Just In
Don't Miss!
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?
ಕಾರುಗಳಿಗೆ ಬಂಪರ್ ಕ್ರಾಶ್ ಗಾರ್ಡ್ ಅಳವಡಿಸುವುದು ಸಾಮಾನ್ಯವಾಗಿದ್ದರೂ ಅದು ಇದೀಗ ಹೊಸ ಸಂಚಾರಿ ನಿಯಮದಡಿ ಕಾನೂನುಬಾಹಿರವಾಗಿದೆ. ಹೀಗಾಗಿ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಹಾಕುವ ಕಾರು ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ.

ಬಹುತೇಕ ಎಸ್‌ಯುವಿ ಕಾರು ಮಾಲೀಕರು ಕಾರಿನ ಖದರ್ ಹೆಚ್ಚಿಸಲು ಬಂಪರ್ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಬಾರ್ ಅಳವಡಿಸಲಾಗುತ್ತದೆ. ಆದ್ರೆ ಬಂಪರ್ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಬಾರ್‌ಗಳಿಂದಾಗಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ಮೋಟಾರ್ ಕಾಯ್ದೆ ಅಡಿ ನಿಯಮಬಾಹಿರವಾಗಿ ಬಂಪರ್ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಬಾರ್ ಅಳವಡಿಸುವ ಕಾರು ಮಾಲೀಕರ ವಿರುದ್ಧ ಕ್ರಮ ಜರಗಿಸಲಾಗುತ್ತಿದೆ.

ವಾಹನಗಳಿಗಳಲ್ಲಿ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ ಅಳವಡಿಸುವುದನ್ನು ನಿಷೇಧಿಸಿ ಕೇಂದ್ರ ಸಾರಿಗೆ ಸಚಿವಾಲಯವು ಈ ಹಿಂದೆ 2017ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಆದ್ರೆ ಇದೀಗ ಹೊಸ ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನ ತಂದಿರುವ ವಿವಿಧ ರಾಜ್ಯಗಳ ಸಾರಿಗೆ ಇಲಾಖೆಗಳು ನಿಯಮ ಉಲ್ಲಂಘಿಸುವ ಕಾರು ಮಾಲೀಕರಿಗೆ ದಂಡವಿಧಿಸುತ್ತಿದ್ದಾರೆ.

ಎಸ್‌ಯುವಿ ಕಾರುಗಳು ಅಂದವಾಗಿ ಕಾಣಬೇಕು ಮತ್ತು ಅವಘಡಗಳು ಸಂಭವಿಸಿದಾಗ ವಾಹನದ ಮುಂಭಾಗಕ್ಕೆ ಹೆಚ್ಚು ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಕಾರು ಮಾಲೀಕರು ಬಂಪರ್ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಬಾರ್ ಅಳವಡಿಸಲಾಗುತ್ತಿತ್ತು. ಆದ್ರೆ ಕೆಲವು ವೈಜ್ಞಾನಿಕ ಕಾರಣಗಳಿಂದಾಗಿ ಕ್ರ್ಯಾಶ್ ಗಾರ್ಡ್ ಬಳಕೆಯು ಕಾನೂನುಬಾಹಿರವಾಗಿದೆ.

ಬಂಪರ್ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಬಾರ್ ಬ್ಯಾನ್ ಮಾಡಿದ್ದರ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿದ್ದು, ದೇಶದಲ್ಲಿ ಸಂಭವಿಸುತ್ತಿರುವ ಸಾವಿರಾರು ಕಾರು ಅಪಘಾತ ಪ್ರಕರಣಗಳಲ್ಲಿ ಬಂಪರ್ ಕ್ರ್ಯಾಶ್ ಗಾರ್ಡ್‌ನಿಂದಲೇ ಅಪಘಾತಗಳ ತೀವ್ರತೆ ಹೆಚ್ಚಿರುವುದು ಪತ್ತೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಾರಿಗೆ ಸಚಿವಾಲಯವು ಕಾರುಗಳಲ್ಲಿ ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ಸುತ್ತೊಲೆ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಹೈದ್ರಾಬಾದ್ ಸೇರಿದಂತೆ ಪ್ರಮುಖ ಕಡೆಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಟ್ರಾಫಿಕ್ ಪೊಲೀಸರು ನಿಯಮಬಾಹಿರವಾಗಿ ಅಳವಡಿಸಲಾದ ಬಂಪರ್ ಕ್ರ್ಯಾಶ್ ಗಾರ್ಡ್ ಅಳವಡಿಸಿರುವ ಕಾರು ಮಾಲೀಕರಿಗೆ ರೂ.2 ಸಾವಿರ ದಂಡ ವಿಧಿಸಿದ್ದಾರೆ.

ಮೊದಲ ಬಾರಿಗೆ ಸಿಕ್ಕಿಬೀಳುವ ಕಾರು ಮಾಲೀಕರಿಗೆ ರೂ.2 ಸಾವಿರ ದಂಡದ ಜೊತೆಗೆ ಖಡಕ್ ವಾರ್ನಿಂಗ್ ಮಾಡಿರುವ ಟ್ರಾಫಿಕ್ ಪೊಲೀಸರು ಈ ಕೂಡಲೇ ಬಂಪರ್ ಕ್ರ್ಯಾಶ್ ಗಾರ್ಡ್ ತೆರವುಗೊಳಿಸುವಂತೆ ಸೂಚಿಸಲಾಗಿದ್ದು, ಮತ್ತೆ ಸಿಕ್ಕಿಬಿದ್ದಲ್ಲಿ ರೂ.2 ಸಾವಿರದೊಂದಿಗೆ ಹೆಚ್ಚುವರಿ ದಂಡವನ್ನು ವಿಧಿಸುವುದಾಗಿ ಎಚ್ಚರಿಸಲಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಾನೂನು ಬಾಹಿರವಾಗಿ ಕಾರುಗಳಲ್ಲಿ ಬಂಪರ್ ಕ್ರ್ಯಾಶ್ ಗಾರ್ಡ್ ಅಳವಡಿಸುವ ವಾಹನ ಮಾಲೀಕರಿಗೆ ಸೆಕ್ಷನ್ 190 ಹಾಗೂ ಸೆಕ್ಷನ್ 191ರ ಅಡಿ ಕ್ರಮ ಜರುಗಿಸಿ ದಂಡ ವಿಧಿಸಲಾಗುತ್ತಿದ್ದು, ಪದೇ ಪದೇ ಸಿಕ್ಕಿಬೀಳುವ ಕಾರು ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಕೇಂದ್ರ ಸಾರಿಗೆ ಇಲಾಖೆಯು ಬಂಪರ್ ಕ್ರ್ಯಾಶ್ ಗಾರ್ಡ್ ಅನ್ನು ಕಾನೂನುಬಾಹಿರ ಎಂದು ಘೋಷಿಸಲು ಮತ್ತೊಂದು ಕಾರಣ ಅಂದರೆ ಅದು ಅಪಘಾತಗಳ ಸಂದರ್ಭದಲ್ಲಿ ಏರ್‌ಬ್ಯಾಗ್ ಸೌಲಭ್ಯವು ಸರಿಯಾಗಿ ಕಾರ್ಯನಿರ್ವಹಣೆಗೆ ಅಡ್ಡಿ ಮಾಡುವುದು ಕೂಡಾ ಪ್ರಯಾಣಿಕರ ಸಾವು ನೋವಿಗೆ ಪ್ರಮುಖ ಕಾರಣವಾಗಿದೆ.
MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಬಂಪರ್ ಕ್ರ್ಯಾಶ್ ಗಾರ್ಡ್‌ನಿಂದಾಗಿ ಕಾರಿನ ಸ್ಟಿರಿಂಗ್‌ನಲ್ಲಿರುವ ಏರ್‌ಬ್ಯಾಗ್ ಸೌಲಭ್ಯವು ಸೆನ್ಸಾರ್ ಸಮಸ್ಯೆಯನ್ನು ಎದುರಿಸಲಿದ್ದು, ಕೆಲವು ಸಂದರ್ಭದಲ್ಲಿ ಭೀಕರ ಅಪಘಾತದಲ್ಲೂ ಏರ್‌ಬ್ಯಾಗ್ ಕಾರ್ಯನಿರ್ವಹಣೆ ಮಾಡದ್ದಿದ್ದಾಗ ಕಾರಿನಲ್ಲಿರುವ ಪ್ರಯಾಣಿಕರ ಪರಿಸ್ಥಿತಿ ಹೇಗಿರುತ್ತೆ ಎಂದು ಉಹಿಸಿಕೊಳ್ಳಲು ಅಸಾಧ್ಯ.

ಇದೇ ಕಾರಣಕ್ಕಾಗಿ ಕಾರಿನಲ್ಲಿ ಅಳವಡಿಸಲಾಗುವ ಬಂಪರ್ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಬಾರ್ ಅಳವಡಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದರೊಂದಿಗೆ ಕಾನೂನು ಬಾಹಿರವಾಗಿರುವ ಕ್ರ್ಯಾಶ್ ಗಾರ್ಡ್ ಮಾರಾಟ ಮಾಡುವವರ ವಿರುದ್ಧವು ಸೆಕ್ಷನ್ 52ರ ಅಡಿ ಕ್ರಮ ಜರಗಿಸಲಾಗುತ್ತಿದೆ.