ರೇಸಿಂಗ್ ಕಾರ್ ಅಭಿವೃದ್ದಿಪಡಿಸಿದ ಉಸ್ಮಾನಿಯ ಯೂನಿವರ್ಸಿಟಿ ವಿದ್ಯಾರ್ಥಿಗಳು

ಉಸ್ಮಾನಿಯ ಯೂನಿವರ್ಸಿಟಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‍‍ನ ವಿದ್ಯಾರ್ಥಿಗಳು ಎಕ್ಸ್‌ಎಲ್‌ಆರ್8 ಎಂಬ ಹೆಸರಿನ ರೇಸಿಂಗ್ ಕಾರು ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕಾರಿನ ಕಾನ್ಸೆಪ್ಟ್ ಅನ್ನು ಕಳೆದ ವರ್ಷದ ನವೆಂಬರ್‍‍ನಲ್ಲಿ ತಯಾರಿಸಲಾಗಿತ್ತು. ವಿನ್ಯಾಸ ಹಾಗೂ ಅಭಿವೃದ್ಧಿಗಾಗಿ ರೂ.10 ಲಕ್ಷಗಳ ಬಜೆಟ್ ನಿಗದಿಪಡಿಸಲಾಗಿತ್ತು.

ರೇಸಿಂಗ್ ಕಾರ್ ಅಭಿವೃದ್ದಿಪಡಿಸಿದ ಉಸ್ಮಾನಿಯ ಯೂನಿವರ್ಸಿಟಿ ವಿದ್ಯಾರ್ಥಿಗಳು

ಕಾಲೇಜಿನ 25 ವಿದ್ಯಾರ್ಥಿಗಳು ದಾಖಲೆಯ ನಾಲ್ಕು ತಿಂಗಳ ಅವಧಿಯಲ್ಲಿ ಈ ಕಾರ್ ಅನ್ನು ತಯಾರಿಸಿದ್ದಾರೆ. ಈ ಕಾರ್ ಅನ್ನು ಉಸ್ಮಾನಿಯ ಯೂನಿವರ್ಸಿಟಿಯ ತಂಡವು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಇಂಟರ್‍‍ನ್ಯಾಷನಲ್ ಬುದ್ದ ರೇಸಿಂಗ್ ಸರ್ಕ್ಯೂಟಿಗೆ ಕೊಂಡೊಯ್ದು, ನ್ಯಾಷನಲ್ ಲೆವೆಲ್‍‍ನ ಸೂಪರ್ ರೇಸಿಂಗ್ ಸ್ಪರ್ಧೆಯಾದ ಸುಪ್ರಾ ಸೇ ಇಂಡಿಯಾದಲ್ಲಿ ಭಾಗವಹಿಸಲಿದೆ.

ಸುಪ್ರಾ ಸೇ ಇಂಡಿಯಾದಲ್ಲಿ ನಿಗದಿಪಡಿಸಿರುವ ಡಿಸೈನ್ ಸ್ಟಾಂಡರ್ಡ್‍‍ಗಳನ್ನು ಹೊಂದಿರುವ ಫಾರ್ಮುಲಾ ಸ್ಟೈಲಿನ ಕಾರುಗಳು ಮಾತ್ರ ಭಾಗವಹಿಸುತ್ತವೆ. ಫ್ಯಾಕಲ್ಟಿ ಅಡ್ವೈಸರ್ ಆದ ವಿ ಉಮಾ ಮಹೇಶ್ವರ್‍‍‍ರವರು ಮಾತನಾಡಿ, ಯೋಜನೆಯು ಹಣಕಾಸಿನ ಪರಿಸ್ಥಿತಿಯಿಂದಾಗಿ ಸರಿಯಾದ ಸಮಯಕ್ಕೆ ಆರಂಭವಾಗಲಿಲ್ಲ.

ರೇಸಿಂಗ್ ಕಾರ್ ಅಭಿವೃದ್ದಿಪಡಿಸಿದ ಉಸ್ಮಾನಿಯ ಯೂನಿವರ್ಸಿಟಿ ವಿದ್ಯಾರ್ಥಿಗಳು

ಅಗತ್ಯವಾಗಿದ್ದ ಹಣಕಾಸಿನ ನೆರವು ದೊರೆತ ನಂತರ, ಈ ರೇಸ್ ಕಾರಿನ ವಿನ್ಯಾಸ ಹಾಗೂ ಅಭಿವೃದ್ದಿಯು 2019ರ ಫೆಬ್ರವರಿಯಿಂದ ಶುರುವಾಯಿತು. ವಿದ್ಯಾರ್ಥಿಗಳು ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಈ ಕಾರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು. ಈ ವಾಹನವು 390 ಸಿಸಿಯ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 43.5 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ.

ಈ ಕಾರಿನ ಟಾಪ್ ಸ್ಪೀಡ್ ಅನ್ನು 170 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ. ಈ ರೇಸಿಂಗ್ ಕಾರು 240 ಕೆ.ಜಿ ತೂಕವನ್ನು ಹೊಂದಿದೆ. ಸ್ಥಿರತೆಯನ್ನು ಹೊಂದಿರುವ ಈ ಕಾರು ಚಾಲಕರಿಗೆ ಉತ್ತಮ ಪರ್ಫಾಮೆನ್ಸ್ ಹಾಗೂ ಆರಾಮದಾಯಕ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ಕಾರನ್ನು ಅಭಿವೃದ್ದಿಪಡಿಸಿದ್ದ ತಂಡದ ನೇತೃತ್ವವನ್ನು ಕ್ಯಾಪ್ಟನ್ ಅಭಿನವ್ ವೆಂಕಟ್, ವೈಸ್ ಕ್ಯಾಪ್ಟನ್ ಹರಿತಾ ವಹಿಸಿದ್ದರು.

ಈ ತಂಡವು ಎರಡನೇ, ಮೂರನೇ ಹಾಗೂ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಆಕಾಶ್ ವರ್ಧನ ಹಾಗೂ ಸಹರ್ಷ ವಾಹನದ ಚಾಲಕರಾಗಿದ್ದರು. ಸುಮಾರು ಎಂಟು ವಿದ್ಯಾರ್ಥಿನಿಯರು ಈ ಕಾರನ್ನು ನಿರ್ಮಿಸುವಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು ಎಂದು ತಂಡ ತಿಳಿಸಿದೆ.

ಆರಂಭದಲ್ಲಿ ಹಣಕಾಸಿನ ಅಡಚಣೆಯನ್ನು ಎದುರಿಸಿದರೂ, ನಂತರ ತೆಲಂಗಾಣ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್, ತೆಲಂಗಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿಗಳ ಆರ್ಥಿಕ ಸಹಾಯವನ್ನು ಪಡೆದು ಈ ರೇಸಿಂಗ್ ಕಾರ್ ಅನ್ನು ಅಭಿವೃದ್ದಿಪಡಿಸಲಾಗಿದೆ.

Source: Telangana Today

Most Read Articles

Kannada
English summary
Osmania University students design racing car - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X