ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಸ್ಕೋಡಾ ಕಂಪನಿಯು ಅಕ್ಟಾವಿಯಾ ಒನಿಕ್ಸ್ ಸೆಡಾನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಅಕ್ಟಾವಿಯಾ ಒನಿಕ್ಸ್ ಕಾರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಕಾರಿನ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.19.99 ಲಕ್ಷಗಳಾಗಿದೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಅಕ್ಟಾವಿಯಾ ಒನಿಕ್ಸ್ ಸೆಡಾನ್ ಕಾರಿನಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳಾಗಿದ್ದು, ಕಾರಿನ ಒಳಗೆ ಹಾಗೂ ಹೊರಗೆ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಅಕ್ಟಾವಿಯಾ ಒನಿಕ್ಸ್ ಕಾರುಗಳ ಬುಕ್ಕಿಂಗ್‍‍ಗಳನ್ನು ದೇಶಾದ್ಯಂತವಿರುವ ಡೀಲರ್‍‍ಗಳ ಬಳಿ ಈಗಾಗಲೇ ಆರಂಭಿಸಲಾಗಿದೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಬುಕ್ಕಿಂಗ್ ಮಾಡಲಾದ ಕಾರುಗಳನ್ನು ಶೀಘ್ರದಲ್ಲೇ ವಿತರಿಸುವುದಾಗಿ ಕಂಪನಿಯು ಹೇಳಿದೆ. ಟಾಪ್ ಮಾದರಿಯ ಅಕ್ಟಾವಿಯಾ ಒನಿಕ್ಸ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.22 ಲಕ್ಷಗಳಾಗಿದೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಎರಡೂ ಮಾದರಿಯ ಅಕ್ಟಾವಿಯಾ ಒನಿಕ್ಸ್ ಕಾರುಗಳು ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿರಲಿವೆ. ಬಟರ್ ಫ್ಲೈ ಗ್ರಿಲ್ ಈಗ ಕ್ರೋಮ್ ಅಂಶಗಳನ್ನು ಹೊಂದಿರಲಿದೆ. ಎಲ್‍‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳನ್ನು ಅಪ್‍‍ಡೇಟ್ ಮಾಡಲಾಗಿದ್ದು, ಈಗ ಕ್ರಿಸ್ಟಾಲ್‍‍ಗ್ಲೊ ಎಲ್‍ಇ‍‍‍ಡಿ ಡಿ‍ಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳನ್ನು ಹೊಂದಿರುವ ಕಾಂಟ್ರಾಸ್ಟಿಂಗ್ ಬ್ಲಾಕ್ ಒ‍ಆರ್‍‍ವಿಎಂ, ಬೂಟ್ ಲಿಡ್ ಮೇಲಿರುವ ಗ್ಲಾಸಿ ಬ್ಲಾಕ್ ರೇರ್ ಸ್ಪಾಯಿಲರ್, ಕಾರ್ಬನ್ ಬ್ಲಾಕ್ ಡೋರ್ ಫಾಯಿಲ್ ಹಾಗೂ ಹೊಸ ವಿನ್ಯಾಸವನ್ನು ಹೊಂದಿರುವ 16 ಇಂಚಿನ ಪ್ರಿಮಿಯಾ ಅಲಾಯ್ ವ್ಹೀಲ್‍‍ಗಳಿವೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಹೊಸ ಅಕ್ಟಾವಿಯಾ ಒನಿಕ್ಸ್ ಅಲ್ಯುಮಿನಿಯಂ ಸ್ಕಫ್ ಪ್ಲೇಟ್ ಹೊಂದಿರಲಿದ್ದು, ಅವುಗಳ ಮೇಲೆ ಅಕ್ಟಾವಿಯಾ ಎಂದು ಬರೆದಿರಲಿದೆ. ಇದರ ಜೊತೆಗೆ ಸ್ಮಾರ್ಟ್ ಲಿಂಕ್ ಟೆಕ್ನಾಲಜಿ ಹೊಂದಿರುವ 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂಗಳಿವೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಮಿರರ್ ಲಿಂಕ್, ಆಂಡ್ರಾಯಿಡ್, ಆಪಲ್ ಕಾರ್ ಪ್ಲೇ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 12 ವೇ ಅಡ್ಜಸ್ಟಬಲ್ ಫ್ರಂಟ್ ಡ್ರೈವರ್ ಹಾಗೂ ಪ್ಯಾಸೆಂಜರ್ ಸೀಟುಗಳು, ಸುತ್ತಲೂ ಪ್ರೀಮಿಯಂ ಬ್ಲಾಕ್ ಲೆದರ್ ಅಪ್‍‍ಹೊಲೆಸ್ಟರಿ, ಲೆದರ್ ಹೊದಿಕೆ ಹೊಂದಿರುವ ಫ್ಲಾಟ್ ಬಾಟಂ ಸ್ಟೀಯರಿಂಗ್ ವ್ಹೀಲ್‍‍ಗಳನ್ನು ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಹೊಸ ಅಕ್ಟಾವಿಯಾ ಒನಿಕ್ಸ್ ಕಾರಿನಲ್ಲಿ ಆರು ಏರ್ ಬ್ಯಾಗ್‍‍ಗಳು, ರೇರ್ ಪಾರ್ಕಿಂಗ್ ಕ್ಯಾಮರಾ, ಹೈ ಸ್ಪೀಡ್ ವಾರ್ನಿಂಗ್, ಸೀಟ್ ಬೆಲ್ಟ್ ರಿಮ್ಯಾಂಡರ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್ ಸೇರಿದಂತೆ ಹಲವಾರು ಸುರಕ್ಷಾ ಫೀಚರ್‍‍ಗಳಿರಲಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಸ್ಕೋಡಾ ಆಟೋ ಇಂಡಿಯಾದ ಸೇಲ್ಸ್, ಸರ್ವಿಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಜಾಕ್ ಹೊಲೀಸ್‍‍‍ರವರು ಮಾತನಾಡಿ, ಭಾರತದಲ್ಲಿ ಸ್ಕೋಡಾ ಆಕ್ಟಾವಿಯಾವನ್ನು ಎಕ್ಸಿಕ್ಯೂಟಿವ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಿದಾಗ, ಈ ಕಾರು ಈ ಸೆಗ್‍‍ಮೆಂಟಿನ ಡೈನಾಮಿಕ್ಸ್ ಅನ್ನು ಬದಲಿಸಿತು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟಗ್ ಮೀಟ್ಸ್ ಸ್ಮಾರ್ಟ್ ಎಂಬಂತೆ ಹೊಸ ಅಕ್ಟಾವಿಯಾ ಒನಿಕ್ಸ್ ತನ್ನ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಈ ಕಾರ್ ಅನ್ನು ಸೀಮಿತ ಆವೃತ್ತಿಯಲ್ಲಿ ಮಾರಾಟ ಮಾಡಲಾಗುವುದು. ಹೊಸ ಅಕ್ಟಾವಿಯಾ ಒನಿಕ್ಸ್ ಕಾರು ತನ್ನ ವರ್ಗವನ್ನು ಮರು ವ್ಯಾಖ್ಯಾನಿಸುತ್ತದೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಇದರ ಜೊತೆಗೆ ಈ ಕಾರ್ ಅನ್ನು ವಿಶಿಷ್ಟವಾದ ಡಿಸೈನ್, ಸೊಗಸಾದ ಇಂಟಿರಿಯರ್, ಸುರಕ್ಷತೆ ಹಾಗೂ ಕನೆಕ್ಟಿವಿಟಿ ಫೀಚರ್‍‍‍ಗಳ ಜೊತೆಗೆ ಅತ್ಯಾಕರ್ಷಕ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಹೊಸ ಅಕ್ಟಾವಿಯಾ ಒನಿಕ್ಸ್ 590 ಲೀಟರಿನ ಬೂಟ್ ಸ್ಪೇಸ್ ಹೊಂದಿದೆ. ಹಿಂಭಾಗದ ಸೀಟುಗಳನ್ನು 60:40ರ ಅನುಪಾತದಲ್ಲಿ ಮಡುಚ ಬಹುದಾಗಿದೆ. ಇದರಿಂದಾಗಿ ಲಗೇಜ್ ಸ್ಪೇಸ್ 1580 ಲೀಟರ್‍‍ವರೆಗೆ ಹೆಚ್ಚಲಿದೆ. ಇದು ಈ ಸೆಗ್‍‍ಮೆಂಟಿನಲ್ಲಿಯೇ ಹೆಚ್ಚಿನ ಪ್ರಮಾಣದ್ದಾಗಿದೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಹೊಸ ಅಕ್ಟಾವಿಯಾ ಒನಿಕ್ಸ್ ಕಾರ್ ಅನ್ನು 1.8 ಲೀಟರಿನ ಟಿ‍ಎಸ್‍ಐ ಪೆಟ್ರೋಲ್ ಎಂಜಿನ್ ಹಾಗೂ 2.0 ಲೀಟರಿನ ಟಿ‍‍ಡಿ‍ಐ ಡೀಸೆಲ್ ಎಂಜಿನ್ ಎಂಬ ಎರಡು ಬಗೆಯ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಟಿ‍ಎಸ್‍ಐ ಪೆಟ್ರೋಲ್ ಎಂಜಿನ್ 180 ಬಿ‍‍ಹೆಚ್‍‍ಪಿ ಪವರ್ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 2.0 ಲೀಟರಿನ ಟಿ‍‍ಡಿ‍ಐ ಡೀಸೆಲ್ ಎಂಜಿನ್ 143 ಬಿ‍‍ಹೆಚ್‍‍ಪಿ ಪವರ್ ಹಾಗೂ 320 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಈ ಎರಡೂ ಎಂಜಿನ್‍‍ಗಳಲ್ಲಿ 7 ಸ್ಪೀಡಿನ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸಿಸ್ಟಂ ಅಳವಡಿಸಲಾಗಿದೆ. ಈ ಎಂಜಿನ್‍‍ಗಳಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ನೀಡುತ್ತಿಲ್ಲ. ಹೊಸ ಅಕ್ಟಾವಿಯಾ ಒನಿಕ್ಸ್ ಕಾರ್ ಅನ್ನು ಕ್ಯಾಂಡಿ ವೈಟ್, ರೇಸ್ ಬ್ಲೂ ಹಾಗೂ ಕಾರಿಡಾ ರೆಡ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಗೊಂಡ ಹೊಸ ಸ್ಕೋಡಾ ಅಕ್ಟಾವಿಯಾ ಒನಿಕ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಅಕ್ಟಾವಿಯಾ ಒನಿಕ್ಸ್ ಕಾರಿನಲ್ಲಿ ಸ್ಟಾಂಡರ್ಡ್ ಅಕ್ಟಾವಿಯಾ ಕಾರಿನಲ್ಲಿರುವುದಕ್ಕಿಂತ ಹೆಚ್ಚಿನ ಫೀಚರ್‍‍‍ಗಳನ್ನು ನೀಡಲಾಗುವುದು. ಒನಿಕ್ಸ್ ಎಡಿಷನ್ ಕಾರುಗಳು ಹೆಚ್ಚಿನ ಪ್ರಮಾಣದ ಸ್ಪೋರ್ಟ್ ಲುಕ್ ಹೊಂದಿರಲಿವೆ. ಹೊಸ ಅಕ್ಟಾವಿಯಾ ಒನಿಕ್ಸ್ ಕಾರು ಈ ಸೆಗ್‍‍ಮೆಂಟಿನಲ್ಲಿ ಟೊಯೊಟಾ ಕರೊಲಾ ಆಲ್ಟಿಸ್ ಹಾಗೂ ಹೋಂಡಾ ಸಿವಿಕ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Octavia Onyx Launched In India: Prices Start At Rs 20 Lakh - Read in Kannada
Story first published: Friday, October 11, 2019, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X