ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಸ್ಕೋಡಾ ಆಟೋ ಇಂಡಿಯಾ ತನ್ನ ಪ್ರಮುಖ ಎಸ್‍‍ಯು‍‍ವಿಯಾದ ಕೊಡಿಯಾಕ್‍‍ನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಕೊಡಿಯಾಕ್ ಸ್ಕೌಟ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಇದೇ ತಿಂಗಳು 30ರಂದು ಬಿಡುಗಡಗೊಳಿಸಲಾಗುವುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಹೊಸ ಸ್ಕೋಡಾ ಕೊಡಿಯಾಕ್ ಸ್ಕೌಟ್ ಸ್ಟ್ಯಾಂಡರ್ಡ್ ರೂಪಾಂತರವು ಹಲವಾರು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಕೊಡಿಯಾಕ್ ಸ್ಕೌಟ್ ಅನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಎಸ್‍‍ಯುವಿಗಳು ಹೊಂದಿರುವ ಸ್ಟೈಲ್ ಮತ್ತು ಎಲ್ ಅಂಡ್ ಕೆ ಟ್ರಿಮ್‍‍ಗಳನ್ನ ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಮಾರುಕಟ್ಟೆಯಲ್ಲಿರುವ ಎರಡು ಮಾದರಿಗಳಿಗೆ ಹೋಲಿಸಿದರೆ, ಸ್ಕೋಡಾ ಕೊಡೀಯಾಕ್ ಸ್ಕೌಟ್ 194 ಎಂಎಂ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದೆ. ಇದು ಎರಡು ಸ್ಟ್ಯಾಂಡರ್ಡ್ ಮಾದರಿಗಳ ಗ್ರೌಂಡ್ ಕ್ಲಿಯರೆನ್ಸ್ ಗಿಂತ 6 ಎಂಎಂ ಹೆಚ್ಚಾಗಿದೆ. ಸ್ಕೌಟ್ ಇತರ ಎರಡು ರೂಪಾಂತರಗಳಿಗಿಂತ ಉತ್ತಮವಾದ ಆಫ್-ರೋಡರ್ ಆಗಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಸ್ಕೋಡಾ ಕೊಡಿಯಾಕ್ ಸ್ಕೌಟ್ ಏಳು ಡ್ರೈವಿಂಗ್ ಮೋಡ್‍‍ಗಳನ್ನು ಹೊಂದಿದೆ. ಆರು ಮೋಡ್‍‍ಗಳನ್ನು ಸ್ಟ್ಯಾಂಡರ್ಡ್ ಮಾದರಿಗಳಲ್ಲಿ ನೀಡಲಾಗುವುದು. ಆ ಆರು ಮೋಡುಗಳೆಂದರೆ ಇಕೊ, ಕಂಫರ್ಟ್, ನಾರ್ಮಲ್, ಸ್ಪೋರ್ಟ್ಸ್, ಇಂಡ್‍‍ವಿಜ್ಯುವಲ್ ಮತ್ತು ಸ್ನೋ. ಕೊಡಿಯಾಕ್ ಸ್ಕೌಟ್ ಆಫ್-ರೋಡ್ ಮೋಡ್‍ ಅನ್ನು ಹೊಂದಿದೆ. ಕೊಡಿಯಾಕ್ ಸ್ಕೌಟ್ ಹಿಲ್-ಹೊಲ್ಡ್ ಮತ್ತು ಹಿಲ್-ಡೆಸೆಂಟ್ ಫೀಚರ್‍‍ಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

19 ಇಂಚಿನ ವ್ಹೀಲ್‍‍ಗಳು, ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಗ್ರಿಲ್, ರೂಫ್ ರೈಲ್ಸ್, ವಿಂಡೋಸ್ ಮತ್ತು ಒಆರ್‍‍ವಿಎಂ ಹೌಸಿಂಗ್, ಮುಂಭಾಗ ಮತ್ತು ಹಿಂಭಾಗದ ಅಂಡ‍‍ರ್‍‍ಬಾಡಿ ಪ್ರೊಟೆಕ್ಷನ್ ಹೊಸ ಸ್ಕೋಡಾ ಕೊಡಿಯಾಕ್ ಸ್ಕೌಟ್‍‍ನಲ್ಲಿನಲ್ಲಿರುವ ಇತರ ಹೆಚ್ಚುವರಿ ಫೀಚರ್‍‍ಗಳಾಗಿವೆ. ಸ್ಕೋಡಾ ಕೊಡಿಯಾಕ್ ಸ್ಕೌಟ್‍‍ನ ಇಂಟಿರಿಯರ್‍‍ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಇಂಟಿರಿಯರ್‍‍ನಲ್ಲಿ ಸೀಟ್‍ಗಳು, ಏರ್‍‍ಬ್ಯಾಗ್‍ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪವರ್ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಡ್ರೈವರ್ ಮತ್ತು ಪ್ರಯಾಣಿಕರ ಸೀಟ್‍‍ಗಳು, ಕೀ ಲೆಸ್ ಎಂಟ್ರಿ ಮತ್ತು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‍‍ಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಮೆಕಾನಿಕಲ್ ವಿಷಯಗಳ ಬಗ್ಗೆ ಹೇಳುವುದಾದರೆ, ಸ್ಕೋಡಾ ಕೊಡಿಯಾಕ್ ಸ್ಕೌಟ್‍‍ನಲ್ಲಿ ಸ್ಟೈಲ್ ಮತ್ತು ಎಲ್ ಆ್ಯಂಡ್ ಕೆ ಮಾದರಿಯ ಎಂಜಿನ್ ಅನ್ನು ಅಳವಡಿಸಲಾಗಿದೆ. 2.0 ಲೀಟರಿನ ಈ ಡೀಸೆಲ್ ಎಂಜಿನ್ 3500 ಆರ್‍‍ಪಿಎಂನಲ್ಲಿ 148 ಬಿಎ‍ಚ್‍ಪಿ ಪವರ್ ಮತ್ತು 1750 ಆರ್‍‍ಪಿಎಂನಲ್ಲಿ 340 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಜೊತೆಯಲ್ಲಿ 7-ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಸ್ಕೋಡಾ ಇತ್ತೀಚೆಗೆ ಕೊಡಿಯಾಕ್ ಎಸ್‍‍ಯು‍ವಿಯ ಕಾರ್ಪೊರೇಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಸ್ಕೋಡಾ ಕೊಡಿಯಾಕ್ ಕಾರ್ಪೊರೇಟ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.33 ಲಕ್ಷಗಳಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಸ್ಕೌಟ್

ಕೊಡಿಯಾಕ್ ಸ್ಕೌಟ್, ಸ್ಕೋಡಾ ಕಂಪನಿಯ ಪ್ರಮುಖ ಎಸ್‍‍ಯು‍ವಿಯಾಗಿದ್ದು, ಆಫ್-ರೋಡ್ ಆಧಾರಿತವಾಗಿದೆ. ಕೊಡಿಯಾಕ್ ಸ್ಕೌಟ್ ಎಲ್ ಮತ್ತು ಕೆ ಮಾದರಿಗಿಂತಲೂ ಮೇಲಿನ ಸ್ಥಾನದಲ್ಲಿದೆ. ಕೊಡಿಯಾಕ್ ಸ್ಕೌಟ್ ಎಸ್‍‍ಯುವಿ ಮಹೀಂದ್ರಾ ಜಿ4, ಟೊಯೋಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Kodiaq Scout India Launch Date Confirmed: Here Are All The Details Ahead Of its Launch - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X