ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿಗೆ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಭಾರತೀಯ ಆಟೋ ಉದ್ಯಮವು ಸದ್ಯ ಹೊಸ ವಾಹನಗಳ ಮಾರಾಟವಿಲ್ಲದೇ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಇದರ ನಡುವೆ ತೈಲ ಬೆಲೆಯಲ್ಲಿ ಮತ್ತೆ ಏರಿಕೆಯಾಗುತ್ತಿರುವುದು ಹೊಸ ವಾಹನಗಳ ಮಾರಾಟದ ಮೇಲೆ ಮತ್ತಷ್ಟು ಪ್ರತಿಕೂಲಕರ ವಾತಾವರಣ ಬೀರುವ ಸಾಧ್ಯತೆಗಳಿವೆ.

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಹೆಚ್ಚುತ್ತಿರುವ ತೈಲ ಬೆಲೆಗಳು ಮತ್ತು ಕೇಂದ್ರ ಸರ್ಕಾರವು ಇಂಧನ ಆಧರಿತ ವಾಹನಗಳ ಮೇಲೆ ಹೆಚ್ಚಿಸುತ್ತಿರುವ ಜಿಎಸ್‌ಟಿ ಪರಿಣಾಮ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಇದೀಗ ವ್ಯಾಟ್ ಪ್ರಮಾಣವನ್ನು ಹೆಚ್ಚಿಸಿರುವುದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮಾಹಿತಿಗಳ ಪ್ರಕಾರ ಉತ್ತರಪ್ರದೇಶದಲ್ಲಿ ಪರಿಸ್ಕೃತ ವ್ಯಾಟ್ ದರಗಳನ್ನು ಜಾರಿಗೆ ತಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿರುವುದನ್ನು ಕಂಡು ವಾಹನ ಸವಾರರಿಗೆ ಕಂಗಾಲಾಗಿದ್ದಾರೆ.

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಉತ್ತರಪ್ರದೇಶದಲ್ಲಿ ಪರಿಸ್ಕೃತ ವ್ಯಾಟ್ ಜಾರಿ ನಂತರ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.2.35 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 92 ಪೈಸೆ ಹೆಚ್ಚಳವಾಗಿದ್ದು, ವ್ಯಾಟ್ ಪ್ರಮಾಣದಲ್ಲಿ ಭಾರೀ ಬದಲಾವಣೆ ತರಲಾಗಿದೆ.

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಉತ್ತರಪ್ರದೇಶವನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡಿಸೆೇಲ್ ಬೆಲೆಗಳಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲದ್ದಿದ್ದರೂ ಸ್ವಲ್ಪ ಮಟ್ಟಿಗೆ ಏರಿಕೆ-ಇಳಿಕೆ ದಾಖಲಾಗಿದ್ದು, ಮುಂಬರುವ ದಿನಗಳಲ್ಲಿ ವ್ಯಾಟ್ ಪ್ರಮಾಣದಲ್ಲಿ ಆಯಾ ರಾಜ್ಯಗಳು ಬದಲಾವಣೆ ಮಾಡಬಹುದಾದ ಸಾಧ್ಯತೆಗಳಿವೆ.

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಇನ್ನು ತೈಲ ಬೆಲೆಯಲ್ಲಿ ಹೆಚ್ಚಳವಾದಲ್ಲಿ ಈಗಾಗಲೇ ಆರ್ಥಿಕವಾಗಿ ಹೊಡೆತಕ್ಕೆ ಒಳಗಾಗಿರುವ ಆಟೋಮೊಬೈಲ್ ಕ್ಷೇತ್ರದ ಮತ್ತಷ್ಟು ಪ್ರತಿಕೂಲಕರ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಹೊಸ ವಾಹನಗಳ ಮಾರಾಟವಿಲ್ಲದೇ ಹಿನ್ನಡೆ ಅನುಭವಿಸುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದೆ.

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಸದ್ಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದ್ದು, ಬಹುತೇಕ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನಗಳ ಮಾರಾಟ ಮಾಡಲು ಕೂಡಾ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

MOST READ:ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಆಟೋ ಉದ್ಯಮದಲ್ಲಿನ ಕೆಲವು ಮಹತ್ವದ ಬದಲಾವಣೆಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಹೊಸ ವಾಹನಗಳ ಮಾರಾಟದಲ್ಲಿ ತಿಂಗಳಿನಿಂದ ತಿಂಗಳಿಗೆ ತೀವ್ರ ಹಿನ್ನಡೆ ಅನುಭವಿಸುತ್ತಿವೆ.

MOST READ: ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಹೆಚ್ಚುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಿರುವುದು ಹೊಸ ವಾಹನ ಮಾರಾಟದ ಮೇಲೆ ಪ್ರತಿಕೂಲಕರ ಪರಿಣಾಮ ಬೀರಿದೆ.

MOST READ: ವಾರಾಂತ್ಯದಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಟಾಪ್ 4 ಕಾರುಗಳಿವು..!

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಇದರಿಂದ ಕಳೆದ 19 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ವಲಯವು ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದ್ದು, ಹೊಸ ಕಾರುಗಳ ಉತ್ಪಾದನೆಯಲ್ಲಿ ತಾತ್ಕಲಿಕವಾಗಿ ಬಂದ್ ಮಾಡಲಾಗುತ್ತಿದೆ.

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಜಿಎಸ್‌ಟಿ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದೆ.

ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿ ಗಗನಕ್ಕೇರಿದ ಪೆಟ್ರೋಲ್ ಬೆಲೆ

ತಿಂಗಳ ಹಿಂದಷ್ಟೇ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಮೇಲೆ ಶೇ.18ರಷ್ಟಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇ.28ಕ್ಕೆ ಏರಿಕೆ ಮಾಡಲಾಗಿದ್ದು, ಹೊಸ ವಾಹನಗಳ ಬೆಲೆಯು ಸತತ ಏರಿಕೆಯಿಂದಾಗಿ ಮಾರಾಟ ಪ್ರಮಾಣವು ಕೂಡಾ ಅಷ್ಟೇ ವೇಗದಲ್ಲಿ ಕುಸಿತ ಕಾಣುತ್ತಿದೆ.

Most Read Articles

Kannada
English summary
Petrol, Diesel Price Hiked In Uttar Pradesh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X