ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಪಿಯಾಜಿಯೊ ಇಂಡಿಯಾ ಸಂಸ್ಥೆಯು ತಮ್ಮ ಹೊಸ ಏಪ್ ಸಿಟಿ ಪ್ಲಸ್ ಆಟೋ ರಿಕ್ಷಾವನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಅಧಿಕೃತವಾಗಿ ಇದೇ ತಿಂಗಳ (ಜೂನ್) 14 ರಂದು ಬಿಡುಗಡೆಗೊಳ್ಳಲಿದೆ. ಸಣ್ಣ ಗಾತ್ರದ ಆಟೋ ರಿಕ್ಷಾ ಆದ ಈ ಪಿಯಾಜಿಯೊ ಏಪ್ ಸಿಟಿ+ಯನ್ನು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲದೆಯೆ ಗ್ರಾಮೀಣ ಪ್ರದೇಶಗಳಲ್ಲಿ ಸಹ ಸುಲಭವಾಗಿ ಚಾಲನೆ ಮಾಡಬಹುದಾಗಿ ಹೇಳಿಕೊಂಡಿದೆ.

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಪ್ರಸ್ತುತ ಪಿಯಾಜಿಯೊ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಏಪ್ ಸಿಟಿ, ಏಪ್ ಆಟೋ+ ಮತ್ತು ಏಪ್ ಸಿಟಿ ಹೆಚ್‍ಟಿ ಎಂಬ ಮೂರು ಆಟೋ ರಿಕ್ಷಾಗಳನ್ನು ಮಾರಾಟ ಮಾಡುತ್ತಿದ್ದು, ಸಧ್ಯ ಇರುವ ಏಪ್ ಸಿಟಿ ಆಟೋ ರಿಕ್ಷಾಗಳು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದ್ದು, ಇನ್ನು ಮಾಜಿ ವಾಹನಗಳು ಪೆಟ್ರೋಲ್, ಸಿಎನ್‍ಜಿ ಮತ್ತು ಎಲ್‍ಪಿಜಿ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಪೆಟ್ರೋಲ್ ಮಾದರಿಯ ಈ ಆಟೋ ರಿಕ್ಷಾಗಳು 197 ಸಿಸಿ ಎಂಜಿನ್ ಸಹಾಯದಿಂಡ 10 ಬಿಹೆಚ್‍ಪಿ ಮತ್ತು 17.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್ ಪೆಟ್ರೋಲ್‍ಗೆ ಸುಮಾರು 29.43 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು. ಹೊಸ ವಾಹನದ ಬೆಲೆಯ ಕುರಿತಾಗಿ ಇನ್ನು ಯಾವುದೇ ಮಾಹಿತಿಯನ್ನು ಸಂಸ್ಥೆಯು ಹೊರಹಾಕಿಲ್ಲ.

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಡೀಸೆಲ್ ಆಧಾರಿತ ಈ ಆಟೋ ರಿಕ್ಷಾಗಳು 435ಸಿಸಿ ಆಯಿಲ್ ಕೂಲ್ಡ್ ಬರ್ನರ್ ಎಂಜಿನ್ ಸಹಾಯದಿಂದ 8 ಬಿಹೆಚ್‍ಪಿ ಮತ್ತು 21 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಈ ಆಟೋ ರಿಕ್ಷಾಗಳು ಒಂದು ಲೀಟರ್ ಡೀಸೆಲ್‍ಗೆ ಸುಮಾರು 32.32 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು.

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಇನ್ನು ಸಿಎನ್‍ಜಿ ಆಧಾರಿತ ಈ ಆಟೋ ರಿಕ್ಷಾಗಳು 197 ಸಿಸಿ 9.6 ಬಿಹೆಚ್‍ಪಿ ಹಾಗು 15.3 ಎನ್ಎಂ ಟಾರ್ಕ್ ಅನು ಉತ್ಪಾದಿಸಲಿದ್ದು, ಇನ್ನು ಇದು ಕೂಡಾ 27.36 ಕಿಲೋಮೀಟರ್ ಮೈಲೇಜ್ ನೀಡಬಲ್ಲದು. ಹಾಗೆಯೆ ಎಲ್‍ಪಿಜಿ ಆಧಾರಿತ ಆಟೋ ರಿಕ್ಷಾಗಳು 10.46 ಬಿಹೆಚ್‍ಪಿ ಮತ್ತು 16.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 22.7 ಕಿಲೋಮೀಟರ್‍‍‍ನ ಮೈಲೇಜ್ ನೀಡಬಲ್ಲದು.

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ವಾಹನ ಚಾಲನೆ ವೇಳೆ ಮಾಡುವ ಸಣ್ಣಪುಟ್ಟ ಚಾಲನಾ ದೋಷಗಳೇ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿವೆ.

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

2017ರಲ್ಲಿ ಸುಮಾರು 1.50 ಲಕ್ಷ ಭೀಕರ ರಸ್ತೆ ಅಪಘತಾತಗಳು ಸಂಭವಿಸಿದ್ದು, ಅವುಗಳಲ್ಲಿ 29,351 ಆಟೋ ರಿಕ್ಷಾಗಳು ಅಪಘಾತಾಕ್ಕೆ ಈಡಾಗಿದೆ. ನಡೆದ ಅಷ್ಟು ಅಪಘಾತಗಳ ಪೈಕಿ ಸುಮಾರು 6,762 ಮಂದಿ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಇಲಾಖೆಯು ಶೀಘ್ರದಲ್ಲೆ ದೇಶದಲ್ಲಿನ ಆಟೋ ಚಾಲಕರಿಗೆ ಶಾಕಿಂಗ್ ವಿಚಾರವನ್ನು ನೀಡಿದೆ.

MOST READ: ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಹೌದು, 2019ರ ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದೇಶದಲ್ಲಿರುವ ಎಲ್ಲಾ ಆಟೋ ರಿಕ್ಷಾಗಳು ಕೆಲವು ಕಡ್ಡಾಯ ಸುರಕ್ಷಾ ಸಾಧನಗಳನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಆಟೋ ರಿಕ್ಷಾ ತಯಾರಕ ಸಂಸ್ಥಗಳು ತಾವು ಉತ್ಪಾದಿಸುವ ಆಟೋ ರಿಕ್ಷಾಗಳಲ್ಲಿ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಉಪಕರಣಗಳನ್ನು ಅಳವಡಿಸಬೇಕಾಗಿದೆ.

MOST READ: ಮಾರುಕಟ್ಟೆಯಿಂದ ಹೊರ ಬಂದರೂ ಸೇನೆಯಿಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ರಸ್ತೆ ಸಾರಿಗೆ ಇಲಾಖೆಯ ಪ್ರಕಾರ 2019ರ ಅಕ್ಟೊಬರ್ ತಿಂಗಳಿನಿಂದ ರಸ್ತೆಯಲ್ಲಿ ಸಂಚರಿಸುವ ಪ್ರತಿ ಆಟೋ ಮಾದರಿಗಳು ಬಾಗಿಲುಗಳು ಅಥವಾ ಪ್ರಯಾಣಿಕರು ನಿಯಂತ್ರಣ ತಪ್ಪಿ ಕೆಳಗೆ ಬೀಳದಿರುವ ಹಾಗೆ ಸಲಕರಣೆಗಳನ್ನು ಪಡೆದುಕೊಂಡಿರಬೇಕಿದ್ದು, ಅಟೋ ರಿಕ್ಷಾ ಚಾಲಕರು ಸೀಟ್‍ಬೆಲ್ಟ್ ಅನ್ನು ಸಹ ಧರಿಸಬೇಕಾಗಿರುತ್ತದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಸೀಟ್ ಬೆಲ್ಡ್ ಕಡ್ದಾಯವಲ್ಲದೇ ಡ್ರೈವರ್ ಸೀಟ್ ಮತ್ತು ಪ್ರಯಾಣಿಕರ ಸೀಟ್ ಉದ್ದಳತೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕೆ ಕಾರಣ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಟ್ಯಾಕ್ಸಿಗಳು ಬಂದರೂ ಬಹುತೇಕರು ಆಟೋ ರಿಕ್ಷಾಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಆಟೋ ಚಾಲಕರಿಗೆ ಸಿಹಿ ಸುದ್ದಿ - ಶೀಘ್ರವೇ ಬಿಡುಗಡೆಯಾಗಲಿದೆ ಪಿಯಾಜಿಯೊ ಏಪ್ ಸಿಟಿ+ ಆಟೋ ರಿಕ್ಷಾ

ಹೊಸ ಆಟೋ ರಿಕ್ಷಾಗಳು ಚಾಲಕ ಮತ್ತು ಪ್ರಯಾಣಿಕರು ಕೂರವ ಜಾಗದಲ್ಲಿ ವಿಶಾಲವಾದ ಲೆಗ್‍ರೂಂ'ಗೆ ಸರಿಹೊಂದುವ ಜಾಗವನ್ನು ನೀಡಬೇಕಾಗಿದೆ. ಇದರ ಜೊತೆಗೆ ವಿಶೇಷವಾದ ಹೆಡ್‍ಲ್ಯಾಂಪ್‍ಗಳನ್ನು ಸಹ ನೀಡಬೇಕಿದ್ದು, ಪ್ರಸ್ತುತ ಸಿಂಗಲ್ ಯೂನಿಟ್ ಅನ್ನು ಬಳಸುತ್ತಿರುವ ಜಾಗದಲ್ಲಿ ಎರಡು ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಬೇಕಿದೆ.

Source: Auto NDTV

Most Read Articles

Kannada
English summary
Piaggio Reveled Launch Date Of Their Ape City Plus Auto Rikshaw. Read In Kannada
Story first published: Thursday, June 6, 2019, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X