Just In
- 2 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 2 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 3 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 3 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತೀಯ ಮಾರುಕಟ್ಟೆಗೆ 2019ರ ಕೊನೆಯಲ್ಲಿ ಮಾರುತಿ ಸುಜುಕಿ ಜಿಮ್ನಿ ಎಂಟ್ರಿ ಖಚಿತ
ಜಾಗತಿಕ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಮಾರುತಿ ಸುಜುಕಿ ಸಂಸ್ಥೆಯ ಜಿಮ್ನಿ ಮಿನಿ-ಎಸ್ಯುವಿಯು ಭಾರತದ ಮಾರುಕಟ್ಟೆಗೆ ಎಂಟ್ರಿಯಾಗುವುದು ಎಂದು ಖಚಿತವಾಗಿದೆ. ಕಾರ್ ಆಂಡ್ ಬೈಕ್ ಪ್ರಕಾರ, ಸುಜುಕಿ ಜಿಮ್ನಿ 2019 ರ ಮುಕ್ತಾಯದ ಮೊದಲು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ ಎಂದು ಹೇಳಲಾಗಿದೆ.
ಹೊಸ ತಲೆಮಾರಿನ ಸುಜುಕಿ ಜಿಮ್ನಿ 2018 ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಮಿನಿ-ಎಸ್ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಭಾರತೀಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶಸ್ವಿಯಾಗಿದೆ.
ಆದರೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನಂತರ 'ಜಿಪ್ಸಿ' ಎಂದು ಮರುನಾಮಕರಣವಾಗುವ ಸಾಧ್ಯತೆಗಳಿವೆ. ಜಿಮ್ನಿಯ ಮರುನಾಮಕರಣದೊಂದಿಗೆ ಮುಖ್ಯವಾಗಿ ಇಂಡಿಯನ್-ಸ್ಪೆಕ್ ಮಾದರಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಮಾದರಿಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದಾಗಿರಬಹುದು.
ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ ದೊಡ್ಡದಾಗಿದೆ ಎಂದು ಹೇಳಲಾಗಿದ್ದರೂ ಕೂಡ ಇದು ಅಂತರರಾಷ್ಟ್ರೀಯ ಮಾದರಿಯ ಅದೇ ವೇದಿಕೆಯ ಭಾಗವಾಗಲಿದೆ. ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ (ಜಿಪ್ಸಿ)ಯ ಪೀಚರ್ಸ್ಗಳು, ಕಂಪೋನೆನ್ಟ್ಸ್ ಹಾಗೂ ಇಂಜೀನ್ ಗೇರ್ಬಾಕ್ಸ್ ಸಿಯೆರಾ ಮಿನಿ-ಎಸ್ಯುವಿಯ ರೀತಿಯಲ್ಲೇ ಸಿದ್ದಪಡಿಸಿದ್ದಾರೆ.
ಒಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ ಕಂಪನಿಯ ಪ್ರೀಮಿಯಂ ನೆಕ್ಸಾ ಡಿಲರ್ಶಿಫ್ ಮೂಲಕ ಪ್ರತ್ಯೇಕವಾಗಿ ಮಾರಾಟವಾಗಲಿದೆ. ಇದು ಬ್ರಾಂಡ್ನ ಇತರ ಎಸ್ಯುವಿ ವಿಟಾರಾ ಬ್ರೆಜಾದಿಂದ ಪ್ರೀಮಿಯಂ ಕೊಡುಗೆಯಾಗಿ ಜಿಮ್ನಿ ಸ್ಥಾನಕ್ಕೆ ಸಹಾಯ ಮಾಡುತ್ತದೆ, ಅರೆನಾ ಶೋ ರೂಂಗಳ ಮೂಲಕ ಕೂಡ ಮಾರಾಟ ಮಾಡಲಾಗುತ್ತದೆ.
ವಿಶೇಷ ಅಂದ್ರೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಜಿಮ್ನಿಯು ಭಾರತೀಯ ರಸ್ತೆಗಳಿಗೆ ಸರಿಹೊಂದುವ ಹಾಗೆ ವಿಶೇಷವಾಗಿ ತಯಾರಿಸಲಿದ್ದಾರೆ. ಇಂಡಿಯನ್-ಸ್ಫೆಕ್ ಮಾದರಿಯು ಸಿಯೆರಾ ರೂಪಂತರವನ್ನು ಹೋಲುವಂತಹ ವಿಶಾಲವಾದ ವಿನ್ಯಾಸದ ಜೊತೆಯಲ್ಲಿ 3- ಡೋರ್ ನೊಂದಿಗೆ ಸಿದ್ದಪಡಿಸಿದ್ದಾರೆ.
ಆದ್ರೆ ಭಾರತದ ಮಾರುಕಟ್ಟೆಗೆ ಬರಲಿರುವ ಕಾರುಗಳಿಗೆ 5 ಸ್ಟ್ಯಾಂಡರ್ಡ್ ಡೋರ್ಗಳನ್ನು ರಚಿಸಿದ್ದಾರೆ. ಮುಂಬರುವ ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ 4 ಮೀಟರ್ಗಿಂತ ಕಡಿಮೆ ಉದ್ದವಿದ್ದು, ಇದರಿಂದಾಗಿ ಗ್ರಾಹಕರಿಗೆ ತೆರಿಗೆ ಪ್ರಯೋಜನಗಳನ್ನು ಸಹ ಪಡೆಯಲು ಅವಕಾಶ ನೀಡುತ್ತದೆ.
ಎಂಜಿನ್ ಸಾರ್ಮಾಥ್ಯ
ಭಾರತೀಯ ಮಾರುಕಟ್ಟೆಯಲ್ಲಿ ಒಮ್ಮೆ ಪರಿಚಯಿಸಿದ ನಂತರ, ಸುಜುಕಿ ಜಿಮ್ನಿ ಅದೇ 1.5-ಲೀಟರ್ ಕೆ 15-ಸರಣಿಯ ಪೆಟ್ರೋಲ್ ಎಂಜಿನ್ ಹೊಂದಿದೆ. ಎರ್ಟಿಗಾ, ಸಿಯಾಝ್ ಮತ್ತು ಮುಂಬರುವ ಎಕ್ಸ್ಎಲ್6 ಗೆ ಶಕ್ತಿ ನೀಡುವ ಅದೇ ಎಂಜಿನ್ ಆಗಿದೆ. ಜಿಮ್ನಿ ಎಕ್ಸ್ಎಲ್ 6 ರಂತೆಯೇ ಗೇರ್ಬಾಕ್ಸ್ ಆಯ್ಕೆಗಳನ್ನು ಸಹ ಸ್ವೀಕರಿಸುತ್ತದೆ, ಇದು ಸ್ಟ್ರ್ಯಾಂಡರ್ಡ್ 5- ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್-ಕನ್ವಟರ್ ಅಟೋಮೆಟಿಕ್ ಗೇರ್ಬಾಕ್ಸ್ ಅನ್ನು ಹೊಂದಿರಲಿದೆ.
ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ ಗುಜರಾತ್ನ ಕಂಪನಿಯ ಸ್ಥಾವರದಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ. ಭಾರತದಲ್ಲಿ ತಯಾರಾಗುತ್ತಿರುವ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸುತ್ತದೆ ಮತ್ತು ಇದು ಎಸ್ಯುವಿ ವಿಭಾಗದಲ್ಲಿ ಅತ್ಯಂತ ಆಕರ್ಷಕ ಕೊಡುಗೆಯಾಗಿದೆ ಹೊರಹೊಮ್ಮಲಿದೆ.