ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಸ್ಕೋಡಾ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ರ‍್ಯಾಪಿಡ್ ಸೆಡಾನ್ ಆವೃತ್ತಿಯಲ್ಲಿ ರೈಡರ್ ಎನ್ನುವ ಸ್ಪೆಷಲ್ ಎಡಿಷನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಪೆಷಲ್ ಎಡಿಷನ್ ಬೆಲೆಯನ್ನು ಆರಂಭಿಕವಾಗಿ 6.99 ಲಕ್ಷಕ್ಕೆ ನಿಗದಿ ಮಾಡಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಸಿ ಸೆಗ್ಮೆಂಟ್ ಸೆಡಾನ್ ಮಾದರಿಯಲ್ಲಿ ರ‍್ಯಾಪಿಡ್ ಕಾರು ಮಾದರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಗ್ರಾಹಕರ ಬೇಡಿಕೆಯೆಂತೆ ರೈಡರ್ ಸ್ಪೆಷಲ್ ಎಡಿಷನ್ ಪರಿಚಯಿಸಿದೆ. ಇದು ಸಾಮಾನ್ಯ ಮಾದರಿಯ ರ‍್ಯಾಪಿಡ್ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಸಾಮಾನ್ಯ ಆವೃತ್ತಿಗಿಂತಲೂ ರೂ.1 ಲಕ್ಷ ದುಬಾರಿ ಬೆಲೆಯೊಂದಿಗೆ ವಿನೂತನ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಬ್ಲ್ಯಾಕ್ ಗ್ರಿಲ್, ಡೋರ್ ಮೇಲ್ಭಾಗದಲ್ಲಿ ಬ್ಲ್ಯಾಕ್ ಡಿಕಾಲ್ಸ್, ಬಿ-ಪಿಲ್ಲರ್ ಮಧ್ಯದಲ್ಲೂ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದ್ದು, ರೈಡರ್ ಸ್ಪೆಷಲ್ ಎಡಿಷನ್ ಮಾದರಿಯನ್ನು ಕ್ಯಾಂಡಿ ವೈಟ್ ಮತ್ತು ಕಾರ್ಬನ್ ಸ್ಟಿಲ್ ಬಣ್ಣಗಳಲ್ಲಿ ಮಾತ್ರವೇ ಖರೀದಿಸಬಹುದಾಗಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಹಾಗೆಯೇ ಕಾರಿನ ಒಳಭಾಗದಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಸ್ಪೆಷಲ್ ಎಡಿಷನ್ ಸ್ಕಪ್ ಪ್ಲೇಟ್, ಅಪ್‌ಹೊಲಿಸ್ಟ್ರಿ ಆಸನ ಸೌಲಭ್ಯವು ಆಕರ್ಷಕವಾಗಿದೆ. ಹಾಗೆಯೇ ಸೆಂಟರ್ ಲಾಕಿಂಗ್, ಮುಂಭಾದಲ್ಲಿ ಮತ್ತು ಹಿಂಭಾಗದ ಆಸನಗಳಲ್ಲಿ ಸೆಂಟರ್ ಆರ್ಮ್ ರೆಸ್ಟ್, ಟೆಲಿಸ್ಕೋಪಿಕ್ ಅಡ್ಜೆಸ್ಟ್‌ಬೆಲ್ ಪವರ್ ಸ್ಟಿರಿಂಗ್, 2-DIN ಆಡಿಯೋ ಸಿಸ್ಟಂ, ಯುಎಸ್‌ಬಿ ಆಕ್ಸ್ ಸೌಲಭ್ಯವಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಸ್ಕೋಡಾ ರ‍್ಯಾಪಿಡ್ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ರಿಯರ್ ಎಸಿ ವೆಂಟ್ಸ್, ಬ್ಲೂಟೂಥ್ ಕಾಂಪಿಟೆಬಲ್, ಫೋರ್ ಸ್ಪೀಕರ್ಸ್, ರಿಯರ್ ಡಿಫಾಗರ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ಸ್ಪೆಷಲ್ ಎಡಿಷನ್‌ನಲ್ಲೂ ನೀಡಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಅಧಿಕ ಮಾರಾಟವನ್ನು ಹೊಂದಿರುವ ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಟೊಯೊಟಾ ಯಾರಿಸ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೋ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎಂಜಿನ್ ಸಾಮರ್ಥ್ಯ

ಸ್ಪೆಷಲ್ ಎಡಿಷನ್ ರ‍್ಯಾಪಿಡ್ ರೈಡರ್ ಕಾರಿನಲ್ಲಿ ಹೊರಭಾಗದ ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಸಾಮಾನ್ಯ ಮಾದರಿಯಲ್ಲೇ ಎಂಜಿನ್ ಆಯ್ಕೆ ನೀಡಲಾಗಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ 1.6-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ರ‍್ಯಾಪಿಡ್ ರೈಡರ್ ಖರೀದಿಗೆ ಲಭ್ಯವಿರಲಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನುಳಿದಂತೆ ಸಾಮಾನ್ಯ ರ‍್ಯಾಪಿಡ್ ಆವೃತ್ತಿಗಳು 1.6-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಪ್ರತಿ ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇದರಲ್ಲಿ ಪೆಟ್ರೋಲ್ ಮಾದರಿಯು 105-ಬಿಎಚ್‌ಪಿ ಮತ್ತು 153-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಸ್ಕೋಡಾ ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ 6 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಮತ್ತು ಉಚಿತ ಸೇವಾ ಸೌಲಭ್ಯಗಳನ್ನು ಸ್ಪೆಷಲ್ ಎಡಿಷನ್ ಮೇಲೂ ಆಫರ್ ನೀಡುತ್ತಿದೆ.

ಸ್ಕೋಡಾ ರ‍್ಯಾಪಿಡ್ ರೈಡರ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನುಳಿದಂತೆ ರ‍್ಯಾಪಿಡ್ ಕಾರಿನಲ್ಲಿ ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಆ್ಯಂಟಿ-ಗ್ಲೆರ್ ವ್ಯೂ ಮಿರರ್ ಸೌಲಭ್ಯಗಳನ್ನು ಪಡೆದಿದ್ದು, ಸ್ಪೆಷಲ್ ಎಡಿಷನ್ ಹೊರತುಪಡಿಸಿ ಇನ್ನು ಹೆಚ್ಚಿನ ತಾಂತ್ರಿಕ ಸೌಲಭ್ಯವುಳ್ಳ ಕಾರು ಖರೀದಿಗಾಗಿ ರ‍್ಯಾಪಿಡ್ ಮಾಂಟೆ ಕಾರ್ಲೋ ಆವೃತ್ತಿಗಳನ್ನು ಸಹ ಖರೀದಿಸಬಹುದಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
New Skoda Rapid Rider Launched In India.
Story first published: Wednesday, July 17, 2019, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X