2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಭಾರತದಲ್ಲಿ ಕಳೆದ 10 ವರ್ಷಗಳಿಂದ ಈಚೆಗೆ ವಾಹನ ಉದ್ಯಮವು ನೀರಿಕ್ಷೆಗೂ ಮೀರಿ ಬೆಳೆದುನಿಂತಿದ್ದು, ವರ್ಷದಿಂದ ವರ್ಷಕ್ಕೆ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಮಾಣವು ದ್ವಿಗುಣಗೊಳ್ಳುತ್ತಿದೆ. ಇದರಿಂದಾಗಿ ಮಾಲಿನ್ಯ ಪ್ರಮಾಣವು ಕೂಡಾ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಿಸಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ರಾಷ್ಟ್ರೀಯ ಹಸಿರು ಪೀಠದ ಆದೇಶದ ಅನ್ವಯ ಕಳೆದ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ರಾಜ್ಯಗಳ ಕಾರುಗಳಿಗೆ ಪ್ರವೇಶ ನಿರ್ಬಂಧಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿರಿಸಿದ್ದು, ಒಂದಕ್ಕಿಂತ ಹೆಚ್ಚು ಕಾರು ಖರೀದಿಸುವ ಮಾಲೀಕರಿಗೆ ಹೈ ಟ್ಯಾಕ್ಸ್ ಶಾಕ್ ನೀಡಲು ಮುಂದಾಗಿದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಹೊಸ ನಿಯಮದ ಪ್ರಕಾರ, ಪ್ರಥಮ ಬಾರಿಗೆ ಕಾರು ಖರೀದಿಸುವ ಮಾಲೀಕರನ್ನು ಹೊರತುಪಡಿಸಿ 2ನೇ ಕಾರು ಖರೀದಿಸುವ ಗ್ರಾಹಕರು ಒಂದನೇ ಕಾರಿಗೆ ಪಾವತಿಸಲಾದ ತೆರಿಗೆ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಅಂದ್ರೆ, ಒಂದನೇ ಕಾರು ಖರೀದಿ ಮೇಲೆ ಶೇ.3 ರಷ್ಟು ತೆರೆಗೆ ವಿಧಿಸಿದ್ದಲ್ಲಿ 2ನೇ ಕಾರಿಗೂ ಅಷ್ಟೇ ಪ್ರಮಾಣದಲ್ಲಿದ್ದ ತೆರಿಗೆ ಸ್ತರವನ್ನು ಇದೀಗ ಬದಲಾಯಿಸಿರುವ ಕೇಂದ್ರ ಸಾರಿಗೆ ಇಲಾಖೆಯು 2ನೇ ಮತ್ತು 3ನೇ ಕಾರು ಖರೀದಿಗೆ ಮುಂದಾಗುವ ಕಾರು ಮಾಲೀಕರಿಗೆ ಹೆಚ್ಚುವರಿಯಾಗಿ ಶೇ.3 ರಷ್ಟು ತೆರಿಗೆ ವಿಧಿಸುತ್ತಿದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಹೀಗಾಗಿ 2ನೇ ಕಾರು ಖರೀದಿ ಬಯಸುವ ಗ್ರಾಹಕರು ಶೇ.6 ರಷ್ಟು ತೆರಿಗೆ ಪಾವತಿಸುವ ಅನಿವಾರ್ಯತೆಗಳಿದ್ದು, ಒಂದಕ್ಕಿಂತ ಹೆಚ್ಚು ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಹೊರೆಯಾಗಿ ಪರಿಣಮಿಸಲಿದೆ. ಇದರಿಂದ ಮೀತಿ ಮಿರುತ್ತಿರುವ ವಾಹನ ಸಂಖ್ಯೆಯನ್ನು ಹತೋಟಿಗೆ ತರಬಹುದು ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಲೆಕ್ಕಾಚಾರ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಇದರಿಂದ ಪ್ರಾಯೋಗಿಕವಾಗಿ ಜಾರ್ಖಂಡ್‌ ರಾಜ್ಯದಲ್ಲಿ ಹೊಸ ತೆರಿಗೆ ಪದ್ದತಿಯನ್ನು ಜಾರಿ ಮಾಡಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇದು ಇತರೆ ರಾಜ್ಯಗಳಲ್ಲೂ ಹೊಸ ತೆರಿಗೆ ಪದ್ದತಿಯನ್ನು ಜಾರಿ ಮಾಡುವ ಸಂಬಂಧ ಈಗಾಗಲೇ ಮಹತ್ವದ ಸಭೆ ನಡೆಸಲಾಗಿದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಸಬ್ಸಡಿ ಮತ್ತು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಎಲೆಕ್ಟ್ರಿಕ್ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವುದಲ್ಲದೇ ಪ್ರತಿ ಎಲೆಕ್ಟ್ರಿಕ್ ಕಾರಿನ ಮೇಲೂ ರೂ.50 ಸಾವಿರ ತೆರಿಗೆ ವಿನಾಯ್ತಿ ನೀಡುವುದಾಗಿ ಈಗಾಗಲೇ ಅಧಿಕೃತ ಸುತ್ತೋಲೆ ಹೊರಡಿಸಿದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಇದಲ್ಲದೇ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವಿಕೆಯ ಪ್ರಕ್ರಿಯೆಯನ್ನು ಸಹ ಸಡಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಹಣಕಾಸು ಇಲಾಖೆಗೆ ಮಹತ್ವದ ಸುತ್ತೋಲೆ ಹೊರಡಿಸಿರುವ ಪ್ರಧಾನಿ ಮಂತ್ರಿ ಕಾರ್ಯಾಲಯವು ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕೆ ಪೂರಕವಾದ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ನಿರ್ದೆಶನ ಮಾಡಲಾಗಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹಲವು ಅವಕಾಶಗಳಿದ್ದರೂ ಸಹ ಗ್ರಾಹಕರು ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮೇಲೆಯೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಕೇಂದ್ರ ಸರ್ಕಾರವು ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, 2020ರ ವೇಳೆಗೆ ಕನಿಷ್ಠ 25ರಷ್ಟು ಆದರೂ ಎಲೆಕ್ಟ್ರಿಕ್ ಕಾರು ಮತ್ತು ಬೈಕ್‌ಗಳು ಮಾರಾಟವಾಗುವಂತೆ ಮಾಡಬೇಕೆಂಬ ಕೇಂದ್ರದ ಯೋಜನೆಯು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎನ್ನುವಂತಾಗಿದ್ದು, ತೀವ್ರಗತಿಯ ಬೆಳವಣಿಗೆ ಕೆಲವು ಜನಪರ ಯೋಜನೆಗಳನ್ನು ಘೋಷಣೆ ಮಾಡಲೇಬೇಕಾದ ಅವಶ್ಯಕತೆಯಿದೆ.

MOST READ: ಆನ್‌ಲೈನ್‌ನಲ್ಲಿ ಬೈಕ್ ಮಾರಾಟ: ನಂಬಿ ಟೆಸ್ಟ್ ರೈಡ್‌ಗೆ ಕೊಟ್ರೆ ಪಂಗನಾಮ..!

2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ನೀತಿ ಆಯೋಗ ಶಿಫಾರಸ್ಸು ಅನ್ವಯ ಎಲೆಕ್ಟ್ರಿಕ್ ಕಾರುಗಳಿಗೆ ಗ್ರಿನ್ ನಂಬರ್ ಪ್ಲೆಟ್ ಜೊತೆಗೆ ಟೋಲ್ ಶುಲ್ಕದಲ್ಲಿ ವಿನಾಯ್ತಿ ಸೌಲಭ್ಯವನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರವು ಸದ್ಯದಲ್ಲೇ ತನ್ನ ನಿಲವು ವ್ಯಕ್ತಪಡಿಸಲಿದ್ದು, ಇದರ ಜೊತೆಗೆ ಮತ್ತಷ್ಟು ಹೊಸ ಆಫರ್‌ಗಳನ್ನು ನೀಡುವ ಬಗ್ಗೆ ಸುಳಿವು ನೀಡಿದೆ.

Most Read Articles

Kannada
English summary
Road Tax Increased For Second Car In Jharkhand. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X