ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ಕೂಪೆ ರೀತಿಯ ಎಸ್‍‍ಯು‍‍ವಿ ವಾಹನಗಳು ನಿಧಾನವಾಗಿ ಜನಪ್ರಿಯವಾಗುತ್ತಿವೆ. ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿ ರೆನಾಲ್ಟ್ ತನ್ನ ಪೋರ್ಷೆ ಕಯೆನ್ ಕಾರುಗಳಿಂದಾಗಿ ಜನಪ್ರಿಯತೆಯನ್ನು ಪಡೆದಿದೆ. 2018ರ ಮಾಸ್ಕೋದ ಆಟೋ ಶೋದಲ್ಲಿ ತನ್ನ ಅರ್ಕಾನಾ ಕೂಪೆ ಎಸ್‍‍ಯು‍‍ವಿಯನ್ನು ಅನಾವರಣಗೊಳಿಸಿತ್ತು.

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರೆನಾಲ್ಟ್ ಕಂಪನಿಯು ಈಗ ರಷ್ಯಾದಲ್ಲಿ ಕೂಪೆ ಎಸ್‍‍ಯು‍‍ವಿ ವಾಹನದ ಉತ್ಪಾದನಾ ಮಾದರಿಯನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೂ ಬಿಡುಗಡೆ ಮಾಡಲಿದೆ. ರೆನಾಲ್ಟ್ ಅರ್ಕಾನಾ ಕೂಪೆ ಎಸ್‍‍ಯು‍‍ವಿ ಭಾರತದಲ್ಲಿ ಲಭ್ಯವಿರುವ ರೆನಾಲ್ಟ್ ಕ್ಯಾಪ್ಚರ್‍‍ನಂತೆಯೇ ಇದೆ. ಈ ವಾಹನವು 4.5 ಮೀಟರ್ ಉದ್ದವಿದೆ. ಈ ವಾಹನವು ಸಿ ಸೆಗ್‍‍ಮೆಂಟಿನ ಕಾಂಪ್ಯಾಕ್ಟ್ ಎಸ್‍‍ಯುವಿಯಾಗಿದೆ.

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ಅರ್ಕಾನಾ ಕೂಪೆ ಎಸ್‍‍ಯುವಿ ವಾಹನದಲ್ಲಿ 1.3 ಲೀಟರಿನ ಟಿಸಿ‍ಇ ಪೆಟ್ರೋಲ್ ಇಂಜಿನ್ ಇದ್ದು, 148 ಬಿಹೆಚ್‍‍ಪಿ ಪವರ್ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಎಕ್ಸ್-ಟ್ರಾನಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ರೆನಾಲ್ಟ್ ಅರ್ಕಾನಾ ಕೂಪೆ ವಾಹನದಲ್ಲಿ 4‍‍‍‍X4 ವ್ಹೀಲ್ ಡ್ರೈವ್ ಸಿಸ್ಟಂ ಇದ್ದು, ಇದನ್ನು ರೆನಾಲ್ಟ್, ನಿಸ್ಸಾನ್ ಹಾಗೂ ಮಿಟ್ಸುಬಿಷಿ ಕಂಪನಿಗಳು ತಯಾರಿಸಿವೆ. ಅರ್ಕಾನಾ ಕೂಪೆ ಎಸ್‍‍ಯುವಿಯು ರೆನಾಲ್ಟ್ ಕ್ಯಾಪ್ಚರ್‍‍ನಂತೆಯೇ ಕಂಡರೂ ವಿಭಿನ್ನವಾದ ಪರಿಕರಗಳನ್ನು ಅಳವಡಿಸಲಾಗಿದೆ.

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ಸಿ - ಶೇಪಿನ ಎಲ್‍ಇ‍‍ಡಿ ಡಿ‍ಆರ್‍ಎಲ್ ಗಳು ಇದರಲ್ಲಿರುವ ಮುಖ್ಯ ಪರಿಕರವಾಗಿದ್ದು, ಆಲ್ ಎಲ್‍ಇ‍ಡಿ ಹೆಡ್‍‍ಲ್ಯಾಂಪ್‍‍ಗಳು ಅಂದವಾಗಿವೆ. ಹೊಸ ರೆನಾಲ್ಟ್ ಅರ್ಕಾನಾ ಕೂಪೆ ಎಸ್‍‍ಯುವಿಯಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್ ಹಾಗೂ ಆಂಗ್ಯುಲರ್ ಬಂಪರ್‍‍ಗಳಿವೆ. ಟ್ಯಾಪರಿಂಗ್ ರೂಫ್ ಲೈನ್ ಹಾಗೂ ಪನೋರಾಮಿಕ್ ಗ್ಲಾಸ್ ರೂಫ್ ಗಳು ಈ ಎಸ್‍‍ಯುವಿಗೆ ಹೊಸತನವನ್ನು ನೀಡುತ್ತವೆ, ದೊಡ್ಡದಾದ ವ್ಹೀಲ್ ಆರ್ಕ್‍ಗಳು 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಕವರ್ ಮಾಡುತ್ತವೆ. ಈ ಕಾಂಪ್ಯಾಕ್ಟ್ ಎಸ್‍‍ಯುವಿಯ ಸುತ್ತಲೂ ಕ್ಲಾಡಿಂಗ್ ಹಾಗೂ ಸಿಲ್ವರ್ ಕ್ಯಾರಿಯೇಜ್ ಪ್ಲೇಟ್‍‍ಗಳಿವೆ.

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ರೆನಾಲ್ಟ್ ಅರ್ಕಾನಾ ಕೂಪೆ ಎಸ್‍‍ಯುವಿಯಲ್ಲಿ ಹೆಚ್ಚಿನ ಸ್ಥಳವಿರುವ ಕ್ಯಾಬಿನ್, ಹೊಸ ಬಗೆಯ ಮಲ್ಟಿಮೀಡಿಯಾ ಸಿಸ್ಟಂ ಹಾಗೂ ಮಲ್ಟಿ ಸೆನ್ಸ್ ಸೆಟ್ಟಿಂಗ್‍‍ಗಳಿವೆ. ಈ ಸೆಂಟ್ರಲ್ ಕಂಸೋಲ್‍‍ನಲ್ಲಿ 8 ಇಂಚಿನ ಟಚ್‍‍ಸ್ಕ್ರೀನ್ ಇಂಟರ್‍‍ಫೇಸ್ ಇದ್ದು, ಮಲ್ಟಿ ಮೀಡಿಯಾ ಸಿಸ್ಟಂಗೆ ಸುಲಭವಾಗಿ ಲಿಂಕ್ ಮಾಡುತ್ತದೆ. ಇದು ಆಂಡ್ರಾಯಿಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ರಷ್ಯಾದ ಯಾಂಡೆಕ್ಸ್ ಆಟೋಗಳಿಗೆ ಸಪೋರ್ಟ್ ಮಾಡುತ್ತದೆ.

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ಇದರಲ್ಲಿರುವ ಮಲ್ಟಿ ಸೆನ್ಸ್ ಟೆಕ್ನಾಲಜಿ ಚಾಲಕರಿಗೆ - ಇಕೋ, ಸ್ಪೋರ್ಟ್ ಹಾಗೂ ಮೈ ಸೆನ್ಸ್ ಎಂಬ ಮೂರು ಡ್ರೈವಿಂಗ್ ಮೋಡ್‍‍ಗಳನ್ನು ನೀಡುತ್ತದೆ. ರೆನಾಲ್ಟ್ ನ ಅರ್ಕಾನಾ ಕೂಪೆ ಎಸ್‍‍ಯು‍‍ವಿಯ ಇಂಟಿರಿಯರ್‍‍ನಲ್ಲಿ ಎಂಟು ವಿವಿಧ ಬಗೆಯ ಬಣ್ಣಗಳಿವೆ. ಈ ವಾಹನದಲ್ಲಿರುವ ಬೂಟ್ ಸ್ಪೇಸ್ ವಿಸ್ತೀರ್ಣವು 508 ಲೀಟರ್ಸ್ ಆಗಿದ್ದು, ಹಿಂಬದಿಯ ಸೀಟುಗಳನ್ನು ಮಡುಚಿದಾಗ 1333 ಲೀಟರ್ಸ್‍‍‍ನಷ್ಟಾಗುತ್ತದೆ.

MOST READ: ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ರೆನಾಲ್ಟ್ ಕಂಪನಿಯು, ಅರ್ಕಾನಾ ಕೂಪೆಯನ್ನು ರಷ್ಯಾದಲ್ಲಿ ಬಿಡುಗಡೆ ಮಾಡುತ್ತಿದ್ದು, ಭಾರತದಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾಂಪ್ಯಾಕ್ಟ್ ಎಸ್‍‍ಯು‍‍ವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದರೆ ರೆನಾಲ್ಟ್ ಕ್ಯಾಪ್ಚರ್ ನಲ್ಲಿರುವಂತಹ 1.5 ಲೀಟರಿನ ಹೆಚ್4ಕೆ ಎಂಜಿನ್ ಅನ್ನು ಹೊಂದಿರುವ ಸಾಧ್ಯತೆಗಳಿವೆ. ಈ ಎಂಜಿನ್‍ 105 ಬಿಹೆಚ್‍‍ಪಿ ಪವರ್ ಹಾಗೂ 142 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅರ್ಕಾನಾ ಕೂಪೆ ಎಸ್‍‍ಯುವಿ ನೋಡಲು ಆಕರ್ಷಕವಾಗಿದ್ದು, ಎಲ್ಲರ ಗಮನವನ್ನು ತನ್ನತ್ತ ಸೆಳೆಯಲಿದೆ. ಕಾಂಪ್ಯಾಕ್ಟ್ ಎಸ್‍‍ಯುವಿ ಮಾರುಕಟ್ಟೆಯ ಮೇಲೆಯೇ ಎಲ್ಲಾ ಕಾರು ತಯಾರಕರ ಗಮನವಿರುವುದನ್ನು ಮನಗೊಂಡಿರುವ ರೆನಾಲ್ಟ್ ಈ ಎಸ್‍‍ಯುವಿಯನ್ನು ತಯಾರಿಸಿದೆ. ರೆನಾಲ್ಟ್ ಈ ವಾಹನವನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ, ಬಿಡುಗಡೆಯಾದ ನಂತರ ಡಸ್ಟರ್ ವಾಹನದಂತೆಯೇ ಈ ವಾಹನವು ಯಶಸ್ವಿಯಾಗುವ ನಿರೀಕ್ಷೆಯಿದೆ.

Most Read Articles

Kannada
English summary
Renault Launches Arkana Coupe SUV In Russia — Could Be India Bound - Read in kannada
Story first published: Saturday, May 25, 2019, 17:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X