ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ತನ್ನ ಕಮರ್ಶಿಯಲ್ ಪ್ಯಾಸೆಂಜರ್ ವಾಹನಗಳ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ, ಪಿಯಾಜಿಯೊ ಕಂಪನಿಯು ಹೊಸ ಅಪೆ ಸಿಟಿ ಪ್ಲಸ್ ತ್ರಿಚಕ್ರ ವಾಹನವನ್ನು ರಸ್ತೆಗಿಳಿಸಿದೆ. ಇದರಿಂದಾಗಿ ಪಿಯಾಜಿಯೊ ಕಂಪನಿಯು ಮಧ್ಯಮ ಶ್ರೇಣಿಯ ತ್ರಿ ಚಕ್ರ ವಾಹನಗಳ ಸೆಗ್‍‍ಮೆಂಟಿಗೆ ಕಾಲಿಟ್ಟಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಪಿಯಾಜಿಯೊ ಕಂಪನಿಯು ಕೊನೆಯ ಹಂತದವರೆಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ. ಕಂಪನಿಯ ಪ್ರಕಾರ ಈ ಯೋಜನೆಯಿಂದಾಗಿ ದೇಶದಲ್ಲಿ ಶೇರ್ಡ್ ಕನೆಕ್ಟಿವಿಟಿ ಅಭಿವೃದ್ಧಿ ಹೊಂದಲಿದೆ. ಎನ್‍‍ಡಿ‍‍ಟಿ‍‍ವಿ ಆಟೋ ವರದಿಗಳ ಪ್ರಕಾರ, ಹೊಸ ಅಪೆ ಸಿಟಿ ಪ್ಲಸ್ ವಾಹನವು ಹೆಚ್ಚಿನ ಗ್ರೌಂಡ್ ಲೆವೆಲ್‍ ಹೊಂದಿದೆ. ಈ ವಾಹನವನ್ನು ಭಾರತ ಹಾಗೂ ಇಟಲಿಯಲ್ಲಿರುವ ಪಿಯಾಜಿಯೊ ಕಂಪನಿಯ ಆರ್ ಅಂಡ್ ಡಿ ಘಟಕಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ತ್ರಿ ಚಕ್ರ ವಾಹನವು ಪೆಟ್ರೋಲ್, ಡೀಸೆಲ್, ಎಲ್‍‍ಪಿ‍‍ಜಿ ಹಾಗೂ ಸಿ‍ಎನ್‍‍ಜಿ ಎಂಬ ನಾಲ್ಕು ಮಾದರಿಗಳಲ್ಲಿ ದೊರೆಯುತ್ತದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಪಿಯಾಜಿಯೊ ಕಂಪನಿಯ ಪ್ರಕಾರ ಅಪೆ ಸಿಟಿ ಪ್ಲಸ್ ವಾಹನವು ಈ ಸೆಗ್‍‍ಮೆಂಟಿನಲ್ಲಿರುವ ಉತ್ತಮವಾದ ವಾಹನಗಳಲ್ಲಿ ಒಂದಾಗಿದ್ದು, ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸಲಿದೆ. ಈ ವಾಹನದಲ್ಲಿ ಸ್ಟೆಪ್ ಲೆಸ್ ಎಂಟ್ರಿ ಇರಲಿದ್ದು. ಹೆಚ್ಚಿನ ಲಗ್ಗೇಜ್ ಸ್ಪೇಸ್ ಹೊಂದಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ವಿಭಿನ್ನ ಬಗೆಯ ವಿನ್ಯಾಸದಿಂದಾಗಿ ಅಧಿಕ ಪ್ರಮಾಣದ ಲೆಗ್‍‍ರೂಂ ಹಾಗೂ ಹೆಡ್‍‍ರೂಂ ಗಳನ್ನು ಪ್ರಯಾಣಿಕರಿಗೆ ಒದಗಿಸಿ, ಚಾಲಕರಿಗೆ ಆರಾಮದಾಯಕ ಚಾಲನಾ ಅನುಭವವನ್ನು ನೀಡಲಿದೆ. ಇದರಲ್ಲಿರುವ ವಿನ್ಯಾಸವು ಮಾರುಕಟ್ಟೆಯಲ್ಲಿರುವ ಬೇರೆ ವಾಹನಗಳಿಗಿಂತ ಭಿನ್ನವಾಗಿರಲಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಪಿಯಾಜಿಯೊ ಕಂಪನಿಯು ಈ ವಿನ್ಯಾಸದಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ ಎಂಬ ವಿಶ್ವಾಸವನ್ನು ಹೊಂದಿದೆ. ಹೊಸ ಅಪೆ ಸಿಟಿ ಪ್ಲಸ್ ವಾಹನವು ಈ ಸೆಗ್‍‍ಮೆಂಟಿನಲ್ಲಿಯೇ ಅತಿ ಹೆಚ್ಚು ಎನಿಸುವ 197 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. 1,920 ಎಂಎಂ ಗಾತ್ರದ ವ್ಹೀಲ್‍‍ಬೇಸ್‍ ಹೊಂದಿದೆ. 2,880 ಎಂಎಂ ಉದ್ದ, 1,435 ಎಂಎಂ ಅಗಲ ಹಾಗೂ 1,970 ಎಂಎಂ ಎತ್ತರವನ್ನು ಹೊಂದಿದೆ. ಪಿಯಾಜಿಯೊ ಅಪೆ ಸಿಟಿ ಪ್ಲಸ್‍‍ನಲ್ಲಿ 3 ವಾಲ್ವ್ 230ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 10 ಬಿ‍‍ಹೆಚ್‍‍ಪಿ ಪವರ್ ಹಾಗೂ 17.51 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಎಲ್‍‍ಪಿ‍‍ಜಿ ಮಾದರಿಯ ವಾಹನವು 11 ಬಿ‍‍ಹೆಚ್‍‍ಪಿ ಪವರ್ ಹಾಗೂ 20.37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಅಪೆ ಸಿಟಿ ಪ್ಲಸ್ ಡೀಸೆಲ್ ಮಾದರಿಯ ವಾಹನವು 8 ಬಿ‍‍ಹೆಚ್‍‍ಪಿ ಪವರ್ ಹಾಗೂ 21 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಲ್ಲಾ ಮಾದರಿಯ ವಾಹನಗಳಲ್ಲೂ 4 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್‍‍ಗಳು ಸಸ್ಪೆಂಷನ್ ನಿಯಂತ್ರಿಸುತ್ತವೆ. ವಾಹನವನ್ನು ನಿಲ್ಲಿಸಲು ಡ್ರಮ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಪಿಯಾಜಿಯೊ ಅಪೆ ಸಿಟಿ ಪ್ಲಸ್ ವಾಹನದ ಬೆಲೆಯು ಮಾರುಕಟ್ಟೆಯಲ್ಲಿರುವ ಬೇರೆ ತ್ರಿ ಚಕ್ರ ವಾಹನಗಳಿಗಿಂತ ಕಡಿಮೆಯಾಗಿದೆ. ಸಿ‍ಎನ್‍‍ಜಿ ಮಾದರಿಯ ವಾಹನವು ಪ್ರತಿ ಕೆ.ಜಿಗೆ 40 ಕಿ.ಮೀ ಮೈಲೇಜ್ ನೀಡಲಿದೆ. ಎಲ್‍‍ಪಿ‍‍ಜಿ ಆವೃತ್ತಿಯು 22 ಕಿ.ಮೀ ಮೈಲೇಜ್ ನೀಡಲಿದೆ. ಡೀಸೆಲ್ ಮಾದರಿಯು ಪ್ರತಿ ಲೀಟರಿಗೆ 40 ಕಿ.ಮೀ ಮೈಲೇಜ್ ನೀಡಲಿದೆ.

MOST READ: ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಪಿಯಾಜಿಯೊ ಇಂಡಿಯಾ ಕಂಪನಿಯು ಅಪೆ ಸಿಟಿ ಪ್ಲಸ್ ಪೆಟ್ರೋಲ್ ಮಾದರಿಯ ಮೇಲೆ 36 ತಿಂಗಳುಗಳ ಅಥವಾ 1 ಲಕ್ಷ ಕಿ.ಮೀವರೆಗಿನ ವಾರಂಟಿಯನ್ನು ನೀಡುವುದರ ಜೊತೆಗೆ ಒಂದು ವರ್ಷದ ಅವಧಿಯವರೆಗೆ ಎಂಟು ಉಚಿತ ಸರ್ವಿಸ್‍‍ಗಳನ್ನು ನೀಡುತ್ತದೆ. ಡೀಸೆಲ್ ಮಾದರಿಯ ಮೇಲೆ 42 ತಿಂಗಳು ಅಥವಾ 1.2 ಲಕ್ಷ ಕಿ.ಮೀವರೆಗಿನ ವಾರಂಟಿ ಹಾಗೂ ಐದು ಉಚಿತ ಸರ್ವಿಸ್‍‍ಗಳನ್ನು ನೀಡಲಾಗುವುದು.

MOST READ: ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಪಿಯಾಜಿಯೊ ಅಪೆ ಸಿಟಿ ಪ್ಲಸ್ ಪೆಟ್ರೊಲ್ ಮಾದರಿಯ ಬೆಲೆಯು ರೂ.1.71 ಲಕ್ಷಗಳಾಗಿದ್ದರೆ, ಸಿ‍ಎನ್‍‍ಜಿ ಮಾದರಿಯ ಬೆಲೆಯು ರೂ.1.92 ಲಕ್ಷಗಳಾಗಲಿದೆ. ಈ ಎಲ್ಲಾ ಬೆಲೆಗಳು ಭಾರತದಲ್ಲಿರುವ ಎಕ್ಸ್ ಶೋರೂಂ ದರಗಳಂತೆ ಇವೆ.

MOST READ: ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಅಪೆ ಸಿಟಿ ಪ್ಲಸ್ ದೇಶಿಯ ಮಾರುಕಟ್ಟೆಯಲ್ಲಿರುವ ಇತರ ತ್ರಿ ಚಕ್ರ ವಾಹನಗಳಿಗಿಂತ ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ. ಅಪೆ ಪ್ಲಸ್ ಥೈಲ್ಯಾಂಡ್‍‍ನ ಜನಪ್ರಿಯ ಟುಕ್ ಟುಕ್ ನಂತೆ ಕಾಣುತ್ತದೆ. ಬಹುತೇಕ ಆಟೋ ಚಾಲಕರು ಈಗಿರುವ ವಾಹನಗಳ ಬದಲಿಗೆ ದೊಡ್ಡ ಗಾತ್ರ, ಹೆಚ್ಚು ಸ್ಥಳವನ್ನು ಹೊಂದಿರುವ ವಾಹನಗಳನ್ನು ಹೊಂದಲು ಬಯಸುತ್ತಿದ್ದಾರೆ. ಪಿಯಾಜಿಯೊ ಬಿಡುಗಡೆಗೊಳಿಸಿರುವ ಈ ಹೊಸ ತ್ರಿ ಚಕ್ರ ವಾಹನದಿಂದಾಗಿ ಭಾರತೀಯ ಆಟೋ ಮೊಬೈಲ್ ಉದ್ಯಮದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಲಿದೆ.

Most Read Articles

Kannada
English summary
Piaggio Launches Ape City Plus — Enters Three-Wheeler Passenger Segment - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X