ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ, ಅತಿ ಲೋಕ ಸುಂದರಿ ಶ್ರೀದೇವಿಯವರ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಬೆಳ್ಳೆ ಪರದೆಯ ಮೇಲೆ ಪಾದಾರ್ಪಣೆ ಮಾಡಿದ್ದಾರೆ. ತಾಯಿಯಂತೆ ಈಕೆಯು ತನ್ನ ಸೌಂದರ್ಯದಿಂದಲೇ ಬಾಲಿವುಡ್‍‍ನಲ್ಲಿ ಸದ್ದು ಮಾಡತೊಡಗಿದ್ದಾಳೆ. ಜಾನ್ವಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ 2 ಕೋಟಿಯ ಬೆಂಝ್ ಕಾರನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ನಟಿ ಶ್ರೀ‍ದೇವಿ ಅನೇಕ ಸಿನಿಮಾಗಳ ಮೂಲಕ ಜನಮನ ಗೆದ್ದ ನಟಿ. 90ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದವರು. ಬಾಲಿವುಡ್‍‍ನಲ್ಲಿ ಮಾತ್ರವಲ್ಲದೆ ಕನ್ನಡ ಸಿನಿಮಾಗಳು ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಯಲ್ಲಿ ನಟಸಿ ಸೈ ಎನಿಸಿಕೊಂಡ ನಟಿ. ಅವರು ಕಳೆದವರ್ಷ ಫೆಬ್ರವರಿ ತಿಂಗಳಲ್ಲಿ ನಿಧನರಾದರು. ತಾಯಿಯಂತೆ ಮಗಳು ಜಾನ್ವಿ ಕಪೂರ್ ಕೂಡ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೂಟ್ಟು ಮಿಂಚಲು ಪ್ರಾರಂಭಿಸಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಜಾನ್ವಿ ಕಪೂರ್‍ ಅವರಿಗೂ ಕೂಡ ಇತರ ನಟ-ನಟಿಯರಂತೆ ಕಾರುಗಳ ಕ್ರೇಜ್ ಹೆಚ್ಚಿದೆ. ಅವರ ಬಳಿ ಆಡಿ ಎ 6 ಮತ್ತು ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರು ದುಬಾರಿ ಕಾರನ್ನು ಖರೀದಿಸಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಜಾನ್ವಿ ಇತ್ತೀಚೆಗೆ ಹೊಚ್ಚ ಹೊಸ ಮರ್ಸಿಡಿಸ್ ಕಾರನಲ್ಲಿ ಓಡಾಡುತ್ತಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಜಾನ್ವಿಯವರ ಬಳಿ ಇರುವ ಮರ್ಸಿಡಿಸ್-ಮೇಬ್ಯಾಕ್ ತಾಯಿ ಶ್ರೀದೇವಿಯವರು ಬಳಸುತ್ತಿದ್ದ ಮರ್ಸಿಡಿಸ್ ಬೆಂಝ್ ಎಸ್- ಕ್ಲಾಸ್‍‍ನ ಅದೇ ರೀತಿಯ ನಂಬರ್ ಪ್ಲೇಟ್‍ ಅನ್ನು ಹೊಂದಿದೆ. 7666 ನೋಂದಣಿ ಸಂಖ್ಯೆ ಎರಡು ಕಾರುಗಳಲ್ಲಿ ಒಂದೇ ಆಗಿದೆ. ಶ್ರೀದೇವಿಯವರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ 350 ಡಿ ಸೆಡಾನ್ ಅನ್ನು ಬಳಸುತ್ತಿದ್ದರು. ಇದೇ ಮಾದರಿಯಲ್ಲಿನ ಉನ್ನತ ಆವೃತ್ತಿಯನ್ನು ಜಾನ್ವಿಯವರು ಖರೀದಿಸಿದ್ದಾರೆ. ಇದು ದೇಶದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸೆಡಾನ್‍‍ಗಳಲ್ಲಿ ಒಂದಾಗಿದೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಜಾನ್ವಿ ಅವರು ಖರೀದಿಸಿದ ಕಾರಿನ ನಿಖರವಾದ ಆವೃತ್ತಿಯ ಬಗ್ಗೆ ಮಾಹಿತಿ ತಿಳಿದಿಲ್ಲ, ಆದರೆ ನೋಡುವುದಕ್ಕೆ ಮರ್ಸಿಡಿಸ್ ಮೇಬ್ಯಾಕ್ ಎಸ್ 560 ರೂಪಾಂತರದಂತೆ ಕಾಣಿಸುತ್ತದೆ, ಈ ಕಾರಿನ ಎಕ್ಸ್ ಶೋರೂಂ ದರವು ರೂ.2.5 ಕೋಟಿಗಳಾಗಿದೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಮರ್ಸಿಡಿಸ್-ಮೇಬ್ಯಾಕ್ ಎಸ್ 560 ಉಬರ್ ಐಷಾರಾಮಿ ಸೆಡಾನ್ ಆಗಿದೆ. ಈ ಸೆಡಾನ್ 4.0 ಲೀಟರ್ ವಿ8 ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 469 ಬಿಎಚ್‍ಪಿ ಪವರ್ ಮತ್ತು 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿರುತ್ತದೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಈ ಮರ್ಸಿಡಿಸ್-ಮೇಬ್ಯಾಕ್ ಎಸ್ 560ನಲ್ಲಿ ಸೀಟ್ ಮಸಾಜರ್‍‍ಗಳು, ಹಿಂಭಾಗದಲ್ಲಿ ಸೀಟ್ ಎಂಟರ್‍‍ಟೈನ್‍ಮೆಂಟ್ ಯು‍‍ನಿ‍ಟ್, ಪನೋರಮಿಕ್ ಸನ್‍‍ರೂ‍ಫ್, ಮಿನಿ ಫ್ರೀಜರ್, ಆಂಬಿಯೆಂಟ್ ಲೈ‍ಟಿಂಗ್ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ಇತ್ತೀಚಿಗಿನ ಫೇಸ್‍‍ಲಿಫ್ಟ್ ಆವೃತ್ತಿಯಾಗಿದೆ. ಈ ವರ್ಷದಲ್ಲಿ ಆರಂಭದಲ್ಲಿ ಈ ಕಾರನ್ನು ವಿಶ್ವಾದ್ಯಂತ ಬಿಡುಗಡೆಗೊಳಿಸಿದ್ದರು. ಫೇಸ್‍‍ಲಿಫ್ಟ್ ಆವೃತ್ತಿಯನ್ನು ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರು ಕೂಡ ಇತ್ತೀಚೆಗೆ ಖರೀದಿಸಿದ್ದಾರೆ.

ಐಷಾರಾಮಿ ಕಾರು ಖರೀದಿಸಿದ ಅತಿ ಲೋಕ ಸುಂದರಿಯ ಮಗಳು ಜಾನ್ವಿ

ಬಾಲಿವುಡ್ ಸೆಲೆಬ್ರಿಟಿ‍‍ಗಳಾದ ಹೃತಿಕ್ ರೋಷನ್, ಕರಣ್ ಜೋಹರ್, ರಾಕೇಶ್ ರೋಶನ್, ದೀಪಿಕಾ ಪಡುಕೋಣೆ, ಭೂಷಣ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ರಾಣಿ ಮುಖರ್ಜಿ ಅವರು ಮರ್ಸಿಡಿಸ್-ಮೇಬ್ಯಾಕ್ ಕಾರನ್ನು ಬಳಸುತ್ತಾರೆ. ಮೇಬ್ಯಾಕ್ ಅಲ್ಲದೆ ಎಸ್-ಕ್ಲಾಸ್ ಮಾದರಿಯನ್ನು ಹಲವು ಸೆಲೆಬ್ರಿಟಿಗಳು ಬಳಸುತ್ತಾರೆ.

Most Read Articles

Kannada
English summary
Janhvi Kapoor’s latest ride is a Mercedes-Maybach luxury saloon - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X