ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೊಸ ನಿಯಮ ಜಾರಿ ನಂತರ ಬಿಎಸ್-4 ಕಾರುಗಳ ಮಾರಾಟವು ಸಂಪೂರ್ಣ ನಿಷೇಧಗೊಳ್ಳಲಿದೆ. ಈ ಹಿನ್ನಲೆಯಲ್ಲಿ ನಿಗದಿತ ಅವಧಿಯೊಳಗೆ ಬಿಎಸ್-4 ಕಾರುಗಳ ಸ್ಟಾಕ್ ಪ್ರಮಾಣವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳು ಡೀಸೆಲ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡುತ್ತಿವೆ.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಸ್ಕೋಡಾ ಇಂಡಿಯಾ ಕೂಡಾ ತನ್ನ ಜನಪ್ರಿಯ ರ‍್ಯಾಪಿಡ್ ಸೆಡಾನ್ ಕಾರಿನ ಡೀಸೆಲ್ ಆವೃತ್ತಿಗಳ ಮೇಲೆ ಗರಿಷ್ಠ ಪ್ರಮಾಣದ ಆಫರ್‌ಗಳನ್ನು ನೀಡುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.1.06 ಲಕ್ಷದಿಂದ ರೂ.1.58 ಲಕ್ಷದ ತನಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಹೊಸ ಆಫರ್ ಈ ತಿಂಗಳು ನವೆಂಬರ್ ಅಂತ್ಯದ ತನಕ ಮಾತ್ರವೇ ಲಭ್ಯವಿರಲಿದ್ದು, ಮಧ್ಯಮ ಕ್ರಮಾಂಕದ ಸೆಡಾನ್ ಆವೃತ್ತಿಯು ಖರೀದಿ ಯೋಜನೆಯಲ್ಲಿ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಸ್ಕೋಡಾ ಸಂಸ್ಥೆಯು ರ‍್ಯಾಪಿಡ್ ಡೀಸೆಲ್ ಆಕ್ಟಿವಾ ಮ್ಯಾನುವಲ್ ಆವೃತ್ತಿಯ ಮೇಲೆ ರೂ.1.06 ಲಕ್ಷ ಡಿಸ್ಕೌಂಟ್ ನೀಡುತ್ತಿದ್ದು, ಆ್ಯಂಬಿಯೆಂಟ್ ಡೀಸೆಲ್ ಮ್ಯಾನುವಲ್ ಆವೃತ್ತಿಯ ಮೇಲೆ ರೂ.1.30 ಲಕ್ಷ ಡಿಸ್ಕೌಂಟ್ ಲಭ್ಯವಿರಲಿದೆ.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಇನ್ನು ರ‍್ಯಾಪಿಡ್ ಸ್ಟೈಲ್ ಡೀಸೆಲ್ ಮ್ಯಾನುವಲ್ ಆವೃತ್ತಿಯ ಮೇಲೆ ರೂ.1.58 ಲಕ್ಷ ಡಿಸ್ಕೌಂಟ್ ನೀಡುತ್ತಿರುವ ಸ್ಕೋಡಾ ಸಂಸ್ಥೆಯು ಸ್ಟೈಲ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಖರೀದಿಯ ಮೇಲೆ ರೂ. 1.56 ಲಕ್ಷ ಡಿಸ್ಕೌಂಟ್ ನೀಡುತ್ತಿದೆ.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಸದ್ಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಕಾರು ಮಾದರಿಯು 1.5-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರೋಬ್ಬರಿ 18 ವೆರಿಯೆಂಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ವೆರಿಯೆಂಟ್ ರೂ. 8.82 ಲಕ್ಷದಿಂದ ಟಾಪ್ ವೆರಿಯೆಂಟ್ ರೂ.14.26 ಲಕ್ಷ ಬೆಲೆ ಹೊಂದಿದೆ.

ಇದರಲ್ಲಿ ಪೆಟ್ರೋಲ್ ಮ್ಯಾನುವಲ್ ಆಕ್ಟಿವ್ ಮಾದರಿಯು ಆರಂಭಿಕ ಆವೃತ್ತಿಯಾಗಿ ಮಾರಾಟಗೊಂಡಲ್ಲಿ ಸ್ಪೋರ್ಟಿ ಡೀಸೆಲ್ ಆಟೋಮ್ಯಾಟಿಕ್ ಎಡಿಷನ್ ಮಾದರಿಯು ಹೈಎಂಡ್ ವೆರಿಯೆಂಟ್‌ನಲ್ಲಿ ಮಾರಾಟವಾಗುತ್ತಿದೆ.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಇದರಲ್ಲಿ ಇದೀಗ ಸ್ಕೋಡಾ ಸಂಸ್ಥೆಯು ಡೀಸೆಲ್ ಕಾರುಗಳ ಮೇಲೆ ಮಾತ್ರವೇ ಡಿಸ್ಕೌಂಟ್ ನೀಡುತ್ತಿದ್ದು, 2020ರ ಫೆಬ್ರುವರಿ ಹೊತ್ತಿಗೆ ಆಫರ್‌ಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದಾದ ನೀರಿಕ್ಷೆಗಳಿವೆ ಎನ್ನಬಹುದು.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಯಾಕೆಂದರೆ, 2020ರ ಏಪ್ರಿಲ್ 1ರ ನಂತರ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡಲು ನಿರ್ಧರಿಸಿರುವ ಸ್ಕೋಡಾ ಸಂಸ್ಥೆಯು ಹೊಸ ಎಂಜಿನ್ ಪರಿಚಯಿಸಲು ಸಿದ್ದವಾಗುತ್ತಿದ್ದು, 1.6-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಬಿಎಸ್-6 ನಿಯಮದಂತೆ ಉನ್ನತೀಕರಿಸಿ ಬಿಡುಗಡೆಗೆ ಸಿದ್ದಪಡಿಸುತ್ತಿದೆ.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಲಿರುವ ಸ್ಕೋಡಾ ಸಂಸ್ಥೆಯು ಹೊಸ ತಂತ್ರಜ್ಞಾನ ಪ್ರೇರಿತ ಮತ್ತೊಂದು ಹೊಸ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊರತರುತ್ತಿದ್ದು, ಹೊಸ ಡೀಸೆಲ್ ಕಾರು ಬಿಎಸ್-6 ಜಾರಿ ನಂತರವಷ್ಟೇ ರಸ್ತೆಗಿಳಿಯಲಿದೆ.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಲವು ಡೀಸೆಲ್ ಎಂಜಿನ್ ಕಾರುಗಳು ಸ್ಥಗಿತಗೊಳ್ಳುತ್ತಿದ್ದು, ಹೊಸ ನಿಯಮ ಅನುಸಾರ ಉನ್ನತೀಕರಣ ಅಸಾಧ್ಯ ಎನ್ನಲಾಗಿದೆ. ಒಂದು ವೇಳೆ ಉನ್ನತೀಕರಿಸಿದರೂ ಸಹ ದುಬಾರಿ ಬೆಲೆ ವಿಧಿಸಬೇಕಾಗುತ್ತದೆ.

ರ‍್ಯಾಪಿಡ್ ಡೀಸೆಲ್ ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದ ಸ್ಕೋಡಾ

ಈ ಹಿನ್ನಲೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಸಣ್ಣ ಗಾತ್ರದ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನೇ ಕೈಬಿಡಲು ನಿರ್ಧರಿಸಿದ್ದು, ಮುಂಬರುವ 2020ರ ಏಪ್ರಿಲ್ 1 ನಂತರ ಹಲವಾರು ಡೀಸೆಲ್ ಕಾರುಗಳು ಸ್ಥಗಿತಗೊಳ್ಳುವುದಲ್ಲದೇ ಮಾರಾಟಗೊಳ್ಳುವ ಡೀಸೆಲ್ ಕಾರುಗಳು ದುಬಾರಿ ಬೆಲೆ ಹೊಂದಲಿವೆ.

Most Read Articles

Kannada
Read more on ಸ್ಕೋಡಾ skoda
English summary
Skoda Offers Limited Time Discounts On Select Trims Of Rapid Model. Read in Kannada.
Story first published: Saturday, November 16, 2019, 15:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X