ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಘೋಷಣೆ ಮಾಡಲಾಗಿರುವ ಫೇಮ್ 2 ಯೋಜನೆಗೆ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಒಟ್ಟು 7 ಆಟೋ ಉತ್ಪಾದನಾ ಸಂಸ್ಥೆಗಳು ಆಯ್ಕೆಯಾಗಿದ್ದು, ಹೊಸ ಯೋಜನೆಯಡಿ ಆಯ್ಕೆ ಮಾಡಲಾದ ಸಂಸ್ಥೆಗಳ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಬ್ಸಡಿ ದೊರೆಯಲಿದೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ 2018ರಲ್ಲಿ ಫೇಮ್ ಯೋಜನೆಯನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ 2ನೇ ಹಂತದ ಯೋಜನೆಯನ್ನು ಘೋಷಣೆ ಮಾಡಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೂ ಬಂಪರ್ ಆಫರ್ ನೀಡುತ್ತಿದೆ. ಇದರಲ್ಲಿ ಮಹೀಂದ್ರಾ ಮತ್ತು ಟಾಟಾ ಸೇರಿದಂತೆ ಒಟ್ಟು 7 ಸಂಸ್ಥೆಗಳು ಇದೀಗ ಫೇಮ್ 2 ಯೋಜನೆ ಅಡಿ ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ವಾಹನಗಳು ಖರೀದಿಗೆ ಲಭ್ಯವಾಗಲಿವೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಫೇಮ್ ಯೋಜನೆಯ ಮೊದಲ ಹಂತವನ್ನು ಪರಿಚಯಿಸಿದ್ದ ವೇಳೆ ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನಗಳಿಗೂ ಸಬ್ಸಡಿ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು 2ನೇ ಹಂತದ ಫೇಮ್ ಯೋಜನೆಯನ್ನು ಪರಿಚಯಿಸುವಾಗ ಕೆಲವು ಮಹತ್ವದ ಬದಲಾವಣೆಗಳನ್ನು ತಂದಿದ್ದು, ಹೊಸ ನಿಯಮವನ್ನು ಪಾಲನೆ ಮಾಡುವ ಸಂಸ್ಥೆಗಳಿಗೆ ಮಾತ್ರವೇ ಸಬ್ಸಡಿ ದೊರೆಯಲಿದೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಫೇಮ್ 2 ಯೋಜನೆ ಅಡಿ ಸಬ್ಸಡಿ ಪಡೆದುಕೊಳ್ಳಲು ಕಡ್ಡಾಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರಬೇಕಿರುವುದಲ್ಲದೇ ಸ್ಥಳೀಯವಾಗಿಯೇ ಇಂತಿಷ್ಟು ಪ್ರಮಾಣದಲ್ಲಿ ಬಿಡಿಭಾಗಗಳನ್ನು ಬಳಕೆ ಮಾಡಿರಬೇಕಿದೆ. ಈ ಎಲ್ಲಾ ನಿಯಮಗಳನ್ನು ಪಾಲಿಸುವಲ್ಲಿ ಯಶಸ್ವಿಯಾಗಿರುವ ಮಹೀಂದ್ರಾ, ಟಾಟಾ, ಕೆನೆಟಿಕ್ ಗ್ರಿನ್ ಎನರ್ಜಿ, ಜಿತೇಂದ್ರ ನ್ಯೂ ಇವಿ ಟೆಕ್, ಒಕಿನವಾ, ಅಥೆರ್ ಎನರ್ಜಿ ಮತ್ತು ಅಂಪೈರ್ ವೆಹಕಿಲ್ ಸಂಸ್ಥೆಗಳು ಆಯ್ಕೆಯಾಗಿವೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಫೇಮ್ 2 ಯೋಜನೆಯ ಸಬ್ಸಡಿಗೆ ಅರ್ಹವಾಗಿರುವ ಸಂಸ್ಥೆಗಳ ವಾಹನ ಖರೀದಿಸುವ ಗ್ರಾಹಕರಿಗೆ ಮತ್ತು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಧನಸಹಾಯ ಮಾಡಲಾಗಿದ್ದು, ಇದು ನೇರವಾಗಿ ವಾಹನಗಳ ಬೆಲೆ ಕಡಿತಕ್ಕೆ ನೆರವಾಗಲಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು 2019-21ರ ಅವಧಿಗೆ ಬರೋಬ್ಬರಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ಈ ಮೂಲಕ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ ಮತ್ತು ಮಾರಾಟದ ಜೊತೆ ಚಾರ್ಜಿಂಗ್ ಸ್ಟೆಷನ್‌ಗಳನ್ನು ಹೆಚ್ಚಿಸುವುದು ಈ ಯೋಜನೆ ಮೂಲ ಉದ್ದೇಶವಾಗಿದೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಆದ್ರೆ ಸಬ್ಸಡಿ ಯೋಜನೆಯಲ್ಲಿ ಅರ್ಹರಾಗಲು ಕೆಲವು ನಿರ್ಬಂಧಗಳನ್ನು ವಿಧಿಸಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೆ ಸಬ್ಸಡಿ ನೀಡಿದ್ದರೆ ವ್ಯಯಕ್ತಿಕ ಬಳಕೆಯ ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಸಬ್ಸಡಿ ಸೌಲಭ್ಯ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಹೊಸ ಸಬ್ಸಡಿ ಯೋಜನೆಯು ಕೇವಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ವಾಣಿಜ್ಯ ಬಳಕೆಯ ತ್ರಿ ಚಕ್ರ ಮತ್ತು ನಾಲ್ಕು ಚಕ್ರಗಳನ್ನು ವಾಹನಗಳಿಗೆ ಸಬ್ಸಡಿ ಅನ್ವಯವಾಗಲಿದೆ. ಹೀಗಾಗಿ ವ್ಯಯಕ್ತಿಕ ಬಳಕೆ ವಾಹನಗಳನ್ನು ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳಲ್ಲೂ ಕೆಲವು ಕಠಿಣ ನಿಲುವುಗಳನ್ನು ಪ್ರಕಟಿಸಿರುವ ಕೇಂದ್ರವು ಜಿಎಸ್‌ಟಿ ಮಾತ್ರ ಸಿಹಿಸುದ್ದಿ ನೀಡಿದೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ಇದ್ದ ಜಿಎಸ್‌ಟಿ ಪ್ರಮಾಣವನ್ನು ಶೇ. 12ರಿಂದ ಇದೀಗ ಶೇ.5 ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ ಮಾಡಲು ಸಾಕಷ್ಟು ಸಹಕಾರಿಯಾಗಿದೆ. ಈ ಬಗ್ಗೆ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದು, ಇವಿ ವಾಹನ ಖರೀದಿಸುವ ಗ್ರಾಹಕರನ್ನು ಸೆಳೆಯಲು ಜಿಎಸ್‌ಟಿ ಇಳಿಕೆ ಮಾಡಿರುವುದು ಮಹತ್ವದ ಬದಲಾವಣೆಗೆ ಮೊದಲ ದಿಟ್ಟಹೆಜ್ಜೆ ಎಂದು ಹೇಳಲಾಗಿದೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಹಾಗೆಯೇ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.

ಫೇಮ್ 2 ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಟಾಟಾ ಮತ್ತು ಮಹೀಂದ್ರಾ..!

ಇನ್ನು ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಲಾಗಿದ್ದು, ಹೊಸ ತೆರಿಗೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ಮತ್ತಷ್ಟು ದುಬಾರಿಯಾಗಲಿವೆ. ಇದು ಎಲೆಕ್ಟ್ರಿಕ್ ವಾಹನಗಳ ಬೇಡಿಕೆಗೆ ಪೂರಕವಾಗಿರಲಿದ್ದು, ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವುದು ಪ್ರಮುಖ ಸವಾಲಾಗಿದೆ.

Most Read Articles

Kannada
English summary
Only 7 EV Makers Have Qualified For FAME II Incentives. Read in Kannada.
Story first published: Friday, July 5, 2019, 18:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X