ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟ್ರೈಬರ್ ಮಿನಿ ಎಂಪಿವಿ ಕಾರಿನ ಕೆಲವು ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಿರುವ ರೆನಾಲ್ಟ್ ಸಂಸ್ಥೆಯು ಬೆಲೆಯಲ್ಲೂ ಕೂಡಾ ತುಸು ಹೆಚ್ಚಳ ಮಾಡಿದೆ.

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಹೌದು, ರೆನಾಲ್ಟ್ ಸಂಸ್ಥೆಯು ಟ್ರೈಬರ್ ಟಾಪ್ ಎಂಡ್ ಮಾದರಿಯಾದ ಆರ್‌ಎಕ್ಸ್‌ಜೆಡ್ ವೆರಿಯೆಂಟ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಇದರೊಂದಿಗೆ ರೂ.4 ಸಾವಿರ ಹೆಚ್ಚುವರಿ ದರ ನಿಗದಿಪಡಿಸಿದೆ. ಇದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಟ್ರೈಬರ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 4.95 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.6.53 ಲಕ್ಷಕ್ಕೆ ಬದಲಾವಣೆಗೊಳಿಸಲಾಗಿದೆ.

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಟ್ರೈಬರ್ ಕಾರು ಸದ್ಯ ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಎಸ್ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಟಾಪ್ ಎಂಡ್ ಮಾದರಿಯಾದ ಆರ್‌ಎಕ್ಸ್‌ಜೆಡ್ ಆವೃತ್ತಿಯಲ್ಲಿ ಮಾತ್ರವೇ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಲಾಗಿದೆ.

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಇನ್ನುಳಿದಂತೆ ಯಾವುದೇ ವೆರಿಯೆಂಟ್‌ಗಳಲ್ಲೂ ಬೆಲೆ ಮತ್ತು ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡದ ರೆನಾಲ್ಟ್ ಸಂಸ್ಥೆಯು ಈ ಹಿಂದಿನಂತೆಯೇ ಮುಂದುವರಿಸಿದ್ದು, ಬಹುತೇಕ ಪ್ರೀಮಿಯಂ ಫೀಚರ್ಸ್‌ಗಳನ್ನು ಹೈ ಎಂಡ್ ಮಾದರಿಯಲ್ಲಿ ಖರೀದಿಗೆ ಲಭ್ಯವಿವೆ.

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಇನ್ನು ಟ್ರೈಬರ್ ಎಂಪಿವಿ ಆವೃತ್ತಿಯು ರೆನಾಲ್ಟ್ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಕ್ವಿಡ್ ಮತ್ತು ಡಸ್ಟರ್ ಕಾರುಗಳನ್ನು ಮಾರಾಟ ಪ್ರಮಾಣವನ್ನು ಹಿಂದಿಕ್ಕಿ ಅತಿ ಕಡಿಮೆ ಅವಧಿಯಲ್ಲಿ 10 ಸಾವಿರ ಯುನಿಟ್ ಮಾರಾಟ ಗುರಿತಲುಪಿದೆ.

ಈ ಮೂಲಕ ಎಂಟ್ರಿ ಲೆವಲ್ ಕಾರುಗಳಲ್ಲಿ ವಿಭಿನ್ನ ಎನ್ನಿಸುವ ಹೊಸ ಟ್ರೈಬರ್ ಕಾರು ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ಪವರ್ ವಿಂಡೋ, ಕೀ ಲೆಸ್ ಎಂಟ್ರಿ, ಮೂರು ಸಾಲುಗಳಲ್ಲೂ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ ಮತ್ತು ರಿಯರ್ ವಾಷ್ ವೈಪರ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಣೆ ಹೊಂದಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಟ್ರೈಬರ್ ಕಾರಿನ ಟಾಪ್ ಎಂಡ್‌ನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ ಮತ್ತು ಇನ್ನುಳಿದ ಆವೃತ್ತಿಗಳಲ್ಲಿ 14-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

MOST READ: ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಆಸನ ಸೌಲಭ್ಯ

7-ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ಅನುಕೂಲ ಮಾಡಿಕೊಳ್ಳಬಹುದು. ಹೀಗಾಗಿ ಮೂರನೇ ಸಾಲನ್ನು ಮಡಿಕೆ ಮಾಡಿದ್ದಲ್ಲಿ 625-ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದ್ದು, ಬೇಡವಾದಲ್ಲಿ 84-ಲೀಟರ್‌ನಷ್ಟು ಸ್ಥಳಾವಕಾಶ ಸಿಗಲಿದೆ.

MOST READ: ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಎಂಜಿನ್ ಸಾಮರ್ಥ್ಯ

ಸದ್ಯಕ್ಕೆ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಟರ್ಬೋ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿದೆ.

MOST READ: ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಟ್ರೈಬರ್‌ನಲ್ಲಿ ತಾಂತ್ರಿಕ ಬದಲಾವಣೆಯೊಂದಿಗೆ ಬೆಲೆ ಹೆಚ್ಚಳ ಮಾಡಿದ ರೆನಾಲ್ಟ್

ಸುರಕ್ಷಾ ಸೌಲಭ್ಯಗಳು

ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Renault has added new 15 inch wheels and meatier tyres in Triber MPV's top variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X