ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ನಗರ ಪ್ರದೇಶಗಳಲ್ಲಿ ಸೆಲ್ಫ್ ಡ್ರೈವ್ ಕಾರು ಸೇವೆಗೆ ಭಾರಿ ಬೇಡಿಕೆ ಹಿನ್ನಲೆಯಲ್ಲಿ ಝೂಮ್ ಕಾರು ಈಗಾಗಲೇ ಈ ಕ್ಷೇತ್ರದಲ್ಲಿ ಭಾರಿ ಯಶಸ್ಸು ಕಂಡಿದೆ. ಇದೀಗ ಝೂಮ್ ಕಾರಿಗೆ ಪೈಪೋಟಿ ನೀಡಲು ಓಲಾ ಸಂಸ್ಥೆ ಸಜ್ಜಾಗಿದೆ. ಈಗಾಗಲೇ ಓಲಾ ಸಂಸ್ಥೆ ಬೆಂಗಳೂರಿನಲ್ಲಿ ಸೆಲ್ಫ್ ಡ್ರೈವ್ ಕಾರು ಸೇವೆ ಆರಂಭಿಸುವುದಾಗಿ ಘೋಷಿಸಿದೆ.

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿ ಓಲಾ ಇದೀಗ ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌‍ಗೆ ರಾಜ್ಯ ಸಾರಿಗೆ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಝೂಮ್ ಕಾರು ಮಾದರಿಯಲ್ಲೇ ಓಲಾ ಸಂಸ್ಥೆಯು ಬಾಡಿಗೆ ಆಧಾರದಡಿ ಗ್ರಾಹಕರ ಚಾಲನೆಗೆ ಕಾರು ನೀಡಲಿದೆ. ಕ್ಯಾಬ್, ಟ್ಯಾಕ್ಸಿ ರೂಪದಲ್ಲಿದ್ದ ಓಲಾ ಇದೀಗ ಮತ್ತೊಂದು ಮಹತ್ತರ ಹೆಜ್ಜೆ ಇಡುತ್ತಿದೆ.

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಗ್ರಾಹಕರು ನಗರದೊಳಗೆ ಅಥವಾ ಅಂತರ್‌ ನಗರ ಪ್ರಯಾಣಕ್ಕೆ ಓಲಾ ಕಾರುಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಓಲಾ ಕಾರುಗಳನ್ನು ನೀಡಲು ಎರಡು ರೀತಿಯ ಅವಧಿಗಳನ್ನು ನಿಗಧಿಪಡಿಸಲಾಗಿದೆ. ಇದರಲ್ಲಿ ಕಡಿಮೆ ಅವಧಿ, ಧೀರ್ಘಾವಧಿ ಹಾಗೂ ಕಾರ್ಪೊರೇಟ್‌ ಮಾದರಿಯಲ್ಲಿ ಕಾರು ಬಾಡಿಗೆಗೆ ನೀಡಲು ಮುಂದಾಗಿದೆ.

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು ಸೇವೆಗಾಗಿ 10 ಸಾವಿರ ಕಾರುಗಳನ್ನು ನಿಯೋಜಿಸಿದೆ. ಓಲಾ ಸಂಸ್ಥೆಯು ಎಲ್ಲಾ ಮಾದರಿಯ ಕಾರುಗಳನ್ನು ಹೊಂದಿದೆ. ಓಲಾ ಸಂಸ್ಥೆಯು ಗ್ರಾಹಕರಿಗೆ ಹ್ಯಾಚ್‌ಬಾಕ್‌, ಸೆಡಾನ್ ಹಾಗೂ ಎಸ್‍‍ಯುವಿ ಸೆಗ್‍‍ಮೆಂಟ್‍‍ನ ಕಾರುಗಳು ಸೇವೆಗೆ ಲಭ್ಯವಾಗಲಿವೆ. ಗ್ರಾಹಕರು ಬಾಡಿಗೆಗೆ ಪಡೆಯಲು ನಿಮ್ಮ ನೆಚ್ಚಿನ ಸೆಗ್‍‍ಮೆಂಟ್‍‍ನಲ್ಲಿ ನಿಮಗೆ ಬೇಕಾದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಓಲಾ ಈ ಸೇವೆಯ ಮೇಲೆ ಮುಂದಿನ ಎರಡು ವರ್ಷದಲ್ಲಿ ಯುಎಸ್‌ ಡಾಲರ್ 500 ಮಿಲಿಯನ್‌ ಹೂಡಿಕೆ ಮಾಡಲು ಚಿಂತಿಸಿದೆ. ಗ್ರಾಹಕರಿಗೆ ಹೊಸ ಮಾದರಿಯ ಕಾರುಗಳ ಸೇವೆ ಒದಗಿಸುವ ಉದ್ದೇಶದಿಂದ ಕಾರು ಉತ್ಪಾದನೆಯ ಜನಪ್ರಿಯ ಕಂಪನಿಗಳಾದ ಬಿಎಂಡಬ್ಲ್ಯೂ, ಆಡಿ, ಮರ್ಸಿಡಿಸ್ ಸೇರಿದಂತೆ ಐಷಾರಾಮಿ ಕಾರು ಕಂಪನಿಗಳೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆ ಎಂದು ಓಲಾ ಸಂಸ್ಥೆ ತಿಳಿಸಿದೆ.

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಓಲಾ ಸಂಸ್ಥೆಯು ಈಗಾಗಲೇ ಕ್ಯಾಬ್, ಆಟೋ ಟ್ಯಾಕ್ಸಿ ಹಾಗೂ ಫುಡ್ ಡೆಲಿವರು ಹೀಗೆ ಹಲವು ಮಾದರಿ ಸೇವೆಗಳನ್ನು ಒದಗಿಸುತ್ತಿದೆ. ಸೆಲ್ಫಿ ಡ್ರೈವ್ ಕಾರುಗಳಲ್ಲಿ ಝೂಮ್ ಕಾರು ಹೆಚ್ಚು ಜನಪ್ರಿಯವಾಗಿದೆ. ಇದೀಗ ಓಲಾ ಕೂಡ ಇದೇ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದು ಪೈಪೋಟಿ ಹೆಚ್ಚಾಗಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಝೂಮ್ ಕಾರು 7,000 ಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿದ್ದು, ಪ್ರತಿದಿನ 2,000 ಕ್ಕೂ ಹೆಚ್ಚು ರೈಡ್‍ಗಳು ಹೋಗುತ್ತಿದೆ ಮತ್ತು 2 ಮಿಲಿಯನ್ ಗ್ರಾಹಕರ ಸಂಖ್ಯೆಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಆದರೆ ಜನಪ್ರಿಯ ಓಲಾ ಸಂಸ್ಥೆಯ ಮಹತ್ತರ ಹೆಚ್ಚೆ ಓಲಾ ಸೆಲ್ಫೆ ಡ್ರೈವ್ ರೆಂಟಲ್ ಕಾರ್ ನಿಂದ ಝೂಮ್ ಕಾರು ಹಾಗೂ 1.5 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಡೈವ್‍ಜಿ ಕಾರುಗಳಿಗೆ ಪಾರಿಣಾಮ ಬೀರುತ್ತ ಎಂದು ಕಾದು ನೋಡಬೇಕು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಓಲಾ ಸಂಸ್ಥೆಯು ಕೆಲವು ತಿಂಗಳ ಹಿಂದೆ ಪರವಾನಾಗಿ ಪಡೆಯದೆ ಬೈಕ್ ಟ್ಯಾಕ್ಸ್ ಸೇವೆ ಆರಂಭಿಸಿದ ಕಾರಣಕ್ಕಾಗಿ ಬೆಂಗಳೂರಿನಲ್ಲಿ 6 ತಿಂಗಳ ಕಾಲ ಕ್ಯಾಬ್ ಸೇವೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರು. ಆದರೆ ಏಕಾಏಕಿ ಇಂತಹ ನಿರ್ಧಾರದ ಕೈ‍ಗೊಳ್ಳುವುದರಿಂದ ಅದು ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಬಂಡವಾಳ ಹೂಡಿಕೆದಾರರು ಸಂಕಷ್ಟಕ್ಕೆ ಸಿಕುಕಲಿದ್ದಾರೆ, ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗಲಿದೆ ಎಂದು ರಾಜ್ಯ ಸರ್ಕಾರ ನಿಷೇಧವನ್ನು ಹಿಂಪಡೆದರು.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಬೆಂಗಳೂರಿನಲ್ಲಿ ಆರಂಭವಾಗಲಿದೆ ಓಲಾ ಸೆಲ್ಫ್ ಡ್ರೈವ್ ರೆಂಟಲ್ ಕಾರು

ಓಲಾ ಸಂಸ್ಥೆಯು ಕ್ಯಾಬ್ ಸೇವೆಗಳ ಪರವಾನಿಗೆಯ ನೀತಿಯನ್ನು ಉಲ್ಲಂಘಿಸಿ ಒಲಾ ಸಂಸ್ಥೆ ಬೈಕ್ ಟ್ಯಾಕ್ಸಿ ಯನ್ನು ಆರಂಭಿಸಿ ಸಂಕಷ್ಟವನ್ನು ಎದುರಿಸಿದರು. ಆದರೆ ಈ ಬಾರಿ ಅಂತಹ ದುಸ್ಸಾಹಸ ಕೈ ಆಗದೆ ರಾಜ್ಯ ಸಾರಿಗೆ ಸಂಸ್ಥೆಯಿಂದ ಪರವಾನಿಗೆಯನ್ನು ಪಡೆದುಕೊಂಡಿದೆ. ಬೆಂಗಳೂರು ನಗರಕ್ಕೆ ಸೆಲ್ಫ್ ಡ್ರೈವ್ ಕಾರು ಮೂಲಕ ಎಂಟ್ರಿ ಕೊಟ್ಟು ಝೂಮ್ ಕಾರು, ಮೈ ಚಾಯ್ಸ್ ಮತ್ತು ಡ್ರೈವ್‍‍ಜಿ ಸಂಸ್ಥೆಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Ola obtains licence from Karnataka transport dept to launch self-drive car rental service -Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X