ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಚಂದನವನದಲ್ಲಿ ಇತ್ತೀಚೆಗೆ ಸೂಪರ್ ಕಾರುಗಳ ಕ್ರೇಜ್ ಹೆಚ್ಚಾಗುತ್ತಿದೆ. ಬಹುತೇಕ ಸ್ಟಾರ್ ನಟರು ಕೋಟಿ ಕೋಟಿ ಬೆಲೆಬಾಳುವ ಸೂಪರ್ ಕಾರುಗಳನ್ನು ಖರೀದಿಸಿ ಸುದ್ದಿಯಾಗುತ್ತಿದ್ದು, ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡಾ ತಮ್ಮ ಪ್ರೀತಿಯ ಮಡದಿಗಾಗಿ ದುಬಾರಿ ಬೆಲೆಯ ಕಾರೊಂದನ್ನು ಖರೀದಿಸಿದ್ದಾರೆ.

ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿಸಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಪುನೀತ್ ರಾಜ್‌ಕುಮಾರ್ ಸೂಪರ್ ಕಾರುಗಳ ಕ್ರೇಜ್ ಎಷ್ಟಿದೆ ಎಂಬುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಈಗಾಗಲೇ ಅವರ ಬಳಿ ಆಡಿ, ಪೋರ್ಷೆ, ರೇಂಜ್ ರೋವರ್ ಸೇರಿದಂತೆ ದುಬಾರಿ ಬೆಲೆಯ ಬೈಕ್‌ಗಳ ಕಲೆಕ್ಷನ್ ಕೂಡಾ ಹೊಂದಿದ್ದಾರೆ. ಹೀಗಾಗಿರುವಾಗ ಇತ್ತೀಚೆಗೆ ಲಂಬೋರ್ಗಿನಿ ಸಂಸ್ಥೆಯು ಬಿಡುಗಡೆ ಮಾಡಿರುವ ಉರುಸ್ ಸಾಕಷ್ಟು ಸದ್ದು ಮಾಡುತ್ತಿದ್ದು, ಹೊಸ ಕಾರಿಗೆ ಫಿದಾ ಆಗಿರುವ ಅಪ್ಪು ಕೂಡಾ ತಮ್ಮ ಪ್ರೀತಿಯ ಮಡದಿಗೆ ಸರ್ಫೈಸ್ ಗಿಫ್ಟ್ ಕೊಟ್ಟಿದ್ದಾರೆ.

ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿಸಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಹೌದು, ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಅಶ್ವಿನಿಯವರಿಗೆ ಬರೋಬ್ಬರಿ ಮೂರುವೆರೆ ಕೋಟಿ ಮೌಲ್ಯದ ಲಂಬೋರ್ಗಿನಿ ಉರುಸ್ ಎಸ್‌ಯುವಿ ಕಾರು ಖರೀದಿಸಿ ಉಡುಗೊರೆ ನೀಡಿರುವ ಪುನೀತ್ ರಾಜ್‌ಕುಮಾರ್ ಅವರು ಈ ಬಾರಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ.

ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿಸಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಕಳೆದ ಕೆಲ ತಿಂಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಬರೋಬ್ಬರಿ 5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಅವೆಂಟಡೊರ್ ಖರೀದಿ ಮಾಡಿದ್ರೆ ನಟ ಧನಂಜಯ್ ಕೂಡಾ ರೇಂಜ್ ರೋವರ್ ಇವೊಕ್ ಖರೀದಿ ಮಾಡಿದ್ರು. ಇದೀಗ ಪುನೀತ್ ರಾಜ್‌ಕುಮಾರ್ ಕೂಡಾ ಲಂಬೋರ್ಗಿನಿ ಉರುಸ್ ಒಡೆಯರಾಗಿದ್ದಾರೆ.

ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿಸಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಇನ್ನು ಐಷಾರಾಮಿ ಕಾರುಗಳಲ್ಲಿ ಉನ್ನತ ಸ್ಥಾನ ಹೊಂದಿರುವ ಲಂಬೋರ್ಗಿನಿ ಸಂಸ್ಥೆಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದ್ರೆ ಮಾರಾಟದಲ್ಲಿ ಆದ ಹಿನ್ನಡೆಯಿಂದಾಗಿ ಎಸ್‌ಯುವಿ ಮಾರಾಟವನ್ನು ಕೈಬಿಟ್ಟಿತ್ತು. ಆದ್ರೆ ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯ ಉರುಸ್ ಎಸ್‌ಯುವಿ ಆವೃತ್ತಿಯನ್ನು ಹೊರತಂದಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿಸಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಇನ್ನೊಂದು ವಿಶೇಷ ಅಂದ್ರೆ ಲಂಬೋರ್ಗಿನಿ ಸಂಸ್ಥೆಯು ತನ್ನ ಕಾರು ಉತ್ಪನಗಳಲ್ಲೇ ಮೊದಲ ಬಾರಿಗೆ ಟರ್ಬೋಚಾರ್ಜ್ಡ್ ಎಂಜಿನ್ ಪರಿಚಯಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 4.0-ಲೀಟರ್(4 ಸಾವಿರ ಸಿಸಿ) ಟ್ವಿನ್ ಟರ್ಬೋ ವಿ8 ಎಂಜಿನ್ ಪಡೆದುಕೊಂಡಿದೆ. ಈ ಮೂಲಕ ಈ ಮೂಲಕ ಪ್ರತಿ ಗಂಟೆಗೆ 305 ಕಿಮಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗ ಪಡೆಯಬಲ್ಲದು. ಹೀಗಾಗಿ ಪ್ರದೇಶಗಳಿಗೆ ಅನುಗುಣವಾಗಿ ಡ್ರೈವಿಂಗ್ ಮೂಡ್‌ಗಳನ್ನು ಒದಗಿಸಲಾಗಿದೆ.

Source: Mega Powerstar Puneeth rajkumar Fan Club

Most Read Articles

Kannada
English summary
Power Star Puneeth Rajkumar Purchased New Lamborghini Urus Car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X