Thursday, October 17, 2019, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X