ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

ಹ್ಯುಂಡೈ ಕಂಪನಿಯ ಗ್ರಾಂಡ್ ಐ10 ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಮೂರನೇ ತಲೆಮಾರಿನ ಐ10 ಕಾರಿನಲ್ಲಿ ಹಲವಾರು ಫೀಚರ್‍‍ಗಳ ಜೊತೆಗೆ ಹೊಸ ವಿನ್ಯಾಸವನ್ನು ಅಳವಡಿಸಲಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

ಬಿಡುಗಡೆಯಾದಾಗಿನಿಂದ ಹ್ಯುಂಡೈ ಐ10 ನಿಯೋಸ್ ಹೆಚ್ಚು ಮಾರಾಟವಾಗುತ್ತಿರುವ ಹ್ಯಾಚ್‍‍ಬ್ಯಾಕ್ ಕಾರುಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳು ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹ್ಯುಂಡೈ ಕಂಪನಿಯೂ ಸಹ ಐ 10 ನಿಯೋಸ್ ಕಾರ್ ಅನ್ನು ಬಿ‍ಎಸ್ 6 ಡೀಸೆಲ್ ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

ಮೂರನೇ ತಲೆಮಾರಿನ ಕಾರ್ ಅನ್ನು ಈ ವರ್ಷದ ಆಗಸ್ಟ್ ನಲ್ಲಿ ಬಿಡುಗಡೆಗೊಳಿಸಿತ್ತು. ಹಳೆಯ ತಲೆಮಾರಿನ ಕಾರಿಗೆ ಹೋಲಿಸಿದರೆ, ಹೊಸ ತಲೆಮಾರಿನ ನಿಯೋಸ್ ಕಾರು ಗಾತ್ರ, ವಿನ್ಯಾಸ ಹಾಗೂ ಫೀಚರ್‍‍ಗಳಲ್ಲಿ ಹಲವಾರು ಬದಲಾವಣೆಗಳನ್ನು ಹೊಂದಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ಹೊಸ ನಿಯೋಸ್ ಕಾರಿನೊಂದಿಗೆ ಸ್ಟಾಂಡರ್ಡ್ ಗ್ರಾಂಡ್ ಐ 10 ಕಾರ್ ಅನ್ನು ಸಹ ಮಾರಾಟ ಮಾಡುವುದಾಗಿ ತಿಳಿಸಿದೆ. ಆದರೆ ಬಿ‍ಎಸ್ 6 ನಿಯಮಗಳು ಜಾರಿಗೆ ಬಂದ ನಂತರ ಹಳೆಯ ಕಾರ್ ಅನ್ನು ಮಾರಾಟ ಮಾಡಲಾಗುವುದೇ ಇಲ್ಲವೇ ಎಂಬ ಮಾಹಿತಿ ಲಭ್ಯವಾಗಿಲ್ಲ. ನಿಯೋಸ್ ಕಾರಿನ ಬಗ್ಗೆ ನೀವು ತಿಳಿದರಬೇಕಾದ 7 ಸಂಗತಿಗಳಿವು:

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

1. ಹೊರಭಾಗ

ಗ್ರಾಂಡ್ ಐ10 ನಿಯೋಸ್ ಕಾರಿನ ವಿನ್ಯಾಸವು ಹ್ಯುಂಡೈನ ಉಳಿದ ಮಾದರಿಗಳ ವಿನ್ಯಾಸವನ್ನು ಹೋಲುತ್ತದೆ. ಹೊಸ ನಿಯೋಸ್ ಕಾರಿನ ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಕಾರಿನ ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಹೊಸ ಬಂಪರ್ ಹಾಗೂ ಸ್ಯಾಂಟ್ರೊ ಕಾರಿನಲ್ಲಿರುವಂತಹ ಕಾಸ್ಕೆಡಿಂಗ್ ಗ್ರಿಲ್‍‍ಗಳಿವೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

ಇದರ ಜೊತೆಗೆ ಗ್ರಿಲ್‍‍ನಲ್ಲಿ ಎಲ್‍ಇ‍‍ಡಿ ಲೈಟ್‍‍‍‍ಗಳಿದ್ದು, ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತವೆ. ಹ್ಯುಂಡೈ ಕಂಪನಿಯು ಈ ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಿದೆ. ಕಾರಿನ ಹಿಂಭಾಗದಲ್ಲಿ ಹೊಸ ಬಂಪರ್ ನೀಡಲಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

2. ಇಂಟಿರಿಯರ್

ಹ್ಯುಂಡೈ ಕಂಪನಿಯು ಹೊಸ ನಿಯೋಸ್ ಕಾರಿನ ಇಂಟಿರಿಯರ್‍‍ಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಆರಾಮದಾಯಕ ಅನುಭವಕ್ಕಾಗಿ ಬಹುತೇಕ ಎಲ್ಲಾ ಫೀಚರ್‍‍ಗಳನ್ನು ನೀಡಲಾಗಿದೆ. ಇವುಗಳಲ್ಲಿ ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಹೊಂದಿರುವ ಹೊಸ 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ನಾಲ್ಕು ಸ್ಪೀಕರ್‍‍ಗಳ ಅರ್ಕಾಮಿಸ್ ಸೌಂಡ್ ಸಿಸ್ಟಂಗಳು ಸೇರಿವೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

ಇದರ ಜೊತೆಗೆ ಹೊಸ ನಿಯೋಸ್ ಕಾರಿನಲ್ಲಿ 5.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮೀಡಿಯಾ ಕಂಟ್ರೋಲ್ ಹೊಂದಿರುವ ಲೆದರ್ ವ್ರಾಪರ್‍‍ನ ಸ್ಟೀಯರಿಂಗ್ ವ್ಹೀಲ್, ವೈರ್‍‍ಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಮುಂಭಾಗದಲ್ಲಿ ಯು‍ಎಸ್‍‍ಬಿ ಚಾರ್ಜರ್, ರೇರ್ ಎಸಿ ವೆಂಟ್ಸ್ ಹಾಗೂ ಕೂಲ್ಡ್ ಗ್ಲವ್ ಬಾಕ್ಸ್ ಗಳಿವೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

3. ಗಾತ್ರ

ಗಾತ್ರದ ಬಗ್ಗೆ ಹೇಳುವುದಾದರೆ ನಿಯೋಸ್ ಕಾರು 3,805 ಎಂಎಂ ಉದ್ದ, 1,680 ಎಂಎಂ ಅಗಲ, 1,520 ಎಂಎಂ ಎತ್ತರ ಹಾಗೂ 2,450 ಎಂಎಂ ವ್ಹೀಲ್‍‍ಬೇಸ್ ಹೊಂದಿದೆ. ಹಳೆಯ ತಲೆಮಾರಿನ ಕಾರಿಗಿಂತ 40 ಎಂಎಂ ಹೆಚ್ಚು ಉದ್ದ, 20 ಎಂಎಂ ಹೆಚ್ಚು ಅಗಲ ಹಾಗೂ 25 ಎಂಎಂ ಹೆಚ್ಚು ವ್ಹೀಲ್ ಬೇಸ್ ಹೊಂದಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

4. ಎಂಜಿನ್

ಹೊಸ ಐ10 ನಿಯೋಸ್ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ನೊಂದಿಗೆ ಮಾರಾಟ ಮಾಡಲಾಗುವುದು. ಪೆಟ್ರೋಲ್ ಎಂಜಿನ್ ಅನ್ನು ಬಿ‍ಎಸ್ 6 ಮಾಲಿನ್ಯಕ್ಕೆ ತಕ್ಕಂತೆ ನವೀಕರಿಸಲಾಗಿದೆ. ಡೀಸೆಲ್ ಎಂಜಿನ್ ಅನ್ನು ಅಪ್‍‍ಡೇಟ್‍‍ಗೊಳಿಸುವ ಬಗ್ಗೆ ಹ್ಯುಂಡೈ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

1.2 ಲೀಟರಿನ ಪೆಟ್ರೋಲ್ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಹಾಗೂ ಎ‍ಎಂಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

1.2 ಲೀಟರಿನ ಬಿ‍ಎಸ್ 4 ಡೀಸೆಲ್ ಎಂಜಿನ್ 75 ಬಿ‍‍ಹೆಚ್‍‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿಯೂ 5 ಸ್ಪೀಡಿನ ಮ್ಯಾನುವಲ್ ಹಾಗೂ ಎಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

5. ಪ್ರತಿಸ್ಪರ್ಧಿಗಳು

ಹೊಸ ಗ್ರಾಂಡ್ ಐ10 ನಿಯೋಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಫಿಗೊ, ಮಾರುತಿ ಸುಜುಕಿ ಇಗ್ನಿಸ್, ಸ್ವಿಫ್ಟ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಗಾತ್ರದಲ್ಲಿ ಬದಲಾವಣೆಯಾಗಿದ್ದರೂ ಈ ಹೊಸ ನಿಯೋಸ್ ಈ ಸೆಗ್‍‍ಮೆಂಟಿನಲ್ಲಿರುವ ಚಿಕ್ಕ ಕಾರುಗಳಲ್ಲಿ ಒಂದಾಗಿದೆ. ಸ್ವಿಫ್ಟ್ ಕಾರು ಅಗಲವಾಗಿದ್ದರೆ, ಫಿಗೊ ಕಾರು ಉದ್ದವಾಗಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

6. ಮಾದರಿಗಳು ಹಾಗೂ ಬಣ್ಣಗಳು

ಹೊಸ ಗ್ರಾಂಡ್ ಐ10 ನಿಯೋಸ್ ಕಾರು ಹಿಂದೆ ಇದ್ದ ಆವೃತ್ತಿಗಳಲ್ಲೇ ಮಾರಾಟವಾಗಲಿದೆ. ಈ ಕಾರ್ ಅನ್ನು ಆಲ್ಫಾ ಬ್ಲೂ, ಅಕ್ವಾ ಟೀಲ್, ಟೈಟಾನ್ ಗ್ರೇ, ಪೋಲಾರ್ ವೈಟ್, ಟೈಫೂನ್ ಸಿಲ್ವರ್ ಹಾಗೂ ಫಿಯರಿ ರೆಡ್ ಎಂಬ ಆರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

ಇದರ ಜೊತೆಗೆ ಬ್ಲಾಕ್ ರೂಫ್ ಪೋಲಾರ್ ವೈಟ್ ಹಾಗೂ ಬ್ಲಾಕ್ ರೂಫ್ ಅಕ್ವಾ ಟೀಲ್ ಎಂಬ ಡ್ಯುಯಲ್ ಬಣ್ಣಗಳಲ್ಲಿಯೂ ಹೊಸ ನಿಯೋಸ್ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಮಾರಾಟ ಮಾಡಲಾಗುತ್ತದೆ.

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬಗ್ಗೆ ತಿಳಿದಿರಬೇಕಾದ 7 ಸಂಗತಿಗಳಿವು

7.ಮೈಲೇಜ್

5 ಸ್ಪೀಡಿನ ಮ್ಯಾನುವಲ್ ಗೇರ್‍‍‍ಬಾಕ್ಸ್ ಹೊಂದಿರುವ ಪೆಟ್ರೋಲ್ ಎಂಜಿನ್ ಕಾರು ಎ‍ಆರ್‍ಎ‍ಐ ಪ್ರಮಾಣಪತ್ರದಂತೆ ಪ್ರತಿ ಲೀಟರಿಗೆ 20.7 ಕಿ.ಮೀ ಮೈಲೇಜ್ ನೀಡುತ್ತದೆ. 5 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹೊಂದಿರುವ ಡೀಸೆಲ್ ಎಂಜಿನ್ ಪ್ರತಿ ಲೀಟರ್ ಪೆಟ್ರೋಲಿಗೆ 20.5 ಕಿ.ಮೀ ಮೈಲೇಜ್ ನೀಡಿದರೆ, ಡೀಸೆಲ್ ಎಂಜಿನ್ ಪ್ರತಿ ಲೀಟರಿಗೆ 26.2 ಕಿ.ಮೀ ಮೈಲೇಜ್ ನೀಡುತ್ತದೆ.

Most Read Articles

Kannada
English summary
Seven things to know about hyundai grand i10 nios - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X