Just In
- 11 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 12 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 14 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 15 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೆನಾಲ್ಟ್ ಕ್ಯಾಪ್ಚರ್ ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ..!
ಎಸ್ಯುವಿ ವಿಭಾಗದಲ್ಲಿ ಭಾರೀ ನೀರಿಕ್ಷೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರೆನಾಲ್ಟ್ ಕ್ಯಾಪ್ಚರ್ ಕಾರುಗಳು ಹೇಳಿಕೊಳ್ಳುವಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಸುಳ್ಳಲ್ಲ. ಹೀಗಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕ್ಯಾಪ್ಚರ್ ಕಾರು ಖರೀದಿ ಮೇಲೆ ಮೇಲೆ ಹೊಸ ಆಫರ್ಗಳನ್ನು ಘೋಷಣೆ ಮಾಡಲಾಗಿದೆ.
ಕ್ಯಾಪ್ಚರ್ ಕಾರುಗಳು ಸದ್ಯ ವಿವಿಧ 7 ವೆರಿಯಂಟ್ ಜೊತೆಗೆ 5 ಪ್ರಮುಖ ಬಣ್ಣಗಳ ಆಯ್ಕೆಯೊಂದಿಗೆ ಗ್ರಾಹಕರನ್ನು ಸಳೆಯುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ. ಹೀಗಿದ್ದರೂ ನೀದಿಷ್ಟ ಮಟ್ಟದ ಬೇಡಿಕೆ ಪಡೆಯುವಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದು, ಈ ಕಾರಣಕ್ಕೆ ಹೊಸ ಕ್ಯಾಪ್ಚರ್ ಖರೀದಿ ಮೇಲೆ ಬರೋಬ್ಬರಿ ರೂ.81 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದೆ.
ಡಿಸ್ಕೌಂಟ್ ದರಗಳು ವೆರಿಯೆಂಟ್ಗಳ ಮೇಲೆ ನಿರ್ಧಾರವಾಗಲಿದ್ದು, ಇದು ಒಂದು ನಗರದಿಂದ ಮತ್ತೊಂದು ನಗರಕ್ಕೂ ಸಹ ಬೇರೆ ಬೇರೆ ದರ ಅನ್ವಯವಾಗುತ್ತವೆ. ಇದರಲ್ಲಿ ಹೈ ಎಂಡ್ ಮಾದರಿಯ ಪ್ಲ್ಯಾಟೆನಿ ಡೀಸೆಲ್ ಮಾದರಿಯ ಮೇಲೆ ಗರಿಷ್ಠ ಡಿಸ್ಕೌಂಟ್ ದೊರೆತಲ್ಲಿ ಆರಂಭಿಕ ಮಾದರಿಯಾದ ಆರ್ಎಕ್ಸ್ಇ ಪೆಟ್ರೋಲ್ ವರ್ಷನ್ ಮೇಲೆ ಕಡಿಮೆ ಪ್ರಮಾಣದ ಡಿಸ್ಕೌಂಟ್ ಅನ್ವಯವಾಗುತ್ತೆ.
ಕಡಿಮೆ ಬೆಲೆಗಳಲ್ಲೇ ಕ್ಯಾಪ್ಚರ್ ಎಸ್ಯುವಿ ಕಾರುಗಳಲ್ಲಿ ಆಲ್ ವಿಲ್ಹ್ ಡ್ರೈವ್ ಟೆಕ್ನಾಲಜಿ ಸೌಲಭ್ಯವನ್ನು ಒದಗಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಶುರು ಮಾಡಿರುವ ರೆನಾಲ್ಟ್ ಸಂಸ್ಥೆಯು, ಕ್ಯಾಪ್ಚರ್ ಕಾರಿನ ಆರಂಭಿಕ ಬೆಲೆಯನ್ನು ದೆಹಲಿ ಎಕ್ಸ್ಶೋರಂ ಪ್ರಕಾರ ಆರಂಭಿಕವಾಗಿ ರೂ.10 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್ ಅನ್ನು ರೂ.13.25 ಲಕ್ಷಕ್ಕೆ ನಿಗದಿಗೊಳಿಸಿದೆ.
ರೆನಾಲ್ಟ್ ನಿರ್ಮಾಣದ ಮೊದಲ ಕ್ರಾಸ್ ಓವರ್ ಆವೃತ್ತಿಯಾಗಿರುವ ಕ್ಯಾಪ್ಚರ್ ಕಾರುಗಳು ಉಳಿದೆಲ್ಲಾ ಮಧ್ಯಮ ಗಾತ್ರದ ಎಸ್ಯುವಿಯಲ್ಲೇ ಉತ್ತಮ ಚಾರ್ಸಿ ವ್ಯವಸ್ಥೆಯನ್ನು ಹೊಂದಿರುವ ಕಾರು ಮಾದರಿಯಾಗಿದ್ದು, ಆರಂಭದಲ್ಲಿ ಹ್ಯುಂಡೈ ಕ್ರೇಟಾ ಹಾಗೂ ಟಾಟಾ ಹೆಕ್ಸಾ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಿತ್ತು. ಆದ್ರೆ ಇತ್ತೀಚೆಗೆ ಕ್ಯಾಪ್ಚರ್ ಕಾರಿನ ಬೇಡಿಕೆಯಲ್ಲಿ ಇಳಿಕೆಯಾಗುತ್ತಿದ್ದು, ಹೀಗಾಗಿ ಕಾರು ಖರೀದಿಗಾಗಿ ಅತ್ಯುತ್ತಮ ಆಫರ್ ಘೋಷಣೆ ಮಾಡಲಾಗಿದೆ.
ಈ ಮೂಲಕ ಎಸ್ಯುವಿ ಪ್ರಿಯರನ್ನು ಸೆಳೆಯಲು ಸಜ್ಜುಗೊಂಡಿರುವ ರೆನಾಲ್ಟ್ ಕ್ಯಾಪ್ಚರ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಯಂತೆ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.
ಕಾರು ಮಾದರಿಗಳು ಮತ್ತು ಕಾರಿನ ಬೆಲೆ(ದೆಹಲಿ ಎಕ್ಸ್ಶೋರಂ ಪ್ರಕಾರ)
ಕ್ಯಾಪ್ಚರ್ ಆರ್ಎಕ್ಸ್ಇ ಪೆಟ್ರೋಲ್ -ರೂ. 10 ಲಕ್ಷ
ಕ್ಯಾಪ್ಚರ್ ಆರ್ಎಕ್ಸ್ಎಲ್ ಪೆಟ್ರೋಲ್ -ರೂ. 11.08 ಲಕ್ಷ
ಕ್ಯಾಪ್ಚರ್ ಆರ್ಎಕ್ಸ್ಟಿ ಪೆಟ್ರೋಲ್ -ರೂ. 11.46 ಲಕ್ಷ
ಕ್ಯಾಪ್ಚರ್ ಆರ್ಎಕ್ಸ್ಇ ಡೀಸೆಲ್ - 11 ಲಕ್ಷ
ಕ್ಯಾಪ್ಚರ್ ಆರ್ಎಕ್ಸ್ಎ ಡೀಸೆಲ್ -ರೂ. 12.48 ಲಕ್ಷ
ಕ್ಯಾಪ್ಚರ್ ಆರ್ಎಕ್ಸ್ಟಿ ಡೀಸೆಲ್ -ರೂ. 12.67 ಲಕ್ಷ
ಕ್ಯಾಪ್ಚರ್ ಪ್ಲ್ಯಾಟಿನಿ ಡಿಸೇಲ್ -ರೂ. 13.25 ಲಕ್ಷ
ಎಂಜಿನ್ ಸಾಮರ್ಥ್ಯ
ಡಸ್ಟರ್ ಕಾರು ಮಾದರಿಯಲ್ಲೇ ಕ್ಯಾಪ್ಚರ್ ಕಾರುಗಳು ಕೂಡಾ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಪೆಟ್ರೋಲ್ ಕಾರುಗಳು 105-ಬಿಎಚ್ಪಿ, 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡೀಸೆಲ್ ಕಾರುಗಳು 119-ಬಿಎಚ್ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.
ಜೊತೆಗೆ ಪೆಟ್ರೋಲ್ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಒದಗಿಸಲಾಗಿದ್ದು, ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್, 17-ಇಂಚಿನ ಅಲಾಯ್ ಚಕ್ರಗಳನ್ನು ಅಳವಡಿಕೆ ಮಾಡಲಾಗಿದೆ.
MOST READ: ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!
ಇನ್ನು ಒಳ ಮತ್ತು ಹೊರ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ರೆನಾಲ್ಟ್ ಸಂಸ್ಥೆಯು, 310-ಲೀಟರ್ ಬೂಟ್ ಸ್ಪೆಸ್, 50 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ವೈಶಿಷ್ಟ್ಯತೆಗಳು
ಡ್ಯುಯಲ್ ಟೋನ್ ಬಣ್ಣದೊಂದಿಗೆ ಹೊಸ ಲುಕ್ ಪಡೆದುಕೊಂಡಿರುವ ಕ್ಯಾಪ್ಚರ್ ಕಾರುಗಳು ಬ್ಲ್ಯಾಕ್ ಆ್ಯಂಡ್ ವೈಟ್ ಥೀಮ್ ಪಡೆದಿವೆ. ಜೊತೆಗೆ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲರ್, ಬ್ಲ್ಯೂಟಥ್ ಕನೆಕ್ವಿಟಿ, ಧ್ವನಿ ನಿಯಂತ್ರಣ ಘಟಕ ಪಡೆದುಕೊಂಡಿದೆ.
MOST READ: ಸೈಕಲ್ ಗುದ್ದಿದ ರಭಸಕ್ಕೆ ಟೊಯೊಟೊ ಕಾರಿನ ಪರಿಸ್ಥಿತಿ ಹೀಗಾ ಆಗೋದು..!
ಲಭ್ಯವಿರುವ ಕಾರಿನ ಬಣ್ಣಗಳು- ಮೂನ್ ಲೈಟ್ ಸಿಲ್ವರ್, ಪ್ಲ್ಯಾನೆಟ್ ಗ್ರೇ, ಕೆಯೆನಿ ಆರೆೇಂಜ್, ಮೊಹೊಗೆನಿ ಬ್ರೌನ್ ಮತ್ತು ಪರ್ಲ ವೈಟ್
ಒಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ಎಸ್ಯುವಿ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಕ್ಯಾಪ್ಚರ್ ಕಾರುಗಳ ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕ್ಯಾಪ್ಚರ್ ಕಾರು ಯಾವ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳಲಿವೆ ಎಂಬುವುದನ್ನು ಕಾಯ್ದುನೋಡಬೇಕಿದೆ.