ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಧಿಪತ್ಯ ಸಾಧಿಸಿರುವ ಮಹೀಂದ್ರಾ ಇದೀಗ ಇತರೆ ವಾಹನ ಉತ್ಪಾದನಾ ಸಂಸ್ಥೆಗಳಿಂತಲೂ ಒಂದು ಹೆಜ್ಜೆ ಮುಂದಿದೆ ಎಂದ್ರೆ ತಪ್ಪಾಗುವುದಿಲ್ಲ. ಸದ್ಯ ಕೊರಿಯಾ ಮೂಲದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ಕಾರುಗಳನ್ನು ನಿರ್ಮಾಣ ಮಾಡುತ್ತಿರುವ ಮಹೀಂದ್ರಾ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ವಿಶ್ವ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಹೌದು, ಮಹೀಂದ್ರಾ ಸಂಸ್ಥೆಯು ಸ್ಯಾಂಗ್‌ಯ್ಯಾಂಗ್ ಜೊತೆ ಅಷ್ಟೇ ಅಲ್ಲದೇ ಇಟಲಿ ಮೂಲದ ಪಿನಿನ್ ಫರಿನಾ ಸಂಸ್ಥೆಯೊಂದಿಗೂ ಹೊಸ ಮಾದರಿಯ ಸೂಪರ್ ಮತ್ತು ಹೈಪರ್ ಕಾರುಗಳ ನಿರ್ಮಾಣಕ್ಕಾಗಿ ಕೈಜೋಡಿಸಿದ್ದು, ಇಂದಿನಿಂದ ಆರಂಭವಾಗಿರುವ 2019ರ ಜೀನೆವಾ ಆಟೋ ಮೇಳದಲ್ಲಿ ವಿಶ್ವದ ಬಲಿಷ್ಠ ಎಲೆಕ್ಟ್ರಿಕ್ ಹೈಪರ್ ಕಾರು ಮಾದರಿಯೊಂದನ್ನು ಅನಾವರಣಗೊಳಿಸಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

1930ರಿಂದಲೇ ವಿಶ್ವ ಆಟೋ ಉದ್ಯಮದಲ್ಲಿ ಕಾರ್ಯನಿರ್ವಹಣೆಯಲ್ಲಿರುವ ಪಿನಿನ್ ಫರಿನಾ ಸಂಸ್ಥೆಯು ಕಾರು ಉತ್ಪಾದನಾ ಸಂಸ್ಥೆಗಳಿಗೆ ಡಿಸೈನ್ ಒದಗಿಸುವಲ್ಲಿ ಜನಪ್ರಿಯವಾಗಿದ್ದು, ಇದೀಗ ಇದೇ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಕೂಡಾ ಗರಿಷ್ಠ ಮಟ್ಟದ ಪಾಲುದಾರಿಕೆಯನ್ನು ಪಡೆದುಕೊಂಡಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಹೀಗಾಗಿ ಮಹೀಂದ್ರಾ ಮಾರ್ಗದರ್ಶನದಲ್ಲೇ ಪಿನಿನ್ ಫರಿನಾ ಸಂಸ್ಥೆಯು ಕಾರ್ಯನಿರ್ವಹಣೆ ಮಾಡುತ್ತಿರುವುದಲ್ಲೇ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕಾರ್ ಡಿಸೈನ್ ಸೇವೆಗಳನ್ನು ಒದಗಿಸುತ್ತಿದ್ದು, ಇದೀಗ ಅನಾವರಣ ಮಾಡಲಾಗಿರುವ ಬಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿರುವ ರೂ.40 ಕೋಟಿ ಮೌಲ್ಯದ ಬುಗಾಟಿ ಶಿರೊನ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ಬಿಎಚ್‌ಪಿ ಉತ್ಪಾದನಾ ಶಕ್ತಿ ಪಡೆದಿದ್ದು, ಕೇವಲ 2 ಸೆಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗದಲ್ಲಿ ಚಲಿಸುವ ಗುಣವೈಶಿಷ್ಟ್ಯತೆ ಹೊಂದಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಮತ್ತೊಂದು ವಿಶೇಷ ಅಂದ್ರೆ ಎಲೆಕ್ಟ್ರಿಕ್ ಕಾರುಗಳಲ್ಲೇ ಇದು ಅತಿ ವೇಗ ಪಡೆದುಕೊಳ್ಳಬಹುದಾದ ಹೈಪರ್ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಕಾರಿನ ವೇಗಕ್ಕೆ ಸರಿಸಮನಾದ ಶಕ್ತಿ ಒದಗಿಸಲು ನಾಲ್ಕು ಚಕ್ರಗಳಿಗೂ ಪ್ರತ್ಯೇಕವಾದ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಜೋಡಿಸಲಾಗಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಈ ಮೂಲಕ 1,873-ಬಿಎಚ್‌ಪಿ ಮತ್ತು 2,300-ಎನ್ಎಂ ಟಾರ್ಕ್ ಉತ್ಪಾದಿಸುವ ಪಿನಿನ್ ಫರಿನಾ ಬಟಿಸ್ಟಾ ಹೈಪರ್ ಕಾರುಗಳು ಪ್ರತಿಗಂಟೆಗೆ 350 ಕಿ.ಮಿ ಟಾಪ್ ಸ್ಪೀಡ್ ಪಡೆದಿದ್ದು, ಪ್ರತಿ ಚಾರ್ಜ್‌ಗೆ 450ಕಿ.ಮಿ ಮೈಲೇಜ್ ನೀಡಬಲ್ಲ 120kWh ಬ್ಯಾಟರಿ ಪ್ಯಾಕ್ ಗಿಟ್ಟಿಸಿಕೊಂಡಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಜೊತೆಗೆ ಹೊಸ ಕಾರಿನಲ್ಲಿ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿರುವ ಪಿನಿನ್ ಫರಿನಾ ಸಂಸ್ಥೆಯು 120kWh ಬ್ಯಾಟರಿ ಪ್ಯಾಕ್ ಅನ್ನು ಕೇವಲ 30 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾದ ಸೌಲಭ್ಯ ನೀಡಿದ್ದು, ಕಾರಿನ ಬಾಡಿ ಗುಣಮಟ್ಟ ಕಾಯ್ದುಕೊಳ್ಳಲು ಕಾರ್ಬನ್ ಫೈಬರ್ ಮೊನೊಕೊರ್ಕ್ಯೂ ಚಾರ್ಸಿ ಮತ್ತು ಕಾರಿನ ಎರಡು ಬದಿಯಲ್ಲಿ ಅಲ್ಯುಮಿನಿಯಂ ಕ್ರ್ಯಾಶ್ ಗಾರ್ಡ್ ಸೌಲಭ್ಯ ನೀಡಿದೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಕಾರಿನ ಪರ್ಫಾಮೆನ್ಸ್‌ಗೆ ಅನುಗುಣವಾಗಿ ಕಾರಿನ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರತಿ ಚಕ್ರದಲ್ಲೂ 390-ಎಂಎಂ ಕಾರ್ಬನ್ ಸೆರಾಮಿಕ್ ಡಿಸ್ಕ್ ಬ್ರೇಕ್, ಸಿಕ್ಸ್ ಪಿಸ್ಟನ್ ಕ್ಯಾಲಿಪರ್ಸ್, 21-ಇಂಚಿನ ಸ್ಪೋರ್ಟಿ ಪಿರೆಲಿ ಜಿರೋ ಟೈರ್ ಜೋಡಣೆ ಹೊಂದಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಹಾಗೆಯೇ ಕಾರಿನ ಒಳಭಾಗದಲ್ಲೂ ವಿಶ್ವದರ್ಜೆಯ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಸೇರಿಸಲಾಗಿದ್ದು, ಡ್ಯುಯಲ್ ಡಿಸ್‌ಪ್ಲೈ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10 ಏರ್‌ಬ್ಯಾಗ್‌ಗಳು, ಕಾರ್ಬನ್ ಫೈಬರ್ ಬಾಡಿ ಪ್ಯಾನೆಲ್ ಮತ್ತು ಹೈ ಪವರ್ ಎಲ್‌ಇಡಿ ಹೆಡ್‌ಲ್ಯಾಂಪ್ ಇದರಲ್ಲಿವೆ.

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಇದರ ಹೊರತಾಗಿ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಪಿನಿನ್ ಫರಿನಾ ಸಂಸ್ಥೆಯು ಬಹುದಿನಗಳ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿರುವ ಬಗ್ಗೆ ಜೀನೆವಾ ಆಟೋ ಮೇಳದಲ್ಲಿ ಹರ್ಷ ವ್ಯಕ್ತಪಡಿಸಿದ್ದು, ಹೈಪರ್ ಕಾರುಗಳ ಮಾರಾಟದಲ್ಲಿ ಬಹುದೊಡ್ಡ ಬದಲಾವಣೆಗೆ ಬಟಿಸ್ಟಾ ಕಾರು ಮುನ್ನುಡಿಯಾಗಲಿದೆ ಎಂದಿದ್ದಾರೆ.

MOST READ: 15 ಸಾವಿರ ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ರಸ್ತೆಗಿಳಿದ ವಿಶ್ವದ ಅತಿದೊಡ್ಡ ಮಾಡಿಫೈ ಎಸ್‌ಯುವಿ ಕಾರು

ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಉತ್ಪಾದನೆಯಾಗುವುದು ಕೇವಲ 150 ಕಾರು..!

ಜೀನೆವಾ ಆಟೋ ಮೇಳದಲ್ಲಿ ಬಟಿಸ್ಟಾ ಎಲೆಕ್ಟ್ರಿಕ್ ಹೈಪರ್ ಕಾರು ಪ್ರದರ್ಶನದ ನಂತರ ಕಾರು ಬಿಡುಗಡೆಯ ಬಗ್ಗೆ ಮಾತನಾಡಿದ ಪಿನಿನ್ ಫರಿನಾ ಸಂಸ್ಥೆಯು ಕೇವಲ 150 ಕಾರುಗಳನ್ನು ಮಾತ್ರ ನಿರ್ಮಾಣ ಮಾಡುತ್ತಿರುವುದಾಗಿ ಸುಳಿವು ನೀಡಿದೆ. ಇದರಲ್ಲಿ ಯುರೋಪ್ ಮಾರುಕಟ್ಟೆಗಾಗಿ 50 ಕಾರುಗಳು, ಉತ್ತರ ಅಮೆರಿಕಕ್ಕೆ 50 ಕಾರುಗಳು ಮತ್ತು ಇನ್ನುಳಿದ 50 ಕಾರುಗಳು ಮಧ್ಯ ಪ್ರಾಚ್ಯ ಹಾಗೂ ಏಷಿಯಾ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿವೆ. ಆದ್ರೆ ಕಾರಿನ ಬೆಲೆ, ಬಿಡುಗಡೆ ದಿನದ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

Most Read Articles

Kannada
English summary
2019 Geneva Motor Show: 1873bhp Pininfarina Battista Electric Hypercar Revealed. Read in Kannada.
Story first published: Tuesday, March 5, 2019, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X