ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ದೇಶಾದ್ಯಂತ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹೊಸ ವಾಹನ ಖರೀದಿಸಿ ನೋಂದಣಿ ಮಾಡಲು ಮುಂದಾಗಿದ್ದ ಲಕ್ಷಾಂತರ ವಾಹನ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಶಾಕ್ ನೀಡಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಆದೇಶ ಅನ್ವಯ ಕೇಂದ್ರ ಸಾರಿಗೆ ಇಲಾಖೆಯು ದೇಶಾದ್ಯಂತ ಮೇ 2ರಿಂದಲೇ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸಿದ್ದು, ಹೊಸ ವಾಹನಗಳಲ್ಲಿ ಏಕ ರೂಪದ ಇನ್‌ಬಿಲ್ಟ್ ಹೈ ಸೆಕ್ಯೂರಿಟಿ ಫೀಚರ್ಸ್ ಸೇರ್ಪಡೆ ಮಾಡಿ ಮಾಹಿತಿ ಸಂಗ್ರಹಿಸದ ಹಿನ್ನಲೆಯಲ್ಲಿ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸುವಂತೆ ಎನ್‌ಐಸಿ ಸಂಸ್ಥೆಯು ಕೇಂದ್ರ ಸಾರಿಗೆ ಇಲಾಖೆಗೆ ಖಡಕ್ ಆದೇಶ ನೀಡಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಏಪ್ರಿಲ್ 1ರಿಂದಲೇ ದೇಶಾದ್ಯಂತ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸಾರಿಗೆ ಇಲಾಖೆಯು ವಾಹನಗಳ ದತ್ತಾಂಶ ಸಂಗ್ರಹ ನಿಯಮವನ್ನು ಸರಿಯಾಗಿ ನಿರ್ವಹಿಸದಿರುವುದೇ ಹೊಸ ವಾಹನಗಳ ನೋಂದಣಿಗೆ ಬ್ರೇಕ್ ಬಿದ್ದಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಹೀಗಾಗಿ ಏಪ್ರಿಲ್ 1ರಿಂದ ನೋಂದಣಿಯಾಗಿರುವ ಹೊಸ ವಾಹನಗಳ ದತ್ತಾಂಶ ಸಂಗ್ರಹವನ್ನು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಸಾಫ್ಟ್‌ವೇರ್‌ನಲ್ಲಿ ದಾಖಲಿಸದ ಹೊರತಾಗಿ ಹೊಸ ವಾಹನಗಳ ನೋಂದಣಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಸದ್ಯ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಸಂಸ್ಥೆಯು ವಾಹನ್ ತಂತ್ರಾಶ ಮೂಲಕ ದೇಶದ ಪ್ರತಿಯೊಂದು ವಾಹನದ ದತ್ತಾಂಶವನ್ನು ಸಂಗ್ರಹಿಸುತ್ತಿದ್ದು, ಇದರಲ್ಲಿ ಏಪ್ರಿಲ್ 1ರಿಂದ ನೋಂದಣಿಯಾಗುತ್ತಿರುವ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ವಾಹನಗಳ ದತ್ತಾಂಶವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಬೇಕಿದ್ದ ಕೇಂದ್ರ ಸಾರಿಗೆ ಇಲಾಖೆಯು ಹೊಸ ನಿಯಮವನ್ನು ಪಾಲನೆ ಮಾಡಿಲ್ಲ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಹೀಗಾಗಿ ಏಪ್ರಿಲ್ 4ರಂದು ನಡೆದಿದ್ದ ಸಭೆಯ ತೀರ್ಮಾನದಂತೆ ಹೊಸ ವಾಹನಗಳ ನೋಂದಣಿಯನ್ನು ತಡೆಹಿಡಿಯಲಾಗಿದ್ದು, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿರುವ ಹೊಸ ವಾಹನಗಳ ದತ್ತಾಂಶವನ್ನು ದಾಖಲಿಸದ ನಂತರವೇ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಇನ್ನು ಸುಮಾರು ಒಂದು ದಶಕ ಹಿಂದೆಯೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು ಜಾರಿ ತರಲಾಗಿದ್ದರೂ ಸಹ ಇದುವರೆಗೆ ಹಲವಾರು ರಾಜ್ಯಗಳಲ್ಲಿ ಇದು ಕಡ್ಡಾಯವಾಗಿರಲಿಲ್ಲ. ಹೀಗಾಗಿ ವಾಹನಗಳ ಸುರಕ್ಷತೆಗಾಗಿ ಮಹತ್ವದ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರವು ಕಳೆದ ತಿಂಗಳು ಏಪ್ರಿಲ್ 1ರಿಂದವೇ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿರಬೇಕೆಂದು ಸುತ್ತೊಲೆ ಹೊರಡಿಸಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಇದರ ಜೊತೆಗೆ ಕೇಂದ್ರ ಸರ್ಕಾರ ಹೊಸ ಸುರಕ್ಷಾ ನೀತಿಯ ಪ್ರಕಾರ, ಇಷ್ಟು ದಿನಗಳ ಕಾಲ ಕಾರು ಮಾಲೀಕರೇ ಆಯ್ಕೆ ಮಾಡುತ್ತಿದ್ದ ನಂಬರ್ ಪ್ಲೇಟ್‌ಗಳನ್ನು ಇನ್ಮುಂದೆ ಕಾರು ಉತ್ಪಾದಕರೇ ಪೂರೈಕೆ ಮಾಡಬೇಕಿದ್ದು, ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳ ಜೊತೆಗೆ ಹೈ ಎಂಡ್ ಕಾರುಗಳಲ್ಲೂ ಏಕರೂಪದ ನಂಬರ್ ಪ್ಲೇಟ್‌ಗಳಿರಲಿವೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಕಾರು ಉತ್ಪಾದನಾ ಸಂಸ್ಥೆಗಳು ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ. ಹೀಗಾಗಿ ವಾಹನಗಳಿಗೆ ಗರಿಷ್ಠ ಭದ್ರತೆ ದೊರೆಯಲಿದ್ದು, ಮುಖ್ಯವಾಗಿ ವಾಹನಗಳ ಕಳ್ಳತನಕ್ಕೆ ಬ್ರೇಕ್ ಹಾಕಲಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ನಲ್ಲಿ ಅಳವಡಿಸಲಾಗಿರುವ ಕ್ರೋಮಿಯಮ್ ಹಾಲೋಗ್ರಾಮ್ ತಂತ್ರಜ್ಞಾನವನ್ನು ಸ್ಟಾಂಪ್ ಮಾದರಿಯಲ್ಲಿ ಅಳವಡಿಸಲಾಗಿದ್ದು, ಲೇಸರ್ ರೀಡರ್ ಮೂಲಕ ವಾಹನದ ಪೂರ್ಣ ಪ್ರಮಾಣದ ಮಾಹಿತಿಯನ್ನು ಇದರಿಂದ ತಿಳಿದುಕೊಳ್ಳಬಹುದಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ವಾಹನದ ನೋಂದಣಿ, ಮಾಲೀಕರ ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಮೂಲಕ ತಿಳಿದುಕೊಳ್ಳಲು ಸಾಧ್ಯವಿದ್ದು, ಹೊಸ ಮಾದರಿಯ ನಂಬರ್ ಪ್ಲೇಟ್‌ಗಳಿಗೆ ಕೇಂದ್ರ ಸರ್ಕಾರವು 15 ವರ್ಷಗಳ ವಾರಂಟಿ ನೀಡುತ್ತಿದೆ.

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಜೊತೆಗೆ ಕಾರುಗಳ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಗೂ ಬ್ರೇಕ್ ಬೀಳಲಿದ್ದು, ಈ ಮೂಲಕ ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ಕಾರುಗಳಿಗಾಗಿ ನಂಬರ್ ಪ್ಲೇಟ್‌ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ಕಾರು ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.

MOST READ: ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಆದ್ರೆ ಹೊಸ ವಾಹನಗಳಿಗೆ ನೀಡಲಾಗಿರುವ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಮಾಹಿತಿಯನ್ನು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸಾಫ್ಟ್‌ವೇರ್‌ನಲ್ಲಿ ಸರಿಯಾಗಿ ದಾಖಲೆ ಮಾಡದಿರುವುದು ಗೊಂದಕ್ಕೆ ಕಾರಣವಾಗಿದ್ದು, ಮುಂದಿನ ಒಂದು ವಾರದೊಳಗೆ ಎಲ್ಲಾ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Most Read Articles

Kannada
English summary
Registration of all new cars and motorcycles stopped. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X