ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಕೇವಲ 165 ಕಮರ್ಷಿಯಲ್ ವಾಹನಗಳು ಮಾತ್ರ ಆರ್‌ಎಫ್‌ಐಡಿ (ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಟಿ)ಟ್ಯಾಗ್‍‍ಗಳನ್ನು ಬಳಸಿ, ಟೋಲ್ ಶುಲ್ಕವನ್ನು ಪಾವತಿಸಿವೆ. 3.6 ಲಕ್ಷಕ್ಕೂ ಹೆಚ್ಚು ಆರ್‌ಎಫ್‌ಐಡಿ ಟ್ಯಾಗ್‍‍ಗಳನ್ನು ಮಾರಾಟ ಮಾಡಲಾಗಿದೆ. ಈ ಪೈಕಿ 547 ರೀಚಾರ್ಜ್ ಮಾಡಲಾಗಿದ್ದರೆ, ಕೇವಲ 165 ವಾಹನಗಳು ಮಾತ್ರ ಈ ಟೆಕ್ನಾಲಜಿಯನ್ನು ಬಳಸಿ ಶುಲ್ಕ ಪಾವತಿಸಿವೆ.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ಕೆಲ ವರ್ಷಗಳಿಂದ ಅತಿ ಹೆಚ್ಚಿನ ಮಾಲಿನ್ಯವನ್ನು ಎದುರಿಸುತ್ತಿದೆ. ವಾಯು ಮಾಲಿನ್ಯವು ಈ ರೀತಿಯಲ್ಲಿ ಹೆಚ್ಚಳವಾಗಲು ಮೋಟಾರ್ ವಾಹನಗಳು ಕಾರಣ ಎಂದು ತೀರ್ಮಾನಿಸಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ನಿಯಮಗಳನ್ನು ಜಾರಿಗೆ ತರಲು ಮುಂದಾಗಿವೆ. ಅದರಂತೆ ಮೊದಲಿಗೆ ಬೆಸ ವಾಹನ ಸಂಖ್ಯೆ ನಂಬರ್ ಪ್ಲೇಟ್ ನಿಯಮವನ್ನು ಜಾರಿಗೆ ತರಲಾಯಿತು.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಈ ನಿಯಮದ ಪ್ರಕಾರ ಬೆಸ ಸಂಖ್ಯೆಯೊಂದಿಗೆ ಕೊನೆಗೊಳ್ಳುವ ವಾಹನ ನೋಂದಣಿಯನ್ನು ಹೊಂದಿರುವ ವಾಹನಗಳು ನಿರ್ದಿಷ್ಟ ದಿನಗಳಂದು ಹಾಗೂ ಸಮ ಸಂಖ್ಯೆ ನಂಬರ್ ಪ್ಲೇಟ್ ಹೊಂದಿದ್ದ ವಾಹನಗಳು ನಿಗದಿ ಪಡಿಸಿರುವ ದಿನಗಳಲ್ಲಿ ರಸ್ತೆಗಿಳಿಯುವ ನಿಯಮ ರೂಪಿಸಲಾಯಿತು. ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಯಿತು.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿ ಸಿಎನ್‌ಜಿ ಬಳಕೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆರ್‌ಎಫ್‌ಐಡಿಯ ಕಡ್ಡಾಯ ಬಳಕೆಯು ಸಹ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಎನ್‌ಸಿಆರ್‌ಗೆ ಪ್ರವೇಶಿಸಲು ದೆಹಲಿಯ ವಿವಿಧ ಭಾಗಗಳಲ್ಲಿ 13 ಟೋಲ್ ಗೇಟ್‌ಗಳಿವೆ.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಈ ಟೋಲ್ ಬೂತ್‌ಗಳು ಟ್ರಾಫಿಕ್ ಜಾಮ್‌ಗಳನ್ನು ಸೃಷ್ಟಿಸುತ್ತಿವೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ದೊಡ್ಡ ಟ್ರಕ್‌ಗಳು ಸೇರಿದಂತೆ ಸಾವಿರಾರು ವಾಹನಗಳು ತಮ್ಮ ಎಂಜಿನ್‌ಗಳನ್ನು ಟೋಲ್ ಗೇಟ್‌ಗಳಲ್ಲಿ ಐಡ್ಲಿಂಗ್‍‍ನಲ್ಲಿಟ್ಟು, ಶುಲ್ಕ ಪಾವತಿಸಲು ಕಾಯುತ್ತಿರುವುದನ್ನು ಗಮನಿಸಿದೆ.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಇದರಿಂದಾಗಿ ದೊಡ್ಡ ಪ್ರಮಾಣದ ವಾಯು ಮಾಲಿನ್ಯ ಉಂಟಾಗುತ್ತಿದೆ. ಟೋಲ್ ಪ್ಲಾಜಾ ಮೂಲಕ ವೇಗವಾಗಿ ಟೋಲ್ ಶುಲ್ಕ ಪಾವತಿಸುವುದು, ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಬಳಸುವ ಹಿಂದಿನ ಉದ್ದೇಶವಾಗಿದೆ. ಎಸ್‌ಡಿಎಂಸಿಯು ರಾಷ್ಟ್ರ ರಾಜಧಾನಿಯಲ್ಲಿ ಆರ್‌ಎಫ್‌ಐಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊತ್ತಿದೆ.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಆರ್‌ಎಫ್‌ಐಡಿ ಟ್ಯಾಗ್ ಅನ್ನು ಖರೀದಿಸುವ, ವಾಹನ ಸವಾರರು ಅದನ್ನು ಅವರ ವಾಹನದ ಮುಂಭಾಗಕ್ಕೆ ಅಂಟಿಸಿಕೊಳ್ಳಬೇಕು. ಈ ಟ್ಯಾಗ್‍‍ಗಳನ್ನು ವಾಹನಕ್ಕೆ ಅಂಟಿಸಿಕೊಂಡ ನಂತರ ಟೋಲ್ ಗೇಟ್ ಮೂಲಕ ಹಾದುಹೋಗುವಾಗ, ವಾಹನವನ್ನು ನಿಲ್ಲಿಸುವ ಅಥವಾ ನಿಧಾನಗೊಳಿಸುವ ಅಗತ್ಯವಿಲ್ಲ.

MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಟೋಲ್ ಪ್ಲಾಜಾದಲ್ಲಿರುವ ಸ್ಕ್ಯಾನರ್‌ಗಳು ವಾಹನಗಳ ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಸ್ಕ್ಯಾನ್ ಮಾಡುತ್ತವೆ. ಈ ಸ್ಕ್ಯಾನರ್‍‍ಗಳು ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿಯ (ಎಂಸಿಡಿ) ತೆರಿಗೆ ಹಾಗೂ ಪರಿಸರ ಪರಿಹಾರ ಶುಲ್ಕ (ಇಸಿಸಿ)ವನ್ನು ಕಡಿತಗೊಳಿಸುತ್ತವೆ.

MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ ಹೆಚ್ಚುವರಿ ಆಯುಕ್ತ ರಣಧೀರ್ ಸಹಾಯ್‍‍ರವರು ಮಾತನಾಡಿ, ಆರ್‌ಎಫ್‌ಐಡಿ ಯೋಜನೆಯ ಮುಖ್ಯ ಉದ್ದೇಶವೆಂದರೆ ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವುದನ್ನು ತಡೆಯುವುದು. ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಗದುರಹಿತವಾಗಿಸುವ ಮೂಲಕ ಮಾಡುವುದು.

MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಇದನ್ನು ಜಾರಿಗೊಳಿಸಲು ವಾಹನಕ್ಕೆ ಆರ್‌ಎಫ್‌ಐಡಿ ಅಗತ್ಯವಾಗಿದ್ದು, ವಾಹನ ಮಾಲೀಕರು ಆರ್‌ಎಫ್‌ಐಡಿಗಳನ್ನು ತಮ್ಮ ವಾಹನಗಳಲ್ಲಿ ಅಂಟಿಸಿಕೊಂಡು ಬಳಸಬೇಕು ಎಂದು ಹೇಳಿದರು. ಆರ್‌ಎಫ್‌ಐಡಿ ಯೋಜನೆಯನ್ನು 2019ರ ಆಗಸ್ಟ್ 24 ರಂದು ಕಡ್ಡಾಯಗೊಳಿಸಿ ಜಾರಿಗೆ ತರಲಾಯಿತು.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಮೊದಲ ದಿನವೇ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಬಳಸದೇ ಇರುವ ಕಾರಣಕ್ಕೆ 6,000 ಕ್ಕೂ ಹೆಚ್ಚು ವಾಹನ ಚಾಲಕರಿಗೆ ದಂಡ ವಿಧಿಸಲಾಯಿತು.ರಂಧೀರ್ ಸಹಾಯ್ ರವರ ಪ್ರಕಾರ, ಈ ಯೋಜನೆಯ ಉದ್ದೇಶವು ಜನರಿಗೆ ದಂಡ ವಿಧಿಸುವುದಲ್ಲ, ಬದಲಿಗೆ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಿ ಕ್ಯಾಶ್‍‍ಲೆಸ್ ಪ್ರಕ್ರಿಯೆಯನ್ನು ಮಾಡುವುದು, ಆ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡುವುದು.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸರ್ಕಾರವು ಯೋಚಿಸಿದಂತೆ ಆರ್‌ಎಫ್‌ಐಡಿ ಪಾವತಿ ಹಾಗೂ ಫಾಸ್ಟ್ ಟ್ಯಾಗ್‍‍ಗಳನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಇದನ್ನು ಏಕೆ ಜಾರಿಗೆ ತರಲಾಗುತ್ತಿದೆ ಎಂಬ ಬಗ್ಗೆ ಜನರು ಜಾಗರೂಕರಾಗುವವರೆಗೆ ಈ ಯೋಜನೆಯು ಯಶಸ್ವಿಯಾಗುವುದಿಲ್ಲ. ಭಾರತೀಯರು ಯಾವುದೇ ವಹಿವಾಟನ್ನು ನಡೆಸಲು ನಗದು ಬಳಸುವುದನ್ನು ಇಷ್ಟಪಡುತ್ತಾರೆ.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಕ್ಯಾಶ್‍‍ಲೆಸ್ ಅಪ್ಲಿಕೇಶನ್‍‍ಗಳು ಸಾಕಷ್ಟು ಸಂಖ್ಯೆಯಲಿದ್ದರೂ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಸಮಯದಲ್ಲಿ ಮಾತ್ರ ಜನ ಕ್ಯಾಶ್‍‍ಲೆಸ್ ವಹಿವಾಟನ್ನು ನಡೆಸಿದ್ದರು. ಅದೇ ರೀತಿ ಟೋಲ್ ಪ್ಲಾಜಾಗಳಲ್ಲೂ ನಗದು ವಹಿವಾಟು ನಡೆಸಲು ಬಯಸುತ್ತಾರೆ.

ಹೆಚ್ಚು ಮಾರಾಟವಾದ್ರು, ಕಡಿಮೆ ಬಳಕೆಯಾಗುತ್ತಿದೆ ಆರ್‌ಎಫ್‌ಐಡಿ

ಆರ್‍ಎಫ್‍ಐ‍‍ಡಿ ಹಾಗೂ ಫಾಸ್ಟ್ ಟ್ಯಾಗ್‍‍ಗಳೂ ಸಹ ಸುಲಭವಾಗಿದ್ದು, ನಗದು ವಹಿವಾಟಿಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡುತ್ತವೆ. ಇವುಗಳನ್ನು ಕಡ್ಡಾಯ ಮಾಡಿದಾಗ ಮಾತ್ರ ಜನ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದಾರೆ. ಸರ್ಕಾರವು ಫಾಸ್ಟ್ ಟ್ಯಾಗ್‍‍ಗಳನ್ನು ಬರುವ ನವೆಂಬರ್‍‍‍ನಿಂದ ಕಡ್ಡಾಯಗೊಳಿಸಲಿದೆ.

Most Read Articles

Kannada
English summary
RFID Toll Payment: 3.6 Lakh RFID Tags Sold, But Only 165 Commercial Vehicles Use It - Read in kannada
Story first published: Thursday, September 5, 2019, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X