ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಭಾರತೀಯ ಆಟೋ ಉದ್ಯಮದಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದ್ದು, ಬಹುತೇಕ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನಗಳ ಮಾರಾಟ ಮಾಡಲು ಕೂಡಾ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಆಟೋ ಉದ್ಯಮದಲ್ಲಿನ ಕೆಲವು ಬದಲಾವಣೆಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಹಿನ್ನಡೆ ಅನುಭವಿಸಿವೆ. ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಲು ಹಲವು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಎಲೆಕ್ಟ್ರಿಕ್ ವಾಹನ ಮೇಲಿನ ಜಿಎಸ್‌ಟಿ ತಗ್ಗಿಸಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಿರುವುದು ಹೊಸ ವಾಹನಗಳ ಮಾರಾಟದ ಮೇಲೆ ಪ್ರತಿಕೂಲಕರ ಪರಿಣಾಮ ಬೀರಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಇದರಿಂದ ಕಳೆದ 19 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ವಲಯವು ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಯನ್ನೇ ತಾತ್ಕಲಿಕವಾಗಿ ಬಂದ್ ಮಾಡುತ್ತಿವೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಜಿಎಸ್‌ಟಿ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಕೇಂದ್ರ ಸರ್ಕಾರವು ಕಳೆದ ತಿಂಗಳ ಹಿಂದಷ್ಟೇ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಮೇಲೆ ಶೇ.18ರಷ್ಟಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇ.28ಕ್ಕೆ ಏರಿಕೆ ಮಾಡಲಾಗಿದ್ದು, ಹೊಸ ವಾಹನಗಳ ಬೆಲೆಯು ಸತತ ಏರಿಕೆಯಿಂದಾಗಿ ಮಾರಾಟ ಪ್ರಮಾಣವು ಕೂಡಾ ಅಷ್ಟೇ ವೇಗದಲ್ಲಿ ಕುಸಿತ ಕಾಣುತ್ತಿದೆ. ಜೊತೆಗೆ ಸಾಂಪ್ರಾದಾಯಿಕ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಳದಿಂದ ಹೊಸ ವಾಹನ ಮಾರಾಟದ ಮೇಲೆ ಅಷ್ಟೇ ಅಲ್ಲದೇ ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಸಣ್ಣ ಉದ್ಯಮಗಳ ಮೇಲೂ ಇದು ಪರಿಣಾಮ ಬೀರುತ್ತಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಹೊಸ ವಾಹನಗಳ ಮಾರಾಟ ಪ್ರಮಾಣವು 2019ರ ಆರಂಭದಿಂದಲೇ ಕುಸಿತ ಕಾಣುತ್ತಿದ್ದು, ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಮಾಣಿಕರ ವಾಹನಗಳ ಮಾರಾಟ ಪ್ರಮಾಣವು ಶೇ.30ಕ್ಕೆ ಕುಸಿತ ಕಂಡಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

2018ರ ಜುಲೈ ಅವಧಿಗೂ 2019ರ ಜುಲೈ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದ್ದಲ್ಲಿ, ಕಳೆದ ವರ್ಷದ ಜುಲೈನಲ್ಲಿ ಒಟ್ಟು 2,90,931 ಪ್ರಯಾಣಿಕ ವಾಹನಗಳು ಮಾರಾಟವಾದರೇ ಪ್ರಸಕ್ತ ವರ್ಷದ ಜುಲೈ ಅವಧಿಯಲ್ಲಿ ಕೇವಲ 2,00,790 ಪ್ರಯಾಣಿಕ ವಾಹನಗಳು ಮಾರಾಟವಾಗಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಅಂದರೆ, ಕಳೆದ ವರ್ಷದ ಜುಲೈ ಅವಧಿಗೂ ಮತ್ತು 2019ರ ಜುಲೈ ಅವಧಿಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟಕ್ಕೂ ಶೇ.30.98ರಷ್ಟು ಇಳಿಕೆ ಕಂಡು ಬಂದಿದ್ದು, ಸಣ್ಣ ಕಾರುಗಳ ಮಾರಾಟದಲ್ಲೂ ಬರೋಬ್ಬರಿ ಶೇ.35.95ರಷ್ಟು ಇಳಿಕೆ ದಾಖಲಾಗಿದೆ.

MOST READ: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗುತ್ತಾ ಕಿಯಾ ಕಾರ್ನಿವಾಲ್?

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಸದ್ಯದ ಪರಿಸ್ಥಿತಿಯಲ್ಲಿ ಇನ್ನು ಅಧಿಕ ಪ್ರಮಾಣದಲ್ಲಿ ವಾಹನಗಳ ಮಾರಾಟ ಪ್ರಮಾಣವು ಇಳಿಕೆ ಕಾಣುವ ಸಾಧ್ಯತೆಗಳಿದ್ದು,ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಹ ಬಹುತೇಕ ಆಟೋ ಕಂಪನಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಇದರ ಪರಿಣಾಮವಾಗಿ ಆಟೋ ಉತ್ಪಾದನಾ ವಲಯದಲ್ಲಿ ಇದುವರೆಗೆ 3.30 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಪರೋಕ್ಷವಾಗಿ ಆಟೋ ಉತ್ಪಾದನಾ ವಲಯವನ್ನೇ ನಂಬಿಕೊಂಡಿರುವ ಬಿಡಿಭಾಗಗಳ ಉತ್ಪಾದನಾ ವಲಯದಲ್ಲೂ ಸುಮಾರು 10 ಲಕ್ಷ ಉದ್ಯೋಗಿಗಳನ್ನು ಕೆಲಸ ಕಳೆದುಕೊಂಡಿದ್ದಾರೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ನೆಲಕಚ್ಚಿದ ಹೊಸ ವಾಹನಗಳ ಮಾರಾಟ- ಕದಮುಚ್ಚಿದ ಜನಪ್ರಿಯ ಕಾರು ಕಂಪನಿಗಳು..!

ಆದರೂ ಕೂಡಾ ವಾಹನ ಮಾರಾಟ ಪ್ರಮಾಣವು ಸತತ ಇಳಿಕೆ ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ವಾಹನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಬೇಡಿಕೆಯ ಆಧಾರ ಮೇಲೆ ಹೊಸ ವಾಹನಗಳನ್ನು ಉತ್ಪಾದನೆ ಮಾಡುತ್ತಿರುವುದು ಭಾರೀ ಪ್ರಮಾಣದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ

Most Read Articles

Kannada
English summary
Passenger Vehicles sales decline worst in 19 years. Read in Kannada.
Story first published: Wednesday, August 14, 2019, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X