ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ರೆಜ್ವಾನಿ ಟ್ಯಾಂಕ್ ಅನ್ನು ಕಳೆದ ವಾರ ಟೀಸ್ ಮಾಡಲಾಗಿತ್ತು. ಈ ಟ್ಯಾಂಕ್ ಹೇಗಿರಲಿದೆ ಎಂಬ ಬಗ್ಗೆ ಕುತೂಹಲವಿತ್ತು. ಈ ಕುತೂಹಲಕ್ಕೆ ತೆರೆಬಿದ್ದಿದ್ದು, ಟ್ಯಾಂಕ್ ಅನ್ನು ಅನಾವರಣಗೊಳಿಸಲಾಗಿದೆ. ಇದು ದೊಡ್ಡ ಗಾತ್ರದಲ್ಲಿದ್ದು, ನೋಡುಗರ ಗಮನವನ್ನು ತನ್ನತ್ತ ಸೆಳೆಯಲಿದೆ.

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಹೊಸ ಮಾದರಿಯಾದ 2020ರ ರೆಜ್ವಾನಿ ಟ್ಯಾಂಕ್ ಹಲವು ಅಂಶಗಳನ್ನು ಹೊಂದಿದೆ. ಈಗ ಈ ವಾಹನದ ಬಗ್ಗೆಯೇ ಮಾತನಾಡಲಾಗುತ್ತಿದೆ. ಈ ವಾಹನದಲ್ಲಿ 6.2 ಲೀಟರಿನ ವಿ8 ಸೂಪರ್‍‍ಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 1000 ಬಿ‍‍ಹೆಚ್‍‍ಪಿ ಪವರ್ ಹಾಗೂ 1180 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಈ ಅಂಕಿ ಅಂಶಗಳಿಂದಾಗಿ ಈ ವಾಹನವು ಎಷ್ಟು ಬಲಶಾಲಿಯಾಗಿದೆ ಎಂಬುದು ತಿಳಿಯುತ್ತದೆ. ರೆಜ್ವಾನಿ ಕಂಪನಿಯ ಪ್ರಕಾರ ಟ್ಯಾಂಕ್ ಇದುವರೆಗೂ ವಿಶ್ವದಲ್ಲಿ ತಯಾರಿಸಲಾದ ಬಲಶಾಲಿಯಾದ ಎಸ್‍‍ಯು‍‍ವಿಯಾಗಿದೆ.

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಇದರಲ್ಲಿರುವ ಮೆಕಾನಿಕಲ್ ಅಂಕಿಅಂಶಗಳನ್ನು ನೋಡಿದರೆ, ಇದು ಕಂಪನಿಯ ಅಭಿಪ್ರಾಯವು ನಿಜವಾಗಿದೆ. ಟೀಸರ್‍‍ನಲ್ಲಿಯೇ ಈ ಬಗ್ಗೆ ಹೇಳಲಾಗಿತ್ತು. ಟ್ಯಾಂಕ್ ವಾಹನದ ನೋಟವು ಎಲ್ಲರ ಗಮನವನ್ನು ಸೆಳೆಯುತ್ತದೆ. ಈ ವಾಹನದಲ್ಲಿ ನಯವಾದ ಹೆಡ್‌ಲ್ಯಾಂಪ್‌ಗಳಿವೆ.

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಹುಡ್ ಹಾಗೂ ಹಾಂಚ್‌ಗಳಿರುವ ವಿನ್ಯಾಸ, ವಾಹನದ ಬದಿಯಲ್ಲಿರುವ ಅಗಲವಾದ ಮಸಲ್, ಎಲ್‌ಇಡಿ ಬಾರ್, ಕಪ್ಪು ಬಣ್ಣದ ಗ್ರಿಲ್ ಇವೆಲ್ಲವೂ ಈ ಮ್ಯಾಟ್ ಫಿನಿಶ್ ಮಿಲಿಟರಿ ಬಣ್ಣದಲ್ಲಿರುವ ಈ ವಾಹನವನ್ನು ಬಲಿಷ್ಟವಾಗಿ ಕಾಣುವಂತೆ ಮಾಡುತ್ತವೆ.

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಟ್ಯಾಂಕಿನ ಬಾಡಿಯನ್ನು ಸ್ಟೀಲ್ ಫ್ರೇಂಗಳಿಂದ ತಯಾರಿಸಲಾಗಿದೆ. ಆಫ್ ರೋಡ್ ಟಯರ್‌ಗಳಿಗಾಗಿ ಸ್ಪೋರ್ಟ್ಸ್ ಸಸ್ಪೆಂಷನ್ ನೀಡಲಾಗುತ್ತದೆ. ಇದರಲ್ಲಿರುವ ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ರಕ್ಷಿಸಲು ಟ್ಯಾಂಕ್ ಆವೃತ್ತಿಯು ಸ್ಟ್ಯಾಂಡರ್ಡ್ ಮಿಲಿಟರಿ ಗ್ರೇಡ್ ಇಎಂಪಿ (ಎಲೆಕ್ಟ್ರೊ ಮ್ಯಾಗ್ನೆಟಿಕ್ ಪಲ್ಸ್) ಪ್ರೊಟೆಕ್ಷನ್ ಕವರ್ ಹೊಂದಿದೆ.

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಇದು ಇ 1, ಇ 2 ಹಾಗೂ ಇ 3 ಎಂಬ ಎಲೆಕ್ಟ್ರೊ ಮ್ಯಾಗ್ನೆಟಿಕ್ ಅಂಶಗಳನ್ನು ಒಳಗೊಂಡಿದೆ. ಇಷ್ಟೆಲ್ಲಾ ಅಂಶಗಳನ್ನು ಹೊಂದಿರುವ ಟ್ಯಾಂಕ್ ವಾಹನದ ಬೆಲೆಯು ದುಬಾರಿಯಾಗಿದೆ. ಅಮೆರಿಕಾ ಮಾರುಕಟ್ಟೆಯಲ್ಲಿ ಟ್ಯಾಂಕ್‌ನ ಬೆಲೆ 155,000 ಡಾಲರ್‍‍ಗಳು ಅಂದರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು ರೂ.1.05 ಕೋಟಿಗಳಾಗುತ್ತದೆ.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಬುಲ್ಲೆಟ್ ಪ್ರೂಫ್ ಟ್ಯಾಂಕ್ ಮಿಲಿಟರಿ ಆವೃತ್ತಿಯ ಬೆಲೆಯು 295,000 ಡಾಲರ್‍‍ಗಳಾಗುತ್ತದೆ. ಟ್ಯಾಂಕ್ ಎಕ್ಸ್ ಅಥವಾ ಆಫ್ ರೋಡ್ ಸೂಪರ್ ಕಾರ್ ಬೆಲೆ 349,000ಗಳಾಗಿದೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಟ್ಯಾಂಕ್ ಅನ್ನು 2 ಲೀಟರಿನ, ನಾಲ್ಕು ಸಿಲಿಂಡರ್ ಎಂಜಿನ್ ಅಥವಾ 3.6 ಲೀಟರಿನ, ವಿ6 ಮೋಟಾರ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಅಂದ ಹಾಗೆ ರೆಜ್ವಾನಿ ಮೋಟಾರ್ಸ್, ಕ್ಯಾಲಿಫೋರ್ನಿಯಾದ ಇರ್ವಿನ್ ಮೂಲದ ಹೈ ಪರ್ಫಾಮೆನ್ಸ್ ಸೂಪರ್ ಕಾರುಗಳ ತಯಾರಕ ಹಾಗೂ ಆಟೋಮೋಟಿವ್ ಡಿಸೈನರ್ ಕಂಪನಿಯಾಗಿದೆ. ರೆಜ್ವಾನಿ ಮೋಟಾರ್ಸ್ ಅನ್ನು ಇರಾನಿನ ಅಮೇರಿಕನ್ ಉದ್ಯಮಿ ಫೆರಿಸ್ ರೆಜ್ವಾನಿ ಸ್ಥಾಪಿಸಿದರು.

MOST READ: ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಇದಕ್ಕೂ ಮೊದಲು ಫೆರಿಸ್ ರೆಜ್ವಾನಿರವರು ವೆನ್ಸರ್ಸ್ ಸಾರ್ಥ್ ಸೂಪರ್ ಕಾರುಗಳ ವಿನ್ಯಾಸಕರಲ್ಲಿ ಒಬ್ಬರಾಗಿದ್ದರು. ಇದರ ಜೊತೆಗೆ ಆಸ್ಟನ್ ಮಾರ್ಟಿನ್, ಫೆರಾರಿ, ಡಿಬಿಸಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ರೆಜ್ವಾನಿ ಮೋಟಾರ್ಸ್ ಕಂಪನಿಯ ಪ್ರಮುಖ ವಾಹನವೆಂದರೆ ರೆಜ್ವಾನಿ ಬೀಸ್ಟ್. ಇದನ್ನು ಕಂಪನಿಯು ತನ್ನ ಸ್ವಂತ ಹಣದಿಂದ ಅಭಿವೃದ್ದಿಪಡಿಸಿತ್ತು.

Most Read Articles

Kannada
English summary
2020 Rezvani Tank Unveiled - Read in kannada
Story first published: Saturday, August 17, 2019, 13:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X