Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಕೋಡಾ ಇಂಡಿಯಾ ನಿರ್ದೇಶಕರಿಂದ ಪ್ರಶಂಸೆ ಪಡೆದ ಕಿಯಾ ಸೆಲ್ಟೊಸ್. ಹಾಗಾದರೆ ಹೆಕ್ಟರ್.?
ಆಟೋಮೊಬೈಲ್ ಉದ್ಯಮವು ತಿಂಗಳಿಂದ ತಿಂಗಳಿಗೆ ಮಾರಾಟದಲ್ಲಿ ನಷ್ಟವನ್ನು ಕಾಣುತ್ತಿದ್ದು, ದೇಶಿಯ ಮಾರುಕಟ್ಟೆ ಮಾತ್ರ ಹಲವಾರು ವಾಹನ ತಯಾರಕ ಸಂಸ್ಥೆಗಳಿಗೆ ಕೊಂಚ ಮಟ್ಟದಲ್ಲಿ ಲಾಭವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಹಲವಾರು ವಾಹನ ತಯಾರಕ ಸಂಸ್ಥೆಗಳು ಭಾರತದಲ್ಲಿ ತಮ್ಮ ಉತ್ಪಾದನ ಘಟಕಗಳನ್ನು ತೆರೆಯಲು ಮುಂದಾಗುತ್ತಿದ್ದಾರೆ.

ಇದೇ ವರ್ಷದಲ್ಲಿ ಕಿಯಾ ಮೋಟಾರ್ಸ್ ಮತ್ತು ಮೋರಿಸ್ ಗ್ಯಾರೇಜಸ್ (ಎಂಜಿ ಮೋಟಾರ್ಸ್) ಸಂಸ್ಥೆಗಳು ಮೊದಲ ಬಾರಿಗೆ ದೇಶಿಯ ಮಾರುಕೃಟ್ಟೆಯಲ್ಲಿ ಕಾಲಿಟ್ಟಿದೆ. ಸ್ಪರ್ಧೆಯು ಗಟ್ಟಿಯಾಗುವುದರೊಂದಿಗೆ ಮತ್ತು ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಸ್ಕೋಡಾ ಇಂಡಿಯಾದ ನಿರ್ದೇಶಕ ಝಾಕ್ ಹೋಲಿಸ್ ಅವರು ಕ್ಷೇತ್ರ ಪ್ರವಾಸವೆಂದು ಈ ಎರಡೂ ಸಂಸ್ಥೆಗಳ ಶೋರುಂಗೆ ಭೇಟಿ ನೀಡಲು ನಿರ್ಧರಿಸಿದರು.

ಝಾಕ್ ಹೋಲಿಸ್ರವರ ಪ್ರಕಾರ ಎರಡೂ ಕಾರುಗಳ ಹೋಲಿಕೆಯ ಅಭಿಪ್ರಾಯವು ವ್ಯತಿರಿಕ್ತವಾಗಿದೆ. ಇವೆರಡು ಕಾರುಗಳಲ್ಲೊಂದು ಸ್ಕೊಡಾ ಇಂಡಿಯಾ ನಿರ್ದೇಶಕರ ಮೇಲೆ ಅವರ ಕಾರುಗಳ ಗುಣಮಟ್ಟದ ಮೇಲೆ ಪ್ರಭಾವ ಬೀರಿದರೆ ಮತ್ತೊಂದು ವಾಹನವು ಅವರ ಕರಿಗೆ ದೀರ್ಘಕಾಲೀನ ಪ್ರಭಾವ ಬೀರಿದೆ.

ಮೊದಲಿಗೆ ಝಾಕ್ ಹೋಲಿಸ್ರವರು ಎಂಜಿ ಮೋಟಾರ್ ಶೋರುಂಗೆ ಬೇಟಿ ನೀಡಿದ್ದು, ಅದಾದ ನಂತರ ಒಂದು ಟ್ವೀಟ್ ಅನ್ನು ಮಾಡಿದ್ದಾರೆ. ಅವರು ಮಾಡಿದ ಟ್ವೀಟ್ನಲ್ಲಿ ಎಂಜಿನ್ ಮೋಟಾರ್ ಶೋರುಂ ಉತ್ತಮ ವಿನ್ಯಾಸದೊಂದಿಗೆ ಮತ್ತು ತಾಜಾ ಕಾರ್ಪೋರೆಟ್ ವಾತಾವರಣವನ್ನು ತೋರಿಸುತ್ತದೆ. ಆದರೆ ಎಂಜಿ ಹೆಕ್ಟರ್ ಕಾರು ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಕಾರು ಬಳಷ್ಟು ಚೀನಾ ಮಾದರಿಯನ್ನು ಹೋಲುತ್ತದೆ. ಇದರಲ್ಲಿ ನೀಡಲಾದ ಫೀಚರ್ಗಳಿಂದ ಗ್ರಾಹಕರು ಇದನ್ನು ಖರೀದಿಸುತ್ತಿದ್ದಾರೆ. ಆದರೆ ಈ ಕಾರು ನನಗೆ ನಿರಾಸೆ ಮೂಡಿಸಿದೆ. ಎಂದು ಹೇಳಿದ್ದಾರೆ.

ಇನ್ನು ಎರಡನೆಯದಾಗಿ ಅವರು ಭೇಟಿ ನೀಡಿದ ಕಿಯಾ ಮೋಟಾರ್ಸ್ ಶೋರುಂ ಬಗ್ಗೆ ಕೂಡಾ ಒಂದು ಟ್ವೀಟ್ ಮಾಡಿದ್ದಾರೆ. ಈ ಸ್ಥಳವು ಸಾದಾರಣವಾದ ವಿನ್ಯಾಸದಲ್ಲಿ ಮತ್ತು ಇನ್ನು ಮುಗಿಯದ ಹಾಗೆ ಕಾಣಿಸುತ್ತದೆ. ಶೀಘ್ರವೇ ಇನ್ನು ಕೇವಲ 16 ದಿನಗಳಲ್ಲಿ ತೆರೆದುಕೊಳ್ಳುತ್ತದೆ, ಕಿಯಾ ಸೆಲ್ಟೊಸ್ ಎಸ್ಯುವಿ ಕಾರು ಸಾಕಷ್ಟು ವೈಶಿಷ್ಟ್ಯತೆಗಳೊಂದಿಗೆ ಈ ಕಾರು ಉತ್ತಮವಾಗಿದೆ. ಬೆಲೆಯ ಬಗ್ಗೆ ಇನ್ನು ನಿಖರವಾದ ಮಾಹಿತಿ ಲಭ್ಯವಿಲ್ಲವಾದರೂ, ಈ ಸೆಗ್ಮೆಂಟ್ನಲ್ಲಿ ಮುಂಚುಣಿಯಲ್ಲಿ ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ. ಎಂದು ಹೇಳಿದ್ದಾರೆ.

ಹಾಲಿಸ್ರವರು ಎಂಜಿ ಹೆಕ್ಟರ್ ಅನ್ನು ಚೀನಾ ಮಾದರಿಯ ಕಾರು ಎಂದು ಹೇಳಲು ಕಾರಣವೇನು.?
ಎಂಜಿ ಮೋಟಾರ್ಸ್ ಬ್ರಾಂಡ್ ಯುಕೆ ಮೂಲದಿದ್ದರೂ ಸಹ, ಬ್ರಾಂಡ್ನ ಮೂಲವಾದ ಎಸ್ಎಐಸಿ ಚೀನಾದಲ್ಲಿ ನೆಲೆಸಿದೆ. ಎಂಜಿ ಹೆಕ್ಟರ್, ಪ್ರಸ್ತುತ ಚೀನಾದ ತಯಾರಕರ ಅಡಿಯಲ್ಲಿ ವಿವಿಧ ದೇಶಗಳಲ್ಲಿ ಮಾರಾಟದಲ್ಲಿದೆ. ಚೀನಾದಲ್ಲಿ, ಈ ವಾಹನವು ಬೌಜುನ್ 530 ಹೆಸರಿನಲ್ಲಿ ದೀರ್ಘಕಾಲದವರೆಗೆ ಮಾರಾಟದಲ್ಲಿದೆ.

ಇದೇ ವಾಹನವು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಚೀನಾದ ಮತ್ತೊಬ್ಬ ಉತ್ಪಾದಕರಾದ - ವುಲಿಂಗ್ ಬ್ರಾಂಡ್ನಡಿಯಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಮಾತ್ರ ಎಸ್ಐಸಿ ಬ್ರಿಟಿಷ್ ಬ್ರಾಂಡ್ ಹೆಸರನ್ನು ಬಳಸುತ್ತದೆ. ಬೌಜುನ್ 530 ಅನ್ನು ಚೀನಾದಲ್ಲಿ ಎಸ್ಐಸಿ-ಜಿಎಂ-ವುಲಿಂಗ್ ಸಹಭಾಗಿತ್ವದಿಂದ ಉತ್ಪಾದಿಸಲಾಗಿದೆ ಮತ್ತು ಇದನ್ನು 2017 ರಲ್ಲಿ ಚೀನಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಈ ವಾಹನವನ್ನು ಷೆವ್ರೊಲೆಟ್ ಕ್ಯಾಪ್ಟಿವಾ ಎಂದು ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಾದ ಕೊಲಂಬಿಯಾ ಮತ್ತು ಪೆರುವಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ, ಹೆಕ್ಟರ್ ಅನ್ನು ಗುಜರಾತ್ನ ಹಲೊಲ್ನಲ್ಲಿರುವ ಎಂಜಿ ಜನರಲ್ ಮೋಟಾರ್ಸ್ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತದೆ, ಇದನ್ನು ಸ್ವಲ್ಪ ಸಮಯದ ಹಿಂದೆ ಚೀನಾದ ವಾಹನ ತಯಾರಕ ಎಸ್ಐಸಿ (ಎಂಜಿ ಮೋಟಾರ್ಸ್ನ ಪ್ರಸ್ತುತ ಮಾಲೀಕರು) ಖರೀದಿಸಿದರು.
MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್
ಹೆಕ್ಟರ್ ಎಸ್ಯುವಿ ಕಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಅಗಾಧ ಪ್ರತಿಕ್ರಿಯೆ ಬಂದಿದೆ. ಈಗಾಗಲೇ 28,000 ಕ್ಕೂ ಹೆಚ್ಚು ಜನರು ಇದನ್ನು ಕಾರೀದಿಸಿದ್ದಾರೆ, ಮತ್ತು ಎಂಜಿ ಮೋಟಾರ್ಸ್ ಪ್ರಸ್ತುತ ಅಸ್ತಿತ್ವದಲ್ಲಿರುವ ಆದೇಶಗಳನ್ನು ಮೊದಲು ಒದಗಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರಸ್ತುತ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ. ಈ ವರ್ಷದ ಕೊನೆಯಲ್ಲಿ ಬುಕ್ಕಿಂಗ್ ಅನ್ನು ಮತ್ತೆ ತೆರೆಯಲಿದ್ದು, ಎಂಜಿ ಮೋಟಾರ್ ಮುಂದಿನ ವರ್ಷದ ಆರಂಭದಲ್ಲಿ ಹೆಕ್ಟರ್ನ 7 ಆಸನಗಳ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.
MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ
ಕಿಯಾ ಸೆಲ್ಟೋಸ್ನ ವಿಷಯಕ್ಕೆ ಬಂದರೆ, ವಾಹನವನ್ನು ಕಿಯಾ ಮೋಟಾರ್ಸ್ (ದಕ್ಷಿಣ ಕೊರಿಯಾದ ವಾಹನ ತಯಾರಕ ಹ್ಯುಂಡೈ ಒಡೆತನ) ಸಂಪೂರ್ಣವಾಗಿ ವಿನ್ಯಾಸಗೊಳಿಸಿದೆ, ಮತ್ತು ಹೆಕ್ಟರ್ನಂತೆಯೇ ಜಾಗತಿಕ ವಾಹನವಾಗಿದ್ದು, ಇದು ವಿವಿಧ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಸೆಲ್ಟೋಸ್ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಈಗಾಗಲೇ ಮೂರು ವಾರಗಳಲ್ಲಿ 23,000 ಕ್ಕಿಂತ ಹೆಚ್ಚು ಬುಕ್ಕಿಂಗ್ ಪಡೆದಿದೆ.

ಇನ್ನು ಝಾಕ್ ಹೋಲಿಸ್ರವರು ಪ್ರತಿಸ್ಪರ್ಧಿ ಉತ್ಪನ್ನಗಳು ಮತ್ತು ಮಾರಾಟದ ವಾತಾವರಣವನ್ನು ಅರ್ಥಮಾಡಿಕೊಳ್ಳಲು ಶೋ ರೂಂಗಳಿಗೆ ಹೋಗುತ್ತಿದ್ದೇನೆ ಎಂದು ಅವರು ಈ ಹಿಂದೆ ಟ್ವೀಟ್ ಮಾಡಿದ್ದಾರೆ. ಸ್ಕೋಡಾ ಪ್ರಸ್ತುತ ಇಂಡಿಯಾ 2.0 ಯೋಜನೆಗೆ ಮುಂದಾಗಿದೆ, ಇದು ಮುಂಬರುವ ತಿಂಗಳುಗಳಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಸ್ಕೋಡಾ ಕಾಮಿಕ್ ಅನ್ನು ಹೆಚ್ಚು ಆಧರಿಸಲಿರುವ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ನ ಪ್ರತಿಸ್ಪರ್ಧಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸ್ಕೋಡಾ ಯೋಜಿಸುತ್ತಿದೆ. ನಂತರ, ಕರೋಕ್ ಆಧಾರಿತ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಇದು ಭಾರತದ ಕಾಮಿಕ್ ಮತ್ತು ಕರೋಕ್ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.