ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಪೋರ್ಷೆ ಹಾಗೂ ಬೋಯಿಂಗ್ ಕಂಪನಿಗಳು ಫ್ಲೈಯಿಂಗ್ ಕಾರ್ ಅನ್ನು ಅಭಿವೃದ್ಧಿಪಡಿಸಲು ಕೈಜೋಡಿಸಿವೆ. ಶ್ರೀಮಂತ ಐಷಾರಾಮಿ ಕಾರು ಖರೀದಿದಾರರನ್ನು ಗುರಿಯಾಗಿರಿಸಿಕೊಂಡು ಪ್ರೀಮಿಯಂ ಫ್ಲೈಯಿಂಗ್ ಕಾರಿನ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪೋರ್ಷೆ-ಬೋಯಿಂಗ್ ಸಹಭಾಗಿತ್ವವನ್ನು ಮಾಡಿಕೊಂಡಿವೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಈ ಫ್ಲೈಯಿಂಗ್ ಕಾರ್ ವಿದ್ಯುತ್‍‍ನಿಂದ ನಿಯಂತ್ರಿಸಲ್ಪಡುತ್ತದೆ. ಟೇಕ್-ಆಫ್ ಮಾಡುವಾಗ ಹಾಗೂ ಇಳಿಯುವಾಗ ನೇರವಾಗಿರಲಿದೆ. ಪೋರ್ಷೆ ಹಾಗೂ ಬೋಯಿಂಗ್ ಕಂಪನಿಗಳು ತಮ್ಮ ಕ್ಷೇತ್ರಗಳಲ್ಲಿರುವ ಎರಡು ದೊಡ್ಡ ಕಂಪನಿಗಳಾಗಿವೆ. ಬೋಯಿಂಗ್ ಕಂಪನಿಯು ಪ್ರಪಂಚದಲ್ಲಿಯೇ ಅತಿ ದೊಡ್ಡ ಏರ್‍‍ಕ್ರಾಫ್ಟ್ ಕಂಪನಿಯಾಗಿದೆ. ಈ ಕಂಪನಿಯು ನಾಗರಿಕರ ಓಡಾಟಕ್ಕಾಗಿ, ರಕ್ಶಣಾ ಪಡೆಗಳಿಗಾಗಿ ವಿಮಾನಗಳನ್ನು ತಯಾರಿಸುತ್ತದೆ. ಮತ್ತೊಂದೆಡೆ ಪೋರ್ಷೆ ಕಂಪನಿಯು ಸ್ಫೋರ್ಟ್ಸ್ ಕಾರುಗಳ ತಯಾರಿಕಾ ಕಂಪನಿಯೆಂಬ ಹೆಸರನ್ನು ಪಡೆದಿದೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಪೋರ್ಷೆ ಕಾರುಗಳು ಪ್ರಪಂಚದಲ್ಲಿರುವ ಅತ್ಯುತ್ತಮ ಸ್ಪೋರ್ಟ್ಸ್ ಕಾರುಗಳೆಂಬ ಹೆಗ್ಗಳಿಕೆಯನ್ನು ಹೊಂದಿವೆ. ಬೋಯಿಂಗ್ ಕಂಪನಿಯು ಭವಿಷ್ಯಕ್ಕಾಗಿ ವಿಮಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಬೋಯಿಂಗ್‍‍ನ ಅಂಗಸಂಸ್ಥೆಯಾದ ಅರೋರಾ ಫ್ಲೈಟ್ ಸೈನ್ಸಸ್ ವಾಯುಯಾನದ ಭವಿಷ್ಯ ಹಾಗೂ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳ ಅಭಿವೃದ್ಧಿಯನ್ನು ಪರಿಶೀಲಿಸುತ್ತಿದೆ. ಪೋರ್ಷೆ ಕಂಪನಿಯು ಕೂಡ ಪೋರ್ಷೆ ಟೇಕಾನ್‌ನಂತಹ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಪರಿಸರ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಈಗ, ಪೋರ್ಷೆ ಹಾಗೂ ಬೋಯಿಂಗ್ ಎರಡೂ ಕಂಪನಿಗಳು ಪ್ರೀಮಿಯಂ ಅರ್ಬನ್ ಏರ್ ಮೊಬಿಲಿಟಿ ಮಾರುಕಟ್ಟೆಯನ್ನು ವಿಸ್ತರಿಸಲು ಬಯಸಿವೆ. ಎರಡೂ ಕಂಪನಿಗಳು ಏರ್ ಮೊಬಿಲಿಟಿಯನ್ನು ಬೇರೊಂದು ಹಂತಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿವೆ. ಪೋರ್ಷೆ ಎ‍‍‍ಜಿಯ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೋರ್ಡ್‍‍‍ನ ಸದಸ್ಯರಾದ ಡೆಟ್ಲೆವ್ ವೊನ್ ಪ್ಲಾಟೆನ್‍‍ರವರು ಮಾತನಾಡಿ, ಪೋರ್ಷೆ ಕಂಪನಿಯು ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯೆಂಬ ಹಣೆಪಟ್ಟಿಯಿಂದ ಹೊರಬಂದು ಪ್ರೀಮಿಯಂ ಮೊಬಿಲಿಟಿಯಲ್ಲಿನ ವಾಹನಗಳನ್ನು ಹೆಚ್ಚಿಸಲು ಬಯಸಿದೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ದೀರ್ಘಾವಧಿಯಲ್ಲಿ ಬೇರೆ ರೀತಿಯ ಆಯಾಮಕ್ಕೆ ಬದಲಾಗಲು ಬಯಸಿದೆ. ಪ್ರಪಂಚದಲ್ಲಿರುವ ಎರಡು ದೊಡ್ಡ ಕಂಪನಿಗಳ ತಮ್ಮ ಸಾಮರ್ಥ್ಯವನ್ನು ಒಂದೆಡೆ ಸೇರಿಸಿ ಏರ್ ಮೊಬಿಲಿಟಿಯಲ್ಲಿ ಹೊಸ ಬದಲಾವಣೆಯನ್ನು ತರಲಿವೆ ಎಂದು ಹೇಳಿದರು. ಬೋಯಿಂಗ್ ಫ್ಲೈಯಿಂಗ್ ಕ್ರಾಫ್ಟ್ ಅನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಪೋರ್ಷೆ ಮಾರುಕಟ್ಟೆಯ ಪ್ರೀಮಿಯಂ ತುದಿಯಲ್ಲಿ ಉತ್ಪನ್ನಗಳನ್ನು ಇರಿಸುವ ಅನುಭವವನ್ನು ಹೊಂದಿದೆ. ಪೋರ್ಷೆ-ಬೋಯಿಂಗ್ ಸಹಭಾಗಿತ್ವದಲ್ಲಿ ಹೊರಬರುವ ಫ್ಲೈಯಿಂಗ್ ಕಾರು ಉತ್ತಮವಾದ ಪರ್ಫಾಮೆನ್ಸ್ ನೀಡಲಿದೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಬೋಯಿಂಗ್‌ನ ಅಂಗಸಂಸ್ಥೆಯಾದ ಅರೋರಾ ಫ್ಲೈಯಿಂಗ್ ಸೈನ್ಸಸ್ ಈ ಯೋಜನೆಯಲ್ಲಿ ನಿಕಟವಾಗಿ ತೊಡಗಿಸಿಕೊಳ್ಳಲಿದೆ. ಅರೋರಾ ಫ್ಲೈಯಿಂಗ್ ಸೈನ್ಸಸ್ ಈಗ ಹಲವಾರು ವರ್ಷಗಳಿಂದ ವೈಯಕ್ತಿಕ ವಾಯುಯಾನ ಕ್ಷೇತ್ರದ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈಗ, ಕಂಪನಿಯು ಹಿಂದೆಂದಿಗಿಂತಲೂ ತನ್ನ ಯೋಜನೆಗೆ ಹತ್ತಿರವಾಗಿದೆ. ಈ ವರ್ಷದ ಆರಂಭದಲ್ಲಿ, ಅರೋರಾ ತನ್ನ ಮೂಲಮಾದರಿಯ ಫ್ಲೈಯಿಂಗ್ ಕಾರ್ ಅನ್ನು ಪರೀಕ್ಷಿಸಿತ್ತು.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಈ ಅರೋರಾ ಪ್ಯಾಸೆಂಜರ್ ಏರ್ ವೆಹಿಕಲ್ (ಪಿಎವಿ) ನೇರವಾಗಿ ಮೇಲೆರಿ, ಸ್ವಲ್ಪ ಸಮಯದವರೆಗೆ ಗಾಳಿಯಲ್ಲಿ ಸುಳಿದು, ಮತ್ತೆ ಅದೇ ಸ್ಥಳಕ್ಕೆ ವಾಪಸಾಗಿದೆ. ಪೋರ್ಷೆ-ಬೋಯಿಂಗ್ ಸಹಭಾಗಿತ್ವವು ಪಿಎವಿ ಹಾರಾಟದಿಂದ ಕೆಲವನ್ನು ಪಡೆಯಲಿವೆ. ಪಿಎವಿಯು ಸರಳವಾದ ನಿರ್ಮಾಣ ಹಾಗೂ ವಿನ್ಯಾಸವನ್ನು ಬಳಸಿಕೊಂಡು ತಯಾರಾಗಿದೆ. ಯಾವುದೇ ವ್ಹೀಲ್‍‍ಗಳನ್ನು ಬಳಸಲಾಗಿರಲಿಲ್ಲ. ಇದು ನಾಲ್ಕು ಲ್ಯಾಂಡಿಂಗ್ ಪಾಡ್‌ಗಳನ್ನು ಒಂದು ಫ್ರೇಂ ಮೇಲೆ ಜೋಡಿಸಲಾಗಿತ್ತು. ಆ ಫ್ರೇಂ ಮೇಲೆ ಏರ್ ಫ್ರೇಂ ಹಿಡಲಾಗಿತ್ತು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಪ್ರತಿ ಮೂಲೆಗೆ ಒಂದರಂತೆ ನಾಲ್ಕು ಫ್ಯಾನ್‍‍ಗಳನ್ನು ನೇರವಾಗಿ ಚಲಿಸುವಂತೆ ಮಾಡಿದರೆ, ಹಿಂಭಾಗದಲ್ಲಿದ್ದ ದೊಡ್ಡ ಫ್ಯಾನ್ ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸುವಂತೆ ಮಾಡುತ್ತದೆ. ಪೋರ್ಷೆ-ಬೋಯಿಂಗ್ ಫ್ಲೈಯಿಂಗ್ ಕಾರಿನ ನಿರೂಪಣೆಗಳು ಸಂಪೂರ್ಣವಾಗಿ ವಿಭಿನ್ನವಾದ ಕಥೆಯನ್ನು ಹೇಳುತ್ತವೆ. ಇದನ್ನು ಅಭಿವೃದ್ಧಿಪಡಿಸಲು ಕಂಪನಿಗಳು ಸ್ಪೋರ್ಟ್‌ಕಾರ್ ವಿಧಾನವನ್ನು ತೆಗೆದುಕೊಳ್ಳುತ್ತಿದ್ದು, ಇವುಗಳು ಸಾಮೂಹಿಕ ಮಾರುಕಟ್ಟೆಯ ಫ್ಲೈಯಿಂಗ್ ಕಾರುಗಳಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಈ ಫ್ಲೈಯಿಂಗ್ ಕಾರ್ ಏರ್ ಮೊಬಿಲಿಟಿಯ ಪ್ರಪಂಚದ ಸೂಪರ್ ಕಾರ್. ಇದು ನಯವಾಗಿ, ತೆಳ್ಳಗಿದ್ದು, ಹಿಂಭಾಗದಲ್ಲಿ ಟ್ವಿನ್ ಜೆಟ್- ಎಕ್ಸಾಸ್ಟ್ ಗಳನ್ನು ಸಹ ಹೊಂದಿದೆ. ಪೋರ್ಷೆ 2018ರಲ್ಲಿ ಒಂದು ಅಧ್ಯಯನವನ್ನು ನಡೆಸಿತ್ತು. ಅದರ ಪ್ರಕಾರ, ಏರ್ ಮೊಬಿಲಿಟಿಯ ಮಾರುಕಟ್ಟೆಯು 2025ರ ನಂತರ ಹೆಚ್ಚಾಗಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಫ್ಲೈಯಿಂಗ್ ಕಾರುಗಳನ್ನು ಹಲವಾರು ಕಂಪನಿಗಳು ಅಭಿವೃದ್ಧಿಪಡಿಸುತ್ತಿವೆ. ಬೋಯಿಂಗ್‌ನ ಪ್ರತಿಸ್ಪರ್ಧಿಯಾದ ಏರ್‌ಬಸ್ ಸಹ ಪೋರ್ಷೆಯಂತೆಯೇ ಫೋಕ್ಸ್‌ವ್ಯಾಗನ್ ಗುಂಪಿನ ಭಾಗವಾಗಿರುವ ಆಡಿಯ ಸಹಭಾಗಿತ್ವದಲ್ಲಿ ಫ್ಲೈಯಿಂಗ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಅಭಿವೃದ್ಧಿ ಹಂತದಲ್ಲಿರುವ ಫ್ಲೈಯಿಂಗ್ ಕಾರುಗಳಿಗೆ 2 ಲಕ್ಷ ಡಾಲರ್‍‍ನಿಂದ (ರೂ. 1.42 ಕೋಟಿ) 6 ಲಕ್ಷ ಡಾಲರ್‍‍ಗಳವರೆಗೆ (ರೂ. 4.26 ಕೋಟಿ) ವೆಚ್ಚವಾಗಲಿದೆ. ಲ್ಯಾಂಡಿಂಗ್ ಪ್ಯಾಡ್‌, ಚಾರ್ಜಿಂಗ್ ಸ್ಟೇಷನ್‌ಗಳು ಮುಂತಾದ ಮೂಲಸೌಕರ್ಯಗಳ ರಚನೆಯಲ್ಲಿನ ಇತರ ವೆಚ್ಚಗಳನ್ನು ಸೇರಿಸಿದರೆ, ಈ ವೆಚ್ಚವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅಭಿವೃದ್ಧಿಗೆ ಕೈಜೋಡಿಸಿದ ಪೋರ್ಷೆ, ಬೋಯಿಂಗ್

ಬೋಯಿಂಗ್ ಹಾಗೂ ಪೋರ್ಷೆ ಕಂಪನಿಯ ಪ್ರಕಾರ, ಇದು ಸಾಮಾನ್ಯ ಫ್ಲೈಯಿಂಗ್ ಕಾರುಗಳಿಗಿಂತ ಹೆಚ್ಚು ಬೆಲೆಯನ್ನು ಹೊಂದಿರುವ ಸಾಧ್ಯತೆಗಳಿವೆ. ಖರೀದಿದಾರರು ಈ ಫ್ಲೈಯಿಂಗ್ ಕಾರುಗಳಿಂದ ಹೆಚ್ಚಿನ ಪರ್ಫಾಮೆನ್ಸ್, ಹೆಚ್ಚು ದೂರ ಹಾಗೂ ಸುಸಜ್ಜಿತ ಕ್ಯಾಬಿನ್ ನಿರೀಕ್ಷಿಸಬಹುದು.

Most Read Articles

Kannada
English summary
Porsche & Boeing Enter Partnership To Develop Premium Electric Flying Cars - Read in Kannada
Story first published: Monday, October 14, 2019, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X