ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಭಾರತದಲ್ಲಿ ಭಾರೀ ಜನಪ್ರಿಯತೆ ಅಲ್ಲದ್ದಿದ್ದರೂ ಕಾರು ಮಾರಾಟದಲ್ಲಿ ಒಂದು ಹಂತದ ಯಶಸ್ವಿ ಸಾಧಿಸಿದೆ. ಎಂಟ್ರಿ ಲೆವೆಲ್ ಕಾರು ಮಾದರಿಯಾದ ಕ್ವಿಡ್ ಕಾರು ರೆನಾಲ್ಟ್ ಸಂಸ್ಥೆಗೆ ಅತಿಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಬಹುತೇಕ ಖಚಿತವಾಗಿದೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಹೌದು, ರೆನಾಲ್ಟ್ ಇಂಡಿಯಾ ಸಂಸ್ಥೆಯು ಕಾರು ಮಾರಾಟ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಐದು ವಿನೂತನ ವಿನ್ಯಾಸದ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದೆ. ಈ ಕುರಿತು ಮಾಧ್ಯಮ ಸಂಸ್ಥೆಯೊಂದರ ಸಂವಾದ ಕಾರ್ಯಕ್ರಮದಲ್ಲಿ ಭವಿಷ್ಯದ ಯೋಜನೆಗಳ ಬಗೆಗೆ ಮಾಹಿತಿ ಹಂಚಿಕೊಂಡಿದ್ದು, ಕ್ವಿಡ್ ಫೇಸ್‌ಲಿಫ್ಟ್ ಸೇರಿದಂತೆ ಒಟ್ಟು ಐದು ಹೊಸ ಕಾರು ಆವೃತ್ತಿಗಳು ಮುಂದಿನ ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿವೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ರೆನಾಲ್ಟ್ ಇಂಡಿಯಾ ಸಂಸ್ಥೆಯು ಸದ್ಯ ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಡ್, ಡಸ್ಟರ್, ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಕ್ವಿಡ್ ಮತ್ತು ಡಸ್ಟರ್ ಆವೃತ್ತಿಗಳನ್ನು ಹೊರತುಪಡಿಸಿ ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳಿಗೆ ಅಷ್ಟಾಗಿ ಬೇಡಿಕೆಯಿಲ್ಲ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿರುವ ರೆನಾಲ್ಟ್ ಸಂಸ್ಥೆಯು, ಕ್ವಿಡ್ ಫೇಸ್‌ಲಿಫ್ಟ್ ಮತ್ತು ಕ್ವಿಡ್ ಎಲೆಕ್ಟ್ರಿಕ್ ಮತ್ತು ಡಸ್ಟರ್ ಫೇಸ್‌ಲಿಫ್ಟ್ ಸೇರಿದಂತೆ ಎರಡು ಹೊಸ ಕಾರು ಬ್ರಾಂಡ್‌ಗಳನ್ನು ಅಭಿವೃದ್ಧಿಗೊಳಿಸಿದೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಸದ್ಯ ಮಾರುಕಟ್ಟೆಯಲ್ಲಿ ಕ್ವಿಡ್ ಕಾರುಗಳು ಎಂಟ್ರಿ ಲೆವಲ್‌ನಲ್ಲಿ ಉತ್ತಮ ಬೇಡಿಕೆ ಕಂಡುಕೊಳ್ಳುತ್ತಿದ್ದು, ಫೇಸ್‌ಲಿಫ್ಟ್ ಆವೃತ್ತಿ ಮೂಲಕ ಎಂಟ್ರಿ ಲೆವಲ್ ಮಾದರಿಗಳಲ್ಲಿ ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಅನುಗುಣವಾಗಿ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ರೆನಾಲ್ಟ್ ಸಂಸ್ಥೆಯು, 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದನ್ವಯ 0.8-ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಉನ್ನತಿಕರಿಸಿದೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಜೊತೆಗೆ ಫೇಸ್‌ಲಿಫ್ಟ್ ಕ್ವಿಡ್ ಮಾದರಿಯು ಹೊಸ ನಿಯಮಗಳಿಗೆ ಅನುಸಾರವಾಗಿ ಸುರಕ್ಷಾ ಕ್ರಮಗಳನ್ನು ಹೊತ್ತುಬರಲಿದ್ದು, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಹೊಂದಿರಲಿದೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಇದರಿಂದಾಗಿ ಹೊಸ ಕಾರು ಮಾಲಿನ್ಯ ಉತ್ಪಾದನೆದಲ್ಲಿ ಗಣನೀಯ ಇಳಿಕೆ ಕಂಡಿದ್ದು, ಮೈಲೇಜ್ ಪ್ರಮಾಣದಲ್ಲೂ ತುಸು ಏರಿಕೆ ಕಂಡುಬರಲಿದೆ ಎನ್ನಲಾಗಿದೆ. ಇದರಿಂದ ಕಾರಿನ ಬೆಲೆಗಳು ತುಸು ದುಬಾರಿಯಾಗಲಿದ್ದು, ಪ್ರಸ್ತುತ ಮಾದರಿಗಿಂತ ರೂ. 80 ಸಾವಿರದಿಂದ ರೂ. 1 ಲಕ್ಷ ಹೆಚ್ಚಳವಾಗಬಹುದು ಎನ್ನಲಾಗಿದೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಬಿಡುಗಡೆಯ ಅವಧಿ(ಅಂದಾಜು)

ಮಾಹಿತಿಗಳ ಪ್ರಕಾರ ಹೊಸ ಫೇಸ್‌ಲಿಫ್ಟ್ ಕ್ವಿಡ್ ಮಾದರಿಯು ಇದೇ ವರ್ಷ ಅಕ್ಟೋಬರ್ ಇಲ್ಲವೇ ನವೆಂಬರ್ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ರೆನಾಲ್ಟ್ ಸಂಸ್ಥೆಯ ಹೊಸ ಬ್ರಾಂಡ್ ಟ್ರೈಬರ್ ಎಂಪಿವಿ ಕಾರು ರಸ್ತೆಗಿಳಿಯಲಿದೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಹೌದು, ರೆನಾಲ್ಟ್ ಹೊಸ ಎಂಪಿವಿ ಟ್ರೈಬರ್ ಕಾರು ಕ್ವಿಡ್‌ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅನ್ನೇ ಆಧರಿಸಿ ಸಿದ್ದಗೊಂಡಿದ್ದು, ಕ್ವಿಡ್ ಕಾರಿಗಿಂತಲೂ ತುಸು ದೊಡ್ಡದಾಗಿರಲಿದೆ. ಹಾಗೆಯೇ ಲೊಡ್ಜಿ ಕಾರಿಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ನೀರಿಕ್ಷೆಯಲ್ಲಿದೆ.

ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾದ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ಹೊಸ ಟ್ರೈಬರ್ ಕಾರು 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದ್ದು, 2019ರ ಜುಲೈ ಹೊತ್ತಿಗೆ ಬಿಡುಗಡೆಯಾಗಲಿರುವ ಹೊಸ ಕಾರಿನ ಬೆಲೆಯು ರೂ. 7 ಲಕ್ಷದಿಂದ ರೂ. 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: Teambhp

Most Read Articles

Kannada
English summary
2019 Renault Kwid Facelift Spotted Testing. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X