ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಜೆಎಲ್ಆರ್ ಸಂಸ್ಥೆಯು ಹೊಸ ಎಂಜಿನ್ ಆಯ್ಕೆಯೊಂದಿಗೆ ತನ್ನ ಜನಪ್ರಿಯ ಆವೃತ್ತಿಯಾದ ರೇಂಜ್ ರೋವರ್ ಸ್ಪೋರ್ಟ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಅತ್ಯಧಿಕ ಪರ್ಫಾಮೆನ್ಸ್ ಹಿಂದಿರುಗಿಸಬಲ್ಲ ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.86.71 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಐಷಾರಾಮಿ ಕಾರು ಖರೀದಿದಾರರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರೇಂಜ್ ರೋವರ್ ಸ್ಪೋರ್ಟ್ ಮಾದರಿಯು ಇದೀಗ ಮತ್ತಷ್ಟು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅತ್ಯಧಿಕ ಪರ್ಫಾಮೆನ್ಸ್ ನೀಡಬಲ್ಲ ಹೊಸ ಎಂಜಿನ್ ಆಯ್ಕೆಯನ್ನು ಹೊತ್ತು ಬಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಹೊಸ ರೇಂಜ್ ರೋವರ್ ಸ್ಪೋರ್ಟ್ ಮಾದರಿಯು 296-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಟ್ವಿನ್ ಸ್ಕ್ರೋಲ್ ಟರ್ಬೋಚಾರ್ಜರ್ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್ ಜೋಡಿಸಲಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಹಾಗೆಯೇ ಹೊಸ ಕಾರಿನ ಒಳಾಂಗಣ ತಾಂತ್ರಿಕ ಅಂಶಗಳಲ್ಲಿಯೂ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನಹರಿಸಲಾಗಿದೆ. ಹೀಗಾಗಿ ಹೊಸ ಕಾರು ಈ ಮೊದಲಿಗಿಂತಲೂ ಹೆಚ್ಚಿನ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಕಾರು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಲಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಇನ್ನು ಕಾರಿನ ಮುಂಭಾಗದಲ್ಲಿ ಬ್ಲ್ಯಾಕ್ ಫ್ರಂಟ್ ಗ್ರಿಲ್, ಎಲ್ಇಡಿ ಡಿಎಲ್ಆರ್‌ಎಸ್, ವಿಶೇಷವಾಗಿ ನವೀಕೃತಗೊಂಡ ಬ್ಯಾನೆಟ್, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಹಿಂಭಾಗದಲ್ಲಿ ನವೀಕೃತ ಬಂಪರ್ ಜೊತೆ ಟ್ವಿನ್ ಎಕ್ಸಾಸ್ಟ್ ವಿನ್ಯಾಸವು ಗಮನಸೆಳೆಯಲಿದೆ. ಇದರ ಜೊತೆಗೆ ಕಾರಿನ ಒಳಾಂಣದಲ್ಲಿ 12.3-ಇಂಚಿನ ಇಂಟರ್‌ಆಕ್ಟಿವ್ ಡ್ರೈವರ್ ಡಿಸ್‌ಪ್ಲೇ ಸಿಸ್ಟಂ, ಹೆಡ್ ಅಪ್ ಡಿಸ್‌ಪ್ಲೇ, ಪನರೊಮಿಕ್ ಸನ್‌ರೂಫ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ಜೆಎಲ್ಆರ್ ಸಂಸ್ಥೆಯ ವಿಶೇಷ ಮಾಹಿತಿಯುಳ್ಳ ಟಚ್ ಪ್ರೋ ಡ್ಯು ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಹೊಸ ಕಾರಿನಲ್ಲಿ ಒಟ್ಟು ಮೂರು ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದ್ದು, ಎಸ್, ಎಸ್ಇ ಮತ್ತು ಹೆಚ್ಎಸ್ಇ ಎಂಬ ಮೂರು ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರದೆ. ಹೀಗಾಗಿ ಕಾರಿನ ಬೆಲೆಯು ಸಹ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಆರಂಭಿಕ ಆವೃತ್ತಿಯ ಬೆಲೆಯನ್ನು ರೂ.86.71 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಆವೃತ್ತಿಯನ್ನು ರೂ.1.56 ಕೋಟಿಗೆ ನಿಗದಿಪಡಿಸಲಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಇದರ ಹೊರತವಾಗಿ ರೇಂಜ್ ರೋವರ್ ಸ್ಪೋರ್ಟ್ ಆವೃತ್ತಿಯ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವಲ್ಲದೇ ಮತ್ತಷ್ಟು ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗೆ 3.0-ಲೀಟರ್ ಪೆಟ್ರೋಲ್ ಮತ್ತು 3.0-ಲೀಟರ್ ವಿ6 ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಇದು ಸಾಮಾನ್ಯ ಮಾದರಿಯ 2.0-ಲೀಟರ್ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಉತ್ಪಾದನೆ ಮಾಡಲಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ ಗರಿಷ್ಠ ಮಟ್ಟದ 254-ಬಿಎಚ್‌ಪಿ ಮತ್ತು 600-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

3.0-ಲೀಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.04 ಕೋಟಿಯಿಂದ ಟಾಪ್ ಎಂಡ್ ಮಾದರಿಯು ರೂ. 1.37 ಕೋಟಿ ಬೆಲೆ ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾದ ರೇಂಜ್ ರೋವರ್ ಸ್ಪೋರ್ಟ್

ಈ ಬಗ್ಗೆ ಮಾತನಾಡಿರುವ ಜೆಎಲ್ಆರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು, ಐಷಾರಾಮಿ ಕಾರು ಮಾರಾಟದಲ್ಲಿ ಹೊಸ ಬದಲಾವಣೆಗಾಗಿ ಮಾರಾಕಟ್ಟೆ ಪ್ರವೇಶಿಸಿರುವ ಹೊಸ 2.0-ಲೀಟರ್ ಪೆಟ್ರೋಲ್ ಮಾದರಿಯು ಸಾಕಷ್ಟು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಜೆಎಲ್ಆರ್ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ ಎಂದಿದ್ದಾರೆ.

Most Read Articles

Kannada
English summary
Range Rover Sport Launched With New 2.0-Litre Petrol Engine — Prices Start At 86.71 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X