ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಮತ್ತು ಮಾರಾಟವಾಗುತ್ತಿರುವ ಎಂಪಿವಿ ಕಾರುಗಳಿ ಪೈಪೋಟಿ ನೀಡಲು ರೆನಾಲ್ಟ್ ಸಂಸ್ಥೆಯು ಇದೇ ವರ್ಷದ ಆಗಸ್ತ್ ಮೊದಲ ವಾರದಲ್ಲಿ ತಮ್ಮ ಟ್ರೈಬರ್ ಎಂಬ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಕಾರಿನ ಬುಕ್ಕಿಂಗ್ ಅನ್ನು ಸಹ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭಿಸಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ರೆನಾಲ್ಟ್ ಟ್ರೈಬರ್ ಎಂಪಿವಿ ಕಾರು ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಬಿಡುಗಡೆಗೂ ಮುನ್ನ ಕೊನೆಯ ಹಂತದಲ್ಲಿ ಸ್ಪಾಟ್ ಟೆಸ್ಟಿಂಗ್ ಅನ್ನು ನಡೆಸಲಾಗುತ್ತಿದೆ. ಹೀಗೆ ಸ್ಪಾಟ್ ಟೆಸ್ಟಿಂಗ್ ನಡೆಸುವ ವೇಳೆ ಕಾಣಿಸಿಕೊಂಡಿದ್ದು, ಕೆಲವು ದಿನಗಳ ಹಿಂದಷ್ಟೆ ಈ ಕಾರು ಎಷ್ಟು ವೇರೆಯಂಟ್‍‍ನಲ್ಲಿ ಲಭ್ಯವಿರಲಿದೆ ಎಂಬ ಮಾಹಿತಿಯು ಸಹ ಲಭ್ಯವಾಗಿತ್ತು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಮಾಹಿತಿಗಳ ಪ್ರಕಾರ ಹೊಸ ರೆನಾಲ್ಟ್ ಟ್ರೈಬರ್ ಎಂಪಿವಿ ಕಾರು ಕೇವಲ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಬಿಡುಗಡೆಯಾಗಲಿದ್ದು, ಗ್ರಾಹಕರ ಬೇಡಿಕೆಯೆಂತೆ ಆರ್‌ಎಕ್ಸ್ಇ, ಎರ್‌ಎಕ್ಸ್ಎಸ್, ಆರ್‌ಎಕ್ಸ್‌ಟಿ ಮತ್ತು ಎರ್‌ಎಕ್ಸ್‌ಜೆಡ್ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆಯೆಂತೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಹೊಸ ಟ್ರೈಬರ್ ಕಾರು ತಾಂತ್ರಿಕ ಸೌಲಭ್ಯಗಳ ಜೋಡಣೆಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.4 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಆವೃತ್ತಿಯು ರೂ. 5.8 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಮೂರನೇ ಸಾಲಿನ ಆಸನ ವ್ಯವಸ್ಥೆಯನ್ನು ಖರೀದಿಸುವ ಆಸಕ್ತ ಗ್ರಾಹಕರು ಹೆಚ್ಚುವರಿ ರೂ.6 ಸಾವಿರ ಪಾವತಿಸಬೇಕಿದೆ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಸದ್ಯ ರೆನಾಲ್ಟ್ ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವು ಸಂಪೂರ್ಣ ಬದಲಾವಣೆಗೊಂಡಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಅನಾವರಣಗೊಳಿಸಲಾದ ಟ್ರೈಬರ್ ಎಂಪಿವಿ ಕಾರು ಕೂಡಾ ಹೊಸ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿ ಹೊಂದಿದೆ. ಹೊಸ ಕಾರುಗಳ ಅಭಿವೃದ್ಧಿಗಾಗಿ ರೆನಾಲ್ಟ್ ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಕ್ವಿಡ್ ಮಾದರಿಯಲ್ಲೇ ಇರುವ ಟ್ರೈಬರ್ ಕಾರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ 7 ಸೀಟರ್ ಸೌಲಭ್ಯವನ್ನು ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕಾರಿನ ಉದ್ದಳತೆ ಮತ್ತು ತೂಕ ಹೊಸ ಕಾರಿನ ಮೇಲೆ

ತೆರಿಗೆ ತಗ್ಗಿಸಲು ಹೊಸ ಕಾರನ್ನು 4 ಮೀಟರ್‌ಗಿಂತಲೂ ಹೆಚ್ಚು ವಿಸ್ತರಣೆ ಮಾಡದಿರಲು ನಿರ್ಧರಿಸಿರುವ ರೆನಾಲ್ಟ್ ಸಂಸ್ಥೆಯು ಟ್ರೈಬರ್ ಕಾರನ್ನು 3,990-ಎಂಎಂ ಉದ್ದ, 1,739-ಎಂಎಂ ಅಗಲ, 1,643-ಎಂಎಂ ಎತ್ತರ, 2,636-ಎಂಎಂ ವೀಲ್ಹ್‌ಬೆಸ್ ಮತ್ತು 182-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಒದಗಿಸಿದ್ದು, ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಬಳಕೆಯಿಂದಾಗಿ ಹೊಸ ಕಾರು 947 ಕೆಜಿ ತೂಕ ಪಡೆದುಕೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಇನ್ನು ಹೊಸ ಟ್ರೈಬರ್ ಕಾರಿನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಕಾರಿನ ಒಳಾಂಗಣ ವಿನ್ಯಾಸ

ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಿಸಲಾಗಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, 7.8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಆಸನ ಸೌಲಭ್ಯ

7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ನಿರ್ಮಾಣ ಮಾಡಿಕೊಳ್ಳಬಹುದು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಎಂಜಿನ್ ಸಾಮರ್ಥ್ಯ

1.0-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಬಿಡುಗಡೆಯಾದ ನಂತರವಷ್ಟೇ ಗ್ರಾಹಕರ ಬೇಡಿಕೆ ಮೇರೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೆನಾಲ್ಟ್ ಟ್ರೈಬರ್ ಎಂಪಿವಿ

ಸುರಕ್ಷಾ ಸೌಲಭ್ಯಗಳು

ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್, ಕೀ ಲೆಸ್ ಎಂಟ್ರಿ, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ಗಳನ್ನು ನೀಡಲಾಗಿದೆ.

Source: Team BHP

Most Read Articles

Kannada
English summary
Renault Triber MPV Spotted While Testing. Read In Kannada
Story first published: Tuesday, July 16, 2019, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X