ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಸ್ವಂತ ಬಳಕೆಯ ವಾಹನಗಳ ಬಳಕೆಯನ್ನು ತಗ್ಗಿಸಿ ಸಾರ್ವಜನಿಕ ಸಾರಿಗೆ ವಲಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಹೀಗಿದ್ದರೂ ಕೂಡಾ ದೇಶದಲ್ಲಿ ಮಾತ್ರ ದಾಖಲೆಯ ಮಟ್ಟದಲ್ಲಿ ಖಾಸಗಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಹೆಚ್ಚು ಕಾರುಗಳು ಪಾರ್ಕಿಂಗ್ ಮತ್ತು ರಸ್ತೆಗಳ ದಟ್ಟಣೆಯ ವಿಷಯದ ಬಗ್ಗೆ ಸರ್ಕಾರವು ಚಿಂತಿಸುತ್ತಿದೆ. ಹೌದು,. ದಿನದಿಂದ ದಿನಕ್ಕೆ ಭಾರತೀಯ ರಸ್ತೆಗಳಲ್ಲಿ ಅಧಿಕವಾಗುತ್ತಿರುವ ಕಾರುಗಳ ಸಂಖ್ಯೆಗೆ ಬ್ರೇಕ್ ಹಾಕಲು ಸುಪ್ರೀಂ ಕೋರ್ಟ್ ಒಂದು ಹೊಸ ಯೋಜನೆಯನ್ನು ಶುರು ಮಾಡಲಿದೆ.

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ದೆಹಲಿ - ಕಳೆದ ಶುಕ್ರವಾರ (29-03-2019) ರಂದು ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಎನ್ನುವ ಹೊಸ ಯೋಜನೆಯ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ಜೋಜನೆಗೆ 'ಹವಮ್ ದೋ ಹಮಾರೆ ದೋ' ಎಂಬ ಹೆಸರನ್ನಿಟ್ಟಿದೆ. ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಸುಮಾರು ವರ್ಷಗಳಾ ಹಿಂದೆಯೆ ಕೇಂದ್ರ ಸರ್ಕಾರವು ತಂದ ಫ್ಯಾಮಿಲಿ ಪ್ಲಾನಿಂಗ್ ಯೋಜನೆಯನ್ನು ಇದೀಗ ಕಾರುಗಳ ಮೇಲೆ ಕೂಡಾ ತರಲು ಮುಂದಾಗುತ್ತಿದೆ.

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಏನಿದು ಕಾರುಗಳ ಫ್ಯಾಮಿಲಿ ಪ್ಲಾನಿಂಗ್.?

ಕುಟುಂಬದ ಪ್ರತಿಯೊಬ್ಬ ಸಂಪಾದಕ ಸದಸ್ಯರು ಕಾರನ್ನು ಹೊಂದಿದ್ದಾರೆ, ಆದರೆ ಒಂದೊಂದು ಮನೆಯಲ್ಲಿ ದುಶಿಯುವ ವ್ಯಕ್ತಿಯು ಸುಮಾರು ಐದು ಕಾರುಗಳನ್ನು ಹೊಂದಿದ್ದಾರಂತೆ. ಈ ನಿಟ್ಟಿನಲ್ಲಿ ಕಾರುಗಳ ಕುಟುಂಬ ಯೋಜನೆಯು ಬಂದರೆ ರಸ್ತೆಯಲ್ಲಿ ಓಡಾಡುವ ಕಾರುಗಳ ಸಂಖ್ಯೆ ಕಡಿತವಾಗಬಹುದು ಎಂದು ಜಸ್ಟಿಸ್ ಮಿಶ್ರಾ ಹೆಳಿಕೊಂಡಿದ್ದಾರೆ.

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ದುಡಿಯುತ್ತಿರುವವರು ಒಂದು ಕಾರನ್ನು ಹೊಂದಿದ್ದರೆ ಅದು ತಪ್ಪಲ್ಲಾ ಆದರೆ ಅದೇ ವ್ಯಕ್ತಿಯು ಐದು ಕಾರುಗಳನ್ನು ಹೊಂದಿರಬಾರದು, ಹೀಗಾಗಿಯೆ ಈ ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಅನ್ನು ಶುರು ಮಾಡಲಾಗಿದೆ. ಎಂದು ಜಸ್ಟಿಸ್ ದೀಪಕ್ ಗುಪ್ತಾ ರವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಹೇಳಿಕೆಯನ್ನು ನೀಡಿದ್ದಾರೆ.

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಈಗಾಗಲೆ ಲಭ್ಯವಿರುವ ಮಲ್ಟಿ ಲೆವೆಲ್ ಪಾರ್ಕಿಂಗ್‍‍ಗಳು ಕೂಡಾ ಸಾಲುತ್ತಿಲ್ಲ, ನಾಗರೀಕರು ಸಿಕ್ಕಕಡೆಯಲ್ಲೆಲ್ಲಾ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಹಾಗೆಯೆ ದಿನಂಪ್ರತಿ ಸುಮಾರು ಲಕ್ಷಗಳ ಸಂಖ್ಯೆಯಲ್ಲಿ ಕಾರುಗಳು ಮಾರಾಟವಾಗುತ್ತಿದೆ ಎಂಬುದರ ಬಗ್ಗೆ ಕೂಡಾ ಮಾಹಿತಿ ಲಭ್ಯವಾಗಿದೆ.

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಮಾಹಿತಿಗಳ ಪ್ರಕಾರ, ರಾಜಧಾನಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 80.45 ಲಕ್ಷ ವಾಹನಗಳು ನಿತ್ಯ ಸಂಚರಿಸುತ್ತಿದ್ದು, 1.45 ಕೋಟಿ ವಾಹನಗಳನ್ನು ಹೊಂದಿರುವ ದೆಹಲಿ ನಂತರ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಕೂಡಾ ಸದ್ಯ ಮಾಲಿನ್ಯದ ಕೂಪವಾಗಿ ಬದಲಾಗುತ್ತಿದೆ. ದಿನಂಪ್ರತಿ 2 ರಿಂದ 2.5 ಸಾವಿರ ಹೊಸ ವಾಹನಗಳು ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲೇ ನೋಂದಣಿಯಾಗುತ್ತಿದ್ದು, ಇದು ಹೀಗೆ ಮುಂದುವರಿದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ದೆಹಲಿಯನ್ನು ಕೂಡಾ ಮೀರಿಸಲಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಹೆಚ್ಚುತ್ತಿರುವ ಮಾಲಿನ್ಯಕ್ಕೆ ಬ್ರೇಕ್ ಹಾಕಲು ದೆಹಲಿಯಲ್ಲಿ ಈಗಾಗಲೇ ಹಳೆಯಯ ವಾಹನಗಳ ಬಳಕೆಯ ಮೇಲೆ ಮತ್ತು ನಗರಕ್ಕೆ ಪ್ರವೇಶಿಸುವ ಹೊರ ರಾಜ್ಯಗಳ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದ್ದು, ಇಂತಹ ಯಾವುದೇ ಕ್ರಮಗಳು ಬೆಂಗಳೂರಿನಲ್ಲಿ ಇಲ್ಲದಿರುವುದು ವಾಹನಗಳ ಸಂಖ್ಯೆಯು ಮೀತಿ ಮಿರಲು ಪ್ರಮುಖ ಕಾರಣವಾಗಿದೆ.

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಹೊಸ ವಾಹನಗಳ ಸಂಖ್ಯೆ ಮಿತಿ ಹೆಚ್ಚುತ್ತಿದ್ದು, ಸದ್ಯಕ್ಕೆ ರಾಜ್ಯದಲ್ಲಿ ವಾಹನ ಸಂಖ್ಯೆ 2.10 ಕೋಟಿಗೆ ತಲುಪಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ಪ್ರಮಾಣದ ಆದಾಯ ಹರಿದುಬರುತ್ತಿದ್ದರೂ ಸಹ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವು ಆತಂಕಕಾರಿ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.

MOST READ: ಹೊಸ ರೂಲ್ಸ್- ಬೈಕ್ ಖರೀದಿಸುವ ಮುನ್ನ ತಪ್ಪದೇ ತಿಳಿಯಿರಿ..!

ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ರಾಜ್ಯದಲ್ಲಿ ಹೊಸ ವಾಹನ ನೋಂದಣಿ ಮತ್ತು ಆದಾಯ ಸಂಗ್ರಹ ಕುರಿತು ಮಾಹಿತಿ ಹಂಚಿಕೊಂಡಿರುವ ಸಾರಿಗೆ ಇಲಾಖೆಯ ಆಯುಕ್ತ ವಿ.ಪಿ. ಇಕ್ಕೇರಿಯವರು, ರಾಜ್ಯದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ 2018-19ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 6,656 ಕೋಟಿಯಷ್ಟು ರಾಜಸ್ವ ಹರಿದುಬಂದಿರುವುದಾಗಿ ತಿಳಿದಿದ್ದಾರೆ.

Source: NDTV

Most Read Articles

Kannada
English summary
"Hum Do Hamare Do": Supreme Court Calls For "Family Planning" Of Cars. Read In Kannada
Story first published: Friday, April 5, 2019, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X