ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಹಲವಾರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆ ಜಾರಿಯಾದ ನಂತರ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿದ್ದಾರೆ.

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಕೆಲವು ಸಂದರ್ಭಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಹಿರಿಯ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಅಷ್ಟೇ ಅಲ್ಲದೇ ಪೊಲೀಸರಿಗೂ ಸಹ ದಂಡ ವಿಧಿಸಲಾಗಿದೆ. ಬಿಹಾರದಲ್ಲಿ ನಡೆದಿರುವ ಘಟನೆಯಲ್ಲಿ ಪಾಟ್ನಾ ಪೊಲೀಸರು ಶಾಸಕರೊಬ್ಬರಿಗೆ ದಂಡ ವಿಧಿಸಿದ್ದಾರೆ. ಈ ಘಟನೆಯನ್ನು ರೆಕಾರ್ಡ್ ಮಾಡಿ ವೀಡಿಯೊವನ್ನು ಅಪ್‍‍ಲೋಡ್ ಮಾಡಲಾಗಿದೆ.

ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುವ ವೇಳೆಯಲ್ಲಿ ಕಪ್ಪು ಬಣ್ಣದ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯನ್ನು ತಡೆದು ನಿಲ್ಲಿಸಿದ್ದಾರೆ. ಈ ಫಾರ್ಚೂನರ್ ಎಸ್‍‍ಯುವಿಯಲ್ಲಿ ಕಪ್ಪು ಬಣ್ಣದ ಟಿಂಟೆಡ್ ಗ್ಲಾಸ್ ಅಳವಡಿಸಿರುವುದು ಕಂಡು ಬಂದಿದೆ.

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಯಾವುದೇ ನಾಲ್ಕು ಚಕ್ರದ ವಾಹನಗಳಲ್ಲಿ ಈ ರೀತಿಯಾಗಿ ಟಿಂಟೆಡ್ ಗ್ಲಾಸ್ ಅಳವಡಿಸುವುದು ಕಾನೂನುಬಾಹಿರ. ಈ ಎಸ್‍‍‍ಯುವಿಯಲ್ಲಿರುವ ಶಾಸಕರಾದ ಪ್ರದೀಪ್ ಸಿಂಗ್‍‍ರವರು ತನಗೆ ಏಕೆ ದಂಡ ವಿಧಿಸುತ್ತಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು.

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಈ ವೀಡಿಯೊದಲ್ಲಿ ಕಾಣುವ ಎಸ್‍‍ಯುವಿ ಶಾಸಕರ ಅಧಿಕೃತ ವಾಹನವಾಗಿದ್ದು, ಪೂರ್ತಿಯಾಗಿ ಟಿಂಟೆಡ್ ಗ್ಲಾಸುಗಳನ್ನು ಹೊಂದಿರುವುದನ್ನು ಕಾಣಬಹುದು. ಎಸ್‍‍ಯುವಿಯ ಹಿಂಬದಿಯಲ್ಲಿ ಶಾಸಕರ ರಕ್ಷಣೆಗೆ ನೇಮಿಸಲಾಗಿರುವ ಪೊಲೀಸರನ್ನೂ ಸಹ ಕಾಣಬಹುದು.

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಶಾಸಕರಿಗೆ ದಂಡ ವಿಧಿಸಿದ ಪೊಲೀಸ್, ಶಾಸಕರ ಎಸ್‍‍‍ಯುವಿ ಕಪ್ಪು ಬಣ್ಣದ ಗ್ಲಾಸುಗಳನ್ನು ಹೊಂದಿರುವ ಕಾರಣಕ್ಕೆ ರೂ.500 ದಂಡ ವಿಧಿಸಲಾಗಿದೆ ಎಂದು ಹೇಳುತ್ತಾರೆ. ಶಾಸಕರು ಚಾಲಕನ ಪಕ್ಕದ ಸೀಟಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಂಡು ಕುಳಿತಿರುವುದನ್ನು ಕಾಣಬಹುದು.

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಈ ಎ‍ಸ್‍‍‍ಯುವಿಯ ಟಾಪ್ ಮೇಲೆ ಹಲವು ಸೈರೆನ್ ಹಾಗೂ ಫ್ಲಾಶರ್‍‍ಗಳನ್ನೂ ಸಹ ಅಳವಡಿಸಲಾಗಿದೆ. ಇದೂ ಸಹ ಕಾನೂನು ಬಾಹಿರವಾಗಿದೆ. ಭಾರತದಲ್ಲಿ ಪ್ರಧಾನ ಮಂತ್ರಿಯವರನ್ನೂ ಸೇರಿದಂತೆ ಯಾವುದೇ ರಾಜಕಾರಣಿ ತನ್ನ ವಾಹನದ ಮೇಲೆ ಸೈರನ್‍ಗಳನ್ನೇ ಆಗಲಿ ಅಥವಾ ಫ್ಲಾಶರ್‍‍ಗಳನ್ನೇ ಆಗಲಿ ಹೊಂದುವಂತಿಲ್ಲ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಈ ಹಿಂದೆ ಈ ನಿಯಮವನ್ನು ಉಲ್ಲಂಘಿಸಿದ್ದ ಹಲವು ರಾಜಕಾರಣಿಗಳಿಗೆ ದಂಡ ವಿಧಿಸಲಾಗಿದೆ. ಆದರೆ ಈ ಘಟನೆಯಲ್ಲಿ ಟಿಂಟೆಡ್ ಗ್ಲಾಸುಗಳನ್ನು ಹೊಂದಿದ್ದ ಕಾರಣಕ್ಕೆ ದಂಡ ವಿಧಿಸಲಾಗಿದೆ. ಸೈರನ್‍ ಹಾಗೂ ಫ್ಲಾಶರ್‍‍ಗಳಿಗೆ ಯಾವುದೇ ರೀತಿಯ ದಂಡವನ್ನು ವಿಧಿಸಲಾಗಿಲ್ಲ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ನಮ್ಮ ದೇಶದಲ್ಲಿ ಆಂಬ್ಯುಲೆನ್ಸ್ ಹಾಗೂ ಅಧಿಕೃತ ಪೊಲೀಸ್ ವಾಹನಗಳು ಮಾತ್ರ ಸೈರನ್ ಹಾಗೂ ಫ್ಲಾಶರ್‍‍ಗಳನ್ನು ಹೊಂದಬೇಕೆಂಬ ನಿಯಮವಿದೆ. ಟಿಂಟೆಡ್ ಗ್ಲಾಸುಗಳ ನಿಯಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಲ್ಲಂಘಿಸಲಾಗುತ್ತಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಬೆಂಗಳೂರು, ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿ ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವುದು ಸವಾಲಿನ ಕೆಲಸ. ಉಳಿದ ನಗರಗಳಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯುವ ಸಲುವಾಗಿ ಈ ಗ್ಲಾಸುಗಳನ್ನು ಬಳಸುತ್ತಿರುವುದಾಗಿ ಹೇಳಿ ಈ ಗ್ಲಾಸುಗಳನ್ನು ಅಳವಡಿಸಿಕೊಂಡಿದ್ದಾರೆ.

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಭಾರತದಲ್ಲಿ ಯಾವುದೇ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿದ ನಂತರ ಅವುಗಳಲ್ಲಿ ಟಿಂಟೆಡ್ ಗ್ಲಾಸುಗಳನ್ನು ಅಳವಡಿಸಿಕೊಳ್ಳುವಂತಿಲ್ಲ. ಕಾರುಗಳ ಒಳಗೆ ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯಗಳನ್ನು ನಡೆಯದಂತೆ ತಡೆಯುವುದು ಈ ನಿಯಮದ ಹಿಂದಿರುವ ಉದ್ದೇಶವಾಗಿದೆ.

ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ವಿಧಿಸುವುದಕ್ಕಿಂತ ಎರಡರಷ್ಟು ಹೆಚ್ಚು ದಂಡ ವಿಧಿಸಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ಜವಾಬ್ದಾರಿ ಹುದ್ದೆಯಲ್ಲಿರುವುದರಿಂದ ನಿಯಮಗಳನ್ನು ಪಾಲಿಸಿ ಸಾರ್ವಜನಿಕರಿಗೆ ಮಾದರಿಯಾಗಲಿ ಎನ್ನುವ ಕಾರಣಕ್ಕೆ ಈ ನಿಯಮವನ್ನು ಜಾರಿಗೊಳಿಸಲಾಗಿದೆ.

Most Read Articles

Kannada
English summary
MLA in a Toyota Fortuner FINED for running sun film on SUV - Read in Kannada
Story first published: Tuesday, October 1, 2019, 14:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X