ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ಕಳೆದ ವರ್ಷ ಆಟೋಕಾರ್ ಇಂಡಿಯಾ ಸುದ್ದಿ ಸಂಸ್ಥೆಯು ಫೋಕ್ಸ್ ವ್ಯಾಗನ್‍‍ನ ಅತ್ಯಾಧುನಿಕವಾದ 1.0 ಲೀಟರಿನ, 3 ಸಿಲಿಂಡರ್ ಟರ್ಬೊ ಚಾರ್ಜ್‍‍ನ ಪೆಟ್ರೋಲ್ ಎಂಜಿನ್ ಅನ್ನು ಸ್ಥಳೀಯವಾಗಿ ತಯಾರಿಸಲಾಗುವುದು ಎಂದು ವರದಿ ಮಾಡಿತ್ತು.

ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ಈ ವರದಿಯನ್ನು ಗಮನದಲ್ಲಿಟ್ಟುಕೊಂಡು ಸ್ಕೋಡಾ ತನ್ನ ಇಂಡಿಯಾ 2.0 ಯೋಜನೆಯ ಅಂಗವಾಗಿ ತನ್ನ 90% ಕ್ಕೂ ಅಧಿಕ ವಾಹನಗಳನ್ನು ದೇಶಿಯವಾಗಿ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಜೆಕ್ ಮೂಲದ ಕಾರು ತಯಾರಕ ಕಂಪನಿಯು ಸ್ಕೋಡಾ ರ್‍ಯಾಪಿಡ್ ಕಾರಿನಲ್ಲಿ 1.0 ಲೀಟರಿನ ಟಿ‍ಎಸ್‍ಐ ಮೋಟಾರಿನ ಎಂಜಿನ್ ಅಳವಡಿಸಲಿದ್ದು, ಈಗಿರುವ 1.6 ಎಂ‍‍ಪಿ‍ಐ (ಇಎ111) ಎಂಜಿನ್‍‍ನ ಬದಲಿಗೆ ಅಳವಡಿಸಲಾಗುವುದು ಎಂದು ಖಚಿತಪಡಿಸಿದೆ. ಹೊಸ ಎಂಜಿನ್ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಬಿ‍ಎಸ್6 ನಿಯಮಗಳಿಗೆ ಅನುಸಾರವಾಗಿ ನಿರ್ಮಿಸಲಾಗಿದೆ.

ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ಇದು ಸ್ಕೋಡಾ ರ್‍ಯಾಪಿಡ್ ನಲ್ಲಿ ದೊರೆಯುವ ಏಕಮಾತ್ರ ಪವರ್‍‍ಟ್ರೇನ್ ಆಗಿರಲಿದ್ದು, ಈಗಿರುವ 1.5 ಲೀಟರಿನ ಡೀಸೆಲ್ ಎಂಜಿನ್ ಅನ್ನು ಮುಂದಿನ ವರ್ಷದಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಅಪ್ಗ್ರೇಡ್ ಮಾಡಲು ಸಾಧ್ಯವಾಗುವುದಿಲ್ಲ.

ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ಸ್ಕೋಡಾ ಆಟೋ ಇಂಡಿಯಾದ ಸೇಲ್ಸ್, ಸರ್ವಿಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಜಾಕ್ ಹೋಲಿಸ್‍‍ರವರು ಮಾತನಾಡಿ, ನಾವು ರ್‍ಯಾಪಿಡ್ ವಾಹನದಲ್ಲಿ ಡೀಸೆಲ್ ಎಂಜಿನ್ ಅಳವಡಿಸುವುದಿಲ್ಲ, ಬದಲಿಗೆ ಈಗಿರುವ ಡೀಸೆಲ್ ಎಂಜಿನ್ ಅನ್ನು ಹೆಚ್ಚು ಕಾರ್ಯ ದಕ್ಷತೆಯಿರುವ 1.0 ಲೀಟರಿನ ಟಿ‍ಎಸ್‍ಐ ಪೆಟ್ರೋಲ್ ಎಂಜಿನ್‍‍ನೊಂದಿಗೆ ಬದಲಾಯಿಸಲಾಗುವುದು.

ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ಇದು ಈಗಿರುವ ಎಂ‍‍ಪಿ‍ಐ ಎಂಜಿನ್‍‍ಗಿಂತ ಹೆಚ್ಚು ದಕ್ಷತೆಯನ್ನು ಹೊಂದಿದೆ, ಈಗಿರುವ ಎಂಜಿನ್‍‍ನ ದಕ್ಷತೆ ಹಾಗೂ ಇಂಧನ ಕ್ಷಮತೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು. ಹೋಲಿಸ್ ರವರ ಪ್ರಕಾರ, ಪೆಟ್ರೋಲ್ ಮಾದರಿಯ ಸ್ಕೋಡಾ ರ್‍ಯಾಪಿಡ್, ಹೈಟೆಕ್ ಆದ 7 ಸ್ಪೀಡಿನ ಡಿ‍ಎಸ್‍‍ಜಿ ಕ್ಲಚ್ ಯೂನಿಟನ್ನು ಹೊಂದಿರಲಿದೆ. ಹೊಸ 7 ಸ್ಪೀಡಿನ ಡ್ಯೂಯಲ್ ಕ್ಲಚ್ ಎಂಜಿನ್ ಯೂನಿಟ್ ಈಗಿರುವ ಹಳೆ ತಲೆಮಾರಿನ 6 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಎಂಜಿನ್‍‍ನ ಬದಲಿಗೆ ಬರಲಿದೆ. ಈ ಹೊಸ ಯೂನಿಟ್ ಡೀಸೆಲ್ ಮಾದರಿಗಳಲ್ಲಿ ಮಾತ್ರವೇ ಇರಲಿದೆ.

MOST READ: ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

3 ಸಿಲಿಂಡರಿನ ಟರ್ಬೋ ಪೆಟ್ರೋಲ್ ಮಾದರಿಯು ಎರಡು ವಿಧಗಳಲ್ಲಿ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ. ಮೊದಲನೇಯದು 95 ಬಿಹೆಚ್‍‍ಪಿ / 160 ಎನ್‍ಎಂ ಉತ್ಪಾದಿಸಿದರೆ, ಎರಡನೇಯದು 115 ಬಿ‍‍ಹೆಚ್‍‍ಪಿ/200 ಎನ್‍ಎಂ ಉತ್ಪಾದಿಸಲಿದೆ. ಹೊಸ ರ್‍ಯಾಪಿಡ್‍‍ನಲ್ಲಿ ಎರಡನೇಯ ವಿಧವಿರುವ ಸಾಧ್ಯತೆಗಳಿವೆ. ಭಾರತದಲ್ಲಿ ಬಿಡುಗಡೆಯಾದರೆ, 1.0 ಟಿ‍ಎಸ್‍‍ಐ ಎಂಜಿನ್, ಈಗಿರುವ 1.5 ಪೆಟ್ರೋಲ್ ಎಂಜಿನ್‍ನಲ್ಲಿರುವ 105 ಬಿಹೆಚ್‍‍ಪಿ/153 ಎನ್‍ಎಂ ಟಾರ್ಕ್ ಗಿಂತ ಅಧಿಕ ಪವರ್ ಹೊಂದಿರಲಿದೆ.

ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ಹೊಸ ಎಂಜಿನ್ ಅನ್ನು ಫೋಕ್ಸ್ ವ್ಯಾಗನ್ ವೆಂಟೊ ದಲ್ಲಿರುವ ಎಂಜಿನ್‍‍ಗೆ ಪರ್ಯಾಯವಾಗಿ ಉಪಯೋಗಿಸುವ ಸಾಧ್ಯತೆಗಳಿವೆ. ಈ ಡೈರೆಕ್ಟ್ ಇಂಜೆಕ್ಷನ್ ಯೂನಿಟ್‍ ಹೆಚ್ಚು ದಟ್ಟವಾದ, ತೆಳುವಾದ, ಕಡಿಮೆ ತಿಕ್ಕಾಟ ಬಿಡುಗಡೆ ಮಾಡುವುದಲ್ಲದೆ, ಎಂಜಿನ್ ಅನ್ನು ಹೆಚ್ಚು ದಕ್ಷವಾಗಿಡುತ್ತದೆ.

ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ಹೋಲಿಸ್ ರವರು ಮಾತನಾಡಿ, ಬಿ‍ಎಸ್ 6 ಆಧಾರಿತ ಡೀಸೆಲ್ ಕಾರಿನಲ್ಲಿ ಹೆಚ್ಚಿನ ಮಟ್ಟದ ಹೂಡಿಕೆ ಮಾಡುವುದರಿಂದ ಕಾರುಗಳ ಬೆಲೆಯು ಹೆಚ್ಚುತ್ತದೆ. ಇದರಿಂದ ಗ್ರಾಹಕರು ಡೀಸೆಲ್ ಕಾರುಗಳನ್ನು ಖರೀದಿಸುವುದಕ್ಕೆ ಹಿಂದೇಟು ಹಾಕುವ ಸಾಧ್ಯತೆಗಳು ಹೆಚ್ಚು. ನನ್ನ ಅಭಿಪ್ರಾಯದಲ್ಲಿ ಮಾರುಕಟ್ಟೆಯು ಇನ್ನು ಮುಂದೆ ಪೆಟ್ರೋಲ್ ಮಾದರಿಗಳಿಗೆ ಹೊಂದಿಕೊಳ್ಳಲಿದೆ ಎಂದು ತಿಳಿಸಿದರು.

Most Read Articles

Kannada
Read more on ಸ್ಕೋಡಾ skoda
English summary
Skoda Rapid To Feature New 1.0-Litre TSI Engine — Upgrading The Czechs - Read in kannada
Story first published: Tuesday, May 21, 2019, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X