ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ರೆನಾಲ್ಟ್ ನಿಸ್ಸಾನ್ ಅಲಾಯನ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯ ಲಘು ಕಮರ್ಷಿಯಲ್ ವೆಹಿಕಲ್ ಸೆಗ್‍‍ಮೆಂಟಿನಲ್ಲಿ ಮೊದಲ ಬಾರಿಗೆ ಅಶೋಕ್ ಲೇಲ್ಯಾಂಡ್ ಜೊತೆ ಕೈಜೋಡಿಸಿತ್ತು. ಈ ಸಹಭಾಗಿತ್ವದಲ್ಲಿ ಮೊದಲಿಗೆ ಬಂದ ಅಶೋಕ್ ಲೇಲ್ಯಾಂಡ್‍‍ನ ದೋಸ್ತ್ ವಾಹನವು ಮಾರಾಟದಲ್ಲಿ ಹೆಚ್ಚಿನ ಪ್ರಮಾಣವನ್ನು ದಾಖಲಿಸಿತ್ತು.

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಇನ್ನುಳಿದ ವಾಹನಗಳಾದ ಅಶೋಕ್ ಲೇಲ್ಯಾಂಡ್‍‍ನ ಸ್ಟೈಲ್ ಹಾಗೂ ನಿಸ್ಸಾನ್‍‍ನ ಇವಾಲಿಯಾ ವಾಹನಗಳು ವಿಫಲವಾದವು. ನಿಸ್ಸಾನ್ ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳ ಎಂಟು ವರ್ಷದ ಸಹಭಾಗಿತ್ವವು ಕಾನೂನು ಸಮರದ ಕಾರಣದಿಂದಾಗಿ 2016ರಲ್ಲಿ ಪ್ರತ್ಯೇಕವಾಯಿತು. ಸ್ಟೈಲ್ ಹಾಗೂ ಇವಾಲಿಯಾ ವಾಹನಗಳು ಸ್ಥಗಿತಗೊಂಡರೆ, ದೋಸ್ತ್ ವಾಹನವನ್ನು ಅಶೋಕ್ ಲೇಲ್ಯಾಂಡ್ ಪಡೆಯಿತು.

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ವರದಿಗಳ ಪ್ರಕಾರ, ಕಳೆದ ವರ್ಷ ನಿಸ್ಸಾನ್ ಕಂಪನಿಯು ಭಾರತೀಯ ಮಾರುಕಟ್ಟೆಯನ್ನು ಅಧ್ಯಯನ ಮಾಡಿದ್ದು, ಎಲ್‍‍ಸಿ‍‍ವಿ ಮಾರುಕಟ್ಟೆಗೆ ಪುನಃ ಪ್ರವೇಶಿಸಲಿದೆ. ಇದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆ ಮಾತನಾಡಿರುವ ರೆನಾಲ್ಟ್ ನಿಸ್ಸಾನ್ ಅಲಾಯನ್ಸ್ ಎಲ್‍‍ಸಿ‍‍ವಿ ಬಿಸಿನೆಸ್‍‍ನ ಗ್ಲೋಬಲ್ ಹೆಡ್, ಡೆನಿಸ್ ಲೇ ವೋಟ್ ರವರು ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಭಾರತೀಯ ಮಾರುಕಟ್ಟೆಯು ಕಂಪನಿಗೆ ಪ್ರಮುಖವಾಗಿದೆ. ನಿಸ್ಸಾನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಕಾರ್ಯ ಪ್ರವೃತ್ತವಾಗಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಘೋಷಿಸುವುದಾಗಿ ತಿಳಿಸಿದರು.

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ರೆನಾಲ್ಟ್ ಅಲಾಯನ್ಸ್ ಕಂಪನಿಯು ಇತ್ತೀಚಿಗೆ ಚೀನಾ ಮಾರುಕಟ್ಟೆಗಾಗಿ ಜಿನ್‍‍ಬೈ ಬ್ರಿಲಿಯನ್ಸ್ ಜೊತೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಈ ಸಹಭಾಗಿತ್ವವು ಒಳ್ಳೆಯ ಆರಂಭವನ್ನು ಪಡೆದಿದೆ. ಕಂಪನಿಯ ಮುಂದಿನ ಗುರಿ ಭಾರತದ ಮಾರುಕಟ್ಟೆಯಾಗಿದೆ. ರೆನಾಲ್ಟ್ ಕಂಪನಿಯು ಬೇರೆ ಕಂಪನಿಗಳ ಸಹಭಾಗಿತ್ವದಲ್ಲಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿದಲಿದೆಯೇ ಅಥವಾ ಏಕಾಂಗಿಯಾಗಿ ಬರಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಭಾರತದಲ್ಲಿನ ಎಲ್‍‍ಸಿ‍‍ವಿ ಮಾರುಕಟ್ಟೆಯ ಜವಾಬ್ದಾರಿಯನ್ನು ರೆನಾಲ್ಟ್ ಕಂಪನಿ ತೆಗೆದುಕೊಳ್ಳುವುದೇ ಅಥವಾ ನಿಸ್ಸಾನ್ ಕಂಪನಿ ವಹಿಸಿಕೊಳ್ಳುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಭಿವೃದ್ಧಿ ಕಾರ್ಯಗಳಿಂದಾಗಿ, ಹೈವೇಗಳ ನಿರ್ಮಾಣದಿಂದಾಗಿ, ಇ ಕಾಮರ್ಸ್ ಕ್ಷೇತ್ರದಲ್ಲಿನ ಬೆಳವಣಿಗೆಯಿಂದಾಗಿ, ಭಾರತದ ಕಮರ್ಷಿಯಲ್ ವೆಹಿಕಲ್ ಸೆಗ್‍‍‍ಮೆಂಟ್‍ ಮಾರುಕಟ್ಟೆಯು ಏರುಗತಿಯಲ್ಲಿದೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಇದರಿಂದಾಗಿ ಎಲ್‍‍ಸಿ‍‍ವಿ ವಾಹನಗಳ ಅಗತ್ಯವಾಗಿದ್ದು, ಜನರ ಬೇಡಿಕೆಯು ಹೆಚ್ಚುತ್ತಿದೆ. 2019ರ ಆರ್ಥಿಕ ವರ್ಷದಲ್ಲಿ ಎಲ್‍‍ಸಿ‍‍ವಿ ಸೆಗ್‍‍ಮೆಂಟಿನಲ್ಲಿ ಉತ್ತಮ ಬೆಳವಣಿಗೆಯಾಗಿದ್ದು ಹಿಂದಿನ ಆರ್ಥಿಕ ವರ್ಷಕ್ಕಿಂತ, 19.46%ರಷ್ಟು ಏರಿಕೆ ಕಂಡು 6,16,579 ವಾಹನಗಳನ್ನು ಮಾರಾಟ ಮಾಡಲಾಗಿದೆ.

MOST READ: ಸ್ಕೂಟರ್‍‍ನಲ್ಲಿ ಹಿಲ್ ಅಸಿಸ್ಟ್ ಫೀಚರ್ ಅಳವಡಿಸಿದ 22 ಮೋಟಾರ್ಸ್

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಎಲ್‍‍ಸಿ‍‍ವಿ ಮಾರುಕಟ್ಟೆಯು ಈ ವರ್ಷವೂ ಇದೇ ವೇಗದಲ್ಲಿ ಮುಂದುವರೆಯಲಿರುವ ಲಕ್ಷಣಗಳಿವೆ. ಟಾಟಾ ಮೋಟಾರ್ಸ್, ಮಹೀಂದ್ರಾ ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳು ಭಾರತದಲ್ಲಿನ ಎಲ್‍‍‍ಸಿ‍‍ವಿ ಸೆಗ್‍‍ಮೆಂಟಿನಲ್ಲಿರುವ ಪ್ರಮುಖ ವಾಹನ ತಯಾರಕ ಕಂಪನಿಗಳಾಗಿವೆ.

MOST READ: ಯಮಹಾ ಬಿಡಿ ಭಾಗಗಳಿಂದ ಮಾಡಿಫೈ ಆದ ಕೆ‍‍ಟಿ‍ಎಂ 390 ಡ್ಯೂಕ್

ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಈ ಸೆಗ್‍‍ಮೆಂಟಿನಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಕ್ಯಾರಿ ವಾಹನವನ್ನು ಬಿಡುಗಡೆ ಮಾಡಿದೆ. ಪ್ಯಾಸೆಂಜರ್ ವೆಹಿಕಲ್‍‍ಗಳ ದೈತ್ಯ ಕಂಪನಿಯಾದ ಮಾರುತಿ ಸುಜುಕಿ ಕ್ಯಾರಿ ವಾಹನದ ಬಿಡುಗಡೆಯೊಂದಿಗೆ ಈ ಸೆಗ್‍‍ಮೆಂಟಿನ ಮಾರುಕಟ್ಟೆಯಲ್ಲಿ 4.23% ಷೇರುಗಳನ್ನು ಹೊಂದಿದೆ. ಎಲ್‍‍ಸಿ‍‍ವಿ ಸೆಗ್‍‍ಮೆಂಟಿಗೆ ಕಾಲಿಟ್ಟ ನಂತರ ರೆನಾಲ್ಟ್ ನಿಸ್ಸಾನ್ ಕಂಪನಿಯು ಒರಗಡಂನಲ್ಲಿರುವ ಘಟಕದಲ್ಲಿ ಹೆಚ್ಚು ವಾಹನಗಳನ್ನು ತಯಾರಿಸಲಿದೆ.

Source: ETAuto

Most Read Articles

Kannada
English summary
Renault-Nissan Alliance may re-enter LCV segment in India - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X