ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ರೆನಾಲ್ಟ್ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕ್ವಿಡ್ ಫೇಸ್‌ಲಿಫ್ಟ್ ಆವೃತ್ತಿಯನ್ನು ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬೆಲೆಯು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.83 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಮಾರುತಿ ಸುಜುಕಿ ನಿರ್ಮಾಣದ ಎಸ್-ಪ್ರೆಸ್ಸೊ ಬಿಡುಗಡೆಯಾದ ಬೆನ್ನಲ್ಲೇ ರೆನಾಲ್ಟ್ ಕ್ವಿಡ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಬೆಲೆ ವಿಚಾರವಾಗಿ ಎಂಟ್ರಿ ಲೆವಲ್ ಕಾರು ಮಾದರಿಗಳಲ್ಲಿ ಕ್ವಿಡ್ ಫೇಸ್‌ಲಿಫ್ಟ್ ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಕ್ವಿಡ್ ಫೇಸ್‌ಲಿಫ್ಟ್ ಆವೃತ್ತಿಯು ಸ್ಟ್ಯಾಂಡರ್ಡ್ ಮತ್ತು ಕ್ಲಿಂಬರ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಪ್ರಮುಖ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ವಿವಿಧ ಮಾದರಿಯ ಬೆಲೆಗಳನ್ನು ಪಡೆದುಕೊಂಡಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ಕ್ವಿಡ್ ಮಾದರಿಯು ಫೇಸ್‌ಲಿಫ್ಟ್ ಮೂಲಕ ಮತ್ತಷ್ಟು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.2.83 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.4.84 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಸ್ಟ್ಯಾಂಡರ್ಡ್ ಮಾದರಿಯಲ್ಲಿ 0.8-ಲೀಟರ್ ಸಾಮರ್ಥ್ಯದ ಎಸ್‌ಟಿಡಿ 0.8 ಲೀಟರ್, ಆರ್‌ಎಕ್ಸ್ಇ 0.8 ಲೀಟರ್, ಆರ್‌ಎಕ್ಸ್ಎಲ್ 0.8 ಲೀಟರ್, ಆರ್‌ಎಕ್ಸ್‌ಟಿ 0.8 ಲೀಟರ್, ಆರ್‌ಎಕ್ಸ್‌ಟಿ 1.0-ಲೀಟರ್, ಆರ್‌ಎಕ್ಸ್‌ಟಿ ಇಸಿ-ಆರ್ ಮತ್ತು ಕ್ಲಿಂಬರ್ ಆವೃತ್ತಿಯಲ್ಲಿ ಕ್ಲಿಂಬರ್ ಎಟಿ, ಕ್ಲಿಂಬರ್ ಇಸಿ-ಆರ್ ಆವೃತ್ತಿಗಳನ್ನು ಖರೀದಿಸಬಹುದು.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಕ್ವಿಡ್ ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು ಬೆಲೆಗಳು
ಎಸ್‌ಟಿಡಿ 0.8 ಲೀಟರ್ ರೂ. 2.83 ಲಕ್ಷ
ಆರ್‌ಎಕ್ಸ್ಇ 0.8 ಲೀಟರ್ ರೂ. 3.53 ಲಕ್ಷ
ಆರ್‌ಎಕ್ಸ್ಎಲ್ 0.8 ಲೀಟರ್ ರೂ. 3.83 ಲಕ್ಷ
ಆರ್‌ಎಕ್ಸ್‌ಟಿ 0.8 ಲೀಟರ್ ರೂ. 4.13 ಲಕ್ಷ
ಆರ್‌ಎಕ್ಸ್‌ಟಿ 1.0-ಲೀಟರ್ ರೂ. 4.33 ಲಕ್ಷ
ಆರ್‌ಎಕ್ಸ್‌ಟಿ ಇಸಿ-ಆರ್ ರೂ. 4.63 ಲಕ್ಷ
ಕ್ಲಿಂಬರ್ ಎಂಟಿ ರೂ. 4.54 ಲಕ್ಷ
ಕ್ಲಿಂಬರ್ ಇಸಿ-ಆರ್ ರೂ. 4.84 ಲಕ್ಷ
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಕ್ವಿಡ್ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳು

ಈ ಬಾರಿ ಹಲವು ಬದಲಾವಣೆಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯಲ್ಲಿ ಸ್ಲಿಕ್ ಎಲ್ಇಡಿ ಡಿಆರ್‌ಎಸ್, ಮುಂಭಾಗದ ಬಂಪರ್‌‌ಗೆ ತಾಗುವಂತೆ ಮರುವಿನ್ಯಾಸಗೊಳಿಸಲಾದ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್‌ಅಪ್ ಈ ಬಾರಿ ಪ್ರಮುಖ ಆಕರ್ಷಣೆಯಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಹಾಗೆಯೇ ಮುಂಭಾಗದ ಗ್ರಿಲ್ ಕೂಡಾ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಗ್ರಿಲ್‌ಗೆ ಹೊಂದಿಕೊಂಡಂತೆ ನೀಡಲಾಗಿರುವ ತಿಳುವಾದ ಕ್ರೋಮ್ ಸ್ಟ್ರೀಪ್, ಏರ್ ಇನ್‌ಟೆಕ್, ಕಪ್ಪು ಬಣ್ಣದ ಫ್ಲಕ್ಸ್ ಸ್ಕಫ್ ಪ್ಲೇಟ್ ನೀಡಿರುವುದು ಎಸ್‌ಯುವಿ ಕಾರಿನ ವಿನ್ಯಾಸಕ್ಕೆ ಕಾರಣವಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಇನ್ನು ಕಾರಿನ ಸೈಡ್ ಪ್ರೋಫೈಲ್ ಬಗೆಗೆ ಹೇಳುವುದಾದರೇ ಕ್ವಿಡ್ ಫೇಸ್‌ಲಿಫ್ಟ್‌ನಲ್ಲಿ ಸ್ಟೀಲ್ ವೀಲ್ಹ್, ಕಾಟ್ರಾಸ್ಟ್ ಕಲರ್ಡ್ ಒಆರ್‌ವಿಎಂಎಸ್, ಸಿ-ಶೇಫ್ಡ್ ಎಲ್ಇಡಿ ಟೈಲ್‌ಗೆಟ್ಸ್ ಮತ್ತು ಹೊಸ ಡಿಸೈನ್ ಪ್ರೇರಿತ ರಿಯರ್ ಬಂಪರ್ ನೀಡಲಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ಕಾರಿನಲ್ಲಿ ಹೊರಭಾಗದ ವಿನ್ಯಾಸದಲ್ಲಿ ಮಾತ್ರವಲ್ಲದೇ ಒಳಭಾಗದ ವಿನ್ಯಾಸದಲ್ಲೂ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, 0.8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ರೈಬರ್‌ನಿಂದ ಎರವಲು ಪಡೆಯಲಾದ ಸ್ಟೀರಿಂಗ್ ವೀಲ್ಹ್, ಹೊಸ ವಿನ್ಯಾಸದ ಫ್ಯಾಬ್ರಿಕ್ ಸೀಟ್‌ಗಳನ್ನು ನೀಡಲಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಕ್ವಿಡ್ ಫೇಸ್‌ಲಿಫ್ಟ್ ಕಾರಿನಲ್ಲಿ ಈ ಹಿಂದಿನಂತೆಯೇ ಬಿಎಸ್-4 ವೈಶಿಷ್ಟ್ಯತೆಯ 0.8-ಲೀಟರ್(800ಸಿಸಿ) ಮತ್ತು 1.0-ಲೀಟರ್(998)ಸಿಸಿ ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಲಾಗಿದ್ದು, 0.8-ಲೀಟರ್ ಎಂಜಿನ್ ಮಾದರಿಯು 55-ಬಿಎಚ್‌ಪಿ, 72-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.0-ಲೀಟರ್ ಮಾದರಿಯು 68-ಬಿಎಚ್‌ಪಿ, 91-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

0.8-ಲೀಟರ್ ಕ್ವಿಡ್ ಮಾದರಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಮಾಡಿದ್ದರೆ 1.0-ಲೀಟರ್ ಮಾದರಿಯಲ್ಲಿ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಡ್ರೈವರ್ ಸೈಡ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸೀಟ್ ರಿಮೆಂಡರ್, ಸ್ಪೀಡ್ ಅಲರ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಕ್ಲಿಂಬರ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್ ಕೂಡಾ ಲಭ್ಯವಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಒಟ್ಟು ಆರು ಬಣ್ಣಗಳಲ್ಲಿ ಲಭ್ಯವಿರುವ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯು ಬ್ಲ್ಯೂ, ಫ್ಲೈರಿ ರೆಡ್, ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಬ್ರೊನ್ಜ್ ಮತ್ತು ಎಲೆಕ್ಟ್ರಿಕ್ ಬ್ಲ್ಯೂ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆ

ಈ ಮೂಲಕ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ವಿಶೇಷ ಎನ್ನಿಸಲಿರುವ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಹ್ಯುಂಡೈ ಸ್ಯಾಂಟ್ರೊ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಸತತ ಕುಸಿತ ಕಂಡಿರುವ ರೆನಾಲ್ಟ್ ಕಾರು ಮಾರಾಟ ಪ್ರಮಾಣವನ್ನು ಸುಧಾರಿಸಲು ಇದು ನೆರವಾಗಲಿದೆ.

Most Read Articles

Kannada
English summary
New Renault Kwid Launched In India. Read in Kannada.
Story first published: Tuesday, October 1, 2019, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X