ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಸ್ಕೋಡಾ ಇಂಡಿಯಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ಹೊಸ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ ರೂ.32.99 ಲಕ್ಷ ದರ ಹೊಂದಿದೆ. ಇದು ಸ್ಟ್ಯಾಂಡರ್ಡ್ ಮಾದರಿಗಿಂತ ಸುಮಾರು 2 ಲಕ್ಷ ಅಗ್ಗವಾಗಿದೆ.

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಸ್ಕೋಡಾ ಇಂಡಿಯಾದ ಕೊಡಿಯಾಕ್ ಕಾರ್ಪೊರೇಟ್ ಕಾರು ಎಲ್ಲರಿಗೂ ಲಭ್ಯವಿಲ್ಲ. ಹೊಸ ಕಾರ್ಪೊರೇಟ್ ಆವೃತ್ತಿಯು ದೇಶಿಯ ಮಾರುಕಟ್ಟಿಯಲ್ಲಿನ ನಿಷ್ಠಾವಂತ ಸ್ಕೋಡಾ ಗ್ರಾಹಕರಿಗೆ ಮಾತ್ರ ನೀಡಲಾಗುತ್ತದೆ. ಅಂದರೆ ಅಸ್ತಿತ್ವದಲ್ಲಿರುವ ಸ್ಕೋಡಾ ಗ್ರಾಹಕರು ಮಾತ್ರ ಹೊಸ ಕೊಡಿಯಾಕ್ ಕಾಪೊರೇಟ್ ಆವೃತ್ತಿ ಮಾದರಿಯನ್ನು ಖರೀದಿಸಬಹುದು.

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಸ್ಕೊಡಾ ಕೊಡಿಯಾಕ್ ಎಸ್‍‍ಯು‍ವಿ ಸ್ಟೈಲ್ ಮತ್ತು ಎಲ್ & ಕೆ (ಲೌರಿನ್ ಮತ್ತು ಕ್ಲೆಮೆಂಟ್) ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ಸ್ಟೈಲ್ ಆವೃತ್ತಿಗೆ ರೂ. 35.3 ಲಕ್ಷ ಮತ್ತು ಎಲ್ & ಕೆ ಆವೃತ್ತಿಗೆ ರೂ. 36.78 ಲಕ್ಷ ಬೆಲೆಯನ್ನು ಹೊಂದಿದೆ.

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ ಸ್ಟ್ಯಾಂಡರ್ಡ್ ಸ್ಟೈಲ್ ಆವೃತ್ತಿಯನ್ನು ಆಧರಿಸಿದೆ. ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳು, ಫೀಚರ್‍‍ಗಳು ಮತ್ತು ಉಪಕರಣಗಳು ಮತ್ತು ಆಯ್ಕೆಗಳನ್ನು ಎರವಲು ಪಡೆದುಕೊಂಡಿದೆ. ಇದರಲ್ಲಿ ಎಲ್‍ಇಡಿ ಹೆಡ್‍‍ಲ್ಯಾಂಪ್, ಎಲ್‍ಇಡಿ ಟೈಲ್‍‍ಲೈಟ್‍‍ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಫಾಗ್‍‍ಲ್ಯಾಂಪ್ ಮತ್ತು ಪನೋರಮಿಕ್ ಸನ್‍‍ರೂಫ್

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಸ್ಕೋಡಾ ಕೊಡಿಯಾಕ್‍‍ನ ಇಂಟಿರಿಯರ್ ವೈಶಿಷ್ಟ್ಯಗಳು ಕೀಲೆಸ್ ಎಂಟ್ರಿ, 3-ಝೋನ್ ಕ್ಲೆಮೆಂಟ್ ಕಂಟ್ರೋಲ್, ಎಲೆಕ್ಟ್ರಿಕಲ್ ಅಡ್ಜಸ್ಟ್ಬೆಲ್ ಓಆರ್‍‍ವಿ‍ಎಂ, ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್,ಟೆಲಿಸ್ಕೋಪಿಕ್ ಸ್ಟೀರಿಂಗ್ ಅಡ್ಜೆಸ್ಟ್‌ಮೆಂಟ್‌ ಜೊತೆ ಇತರ ವೈಶಿಷ್ಟ್ಯಗಳು ಹೊಂದಿದೆ.

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಹೊಸ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಯು ಪ್ರಯಾಣಿಕರ ಸುರಕ್ಷತೆಗಾಗಿ 9 ಏರ್‍‍ಬ್ಯಾಗ್, ಎ‍‍ಬಿಎಸ್ ಜೊತೆ ಇ‍‍‍ಬಿಡಿ, ಹೈಸ್ಪೀಡ್ ಅಲರ್ಟ್, ಸೀಟ್‍-ಬೆಲ್ಟ್ ರಿಮೈಂಡರ್ ಜೊತೆಗೆ 4 ವರ್ಷದ ವ್ಯಾರೆಂಟಿಯನ್ನು ಒಳಗೊಂಡಿದೆ.

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಕಾರ್ಪೊರೇಟ್ ಆವೃತ್ತಿಯು ಯಾಂತ್ರಿಕವಾಗಿಯೂ ಕೊಡಿಯಾಕ್ ಎಸ್‍‍ಯು‍ವಿ ಸ್ಟ್ಯಾಂಡರ್ಡ್ ಸ್ಟೈಲ್ ಆವೃತ್ತಿಗೆ ಹೋಲುತ್ತದೆ. ಹೊಸ ಕಾರ್ಪೊರೇಟ್ ಆವೃತ್ತಿಯು 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್‍ಅನ್ನು ಹೊಂದಿದ್ದು, ಈ ಎಂಜಿನ್ 3500 ಆರ್‍‍ಪಿ‍ಎಂನಲ್ಲಿ 148 ಬಿ‍ಎಚ್‍‍ಪಿ ಮತ್ತು 1750 ಆರ್‍‍‍ಪಿ‍ಎಂ‍‍ನಲ್ಲಿ 340 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍‍ನ್‍‍ನೊಂದಿಗೆ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಿಲ್ಲದೆ 7-ಸ್ಪೀಡ್ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಸ್ಟ್ಯಾಂಡರ್ಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಯ ಹೊರತಾಗಿ ಕಂಪನಿಯು ಮಾರುಕಟ್ಟೆಯಲ್ಲಿನ ಕೆಲವು ಆಯ್ದ ಮಾದರಿಗಳ ಬೆಲೆಗಳನ್ನು ಸಹ ಕಡಿಮೆ ಮಾಡಿದೆ. ಇದು ಸ್ಕೋಡಾ ರಾಪಿಡ್ ಮತ್ತು ಸುಪರ್ಬ್ ಅನ್ನು ಒಳಗೊಂಡಿದೆ. ಇದು ಈಗ ಕ್ರಮವಾಗಿ ಸ್ಟ್ಯಾಂಡರ್ಡ್ ಮಾದರಿಗಿಂತ ರೂ. 1.21 ಲಕ್ಷ ಮತ್ತು 1.81 ಲಕ್ಷ ದರವು ಕಡಿಮೆ ಆಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡುಗಡೆಯಾದ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿ

ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಯು ದೇಶಿಯ ಮಾರುಕಟ್ಟೆಯ ಎಸ್‍ಯು‍ವಿ ವಿಭಾಗಕ್ಕೆ ಉತ್ತಮ ಕೊಡುಗೆಯಾಗಿದೆ. 7 ಸೀಟ್ ಸ್ಕೋಡಾ ಎಸ್‍‍ಯು‍ವಿ ಹೊಸ ಆವೃತ್ತಿ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಆವೃತ್ತಿಯು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಕೋಡಾ ಕೊಡಿಯಾಡ್ ಕಾರು ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ 4 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
Skoda Kodiaq Corporate Edition Launched In India: Priced At Rs 33 Lakh - Read in Kannada
Story first published: Tuesday, September 17, 2019, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X