ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಭಾರತದಲ್ಲಿ ಎರಿಕ್ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಅನಾವರಣಗೊಳಿಸಲಾಗಿದೆ. ಸಿಂಗಾಪುರ ಮೂಲದ ಶ್ಯಾಡೋ ಗ್ರೂಪ್ ಎರಿಕ್ ಬ್ರಾಂಡ್ ಹೆಸರಿನಲ್ಲಿ ಬೆಂಗಳೂರು ಮೂಲದ ಅಡಾರಿನ್ ಎಂಜಿನಿಯರಿಂಗ್ ಟೆಕ್ನಾಲಜಿಸ್ ಸಹಭಾಗಿತ್ವದಲ್ಲಿ ಪ್ಯಾಸೆಂಜರ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಅಭಿವೃದ್ಧಿಪಡಿಸಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನವು 5 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಲಿದ್ದು, 70 ಕಿ.ಮೀ ದೂರದವರೆಗೆ ಚಲಿಸಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೊಸ ಅಧ್ಯಾಯವೊಂದು ಶುರುವಾಗಲಿದೆ. ಎಲೆಕ್ಟ್ರಿಕ್ ವಾಹನಗಳು ಇತ್ತೀಚಿನ ಹೊಸ ಟ್ರೆಂಡ್ ಆಗಿರುವುದರ ಜೊತೆಗೆ, ಪರಿಸರ ಸ್ನೇಹಿಯಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಲಿವೆ. ಎಲೆಕ್ಟ್ರಿಕ್ ವಾಹನ ಉದ್ಯಮವು ವೇಗವಾಗಿ ಅಭಿವೃದ್ಧಿಯಾಗುತ್ತಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಈ ಉದ್ಯಮದ ಬೆಳವಣಿಗೆಯು ಸದ್ಯಕ್ಕೆ ಸ್ಥಗಿತಗೊಳ್ಳುವ ಸಾಧ್ಯತೆಗಳಿಲ್ಲ. ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದ ಸ್ಟಾರ್ಟ್ ಅಪ್ ಉದ್ಯಮಗಳು ಆರಂಭವಾಗಿವೆ. ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ, ಉತ್ಪಾದಿಸಿ, ಮಾರಾಟ ಮಾಡಲಾಗುತ್ತಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಎಲೆಕ್ಟ್ರಿಕ್ ಕಾರುಗಳ ಸೆಗ್‍‍ಮೆಂಟಿನಲ್ಲಿ ಕಾರು ತಯಾರಕ ಕಂಪನಿಗಳಾದ ಮಹೀಂದ್ರಾ ಹಾಗೂ ಟಾಟಾ ಮೋಟಾರ್ಸ್, ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿವೆ. ಇತ್ತೀಚೆಗೆ, ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಎಂಜಿ ಮೋಟಾರ್ ಇನ್ನು ಕೆಲ ದಿನಗಳಲ್ಲಿ ಇಝಡ್‍‍ಎಸ್ ವಾಹನಗವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸೆಗ್‍‍ಮೆಂಟಿನಲ್ಲಿ ಅಥರ್ ಎನರ್ಜಿ, ಒಕಿನಾವಾದಂತಹ ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಈ ವಾಹನಗಳಿಗೆ ಪೈಪೋಟಿ ನೀಡಲು ಉಳಿದ ಕಂಪನಿಗಳು ಪ್ರಯತ್ನಪಡುತ್ತಿವೆ. ಆದರೆ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ. ಮಹೀಂದ್ರಾ ಕಂಪನಿಯು 2018ರ ನವೆಂಬರ್‍‍ನಲ್ಲಿ ಟ್ರಿಯೊ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಸರಣಿಯನ್ನು ಪ್ರಾರಂಭಿಸಿತ್ತು.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಟ್ರಿಯೊ ಸರಣಿಯು ಮೂಲ ಮಾದರಿಯಾಗಿದೆ. ಈ ಸೆಗ್‍‍ಮೆಂಟಿನಲ್ಲಿ ಹೇಳಿಕೊಳ್ಳುವಂತಹ ಪೈಪೋಟಿ ಇರುವುದಿಲ್ಲ. ಭಾರತ ಸರ್ಕಾರವು ಎಲ್ಲಾ ತ್ರಿಚಕ್ರ ವಾಹನಗಳನ್ನು 2023ರ ಏಪ್ರಿಲ್‍‍ನಿಂದ ಕಡ್ಡಾಯವಾಗಿ ಎಲೆಕ್ಟ್ರಿಕರಣಗೊಳಿಸಬೇಕೆಂದು ನಿರ್ಧರಿಸಿದೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಶ್ಯಾಡೋ ಕಂಪನಿಯು ತ್ರಿಚಕ್ರ ವಾಹನ ಸೆಗ್‍‍ಮೆಂಟಿನಲ್ಲಿ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಿಂಗಾಪುರ ಮೂಲದ ಶ್ಯಾಡೋ ಗ್ರೂಪ್, ಎರಿಕ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಅನಾವರಣಗೊಳಿಸಿದೆ.

MOST READ: ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಎರಿಕ್ ವಾಹನವು ಕೇವಲ ವಿದ್ಯುತ್ ತ್ರಿಚಕ್ರ ವಾಹನಗಳ ಸೆಗ್‍ಮೆಂಟ್ ಮಾತ್ರವಲ್ಲದೆ ಭಾರತದ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯನ್ನೂ ಬದಲಿಸುವ ಸಾಧ್ಯತೆಗಳಿವೆ. ಬೇರೆ ಎಲೆಕ್ಟ್ರಿಕ್ ವಾಹನಗಳು ಹಳೆಯ ಮಾದರಿಯ ಬ್ಯಾಟರಿಗಳನ್ನು ಬಳಸುತ್ತಿದ್ದರೆ, ಎರಿಕ್ ಅಲ್ಟ್ರಾ ಕೆಪಾಸಿಟರ್ ಬ್ಯಾಟರಿಯನ್ನು ಬಳಸಲಿದೆ.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಈ ಬ್ಯಾಟರಿಯಲ್ಲಿ ಡಿ ಎಲೆಕ್ಟ್ರಿಕ್ ವಸ್ತುಗಳಿರಲಿವೆ. ಅಂದರೆ, ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಕೆಮಿಕಲ್ ರಿಯಾಕ್ಷನ್‍‍ಗಳಿರುತ್ತವೆ. ಆದರೆ ಡಿ ಎಲೆಕ್ಟ್ರಿಕ್ ಬ್ಯಾಟರಿಗಳಲ್ಲಿ ಕೆಮಿಕಲ್ ರಿಯಾಕ್ಷನ್ ಇರುವುದಿಲ್ಲ. ಇದರಿಂದಾಗಿ ಬ್ಯಾಟರಿಯು ವೇಗವಾಗಿ ಚಾರ್ಜ್ ಆಗಲಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಎರಿಕ್‍‍ನ ಪ್ರಕಾರ ಬ್ಯಾಟರಿಯು ಐದು ನಿಮಿಷಗಳಲ್ಲಿ ಚಾರ್ಜ್ ಆಗಲಿದೆ. ಇದುವರೆಗೂ ಯಾವ ಕಂಪನಿಯ ಬ್ಯಾಟರಿಯು ಸಹ ಇಷ್ಟು ವೇಗವಾಗಿ ಚಾರ್ಜ್ ಆಗುತ್ತಿಲ್ಲ. ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 70 ಕಿ.ಮೀವರೆಗೆ ಚಲಿಸಬಹುದಾಗಿದೆ. ಇದರಿಂದಾಗಿ ಆಟೋ ರಿಕ್ಷಾ ಚಾಲಕರಿಗೆ ಹೆಚ್ಚಿನ ಲಾಭವಾಗಲಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಶ್ಯಾಡೋ ಗ್ರೂಪ್, ಎರಿಕ್‍‍ಗಾಗಿ ಭಾರತದಲ್ಲಿ ದೊಡ್ಡ ಯೋಜನೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ಪುಣೆ ಬಳಿ ಉತ್ಪಾದನಾ ಘಟಕ ಸ್ಥಾಪನೆಗಾಗಿ ಸುಮಾರು ರೂ.71 ಕೋಟಿ ಬಂಡವಾಳ ಹೂಡಿಕೆಯು ಸೇರಿದೆ. ಈ ಉತ್ಪಾದನಾ ಘಟಕವು ವಾರ್ಷಿಕವಾಗಿ 12,000 ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಇದರಿಂದಾಗಿ ಬೇಡಿಕೆಗಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳನ್ನು ಪೂರೈಸಲು ಸಾಧ್ಯವಾಗಲಿದೆ. ಡ್ರೈವ್‌ಟ್ರೇನ್‌ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಡ್ರೈವ್‍‍ಟ್ರೇನ್ ಕಡಿಮೆ ವೋಲ್ಟೇಜ್ ಮೋಟರ್ ಅನ್ನು ಡಿಫರೆನ್ಷಿಯಲ್‌ನೊಂದಿಗೆ ಕಡಿಮೆ ವೇಗದಲ್ಲಿ ತಲುಪಿಸುವ ಟಾರ್ಕ್ ಹೊಂದಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಮೋಟಾರ್ ಕಂಟ್ರೋಲರ್ ಲಿಕ್ವಿಡ್ ಕೂಲ್ ಆಗಿದ್ದು, ಭಾರತದಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಕಾರ್ಯನಿರ್ವಹಿಸಲಿದೆ. ಬ್ಯಾಟರಿ ಮ್ಯಾನೇಜ್‍‍ಮೆಂಟ್ ಸಿಸ್ಟಂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿದೆ. ಇದರಿಂದಾಗಿ ಸ್ಥಿರವಾದ ಚಾರ್ಜಿಂಗ್ ಹಾಗೂ ಪವರ್ ಔ‍‍ಟ್‍‍ಪುಟ್ ನೀಡಲಿದೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಶ್ಯಾಡೋ ಗ್ರೂಪ್‌ನ ಸಹ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸೌರಭ್ ಮಾರ್ಕಂಡೇಯರವರು ಮಾತನಾಡಿ, ನಮ್ಮ ತ್ರಿಚಕ್ರ ವಾಹನಗಳು ಕಡಿಮೆ ಮೆಂಟೆನೆನ್ಸ್ ಹಾಗೂ ಶೂನ್ಯ ಮಾಲಿನ್ಯವನ್ನು ಹೊಂದಿವೆ. ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳನ್ನು ವಾಹನಗಳ ಸಾಮರ್ಥ್ಯಕ್ಕೆ ಸರಿಸಾಟಿಯಾಗಲಿವೆ ಎಂದು ಹೇಳಿದರು.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಬ್ಯಾಟರಿಗಳು ಕೆಲವೇ ನಿಮಿಷಗಳಲ್ಲಿ ಚಾರ್ಜ್ ಆಗುತ್ತವೆ. ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಬ್ಯಾಟರಿಗಳಿಗಿಂತ 20 ಪಟ್ಟು ಹೆಚ್ಚು ಕಾಲ ಉಳಿಯುತ್ತವೆ. -25 ಡಿಗ್ರಿಯಿಂದ +60 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನದಲ್ಲಿಯೂ ಬ್ಯಾಟರಿಯ ಸಾಮರ್ಥ್ಯವು ಕುಸಿಯುವುದಿಲ್ಲ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಭಾರತದ ವಾಹನ ಮಾಲೀಕರು ಈ ರೀತಿಯ ಬ್ಯಾಟರಿಯ ಹುಡುಕಾಟದಲ್ಲಿದ್ದರು. ಎರಿಕ್ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ಪ್ರತಿ ಕಿ.ಮೀಗೆ ಕೇವಲ ರೂ.1.50 ವೆಚ್ಚವಾಗಲಿದೆ. ಎರಿಕ್ ವಾಹನದ ಬಳಕೆದಾರರು ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಅನೇಕ ವಿಧಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಕಂಪನಿಯು ಕೆಲ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಅವುಗಳಲ್ಲಿ ಕೆಲವು ವಿದ್ಯುತ್ ಗ್ರಿಡ್‌‍‍ನ ಸಂಪರ್ಕ ಹೊಂದಿದರೆ, ಇನ್ನೂ ಕೆಲವು ಸೌರಶಕ್ತಿಯಿಂದ ಚಾಲಿತವಾಗಿರಲಿವೆ.

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಸಮಸ್ಯೆಯೆಂದರೆ ದೂರ ಹಾಗೂ ಚಾರ್ಜಿಂಗ್ ಸಮಯ. ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ದೂರ ಚಲಿಸಿದರೂ, ಚಾರ್ಜಿಂಗ್‍‍ಗಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತವೆ. ಶ್ಯಾಡೋ ಎರಿಕ್ ಬಿಡುಗಡೆಯ ನಂತರ ಇದು ಬದಲಾಗಲಿದೆ. ಐದು ನಿಮಿಷಗಳಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಲು ಬಳಸಿರುವ ಚಾರ್ಜಿಂಗ್ ತಂತ್ರಜ್ಞಾನವನ್ನು ಬೇರೆ ವಾಹನ ತಯಾರಕರು ಸಹ ಬಳಸುವ ಸಾಧ್ಯತೆಗಳಿವೆ. ಆಟೋರಿಕ್ಷಾ ಪ್ರಯಾಣವು ಸಹ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಆಗಿರಲಿದೆ.

Most Read Articles

Kannada
English summary
Shado Erick Electric Three-Wheeler Unveiled With Instant Charging Capabilities - Read in kannada
Story first published: Saturday, August 17, 2019, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more