ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಭಾರತದಲ್ಲಿ ಭಾರೀ ಜನಪ್ರಿಯತೆ ಅಲ್ಲದ್ದಿದ್ದರೂ ಕಾರು ಮಾರಾಟದಲ್ಲಿ ಒಂದು ಹಂತದ ಯಶಸ್ವಿ ಸಾಧಿಸಿದೆ ಎನ್ನಬಹುದು. ಆದರೂ ಕೂಡಾ ಇತರೆ ಕಾರು ಉತ್ಪಾದನಾ ಸಂಸ್ಥೆಯೊಂದಿಗೆ ಹೋಲಿಕೆ ಮಾಡಿದಾಗ ಕಾರು ಮಾರಾಟದಲ್ಲಿ ಹಿಂದೆ ಬಿದ್ದಿರುವ ರೆನಾಲ್ಟ್ ಸಂಸ್ಥೆಗೆ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಕೆಲವು ಹೊಸ ನಮೂನೆಯ ಕಾರುಗಳು ಮತ್ತಷ್ಟು ಜನಪ್ರಿಯತೆ ತಂದುಕೊಡುವ ನೀರಿಕ್ಷೆಯಲ್ಲಿವೆ.

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಹೌದು, ರೆನಾಲ್ಟ್ ಇಂಡಿಯಾ ಸಂಸ್ಥೆಯು ಕಾರು ಮಾರಾಟ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಐದು ವಿನೂತನ ವಿನ್ಯಾಸದ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದೆ. ಈ ಕುರಿತು ಲೈವ್ ಮಿಂಟ್ ಮಾಧ್ಯಮ ಸಂಸ್ಥೆಯೊಂದಿಗೆ ಭವಿಷ್ಯ ಯೋಜನೆಗಳ ಬಗೆಗೆ ಮಾಹಿತಿ ಹಂಚಿಕೊಂಡಿದ್ದು, ಬಿಡುಗಡೆಯಾಗುವ ಐದು ಹೊಸ ಕಾರುಗಳಲ್ಲಿ ಹೆಚ್‌ಬಿಸಿ ಕಾನ್ಸೆಪ್ಟ್ ಮಾದರಿಯು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ರೆನಾಲ್ಟ್ ಇಂಡಿಯಾ ಸಂಸ್ಥೆಯು ಸದ್ಯ ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಡ್, ಡಸ್ಟರ್, ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಕ್ವಿಡ್ ಮತ್ತು ಡಸ್ಟರ್ ಆವೃತ್ತಿಗಳನ್ನು ಹೊರತುಪಡಿಸಿ ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳಿಗೆ ಅಷ್ಟಾಗಿ ಬೇಡಿಕೆಯಿಲ್ಲ.

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿರುವ ರೆನಾಲ್ಟ್ ಸಂಸ್ಥೆಯು, ಹೆಚ್‌ಬಿಸಿ ಎನ್ನುವ ಕಾನ್ಸೆಪ್ಟ್ ಆವೃತ್ತಿಯೊಂದನ್ನು ಬಿಡುಗಡೆಗಾಗಿ ಯೋಜನೆ ರೂಪಿಸಿದೆ.

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರ ಐದು ಆಸನ ಮಾದರಿಯಲ್ಲಿ ಬಿಡುಗಡೆಯಾಗಲಿದೆ.

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ನೋಡಲು ಆಕರ್ಷಕವಾಗಿರುವಂತೆ ತಾಂತ್ರಿಕವಾಗಿಯೂ ಬಲಿಷ್ಠವಾಗಿರುವ ಹೆಚ್‌ಬಿಸಿ ಕಾರು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, 2020ರ ಕೊನೆಯಲ್ಲಿ ಇದು ರಸ್ತೆಗಿಳಿಯಲಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಹಾಗೆಯೇ ಬಹುಬಳಕೆಯ ಕಾರು(ಎಂಪಿವಿ) ಮಾದರಿಯ ವಿಭಾಗದಲ್ಲೂ ಹೊಸ ಮಾದರಿಯೊಂದನ್ನು ಬಿಡುಗಡೆಗೆ ಸಿದ್ದವಾಗಿರುವ ರೆನಾಲ್ಟ್ ಸಂಸ್ಥೆಯು, ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಟ್ರೈಬರ್ ಎನ್ನುವ 7 ಸೀಟರ್ ಕಾರನ್ನು ಬಿಡುಗಡೆ ಮಾಡುತ್ತಿದೆ.

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ರೆನಾಲ್ಟ್ ಹೊಸ ಎಂಪಿವಿ ಟ್ರೈಬರ್ ಕಾರು ಕ್ವಿಡ್‌ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅನ್ನೇ ಆಧರಿಸಿ ಸಿದ್ದಗೊಂಡಿದ್ದು, ಕ್ವಿಡ್ ಕಾರಿಗಿಂತಲೂ ತುಸು ದೊಡ್ಡದಾಗಿರಲಿದೆ. ಹಾಗೆಯೇ ಲೊಡ್ಜಿ ಕಾರಿಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ನೀರಿಕ್ಷೆಯಲ್ಲಿದೆ.

MOST READ: 2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಹೊಸ ಟ್ರೈಬರ್ ಕಾರು 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದ್ದು, 2019ರ ಜುಲೈ ಹೊತ್ತಿಗೆ ಬಿಡುಗಡೆಯಾಗಲಿರುವ ಹೊಸ ಕಾರಿನ ಬೆಲೆಯು ರೂ. 7 ಲಕ್ಷದಿಂದ ರೂ. 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಈ ಮೇಲಿನ ಎರಡು ಹೊಸ ಬ್ರಾಂಡ್ ಹೊರತುಪಡಿಸಿ ಸದ್ಯ ಮಾರಾಟಕ್ಕೆ ಲಭ್ಯವಿರುವ ಕ್ವಿಡ್ ಆವೃತ್ತಿಯಲ್ಲಿಯೇ ಫೇಸ್‌ಲಿಫ್ಟ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಡಸ್ಟರ್ ಫೇಸ್‌ಲಿಫ್ಟ್ ಕೂಡಾ ಬಿಡುಗಡೆಯಾಗಿ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

Source: livemint

Most Read Articles

Kannada
English summary
Renault India plans to double annual sales volume by 2022, roll out 2 new models. Read in kannada.
Story first published: Saturday, April 20, 2019, 18:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X