ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಪೋರ್ಷೆ ತನ್ನ ಬಹುನೀರಿಕ್ಷಿತ ಕಯೆನಿ ಕೂಪೆ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.1.31 ಕೋಟಿ ಬೆಲೆ ಪಡೆದುಕೊಂಡಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಪೋರ್ಷೆ ಸಂಸ್ಥೆಯು ಐಷಾರಾಮಿ ಎಸ್‌ಯುವಿ ಮಾದರಿಗಳಾದ ಲಂಬೋರ್ಗಿನಿ ಉರುಸ್, ರೇಂಜ್ ರೋವರ್ ಸ್ಪೋರ್ಟ್ ಮತ್ತು ಬಿಡುಗಡೆಗೆ ಸಿದ್ದವಾಗಿರುವ ಆಡಿ ಕ್ಯೂ8 ಕಾರುಗಳಿಗೆ ಪೈಪೋಟಿಯಾಗಿ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆಗೊಳಿಸಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎರಡು ಮಾದರಿಗಳಲ್ಲಿ ಕಯೆನಿ ಕೂಪೆ ಎಸ್‌ಯುವಿ ಕಾರನ್ನು ಆಯ್ಕೆ ಮಾಡಬಹುದಾಗಿದೆ. ಎರಡು ಮಾದರಿಗಳು ಸಂಪೂರ್ಣವಾಗಿ ವಿಭಿನ್ನ ಡ್ರೈವ್ ತಂತ್ರಜ್ಞಾನವನ್ನು ಹೊಂದಿದ್ದು, ಹೈ ಎಂಡ್ ಮಾದರಿಯು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಕಯೆನಿ ಕೂಪೆ ಎಸ್‌ಯುವಿನಲ್ಲಿ ಆರಂಭಿಕ ಆವೃತ್ತಿಯು ವಿ6 ಎಂಜಿನ್‌ನೊಂದಿಗೆ ರೂ.1.31 ಕೋಟಿ(ಎಕ್ಸ್‌ಶೋರೂಂ) ಹೊಂದಿದ್ದರೆ, ಹೈ ಎಂಡ್ ಮಾದರಿಯು ವಿ8 ಎಂಜಿನ್‌ನೊಂದಿಗೆ ರೂ.1.97 ಕೋಟಿ(ಎಕ್ಸ್‌ಶೋರೂಂ) ಬೆಲೆ ಪಡೆದಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಪೋರ್ಷೆ ಸಂಸ್ಥೆಯು ಕಯೆನಿ ಕೂಪೆ ಬಿಡುಗಡೆಗೂ ಮುನ್ನವೇ ಸ್ಟ್ಯಾಂಡರ್ಡ್ ಕಯೆನಿ ಎಸ್‌ಯುವಿ ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ.12 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಕಯೆನಿ ಕೂಪೆ ಎಸ್‌ಯುವಿಯಲ್ಲಿ ಆರಂಭಿಕ ಆವೃತ್ತಿಯು 3.0-ಲೀಟರ್ ಟರ್ಬೋಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್‌ನೊಂದಿಗೆ 340-ಬಿಎಚ್‌ಪಿ, 450-ಎನ್ಎಂ ಟಾರ್ಕ್ ಉತ್ಪಾದನೆ ಉತ್ಪಾದನೆ ಮಾಡಿದ್ದಲ್ಲಿ, ಹೈ ಎಂಡ್ ಮಾದರಿಯು 4.0-ಲೀಟರ್ ಟ್ವಿನ್-ಟರ್ಬೋ ವಿ8 ಪೆಟ್ರೋಲ್ ಎಂಜಿನ್‌ನೊಂದಿಗೆ 550-ಬಿಎಚ್‌ಪಿ, 770-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಎರಡು ಮಾದರಿಯಲ್ಲೂ ಸ್ಟ್ಯಾಂಡರ್ಡ್ ಆಗಿ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಇದರ ಜೊತೆಯಲ್ಲಿ ಪೋರ್ಷೆ ಸಂಸ್ಥೆಯು ಕಯೆನಿ ಕೂಪೆ ವಿ8 ಮಾದರಿಯಲ್ಲಿ ಹೈಬ್ರಿಡ್ ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಆವೃತ್ತಿಯು 680-ಬಿಎಚ್‌ಪಿ ಉತ್ಪಾದನೆಯೊಂದಿಗೆ ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ ಹೊರಹೊಮ್ಮಲಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಸದ್ಯಕ್ಕೆ ವಿ6 ಮತ್ತು ವಿ8 ಎಂಜಿನ್ ಪ್ರೇರಿತ ಸಾಮಾನ್ಯ ಮಾದರಿಯು ಮಾತ್ರವೇ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ ಪೋರ್ಷೆ ಸಿಗ್ನಿಚೆರ್ ಫೋರ್ ಡಾಟ್ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಫ್ರಂಟ್ ಆ್ಯಂಡ್ ರಿಯರ್ ಟೈಲ್‌ಲ್ಯಾಂಪ್, 20-ಇಂಚಿನ ಅಲಾಯ್ ವೀಲ್ಹ್ ಜೋಡಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಹಾಗೆಯೇ ಹೊಸ ಕಾರು ಸಾಮಾನ್ಯ ಕಯೆನಿ ಕಾರಿಗಿಂತಲೂ 43ಎಂಎಂ ನಷ್ಟು ಕಡಿಮೆ ಎತ್ತರ ಹೊಂದಿದ್ದು, 18-ಎಂಎಂ ನಷ್ಟು ಹೆಚ್ಚುವರಿ ಅಗಲವಾದ ವಿನ್ಯಾಸ ಪಡೆದಿದೆ. ಇದು ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಹಿಂಬದಿಯ ಆಸನ ವಿಸ್ತರಣೆಗಾಗಿ ಬೂಟ್ ಸ್ಪೆಸ್ ಸಾಮರ್ಥ್ಯವನ್ನು 745-ಲೀಟರ್‌ನಿಂದ 598-ಲೀಟರ್‌ಗೆ ಕಡಿತಗೊಳಿಸಲಾಗಿದೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ ಪ್ಲೇ, 18 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಫೋರ್ ಜೋನ್ ಕ್ಲೈಮೆಟ್ ಕಂಟ್ರೊಲ್, ಪನೊರಮಿಕ್ ಸನ್‌ಗ್ಲಾಸ್, ಮಲ್ಟಿ ಫಂಕ್ಷನ್ ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ಹ್ ಸೌಲಭ್ಯಗಳಿವೆ.

ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್‌ಯುವಿ ಬಿಡುಗಡೆ

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, ಕ್ರೂಸ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಂಟು ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೊಲ್ ಮತ್ತು ಹಿಲ್-ಡಿಸೆಂಟ್ ಅಸಿಸ್ಟ್ ಇದರಲ್ಲಿದೆ.

Most Read Articles

Kannada
English summary
Porsche Cayenne Coupe Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X