ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

124 ವರ್ಷಗಳ ಇತಿಹಾಸ ಹೊಂದಿರುವ ಸ್ಕೋಡಾ ಕಂಪನಿಯು ಹೊಸ ಅಧ್ಯಾಯವೊಂದನ್ನು ಬರೆಯುತ್ತಿದೆ. ಜೆಕ್ ಮೂಲದ ಈ ಕಂಪನಿಯು ಹೊಸ ಸಬ್‍ ಬ್ರಾಂಡ್ ಬಿಡುಗಡೆ ಮಾಡುತ್ತಿದ್ದು, ಆ ಮಾದರಿಗೆ ಐವಿ ಎಂಬ ಹೆಸರಿಡಲಾಗಿದ್ದು, ಇದರಿಂದಾಗಿ ಇನ್ನು ಮುಂದೆ ಕಂಪನಿಯು ತನ್ನದೇ ಆದ ಎಲೆಕ್ಟ್ರಿಕ್ ವಾಹನಗಳನ್ನು ಹಾಗೂ ಮೊಬಿಲಿಟಿ ಸಲ್ಯೂಷನ್‍‍ಗಳನ್ನು ಹೊಂದಲಿದೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಸ್ಕೋಡಾ ಕಂಪನಿಯ ಪ್ರಕಾರ, ಐ ಎನ್ನುವುದು ಇನ್ನೊವೇಟಿವ್ ಹಾಗೂ ಇಂಟೆಲಿಜೆನ್ಸ್ ಸೂಚಿಸಿದರೆ, ವಿ ಯು ವೆಹಿಕಲ್ ಅನ್ನು ಸೂಚಿಸುತ್ತದೆ. ಸ್ಕೋಡಾ ಕಂಪನಿಯು ಸುಮಾರು 2 ಬಿಲಿಯನ್ ಯೂರೋವನ್ನು ಮುಂದಿನ 5 ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗಾಗಿ ಹಾಗೂ ಹೊಸ ಮೊಬಿಲಿಟಿ ಸೇವೆಗಳಿಗಾಗಿ ಹೂಡಿಕೆ ಮಾಡಲಿದೆ. ಇದು ಕಂಪನಿಯು ಇದುವರೆಗೂ ಮಾಡಲಾಗಿರುವ ಹೂಡಿಕೆಗಳ ಪೈಕಿ ಅತಿ ಹೆಚ್ಚು ಎನಿಸಿದೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಸ್ಕೋಡಾ ಆಟೋದ ಸಿ‍ಇ‍ಒ ಬರ್ನ್‍‍ಹಾರ್ಡ್ ಮೈರ್ ರವರು ಮಾತನಾಡಿ, ಎಲೆಕ್ಟ್ರಿಕ್ ಮೊಬಿಲಿಟಿ ಸೇವೆಗೆ ಕಾಲಿಡಲು ಇದು ಸ್ಕೋಡಾ ಕಂಪನಿಗೆ ಸರಿಯಾದ ಸಮಯವಾಗಿದೆ. ನಾವು ಈಗ ಗ್ರಾಹಕರಿಗೆ ಅವಶ್ಯಕವಾಗಿ ಬೇಕಾಗಿರುವ ಅಂಶಗಳನ್ನು ನೀಡಲು ಶಕ್ತರಾಗಿದ್ದೇವೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ದೂರದ ಪ್ರಯಾಣ, ವೇಗದ ಚಾರ್ಜಿಂಗ್ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಕೈಗೆಟುಕುವ ದರಗಳು ಗ್ರಾಹಕರಿಗೆ ಬೇಕಾಗಿರುವ ಅವಶ್ಯಕವಾದ ಅಂಶಗಳಾಗಿವೆ. ನಾವು ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಸಿ‍ಎನ್‍‍ಜಿ ಎಂಜಿನ್‍‍ಗಳಲ್ಲಿ ಯಶಸ್ವಿಯಾಗಿದ್ದೇವೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಇನ್ನು ಮುಂದೆ ಎಲೆಕ್ಟ್ರಿಕ್ ಎಂಜಿನ್‍‍ಗಳಲ್ಲಿಯೂ ಸಹ ಯಶಸ್ವಿಯಾಗಲಿದ್ದು, ಎಲೆಕ್ಟ್ರಿಕ್ ವಾಹನಗಳು ನಮ್ಮ ವ್ಯವಹಾರದ ಭಾಗವಾಗಿರಲಿವೆ. ನಮ್ಮ ಅಂದಾಜಿನ ಪ್ರಕಾರ 2025ರ ವೇಳೆಗೆ 25% ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದರು. ಸ್ಕೋಡಾ ಕಂಪನಿಯು ಇತ್ತೀಚಿಗಷ್ಟೆ ಸಿಟಿಗೋ - ಇ ಐವಿ ಹಾಗೂ ಸೂಪರ್ಬ್ ಐವಿ ಪ್ಲಗ್ ಇನ್ ಹೈಬ್ರಿಡ್ ವಾಹನಗಳನ್ನು ಬಿಡುಗಡೆ ಮಾಡಿದೆ. ಈ ವಾಹನಗಳು ವೇಗವಾಗಿ ಚಾರ್ಜ್ ಆಗಲಿದ್ದು, ದೂರ ಪ್ರಯಾಣಕ್ಕೆ ಅನುಕೂಲ ಒದಗಿಸುವುದರ ಜೊತೆಗೆ, ಕೈಗೆಟುಕುವ ದರದಲ್ಲಿವೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಎಲೆಕ್ಟ್ರಿಕ್ ವಾಹನಗಳ ಸರಣಿಯನ್ನು ಒದಗಿಸುವುದರ ಜೊತೆಗೆ, ಸ್ಕೋಡಾ ಕಂಪನಿಯು ಇ ಮೊಬಿಲಿಟಿ ಸೇವೆಯನ್ನು ಅಭಿವೃದ್ಧಿಪಡಿಸುತ್ತಿದೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಸ್ಕೋಡಾ ಕಂಪನಿಯ ಇ ಮೊಬಿಲಿಟಿ ಇಕೋಸಿಸ್ಟಂನಲ್ಲಿ ಗ್ರಾಹಕರು ತಮ್ಮ ವಾಹನಗಳನ್ನು ಮನೆಗಳಲ್ಲಿ ಚಾರ್ಜ್ ಮಾಡಲು ಅನುಕೂಲವಾಗುವಂತೆ ವಿವಿಧ ಪವರ್ ಔಟ್‍‍ಪುಟ್‍‍‍ಗಳನ್ನು ವಾಲ್ ಬಾಕ್ಸ್ ಗಳಲ್ಲಿ ತಯಾರಿಸಿ ನೀಡಲಿದೆ. ಇದರ ಜೊತೆಗೆ ಸ್ಕೋಡಾ ಕನೆಕ್ಟ್ ಎಂಬ ಸ್ಮಾರ್ಟ್‍‍ಫೋನ್ ಸೇವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸೇವೆಯಿಂದಾಗಿ ಗ್ರಾಹಕರು ಹತ್ತಿರದಲ್ಲಿರುವ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಹುಡುಕಬಹುದಾಗಿದ್ದು, ಮುಂಚಿತವಾಗಿಯೇ ಚಾರ್ಜಿಂಗ್ ಸ್ಟೇಷನ್ ಅನ್ನು ಕಾಯ್ದಿರಿಸಬಹುದಾಗಿದೆ.

MOST READ: ರೋಡ್ ಟೆಸ್ಟ್ ನಡೆಸಿದ 2020ರ ಮಹೀಂದ್ರಾ ಸ್ಕಾರ್ಪಿಯೋ

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಮೊದಲ ಎರಡು ಆಲ್ ಎಲೆಕ್ಟ್ರಿಕ್ ವಾಹನಗಳು ಫೋಕ್ಸ್ ವ್ಯಾಗನ್ ಕಂಪನಿಯ ಎಂ‍ಇ‍‍ಬಿ ಮಾಡ್ಯುಲರ್ ಎಲೆಕ್ಟ್ರಿಕ್ ಕಾರ್ ಪ್ಲಾಟ್‍‍ಫಾರಂ ಮೇಲೆ ಆಧಾರಿತವಾಗಿವೆ. ಈ ವಾಹನಗಳನ್ನು 2020ರಲ್ಲಿ ಬಿಡುಗಡೆಗೊಳಿಸಲಾಗುವುದು. ಇದರಲ್ಲಿರುವ ಒಂದು ಮಾದರಿಯು ವಿಷನ್ ಐವಿ ಎಸ್‍‍ಯು‍‍ವಿ ಕೂಪೆಯ ತಯಾರಕ ಆವೃತ್ತಿಯಾಗಿದೆ. ಸ್ಕೋಡಾ ಇದರ ಜೊತೆಗೆ ಐವಿ ಮಾದರಿಯ ವಾಹನಗಳನ್ನು ಹಾಗೂ ಎಲೆಕ್ಟ್ರಾನಿಕ್ ಕಾಂಪೊನೆಂಟ್‍‍ಗಳನ್ನು ಜೆಕ್ ಗಣರಾಜ್ಯದಲ್ಲಿರುವ ಬೇರೆ ಕಂಪನಿಗಳಿಗಾಗಿ ತಯಾರಿಸಲಿದೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಈ ವರ್ಷದಿಂದ ಜೆಕ್ ಗಣರಾಜ್ಯದಲ್ಲಿರುವ, ಮುಖ್ಯ ತಯಾರಕ ಘಟಕವಾದ ಮ್ಲಾಡಾ ಬೊಲ್‍‍ಸ್ಲಾವ್‍‍ನಲ್ಲಿ ಪ್ಲಗ್ ಇನ್ ಹೈಬ್ರಿಡ್ ವಾಹನಗಳಿಗಾಗಿ ಎಲೆಕ್ಟ್ರಿಕ್ ಕಾಂಪೊನೆಂಟ್‍‍ಗಳನ್ನು ಬೇರೆ ಫೋಕ್ಸ್ ವ್ಯಾಗನ್ ಬ್ರಾಂಡ್‍‍ಗಳಿಗಾಗಿ ತಯಾರಿಸಲಿದೆ. ಈ ನಿಟ್ಟಿನಲ್ಲಿ ಕಂಪನಿಯು 11,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ತರಬೇತಿಯನ್ನು ನೀಡಿದೆ.

ನಾಲ್ಕು ಸಬ್ ಬ್ರಾಂಡ್‍‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್ ವ್ಯಾಗನ್ ಕಂಪನಿಯು ಸ್ಕೋಡಾ ಕಂಪನಿಗೆ ಇವಿ ವಾಹನಗಳನ್ನು ತಯಾರಿಸಲು ಸೂಚಿಸದ ತಕ್ಷಣವೇ, ಸ್ಕೋಡಾ ಕಾರ್ಯಪ್ರವೃತ್ತವಾಗಿದೆ. ಸ್ಕೋಡಾ ಕಂಪನಿಯು ಭಾರತದಲ್ಲಿರುವ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ. ಸ್ಕೋಡಾ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಯಾವ ಮಾದರಿಯ ವಾಹನಗಳನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ ಎಂಬುದನ್ನು ಕಾದು ನೋಡೋಣ.

Most Read Articles

Kannada
Read more on ಸ್ಕೋಡಾ skoda
English summary
Skoda Launches iV Sub-Brand — Enters Electric Vehicle Segment - Read in kannada
Story first published: Tuesday, May 28, 2019, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X