ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಓಲಾ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಮಾರುಕಟ್ಟೆ ವಿಸ್ತರಣೆ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಕೆಲವು ವಿನೂತನ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಸುಳಿವು ನೀಡಿದೆ.

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಓಲಾ ಸಂಸ್ಥೆಯು ಸದ್ಯ ಉಬರ್ ಸಂಸ್ಥೆಗೆ ಭಾರೀ ಪೈಪೋಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಹೀಗಾಗಿಯೇ ಹೊಸ ಹೂಡಿಕೆದಾರರನ್ನು ಸೆಳೆಯುತ್ತಿರುವ ಓಲಾ ಸಂಸ್ಥೆಯು ಮೊನ್ನೆಯಷ್ಟೇ ಕಿಯಾ ಮೋಟಾರ್ಸ್ ಮತ್ತು ಹ್ಯುಂಡೈ ಸಂಸ್ಥೆಗಳೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ ಸೆಲ್ಪ್ ಡ್ರೈವಿಂಗ್ ಕಾರ್ ಸರ್ವೀಸ್ ಆರಂಭಿಸಲು ಸಿದ್ದತೆ ನಡೆಸಿದೆ.

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಮುಂದಿನ 2 ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸೆಲ್ಪ್ ಡ್ರೈವಿಂಗ್ ಕಾರು ಸೇವೆಗಳು ಲಭ್ಯವಾಗಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಸ್‌ಯುವಿ ಕಾರುಗಳನ್ನು ಬಾಡಿಗೆ ರೂಪದಲ್ಲಿ ಗ್ರಾಹಕರಿಗೆ ನೀಡಲಿದೆ.

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಓಲಾ ಸೆಲ್ಪ್ ಡ್ರೈವಿಂಗ್ ಕಾರು ಸೇವೆಗಳಲ್ಲಿ ಐಷಾರಾಮಿ ಕಾರುಗಳು ಸಹ ಲಭ್ಯವಾಗಲಿದ್ದು, ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ಒದಗಿಸಲು ಹ್ಯುಂಡೈ ಮತ್ತು ಕಿಯಾ ಸಂಸ್ಥೆಗಳು ಮುಂದೆ ಬಂದಿವೆ. ಹೀಗಾಗಿ ಹೊಸ ಯೋಜನೆಗೆ ಬರೋಬ್ಬರಿ ರೂ.2,100 ಕೋಟಿ ಬಂಡವಾಳ ಹೂಡಿಕೆ ಮಾಡಿರುವ ಕಿಯಾ ಮತ್ತು ಹ್ಯುಂಡೈ ಸಂಸ್ಥೆಗಳು ಓಲಾದಲ್ಲಿ ಶೇ.4ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿವೆ.

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಇದರ ಜೊತೆಗೆ ವ್ಯಯಕ್ತಿಕ ಕಾರು ಖರೀದಿಗೆ ಬಯಸುವ ಗ್ರಾಹಕರಿಗೂ ಬಾಡಿಗೆ ರೂಪದಲ್ಲಿ ಕಾರುಗಳನ್ನು ನೀಡಲು ಯೋಜಿಸಲಾಗಿದ್ದು, ಈ ಮೂಲಕ ಸೆಲ್ಪ್ ಡ್ರೈವಿಂಗ್ ಕಾರು ಸೇವೆಗಳನ್ನು ಒದಗಿಸುತ್ತಿರುವ ಭಾರತದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮುವ ತವಕದಲ್ಲಿದೆ.

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಸದ್ಯ ಮಾರುಕಟ್ಟೆಯಲ್ಲಿ ಜೂಮ್‌ಕಾರ್, ಮೈಲೆಸ್ ಮತ್ತು ಡ್ರೈವ್‌ಜಿ ಎನ್ನುವ ಪ್ರಮುಖ ಸಂಸ್ಥೆಗಳು ಸೆಲ್ಪ್ ಡ್ರೈವಿಂಗ್ ಕಾರ್ ಸೇವೆಗಳಲ್ಲಿ ಜನಪ್ರಿಯತೆ ಹೊಂದುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಂಟ್ರಿ ಲೆವಲ್ ಕಾರುಗಳಿಂದ ಹಿಡಿದು ಎಲೆಕ್ಟ್ರಿಕ್ ಕಾರುಗಳು ಮತ್ತು ಹೈ ಎಂಡ್ ಮಾದರಿಯ ಐಷಾರಾಮಿ ಕಾರುಗಳನ್ನು ಸಹ ದಿನದ ಬಾಡಿಗೆ ಲೆಕ್ಕದಲ್ಲಿ ಕಾರುಗಳನ್ನು ಒದಗಿಸುತ್ತಿವೆ.

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಹೀಗಾಗಿ ಓಲಾ ಸಂಸ್ಥೆಯು ಸಹ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳೊಂದಿಗೆ ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ಸಹ ಒದಗಿಸಲು ಮುಂದಾಗಿದ್ದು, ಜೂಮ್‌ಕಾರ್, ಮೈಲೆಸ್ ಮತ್ತು ಡ್ರೈವ್‌ಜಿ ಸಂಸ್ಥೆಗಳಿಗೆ ಭರ್ಜರಿಯಾಗಿಯೇ ಪೈಪೋಟಿ ನೀಡಲಿದೆ.

MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು..!

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಇನ್ನು ಓಲಾ ಸಂಸ್ಥೆಯು ಕಳೆದ ವಾರವಷ್ಟೇ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದೆ ಎನ್ನುವ ಆರೋಪದಡಿ ಬೆಂಗಳೂರಿನಲ್ಲಿ 6 ತಿಂಗಳ ಕಾಲ ಕ್ಯಾಬ್ ಸೇವೆಗಳ ಪರವಾನಿಗೆಯನ್ನು ಕಳೆದುಕೊಂಡಿತ್ತು. ಆದ್ರೆ ಅದನ್ನೇ ಜೀವನಾಧಾರವಾಗಿಟ್ಟುಕೊಂಡಿರುವ ಸಾವಿರಾರು ಚಾಲಕರಿಗೆ ಸಮಸ್ಯೆಯಾಗುವ ದೃಷ್ಠಿಯಿಂದ ಮಧ್ಯಪ್ರವೇಶ ಮಾಡಿದ್ದ ರಾಜ್ಯ ಸರ್ಕಾರವು ಓಲಾ ಸಂಸ್ಥೆಯಿಂದ ಭರ್ಜರಿ ಮೊತ್ತದ ದಂಡವಸೂಲಿ ಮಾಡಿ ಕ್ಯಾಬ್ ಸೇವೆಯ ಮೇಲಿನ ನಿಷೇಧವನ್ನು ತೆಗೆದುಹಾಕಿತ್ತು.

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

2016ರಲ್ಲಿ ಪಡೆಯಲಾಗಿರುವ ಕ್ಯಾಬ್ ಸೇವೆಗಳ ಪರವಾನಿಯ ನೀತಿಯನ್ನು ಉಲ್ಲಂಘಿಸಿದ್ದ ಓಲಾ ಸಂಸ್ಥೆಯು ಅಕ್ರಮವಾಗಿ ಬೈಕ್ ಟ್ಯಾಕ್ಸಿ‌ಗಳನ್ನು ಆರಂಭಿಸಿದ್ದು ಸಾಕಷ್ಟು ಗೊಂದಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಅಕ್ರಮವನ್ನು ಪತ್ತೆ ಹಚ್ಚಿದ್ದ ಸಾರಿಗೆ ಇಲಾಖೆಯು ಇದಕ್ಕಾಗಿ ಹೊಸ ಪರವಾನಿಗೆ ಪಡೆಯುವ ಅವಶ್ಯಕತೆಯಿದೆ ಎಂದಿತ್ತು.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ತನ್ನ ನೆಚ್ಚಿನ ಗ್ರಾಹಕರಿಗಾಗಿ ಓಲಾದಿಂದ ಮತ್ತೊಂದು ಹೊಸ ಸೇವೆ ಆರಂಭ..!

ಹೀಗಾಗಿ ಬೈಕ್ ಟ್ಯಾಕ್ಸಿ ಸೇವೆಗಳ ಬಗೆಗೆ ಇದ್ದ ಗೊಂದಲದಿಂದ ಹೊರಬಂದಿರುವ ಓಲಾ ಸಂಸ್ಥೆಯು ಮುಂದಿನ ತನ್ನ ಯೋಜನೆಗಳಿಗಾಗಿ ಹೊಸ ಪರವಾನಿಗೆ ಪತ್ರವನ್ನು ಪಡೆದುಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬೈಕ್ ಟ್ಯಾಕ್ಸಿ, ಸೆಲ್ಪ್ ಡ್ರೈವಿಂಗ್ ಕಾರ್ ಸರ್ವೀಸ್ ಮತ್ತು ವಯಕ್ತಿಯ ಬಳಕೆಯ ಕಾರು ಸೇವೆಗಳನ್ನು ಆರಂಭಿಸಲಿದೆ.

Most Read Articles

Kannada
Read more on ಓಲಾ ola
English summary
Ola To Introduce Self-Driving Car Services In India — To Be Introduced In Coming Months. Read in Kannada.
Story first published: Thursday, March 28, 2019, 13:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X