ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ದಿನಂಪ್ರತಿ ರಸ್ತೆಯಲ್ಲಿ ಅಪಘಾತಗಳನ್ನು ಕಾಣುತ್ತಿದ್ದೇವೆ ಮತ್ತು ಆ ವಾಹನಗಳಲ್ಲಿ ಸರಿಯಾದ ಸುರಕ್ಷಾ ಸಾಧನಗಳು ಇಲ್ಲವಾದ ಕಾರಣ ಪ್ರಯಾಣಿಕರು ಸ್ಥಳದಲ್ಲಿಯೆ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಸಹ ನಾವು ಕಂಡಿದ್ದೆವೆ. ಇದರಿಂದಾಗಿ ಎಚ್ಚೆತ್ತುಕೊಂಡ ಕೆಂದ್ರ ಸರ್ಕಾರವು ಹೊಸದಾಗಿ ಬಿಡುಗಡೆಗೊಳ್ಳಲಿರುವ ವಾಹನಗಳಲ್ಲಿ ಸರಿಯಾದ ಸುರಕ್ಷಾ ಸಾಧನಗಳು ಇರಬೇಕೆಂಬ ಆದೇಶವನ್ನು ನೀಡಿದೆ.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಹೈ ಸ್ಪೀಡ್‍ನಲ್ಲಿ ವಾಹನ ಚಾಲಯಿಸುವ ಸಮಯದಲ್ಲಿ ಯಾವ ವಾಹನವಾದರೂ ಸಹ ಅಪಘಾತಕ್ಕೀಡಾದರೆ, ವಾಹನವನ್ನು ಉತ್ಪದನೆ ಮಾಡಲಾದ ಗುಣಮಟ್ಟದ ಮೇಲೆ ಪ್ರಯಾಣಿಕರ ಸುರಕ್ಷತೆಯು ನಿರ್ಧಾರವಾಗಿರುತ್ತದೆ. ವಿಪರ್ಯಾಸವೆಂದರೆ ಐಷಾರಾಮಿ ಕಾರುಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ವೈಶಿಷ್ಟ್ಯತೆಗಳು ಇದ್ದರೂ ಸಹ ಪ್ರಯಾಣಿಕರು ಸ್ಥಳದಲ್ಲಿಯೆ ಸಾವನಪ್ಪುತ್ತಿದ್ದಾರೆ. ಅಂತಹ ಘಟನೆಯೆ ಬೆಂಗಳೂರಿನ ನೈಸ್ ರಸ್ತೆಯ ಬಳಿ ನಡೆದಿದ್ದು, ಅಪಘಾತಕ್ಕೀಡಾದ ಕಾರು ಸುಮಾರು 60-70 ಲಕ್ಷ ಬೆಲೆಬಾಳುವ ರೇಂಜ್ ರೋವರ್ ಇವೋಕ್ ಕಾರೆಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಬೆಂಗಳೂರು: ಮಾರ್ಚ್ 26 ರಂದು ಮಧ್ಯಾಹ್ನ 3 ಅಗಂಟೆಗೆ ಸುಮಾರು ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ರೇಂಜ್ ರೋವರ್ ಇವೋಕ್ ಡೆಮೋ ಕಾರು ನೈಸ್ ರಸ್ತೆಯ ಬಳಿ ಅಪಘಾತಕ್ಕೀಡಾಗಿದೆ. ಅಪಘಾತಕ್ಕೀಡಾದ ಕಾರಿನ ಪರಿಸ್ತಿತಿಯನ್ನು ಕಂಡರೆ ಕಾರಿನಲ್ಲಿದ್ದ ಏರ್‍‍ಬ್ಯಾಗ್‍ಗಳು ತೆರೆದುಕೊಳ್ಳದಿರುವುದನ್ನು ಕಾಣಬಹುದು.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಕಾರಿನಲ್ಲಿ ಬೆಂಗಳೂರಿನ ಪದ್ಮನಾಭನಗರ್ ನಿವಾಸಿಯಾದ ಸಾಗರ್, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಟೆಸ್ಟ್ ಡ್ರೈವ್ ಮಾಡುತ್ತಿದ್ದರು ಜೊತೆಗೆ ಡೆಮೊ ಕಾರ್ ಡ್ರೈವರ್ ಶಿವಕುಮಾರ್ ಸಹ ಇದ್ದರೂ. ಆದರೆ ಕಾರು ಡ್ರೈವ್ ಮಾಡುತ್ತಿದ್ದ ಸಾಗರ್ ಅಪಘಾತದ ನಂತರ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿಯೆ ಸಾವನಪ್ಪಿದ್ದಾರೆ ಮತ್ತು ಕಾರಿನಲ್ಲಿದ್ದ ಇನ್ನು ಮೂವರಿಗೆ ಗಂಭೀರವಾದ ಗಾಯಗಳಾಗಿವೆ. ಕಾರಿನ ಬಲಭಾಗದಲ್ಲಿದ್ದ ಟೈರ್ ಬರ್ಸ್ಟ್ ಆದ ಕಾರಣ ಚಾಲಕನು ನಿಯಂತ್ರಣ ತಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಟೋಲ್ ಬೂತ್‍ನ ಹತ್ತಿರ ಈ ಘಟನೆಯು ನಡೆದಿದ್ದು, ನಿಯಂತ್ರಣ ತಪ್ಪಿದ ಕಾರು ಉಜ್ಜಿಕೊಂಡು ಹೋಗಿ ನಂತರ ಪಕ್ಕದಲ್ಲಿಯೆ ಇದ್ದ ಖಾಲಿ ಮೈದಾನದಲ್ಲಿ ನಿಂತಿದೆ. ಸ್ಥಳೀಯರ ಪ್ರಕಾರ ಕಾರು ಸಂಪೂಣ್ರವಾಗಿ ನುಜ್ಜುನುಜ್ಜಗಿದ್ದು, ಸ್ಥಳಕ್ಕೆ ಬಂದ ರೇಂಜ್ ರೋವರ್ ಡೀಲರ್‍‍ಗಳು ಅದನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ನೈಸ್ ರಸ್ತೆಯಲ್ಲಿ ಎಷ್ಟರ ಮಟ್ಟಿಗೆ ಸ್ಪೀಡ್‍ನಲ್ಲಿ ವಾಹನಗಳು ಪ್ರಯಾಣಿಸುತ್ತಿರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಯಾವುದೇ ರಸ್ತೆಯಲ್ಲಾಗಲಿ ಅತಿಯಾದ ವೇಗದಲ್ಲಿ ಸಂಚರಿಸುವುದು ಸರಿಯಲ್ಲ. ರಸ್ತೆಯಲ್ಲಿ ನೀಡಲಾದ ಸ್ಪೀಡ್ ಬೋರ್ಡ್ ಫಲಕಗಳನ್ನು ಗಮನಿಸಿ ಅಷ್ಟೆ ವೇಗದಲ್ಲಿ ಡ್ರೈವ್ ಮಾಡುವುದು ಒಳಿತು. ಅದು ಟೆಸ್ಟ್ ಡ್ರೈವ್ ವಾಹನವಾದರೂ ಸರಿ ನಿಮ್ಮ ಸ್ವಂತ ವಾಹನವಾದರೂ ಸರಿ.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಇನ್ನು ಅಪಘಾತಕ್ಕೀಡಾದ ರೇಂಜ್ ರೋವರ್ ಇವೋಕ್ ಕಾರಿನ ಬಗ್ಗೆ ಹೇಳುವುದಾದ್ರೆ ಈ ಕಾರು ಬೆಂಗಳೂರಿನಲ್ಲಿ ಆರಂಭಿಕವಾಗಿ ರೂ.65 ಲಕ್ಷ ಆನ್‌ರೋಡ್ ಬೆಲೆಯನ್ನು ಹೊಂದಿದ್ದು, 2.0-ಲೀಟರ್(1999 ಸಿಸಿ) ಇಗ್ನೆನಿಯಂ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇದು ಸಾಮಾನ್ಯ ರಸ್ತೆಗಳಲ್ಲಿ ಅಷ್ಟೇ ಅಲ್ಲದೇ ಪರ್ಫಾಮೆನ್ಸ್ ಡ್ರೈವ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲದು.

MOST READ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಭಾರತೀಯ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರೇಂಜ್ ರೋವರ್ ಸಂಸ್ಥೆಯು ಇದುವರೆಗೆ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಮೂಲಕ ತನ್ನದೇ ಜನಪ್ರಿಯತೆ ಕಾಯ್ದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಇವೋಕ್ ಎಡಿಷನ್ ಸಿದ್ಧಗೊಳಿಸಿದೆ.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಟಾಪ್ 10 ಶ್ರೇಷ್ಠ ಎಸ್‌ಯುವಿಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಇವೋಕ್ ಕಾರು ಸದ್ಯ ಭಾರತದಲ್ಲಿ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ಐಷಾರಾಮಿ ಕಾರು ಮಾದರಿಯಾಗಿದ್ದು, ಅತ್ಯುತ್ತಮ ಚಾಲನಾ ಸೌಲಭ್ಯ ಮತ್ತು ಸುರಕ್ಷತೆಗೆ ಈ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಇದೇ ಕಾರಣಕ್ಕೆ ಐಷಾರಾಮಿ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿರುವ ರೇಂಜ್ ರೋವರ್ ಇವೋಕ್, ಅತ್ಯಾಧುನಿಕ ಡ್ರೈವ್ ಟೆಕ್ನಾಲಜಿ ಸೌಲಭ್ಯದೊಂದಿಗೆ ಆಲ್ ವೀಲ್ಹ್ ಡ್ರೈವ್, 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಿಟ್ಟಿಕೊಂಡಿದೆ.

MOST READ: ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಈ ಮೂಲಕ 237-ಬಿಎಚ್‌ಪಿ ಮತ್ತು 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ರೇಂಜ್ ರೋವರ್ ಇವೋಕ್ ಕಾರುಗಳು ಪ್ರತಿ ಗಂಟೆಗೆ 217ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಕೇವಲ 8 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಪಡೆದುಕೊಳ್ಳುತ್ತವೆ.

Most Read Articles

Kannada
English summary
Bengaluru businessman test-driving Range Rover crashes into Railings Near Nice Road Bangalore. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X