ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಒಂದು ವಾರಗಳ ಕಾಲದ ಸಮ್ಮರ್ ಕ್ಯಾಂಪ್ ಅನ್ನು ದೇಶಾದ್ಯಂತ ಘೋಷಿಸಿದೆ. ರೆನಾಲ್ಟ್ ಸರ್ವಿಸ್ ಕ್ಯಾಂಪ್ 22ನೇ ಏಪ್ರಿಲ್ 2019ರಿಂದ ಶುರುವಾಗಲಿದ್ದು, 28 ನೇ ಏಪ್ರಿಲ್ 2019ರವರೆಗೆ ಮುಂದುವರೆಯಲಿದೆ. ಗ್ರಾಹಕರು ವಿಶೇಷ ರಿಯಾಯಿತಿಗಳನ್ನು, ಆಫರ್ ಗಳನ್ನು ಮತ್ತು ಇತರ ಸೌಲಭ್ಯಗಳನ್ನು ಈ ಕ್ಯಾಂಪ್ ನಲ್ಲಿ ಪಡೆಯಬಹುದಾಗಿದೆ.

ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ಈ ಸರ್ವಿಸ್ ಕ್ಯಾಂಪ್ ದೇಶದ್ಯಾಂತವಿರುವ 450ಕ್ಕೂ ಹೆಚ್ಚು ರೆನಾಲ್ಟ್ ಡೀಲರ್‍‍ಗಳ ಬಳಿ ಲಭ್ಯವಿರಲಿದೆ. ರೆನಾಲ್ಟ್ ಸರ್ವಿಸ್ ಕ್ಯಾಂಪ್ ನಲ್ಲಿ ಕಾರಿನ ಚೆಕ್ ಅಪ್ ನಿಂದ ಹಿಡಿದು, ಕಾರುಗಳ ಪರ್ಫಾರ್ಮೆನ್ಸಗಾಗಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು.

ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಸಮ್ಮರ್ ಕ್ಯಾಂಪಿನ ಅಂಗವಾಗಿ ಫ್ರೆಂಚ್ ಕಾರು ತಯಾರಕ ಕಂಪನಿಯು ಅನೇಕ ರಿಯಾಯಿತಿಗಳನ್ನು ನೀಡಲಿದೆ. ಅವುಗಳೆಂದರೆ ಎಂಜಿನ್ ಅಯಿಲ್ ನ ಮೇಲೆ 5% ರಿಯಾಯಿತಿ, ಎಕ್ಸ್ ಟೆಂಡೆಡ್ ವಾರಂಟಿ ಮೇಲೆ 10% ರಿಯಾಯಿತಿ, ಆಯ್ದ ಬಿಡಿ ಭಾಗಗಳ ಮೇಲೆ 10 % ರಿಯಾಯಿತಿ, ಲೇಬರ್ ಮತ್ತು ವ್ಯಾಲ್ಯೂ ಆಡೆಡ್ ಸರ್ವಿಸ್ ಮೇಲೆ 15% ರಿಯಾಯಿತಿ.

ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ಆಯ್ದ ಆಕ್ಸೆಸರೀಸ್ ಗಳ ಮೇಲೆ 50% ರಿಯಾಯಿತಿ, ಮೈ ರೆನಾಲ್ಟ್ ಆಪ್ ಹೊಂದಿರುವ ಸದಸ್ಯರಿಗೆ 5% ಹೆಚ್ಚುವರಿ ರಿಯಾಯಿತಿ, ರೋಡ್ ಸೈಡ್ ಅಸಿಸ್ಟೆನ್ಸ್ ಮೇಲೆ 10% ರಿಯಾಯಿತಿ, ಆಯ್ದ ಬ್ರಾಂಡ್ ಗಳ ಟಯರ್ ಪಂಚರ್ ಮೇಲೆ ವಿಶೇಷ ರಿಯಾಯಿತಿ ಮತ್ತು ಖಚಿತವಾದ ಬಹುಮಾನಗಳನ್ನು ನೀಡುವ ಜೊತೆಯಲ್ಲಿ ಮತ್ತಷ್ಟು ಯೋಜನೆಗಳನ್ನು ನೀಡಲಿದೆ.

ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ಬೇಸಿಗೆ ಅವಧಿಯ ಹಿನ್ನೆಲೆಯಲ್ಲಿ ರೆನಾಲ್ಟ್ ಸೇರಿದಂತೆ ನಿಸ್ಸಾನ್, ಹ್ಯುಂಡೈ, ಮರ್ಸಿಡಿಸ್ ಬೆಂಜ್ ಮತ್ತು ಮಾರುತಿ ಸುಜುಕಿ ಕಂಪನಿಗಳು ಸರ್ವಿಸ್ ಕ್ಯಾಂಪ್ ಸೌಲಭ್ಯವನ್ನು ಘೋಷಿಸಿದ್ದು, ಗ್ರಾಹಕರ ಆದ್ಯತೆಗಳಿಗೆ ಹೆಚ್ಚಿನ ಒತ್ತು ನೀಡಲು ಪ್ರತಿ ಆಟೋಮೋಬೈಲ್ ಉತ್ಪಾದನಾ ಸಂಸ್ಥೆಯು ಋತುಮಾನಕ್ಕೆ ಅನುಗುಣವಾಗಿ ಇಂತಹ ಸೇವೆಗಳನ್ನು ಒದಗಿಸುವುದು ಸಾಮಾನ್ಯವಾಗಿದೆ.

ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ಇನ್ನು ಸಮ್ಮರ್ ಕ್ಯಾಂಪಿನ ಹೊರತಾಗಿ ರೆನಾಲ್ಟ್ ತನ್ನ ಹೊಸ ಟ್ರೈಬರ್ ಎಂಪಿವಿ ಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಅಣಿಯಾಗುತ್ತಿದೆ. ರೆನಾಲ್ಟ್ ಟ್ರೈಬರ್ ಎಂಪಿವಿಯನ್ನು ಈಗಾಗಲೇ ಅನೇಕ ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದ್ದು, ಈ ವರ್ಷದ ಕೊನೆಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಫ್ರೆಂಚ್ ಕಾರು ತಯಾರಕ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸಿದೆ. ಟ್ರೈಬರ್ ಎಂಪಿವಿಯ ಜೊತೆಯಲ್ಲಿ ಹೆಚ್‍ಬಿಸಿ ಕೋಡ್ ನೇಮ್ ಹೊಂದಿರುವ ಮಧ್ಯಮ ಗಾತ್ರದ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದರ ಜೊತೆಗೆ ರೆನಾಲ್ಟ್ ಅತಿ ಹೆಚ್ಚು ಮಾರಾಟವಾಗುವ ಡಸ್ಟರ್ ಮತ್ತು ಕ್ವಿಡ್ ಗಳ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

MUST READ: ಫ್ರೀ ಕಾರ್ ಕೇರ್ ಕ್ಲಿನಿಕ್ ಯೋಜನೆ ಘೋಷಿಸಿದ ಹ್ಯುಂಡೈ

ಸಮ್ಮರ್ ಸರ್ವಿಸ್ ಕ್ಯಾಂಪ್ ಘೋಷಿಸಿದ ರೆನಾಲ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ರೆನಾಲ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಸರ್ವಿಸ್ ಕ್ಯಾಂಪ್ ನೀಡುತ್ತಿರುವ ಮತ್ತೊಂದು ಕಂಪನಿಯಾಗಿದೆ. ಈ ಸರ್ವಿಸ್ ಕ್ಯಾಂಪ್ ಗಳು ಗ್ರಾಹಕರ ಜೊತೆ ಸಂಪರ್ಕ ಸಾಧಿಸಲು ಮತ್ತು ಬ್ರಾಂಡ್ ಬಗ್ಗೆ ನಂಬಿಕೆ ಉಳಿಸಿಕೊಳ್ಳಲು ಸಹಕಾರಿಯಾಗಿವೆ. ರೆನಾಲ್ಟ್ ದೇಶಿಯ ಮಾರುಕಟ್ಟೆಯಲ್ಲಿ ಕಳೆದು ಕೊಂಡಿರುವ ಶೇರುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲ ಉತ್ಪನ್ನಗಳನ್ನು ನಿಲ್ಲಿಸುವ ಯೋಚನೆಯಲ್ಲಿದೆ.

Most Read Articles

Kannada
English summary
Renault Announces Summer Service Camp — Week Long Service Camp Starting From 22nd April - Read in Kannada
Story first published: Tuesday, April 23, 2019, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X