ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಚೀನಾದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಕಾರ್ ಅನ್ನು 2022ರ ವೇಳೆಗೆ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಕೇಂದ್ರ ಸರ್ಕಾರವು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ಈ ಕಾರಣಕ್ಕಾಗಿ ಸರ್ಕಾರವು ಕಡಿಮೆ ಜಿ‍ಎಸ್‍‍ಟಿ ಸೇರಿ ಹಲವು ರೀತಿಯ ವಿನಾಯಿತಿಗಳನ್ನು ನೀಡುತ್ತಿದೆ. ಸರ್ಕಾರದ ಕ್ರಮಗಳಿಂದಾಗಿ ಎಲೆಕ್ಟ್ರಿಕ್ ವಾಹನಗಳು ನಿಧಾನವಾಗಿ ಭಾರತದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿವೆ. ಕೇಂದ್ರ ಸರ್ಕಾರದ ಕ್ರಮಗಳಿಂದ ಉತ್ತೇಜನ ಪಡೆದಿರುವ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಒಂದಾದ ಹ್ಯುಂಡೈ ಕಂಪನಿಯು ಇತ್ತೀಚಿಗೆ ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಆದರೆ ಹೆಚ್ಚಿನ ಬೆಲೆಯನ್ನು ಹೊಂದಿರುವ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಿಲ್ಲ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ಫ್ರಾನ್ಸ್ ಮೂಲದ ರೆನಾಲ್ಟ್, ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು. ರೆನಾಲ್ಟ್ ಭಾರತದಲ್ಲಿ ಕ್ವಿಡ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ಈ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮುನ್ನ ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಲು ಬೇಕಾಗಿರುವ ಮೂಲ ಸೌಕರ್ಯಗಳ ಕೊರತೆಯಿರುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ಚಾರ್ಜಿಂಗ್ ಸ್ಟೇಷನ್‍‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿಲ್ಲದ ಕಾರಣ ಈ ಸಮಯದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವುದಿಲ್ಲವೆಂಬ ಕಾರಣಕ್ಕೆ ರೆನಾಲ್ಟ್ ಕಂಪನಿಯು ಈ ತೀರ್ಮಾನಕ್ಕೆ ಬಂದಿದೆ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ರೆನಾಲ್ಟ್ ಕಂಪನಿಯು ಚೀನಾದಲ್ಲಿ ರೆನಾಲ್ಟ್ ಕಂಪನಿಯ ಎಲೆಕ್ಟ್ರಿಕ್ ಕಾರ್ ಅನ್ನು ಕೆ-ಜೆ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿದೆ. ಕೆ-ಜೆ ಎಲೆಕ್ಟ್ರಿಕ್ ಕಾರಿನಲ್ಲಿ 26.8 ಕಿ.ವ್ಯಾಟಿನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 43.3 ಬಿ‍ಹೆಚ್‍‍ಪಿ ಪವರ್ ಹಾಗೂ 125 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ಈ ಕಾರ್ ಅನ್ನು ಸಿ‍ಎಂ‍ಎಫ್ -ಎ ಪ್ಲಾಟ್‍‍ಫಾರಂನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಕ್ವಿಡ್ ಕಾರ್ ಅನ್ನು ಸಹ ಇದೇ ಪ್ಲಾಟ್ ಫಾರಂನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಎಲೆಕ್ಟ್ರಿಕ್ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

MOST READ: ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ರೆನಾಲ್ಟ್ ಕಂಪನಿಯ ಪ್ರಕಾರ ಈ ಕಾರಿನಲ್ಲಿರುವ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 271 ಕಿ.ಮೀವರೆಗೂ ಚಲಿಸಬಹುದು. ಇದು ಅದ್ಭುತವಾದ ಮೈಲೇಜ್‍‍ನಂತೆ ಕಂಡರೂ ಕಂಪನಿ ತಿಳಿಸಿರುವುದಕ್ಕಿಂತ ಕಡಿಮೆ ದೂರವನ್ನು ಕ್ರಮಿಸುವ ಸಾಧ್ಯತೆಗಳಿವೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ಎ‍‍ಸಿ ಚಾರ್ಜರ್‍‍ಗಳನ್ನು ಬಳಸಿದರೆ ಈ ಕಾರಿನಲ್ಲಿರುವ ಬ್ಯಾಟರಿಯನ್ನು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಡಿ‍‍ಸಿ ಚಾರ್ಜರ್‍‍ನಲ್ಲಿ ಈ ಬ್ಯಾಟರಿಯನ್ನು 30 ನಿಮಿಷಗಳಲ್ಲಿ 30% ನಿಂದ 80%ವರೆಗೂ ಚಾರ್ಜ್ ಮಾಡಬಹುದು. ಇಂಟಿರಿಯರ್‍‍ನಲ್ಲಿ ಹಲವಾರು ಹೊಸ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

ಈ ಕಾರಿನಲ್ಲಿ 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂಯಿದ್ದು, ಇದರ ಜೊತೆಗೆ 4 ಜಿ ವೈ-ಫೈ ಕನೆಕ್ಟಿವಿಟಿ ಹಾಗೂ ಆನ್‍‍ಲೈನ್ ಮ್ಯೂಸಿಕ್‍‍ಗಳಿವೆ. ಚೀನಾದಲ್ಲಿ ಮೂಲ ಮಾದರಿಯ ಕಾರಿನ ಬೆಲೆಯು 61,800 ಯುವಾನ್‍‍ಗಳಾಗಿದೆ. ಭಾರತದ ಮೌಲ್ಯದಲ್ಲಿ ರೂ.6.22 ಲಕ್ಷಗಳಾಗುತ್ತದೆ.

ಚೀನಾದಲ್ಲಿ ಕ್ವಿಡ್ ಎಲೆಕ್ಟ್ರಿಕ್ ಬಿಡುಗಡೆ, ಭಾರತದಲ್ಲಿ ಯಾವಾಗ?

2022ರ ವೇಳೆಗೆ ಕ್ವಿಡ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಚೀನಾದಲ್ಲಿ ಬಿಡುಗಡೆಗೊಳಿಸಲಾಗಿರುವ ಬೆಲೆಯಲ್ಲಿಯೇ ಈ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಿದರೆ, ಈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Renault Kwid Electric Launched In China - Read in kannada
Story first published: Friday, September 13, 2019, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X