ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಫೋಕ್ಸ್ ವ್ಯಾಗನ್ ಇಂಡಿಯಾ ಮತ್ತು ಸ್ಕೋಡಾ ಇಂಡಿಯಾ ವಿಲೀನಗೊಂಡು ಹೊಸ ಒಪ್ಪಂದದ ಪ್ರಕಾರ ಎರಡು ಕಂಪನಿಗಳ ಸಹಭಾಗಿತ್ವದಲ್ಲಿ ಸ್ಕೋಡಾ ಆಟೋ ಪ್ರೈವೇಟ್ ಲಿಮಿಟೆಡ್ ಅನ್ನು ರಚಿಸಲಾಗಿದೆ. ಇದು ಒಂದು ಅಭೋತಪೂರ್ವ ಹೆಚ್ಚೆ, ಭಾರತದ ಪೋಕ್ಸ್ ವ್ಯಾಗನ್ ಗ್ರೊಪಿನ ದಿಕ್ಕನೇ ಬದಲಾಯಿಸುತ್ತದೆ ಮತ್ತು ಹೊಸ ಕಂಪನಿ ಮೂಲಕ ಸ್ಕೋಡಾ ಆಟೋ ಉತ್ಪನ್ನಕ್ಕೆ ಬಹುದೊಡ್ಡ ಮುನ್ನಡೆ ತರಲಿದೆ.

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಫೋಕ್ಸ್ ವ್ಯಾಗನ್ ಗ್ರೂಪ್ ವಿಶ್ವದ ಎರಡನೇ ಅತಿದೊಡ್ಡ ಆಟೋಮೋಟಿವ್ ಸಂಸ್ಥೆಯಾಗಿದೆ. ಇದರ ಹೆಸರಾಂತ ಅಂಗಸಂಸ್ಥೆಗಳಾದ ಆಡಿ, ಲಂಬೋರ್ಘಿನಿ, ಬೆಂಟ್ಲೆ, ಬುಗಾಟಿ, ಪೋರ್ಷೆ, ಡುಕಾಟಿ, ಎಂಎ‍ಎನ್, ಸ್ಕ್ಯಾನಿಯಾ, ಸೀಟ್, ಸ್ಕೋಡಾ ಮತ್ತು ಸಹಜವಾಗಿ ಫೋಕ್ಸ್ ವ್ಯಾಗನ್ ಕಮರ್ಷಿಯಲು ವಾಹನಗಳು ಮತ್ತು ಫೋಕ್ಸ್ ವ್ಯಾಗನ್ ಪ್ಯಾಸೆಂಜರ್ ಕಾರುಗಳನ್ನು ಕೂಡ ಒಳಗೊಂಡಿದೆ.

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಸ್ಕೋಡಾ ಇಂಡಿಯಾ ನವೆಂಬರ್ 2001 ರಿಂದ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಅವಧಿಯಲ್ಲಿ ಹೆಸರಾಂತ ಪ್ರೀಮಿಯಂ ಕಾರು ಉತ್ಪಾದಕರಾಗಿ ಹೊರಹೊಮ್ಮಿದರು. ಬ್ರ್ಯಾಂಡ್‍ನ ವಿಆರ್‍ಎಸ್ ಕಾರ್ಯಕ್ಷಮತೆ ಮಾದರಿಯಲ್ಲಿ ಕಾರು ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಫೋಕ್ಸ್ ವ್ಯಾಗನ್ ಗ್ರೂಪ್ ಇಂಡಿಯಾ ಮುನ್ನಡೇ ಸಾಧಿಸುತ್ತಿರುವುದರಿಂದ 2.0 ಯೋಜನೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಕೆಲವು ತಿಂಗಳ ಹಿಂದೆ ಫೋಕ್ಸ್ ವ್ಯಾಗನ್ ಗ್ರೂಪ್ ಇಂಡಿಯಾ 2.0 ಯೋಜನೆಯನ್ನು ಘೋಷಿಸಿತು. ಜರ್ಮನ್ ಆಟೋ ಸಂಸ್ಥೆಗಳಿಗೆ ಭಾರತವು ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಇದು ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಕೆಯಾಗಿದೆ.

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಸುಮಾರು ಆರು ವರ್ಷಗಳ ನಂತರ ಪೋಕ್ಸ್ ವ್ಯಾಗನ್ 2007 ರಲ್ಲಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿತು. ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ನೀಡಿದಕ್ಕೆ ಕಾರು ಪ್ರಿಯರು ಫುಲ್ ಫಿದಾ ಆಗಿದ್ದರು. ಫೋಕ್ಸ್ ವ್ಯಾಗನ್ ಅದ್ದೋರಿ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿತ್ತು, 2007 ರಲ್ಲಿ ಆಡಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿತು.

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ವಿಡಬ್ಲ್ಯು ಇಂಡಿಯಾ 2.0 ಯೋಜನೆಯು ವಿಶೇಷವಾಗಿ ಭಾರತೀಯ ಮಾರುಕಟ್ಟೆಗೆ ಉತ್ಪನ್ನಗಳ ಅಭಿವೃದ್ದಿ, ಭಾರತ ಪ್ರತಿಭೆಗಳನ್ನು ಸ್ವಾಧೀನಪಡಿಸಿಕೊಳ್ಳತ್ತದೆ ಮತ್ತು ಹೂಡಿಕೆ ಹೆಚ್ಚಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿ ಮಾರಾಟದ ಸಂಖ್ಖೆಯು ಹೆಚ್ಚಾಗಬಹುದು.

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಟೀಮ್-ಬಿಎಚ್‍‍ಪಿಯ ಚಿತ್ರವೊಂದು ಸ್ಕೋಡಾ ಇಂಡಿಯಾ 2.0 ಯೋಜನೆಯನ್ನು ಮುನ್ನಡೆಸಲಿದೆ ಎಂದು ತಿಳಿದಿದೆ. 2019ರ ಏಪ್ರಿಲ್‍ನಲ್ಲಿ ಫೋಕ್ಸ್ ವ್ಯಾಗನ್ ಮೂರು ಸಂಸ್ಥಗಳ ಭಾರತದಲ್ಲಿ ವಿಲೀನವಾಗಲಿದೆ ಎಂದು ಪ್ರಕಟಿಸಿದ್ದರು, ಅದು ಹೀಗ ಖಚಿತವಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪೋಕ್ಸ್ ವ್ಯಾಗನ್ ಗ್ರೂಪ್ ಸೇಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಕೋಡಾ ಇಂಡಿಯ ಪ್ರೈವೇಟ್ ಲಿಮಿಟೆಡ್ ವಿಲೀನಗೊಂಡು ಸ್ಕೋಡಾ ಆಟೋ ಪೋಕ್ಸ್ ವ್ಯಾಗನ್ ಇಂಡಿಯ ಪ್ರೈವೆಟ್ ಲಿಮಿಟಿಡ್ ಅನ್ನು ರೂಪಿಸಿದೆ. ಈ ವಿಲೀನದ ಮೂಲಕ ಮೂರು ಕಂಪನಿಗಳ ತಾಂತ್ರಿಕ ಮತ್ತು ವ್ಯವಸ್ಥಾಪಕ ಪರಿಣಿತರನ್ನು ಒಟ್ಟುಗೂಡಿಸುವ ಗುರುಯನ್ನು ಹೊಂದಿದೆ.

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಫೋಕ್ಸ್ ವ್ಯಾಗನ್, ಸ್ಕೋಡಾ, ಆಡಿ,ಪೋರ್ಷೆ ಮತ್ತು ಲಂಭೋರ್ಘಿನಿ ತಮ್ಮದೆ ಆದ ವೈಯಕ್ತಿಕ ಡೀಲರ್‍‍ಗಳನ್ನು ಮತ್ತು ಸೇವಾ ಸರ್ವಿಸ್ ಸೌಲಭ್ಯಗಳನ್ನು ಹೊಂದಿದೆ. ಸಂಸ್ಥೆಗಳ ವಿಲೀನದಿಂದ ವ್ಯವಸ್ಥಾಪಕ ಮತ್ತು ಅಭಿವೃದ್ದಿ ಹಂತದಲ್ಲಿ ಮಾತ್ರ ಬದಲಾವಣೆ ನಡೆಸುತ್ತಾರೆ. ಈ ವಿಲೀನದಿಂದ ವಿಡಬ್ಯು ಇಂಡಿಯ 2.0 ಯೋಜನೆಯನ್ನು ಪ್ರಾರಂಭವಾಗಲಿದೆ ಎಂದು ತಿಳಿಯುತ್ತದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸ್ಕೋಡಾ & ಫೋಕ್ಸ್ ವ್ಯಾಗನ್ ಸಹಭಾಗಿತ್ವದಲ್ಲಿ ಇಂಡಿಯಾ 2.0 ಯೋಜನೆಗೆ ಸಜ್ಜು

ಫೋಕ್ಸ್ ವ್ಯಾಗನ್ ಇಂಡಿಯಾ ಮತ್ತು ಸ್ಕೋಡಾ ಇಂಡಿಯ ಹಲವಾರು ಸೆಗ್‍‍ಮೆಂಟ್‍‍ನಲ್ಲಿ ಪ್ರೀಮಿಯಂ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪೋಕ್ಸ್ ವ್ಯಾಗನ್ ಪೋಲೊ ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟ್‍ಗೆ ಮತ್ತು ಸ್ಕೋಡಾ ಆಕ್ಟೇವಿಯಾ ಭಾರತ ಡಿ-ಸೆಗ್‍‍ಮೆಂಟ್ ಕ್ಕೆ ಬಿಡುಗಡೆಗೊಳಿಸಿದರು. ಇದೀಗ ಎರಡು ಕಂಪನಿಗಳು ವಿಲೀನವಾಗಿರುವುದರಿಂದ ಇವರ ಸಹಭಾಗಿತ್ವದಲ್ಲಿ ನಾವು ಮುಂದಿನ ದಿನಗಳಲ್ಲಿ ಉತ್ತಮ ಕ್ಷಮತೆಯನ್ನು ಹೊಂದಿರುವ ಕಾರುಗಳನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಬಹುದು.

Most Read Articles

Kannada
English summary
Skoda & Volkswagen To Merge & Form New Venture: Part Of Their India 2.0 Project -Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X