ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಲ್ಯಾಂಡ್ ರೋವರ್ 400 ಹಾರ್ಸ್ ಪವರ್ ನ ಇಗ್ನೆನಿಯಂನ ಸಿಕ್ಸ್ ಪೆಟ್ರೋಲ್ ಎಂಜಿನ್ ಅನ್ನು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಂಜಿನ್ ಅನ್ನು ಮೊದಲ ಬಾರಿಗೆ ಇಂಗ್ಲೆಂಡ್ ನ ರೇಂಜ್ ರೋವರ್ ಸ್ಪೋರ್ಟ್ ಕಾರಿನಲ್ಲಿ ಅಳವಡಿಸಲಾಗಿತ್ತು.

ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಹೊಸ ಟರ್ಬೋ ಚಾರ್ಜ್‍ನ ಇಗ್ನೆನಿಯಂ ಎಂಜಿನ್ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ವಾಹನಗಳಲ್ಲಿ ಅಳವಡಿಸಲಾಗಿರುವ ಫೋರ್ಡ್ ಆಧಾರಿತ ಸೂಪರ್ ಚಾರ್ಜ್ ವಿ6 ಎಂಜಿನ್‍ಗೆ ಪರ್ಯಾಯವಾಗಿ ಬರಲಿದೆ. ಆಟೋ ಕಾರ್ ಇಂಡಿಯಾ ವರದಿಯ ಪ್ರಕಾರ, ಹೊಸ ಇಗ್ನೆನಿಯಂ ಎಂಜಿನ್ ಟ್ವಿನ್ ಟರ್ಬೋ ಚಾರ್ಜರ್ ಗಳನ್ನು ಚಾರ್ಜ್ ಮಾಡುವ ಮೊದಲು ಥ್ರಾಟಲ್ ರೆಸ್ಪಾನ್ಸ್ ಗಾಗಿ ಎಲೆಕ್ಟ್ರಿಕ್ ಆಧಾರಿತ ಸೂಪರ್ ಚಾರ್ಜರ್‍‍ಗಳನ್ನು ಬಳಸಲಿದೆ. ಈ ಎಂಜಿನ್ 48ವಿ ಲಘು ಹೈಬ್ರಿಡ್ ಸಿಸ್ಟಂ ಅನ್ನು ಎಂಜಿನ್ ನ ವರ್ಕ್ ಲೋಡ್ ಕಡಿಮೆ ಮಾಡಲು ಟಾರ್ಕ್ ಅನ್ನು ಪೂರೈಸುತ್ತದೆ.

ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಈ ಎಂಜಿನ್ 400 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸಿ, 0 - 100 ಕಿ.ಮೀ ವೇಗವನ್ನು 5.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಎಸ್‍ಯುವಿ ಯ ಟಾಪ್ ಸ್ಪೀಡ್ ಅನ್ನುಪ್ರತಿ ಗಂಟೆಗೆ 225 ಕಿ.ಮೀ ನಿಗದಿಪಡಿಸಲಾಗಿದೆ.

ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಲ್ಯಾಂಡ್ ರೋವರ್ ರೇಂಜ್ ರೋವರ್ ನಲ್ಲಿ, ಸ್ಮಾರ್ಟ್ ಫೋನ್ ಪ್ಯಾಕ್ ಫೀಚರ್ ನ ಆಂಡ್ರಾಯಿಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಸೈನ್ ಬೋರ್ಡ್‍ಗಳ ಮೇಲೆ ಬಿದ್ದು ರಿಫ್ಲೆಕ್ಟ್ ಆಗುವ ಹೆಡ್‍ಲೈಟ್‍ಗಳನ್ನು ಅಳವಡಿಸಲಾಗಿದೆ.

ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಟೂರಿಸ್ಟ್ ಮೋಡ್ ಹೆಡ್‍ಲೈಟ್ ಬೀಮ್ ಅಳವಡಿಸಲಾಗಿದ್ದು, ಇದು ವಾಹನ ಚಾಲನೆ ಮಾಡುತ್ತಿರುವ ಕಡೆಗೆ ಲೈಟ್ ಅನ್ನು ಅಡ್ಜಸ್ಟ್ ಮಾಡುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ರೇಂಜ್ ರೋವರ್‍‍ನಲ್ಲಿ ಈ ಎಂಜಿನ್ ಅನ್ನು ಅಳವಡಿಸುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ದೇಶಿಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ 3.0 ಹಾಗೂ 4.4 ಲೀಟರಿನ ಡೀಸೆಲ್ ಮಾದರಿಗಳಲ್ಲಿ ಮತ್ತು 3.0 ಹಾಗೂ 5.0 ಲೀಟರಿನ ಪೆಟ್ರೋಲ್ ಮಾದರಿಗಳಲ್ಲಿ ಲಭ್ಯವಿದೆ. ಈ ವಾಹನವು ಒಟ್ಟು 10 ಮಾದರಿಗಳಲ್ಲಿ ಮತ್ತು 33 ಬಣ್ಣಗಳಲ್ಲಿ ದೊರೆಯಲಿದೆ.

MOST READ: ಹೀರೋ ಎಕ್ಸ್‌ಪಲ್ಸ್ 200ಟಿ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು

ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಭಾರತದ ಎಕ್ಸ್ ಶೋರೂಂ ದರದಲ್ಲಿರುವಂತೆ ಈ ವಾಹನದ ಬೆಲೆಯನ್ನು ರೂ.1.81 ಕೋಟಿಗಳಿಂದ ರೂ.4.04 ಕೋಟಿಗಳೆಂದು ನಿಗದಿಪಡಿಸಲಾಗಿದೆ.

ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ರೇಂಜ್ ರೋವರ್ ನಲ್ಲಿರುವ ಹೊಸ ಇಗ್ನೆನಿಯಂ ಎಂಜಿನ್ ಭಾರತಕ್ಕೂ ಕಾಲಿಡುವ ನಿರೀಕ್ಷೆಗಳಿವೆ.

ಇಗ್ನೆನಿಯಂ ಪೆಟ್ರೋಲ್ ಎಂಜಿನ್ ಪ್ರೇರಿತ ರೇಂಜ್ ರೋವರ್ ಅನಾವರಣ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

400 ಹಾರ್ಸ್ ಪವರ್ ಸಾಮರ್ಥ್ಯವನ್ನು ಎಸ್ ಯು ವಿಗಳಲ್ಲಿ ಅಳವಡಿಸುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಈ ಸೆಗ್ ಮೆಂಟಿನಲ್ಲಿ ಈ ಮಟ್ಟದ ಹಾರ್ಸ್ ಪವರ್ ಎಸ್ ಯು ವಿ ಯನ್ನು ಹೆವಿ ವೇಟ್ ಮಾಡುವುದರಲ್ಲಿ ಸಂಶಯವಿಲ್ಲ. ಲ್ಯಾಂಡ್ ರೋವರ್ ಎಂಜಿನ್ ಗಳನ್ನು ಅಪ್ ಡೇಟ್ ಮಾಡುವುದರಲ್ಲಿ ಸಹ ಮುಂದಿರುತ್ತದೆ. ಈಗಾಗಲೇ ಇಗ್ನೆನಿಯಂ ಎಂಜಿನ್ ಅನ್ನು ಜಾಗ್ವಾರ್ ಪೋರ್ಟ್ ಫೋಲಿಯೋ 2.0ಡಿ ನಲ್ಲಿ ಅಳವಡಿಸಲಾಗಿದೆ. ಈಗ ಲ್ಯಾಂಡ್ ರೋವರ್ ನ ಸರದಿ.

Most Read Articles

Kannada
English summary
Range Rover With Ingenium Petrol Engine Revealed — A British Masterpiece - Read in kannada
Story first published: Saturday, May 4, 2019, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X